ಕದಂಬಿನಿ ಗಂಗೂಲಿ (೧೮ ಜೂಲೈ ೧೮೬೧ - ೩ ಅಕ್ಟೋಬರ್ ೧೯೨೩) ಮತ್ತು ಚಂದ್ರಮುಖಿ ಬಸು ಭಾರತದ ಹಾಗು ಬ್ರಿಟಿಷ್ ಸಾಮ್ರಾಜ್ಯದಲ್ಲಿದ್ದ ಇಬ್ಬರೇ ಮಹಿಳಾ ಪದವಿಧರರು. ಕದಂಬಿನಿ ಗಂಗೂಲಿ ದಕ್ಷಿಣ ಏಷ್ಯಾದ ಮೂಲದ ದಕ್ಷಿಣ ಏಷ್ಯಾದಲ್ಲಿ ಪಾಶ್ಚತ್ಯ ಮದ್ದಿನ ತರಬೇತಿ ಪಡೆದುಕೊಂಡ ಮೊದಲನೇ ಮಹಿಳಾ ವೈದ್ಯೆ . ಆನಂದಿ ಗೋಪಾಲ್ ಜೋಶಿ, ಇನ್ನೋರ್ವ ಭಾರತೀಯ ಮಹಿಳೆ ಅದೇ ಸಮಯದಲ್ಲಿ (೧೮೮೬) ಅಮೆರಿಕಾದಲ್ಲಿ ವೈದ್ಯಳಾಗಿ ಉತ್ತೀರ್ಣಗೊಂಡರು.

ಕದಂಬಿನಿ ಗಂಗೂಲಿ
Born
Kadambini Basu

18 July 1861[]
Died3 October 1923(1923-10-03) (aged 62)
Calcutta, Bengal Presidency, British India
Alma materBethune College
University of Calcutta
Occupation(s)Doctor, women's emancipation
SpouseDwarkanath Ganguly

ಮುಂಚಿನ ಜೀವನ

ಬದಲಾಯಿಸಿ

ಬ್ರಹ್ಮೋ ಸಮಾಜ ಸುಧಾರಕರಾದ ಬ್ರಜ ಕಿಶೋರ್ ಬಸುಅವರ ಮಗಳಾಗಿ ೧೮ ಜೂಲೈ ೧೮೬೧ ರಂದು ಬ್ರಿಟಿಷ್ ಭಾರತದ ಭಾಗಲ್ಪುರಾ,ಬಿಹಾರಿನಲ್ಲಿ ಕದಂಬಿನಿ ಗಂಗೂಲಿ ಜನಿಸಿದರು. ಅವರ ಕುಟುಂಬ ಮೂಲತಃ ಈಗ ಬಾಂಗ್ಲಾದೇಶದಲ್ಲಿರುವ ಬಾರಿಸಲ್ ಪ್ರದೇಶದ ಚಾಂದ್ಸಿ ಎಂಬ ಊರಾಗಿತು. ಅವರ ತಂದೆ ಭಾಗಲ್ಪುರಾದ ಶಾಲೆಯ ಮುಖ್ಯೋಪಾಧ್ಯಯರಾಗಿದ್ದರು. ಅವರ ತಂದೆ ಹಾಗು ಅಭಯ್ ಚರಣ್ ಮಲ್ಲಿಕ್, ಭಾರತದಲ್ಲಿ ಪ್ರಪ್ರಥಮ ಬಾರಿಗೆ ಮಹಿಳೆಯರ ಅಭಿವೃದ್ಧಿಗಾಗಿ ಭಾಗಲ್ಪುರಾದಲ್ಲಿ "ಭಾಗಲ್ಪುರಾ ಮಹಿಳಾ ಸಮಿತಿ"ಯನ್ನು ೧೮೯೩ರಲ್ಲಿ ಸ್ಥಾಪನೆ ಮಾಡಿದರು.

ಕದಂಬಿನಿಯವರ ತಮ್ಮ ವಿದ್ಯಾಭ್ಯಾಸವನ್ನು ಭಂಗ ಮಹಿಳಾ ವಿದ್ಯಾಲಯದಲ್ಲಿ ಶುರು ಮಾಡಿ, ನಂತರ ಬೆಥುನೇ ಸ್ಥಾಪಿಸಿದ ಬೆಥುನೇ ಶಾಲೆಯಲ್ಲಿದ್ದಾಗ ೧೮೭೮ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯನ್ನು ತೇರ್ಗಡೆಯಾದ ಮೊದಲನೇ ಮಹಿಳೆ. ಅವರ ಶ್ರಮದ ಫಲವಾಗಿ ಬೆಥುನೇ ಶಾಲೆಯವರು ಮೊದಲನೇ ಬಾರಿಗೆ ಲಲಿತ ಕಲೆಯನ್ನು ಮತ್ತು ನಂತರ ಪದವೀಧರ ಶಿಕ್ಷಣಗಳನ್ನು ೧೮೮೩ರಲ್ಲಿ ಜಾರಿಗೆ ತಂದರು. ಅವರು ಮತ್ತು ಚಂದ್ರಮುಖಿ ಬಸುರವರು ಬೆಥುನೇ ಶಾಲೆಯಿಂದ ತೇರ್ಗಡೆ ಹೊಂದಿದ ಪ್ರಥಮ ವಿದ್ಯಾರ್ಥಿಗಳಾದರು, ಅದೇ ವಿಧಿಯಲ್ಲಿ ದೇಶದ ಮತ್ತು ಬ್ರಿಟಿಷ್ ಸಾಮ್ರಾಜ್ಯದ ಪ್ರಥಮ ಉತೀರ್ಣಗೊಂಡ ಮಹಿಳೆಯರು ಎಂಬ ಹೆಗ್ಗಳಿಕೆ ಪಡೆದುಕೊಂಡರು.[]

ವೈದ್ಯಕೀಯ ಶಿಕ್ಷಣ ಹಾಗು ವೃತ್ತಿ

ಬದಲಾಯಿಸಿ

ಕದಂಬಿನಿಯವರ ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಶಾಸ್ತ್ರ ಅಭ್ಯಸಿಸಿದರು. ೧೮೮೬ರಲ್ಲಿ ಅವರಿಗೆ ಬಂಗಾಳಿ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಪದವೀದರವನ್ನು ಪ್ರಧಾನಿಸಲಾಯಿತು. ಇದರಿಂದಾಗಿ ಆನಂದಿ ಗೋಪಾಲ್ ಜೋಶಿಯಾರೊಂದಿಗೆ ಕೂಡಿ ಅವರು ಪಾಶ್ಚಿಮಾತ್ಯ ಮದ್ದನು ಆಚರಣೆಗೆ ತಂದ ಇಬ್ಬರೇ ಭಾರತೀಯ ಮಹಿಳಾ ವೈದ್ಯರಾದರು. ಹೆಚ್ಚು, ಕಮ್ಮಿ ಅದೇ ಸಮಯದಲ್ಲಿ, ಅಂದರೆ ೧೮೮೧ರಲ್ಲಿ ಅಬಲ ಬೋಸ್ ಎಂಬ ಮಹಿಳೆ ಪ್ರವೇಶ ಪರೀಕ್ಷೆಯನಲ್ಲಿ ಉತ್ತೀರ್ಣಗೊಂಡರೂ,ಅವರಿಗೆ ವೈದ್ಯಕೀಯ ಶಾಲೆಯಲ್ಲಿ ಸೇರಿಸಿಕೊಳ್ಳದ ಕಾರಣ ಅವರು ವೈದ್ಯಕೀಯ ವ್ಯಾಸಂಗ ಮಾಡಲು ಮದ್ರಾಸಿಗೆ (ಈಗ ಚೆನ್ನೈ ) ತೆರಳಿದರೂ, ಅವರು ತೇರ್ಗಡೆಯಾಗದೆ ಉಳಿದರು.

ಸ್ವಲ್ಪ ಸಮಯ ಕದಂಬಿನಿಯವರು ಶಿಕ್ಷಕರು ಹಾಗು ಮಡಿವಂತಿಕೆಯನ್ನು ನಂಬಿಕೊಂಡ ಸಂಪ್ರದಾಯಸ್ಥಿಕ ಸಮಾಜಗಳಿಂದ ವಿರೋಧವನ್ನು ಜಯಿಸಿದರು. ನಂತರ ಅವರು ಯುನೈಟೆಡ್ ಕಿಂಗ್ಡಮ್ಗೆ ೧೮೯೨ರಲ್ಲಿ ತೆರಳಿ, LRCP (ಎಡಿಂಬರ್ಗ್), LRCS (ಗ್ಲಾಸುಗೌ), and GFPS (ಡಬ್ಲಿನ್) ಪರೀಕ್ಷೆಗಳನ್ನು ಪಾಸು ಮಾಡಿಕೊಂಡು ಭಾರತಕ್ಕೆ ಮರಳಿದರು. ಲೇಡಿ ದಫ್ಫ್ರಿನ್ ಆಸ್ಪತ್ರೆಯಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿ, ಕೊನೆಗೆ ತಮ್ಮದೇ ಅದ ಖಾಸಗಿ ವೈದ್ಯಾಭ್ಯಾಸ ಆರಂಭಿಸಿದರು.

ಸಾಮಾಜಿಕ ಚಟುವಟಿಕೆಗಳು

ಬದಲಾಯಿಸಿ

೧೮೮೩ರಲ್ಲಿ ಅವರು ಬ್ರಹ್ಮೋ ಸುಧಾರಕರು ಹಾಗು ಮಹಿಳಾ ಅಭಿವೃದ್ಧಿಯ ಚಳುವಳಿಯ ನಾಯಕರಾದ ದ್ವಾರಕಾನಾಥ್ ಗಂಗೂಲಿಯವರನ್ನು ವಿವಾಹವಾದರು. ಗಂಡ ಹೆಂಡತಿರಿಬ್ಬರು ಹೆಣ್ಣು ಮಕ್ಕಳ ಜೀರ್ಣೋದ್ದಾರ ಹಾಗು ಪೂರ್ವ ಭಾರತದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಸ್ತ್ರೀಯರ ಏಳಿಗೆಗಾಗಿ ನಡೆದ ಸಾಮಾಜಿಕ ಚಳುವಳಿಗಳಲ್ಲಿ ಅತ್ಯಂತ ಕಾಳಜಿಯಿಂದ ತಮ್ಮನ್ನು ತೊಡಗಿಸಿಕೊಂಡರು. ೧೮೮೯ರಲ್ಲಿ ನಡೆದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸನ ಐದನೇ ಅಧಿವೇಶನದಲ್ಲಿ ಪಾಲ್ಗೊಂಡ ಆರು ಮಹಿಳೆಯರಲ್ಲಿ ಇವರು ಒಬ್ಬರಿಗಿದ್ದರು. ೧೯೦೬ಅಲ್ಲಿ ಬಂಗಾಳಿಯ ವಿಭಜನೆಗೊಂಡ ನಂತರ ಇವರು ಮಹಿಳೆಯರ ಕಾನ್ಫರೆನ್ಸ್ನ್ನು ಸಂಯೋಜಿಸಿದರು. ೧೯೦೮ರಲ್ಲಿ ಸತ್ಯಾಗ್ರಹದಿಂದ ಸ್ಫೂರ್ತಿಗೊಂಡ ದಕ್ಷಿಣ ಆಫ್ರಿಕಾದ ಟ್ರಾನ್ಸ್ವಾಲ್ ಸ್ಥಳದ ಭಾರತೀಯ ಕಾರ್ಮಿಕರ ಆಂದೋಲನದ ಮೇಲೆ ಸಹಾನುಭೂತಿಯನ್ನು ವ್ಯಕ್ತಪಡಿಸಲು ಕೋಲ್ಕತ್ತಾದಲ್ಲಿ ಸಭೆಯನ್ನು ಸಂಯೋಜಿಸದಲ್ಲದೆ,ಅದರ ಅಧ್ಯಕ್ಷತೆಯನ್ನು ಕೂಡ ವಹಿಸಿಕೊಂಡರು. ಅವರು ಕಾರ್ಮಿಕರಿಗೆ ಹಣದ ಸಹಾಯ ಮಾಡಲು ಸಂಘ ಕಟ್ಟಿದರು.

ವೈಯಕ್ತಿಕ ಜೀವನ

ಬದಲಾಯಿಸಿ

ಎಂಟು ಮಕ್ಕಳ ತಾಯಿಯಾದ ಅವರು, ಸಂಸಾರದ ಕಡೆಗೆ ಗಮನ ನೀಡಲು ಬಹಳ ಸಮಯ ನೀಡಬೇಕಾಯಿತು. ಅವರ ಕಸೂತಿಯಲ್ಲಿ ನಿಪುಣರಾಗಿದ್ದರು.

ಅಮೆರಿಕಾದ ಪ್ರಸಿದ್ಧ ಇತಿಹಾಸಕಾರರರಾದ ಡೇವಿಡ್ ಕೋಪ್ಫ್ [] ಕದಂಬಿನಿಯವರನ್ನು ವರ್ಣಿಸುತ್ತ ಹೀಗೆ ಬರೆದ್ದಿದಾರೆ, " ಗಂಗೂಲಿಯವರ ಪತ್ನಿ , ಕದಂಬಿನಿ ಅವರ ಸಮಯಕ್ಕೆ ತಮ್ಮ ಗುರಿ ಸಾದಿಸಿಕೊಂಡು ಸ್ವಂತತ್ರ ಗಳಿಸಿಕೊಂಡ ಬ್ರಹ್ಮೋ ಸಮಾಜದ ಮಹಿಳೆಯಾಗಿದ್ದರು. ಅದೇನೇ ಇದ್ದರು, ಅವರಿಬ್ಬರ ಸಂಬಂಧ ಪರಸ್ಪರ ಪ್ರೇಮ, ಸೂಕ್ಷ್ಮ ಮತ್ತು ಚಾಣಾಕ್ಷತೆಯನ್ನೊಳಗೊಂಡ ಅತಿ ವಿರಳವಾದುದು. ಕದಂಬಿನಿಯವರ ಉದಾಹರಣೆ ಅವರ ಕಾಲಿನ ಸಮಾಜದ ವಿಮುಕ್ತ ಎನಿಸಿಕೊಂಡ ಬ್ರಹ್ಮೋ ಸಮಾಜದಲ್ಲಾಗಲಿ ಅಥವಾ ಕ್ರಿಸ್ತು ಧರ್ಮದಲ್ಲಾಗಲಿ ಕಾಣದಂಥ ಪ್ರಕರಣವಾಗಿತ್ತು. ಎಂತಹ ಸಂದರ್ಭದಿಂದ ಮೇಲೆ ಎಳೆಯುವ ಕದಂಬಿನಿಯವರ ಸಾಮರ್ಥ್ಯ ಹಾಗು ತಮ್ಮ ಮಾನವ ಸಾಮರ್ಥ್ಯವನ್ನು ಅರಿತುಕೊಳ್ಳುವ ಬುದ್ದಿ ಕದಂಬಿನಿಯವರನ್ನು ಬಂಗಾಳಿ ಹೆಣ್ಣು ಮಕ್ಕಳ ಜೀರ್ಣೋದ್ಧಾರದಲ್ಲಿ ತೊಡಗಿಸಿಕೊಂಡ ಸಾಧಾರಣ ಬ್ರಹ್ಮೋ ಸಮಾಜದ ಕಾರ್ಯಕರ್ತರಲ್ಲಿ ಅತ್ಯಂತ ಪ್ರಸಿದ್ದಿ ಪಡೆಯುವಂತೆ ಮಾಡಿತು."[]

ಟಿಪ್ಪಣಿಗಳು

ಬದಲಾಯಿಸಿ
  1. Karlekar, Malavika (2012). "Anatomy of a Change: Early Women Doctors". India International Centre Quarterly. 39 (3/4): 95–106. JSTOR 24394278.
  2. Female students were admitted into Oxford University in 1879, one year after the admission of female students for undergraduate studies at the University of Calcutta [೧] Archived 2006-10-18 ವೇಬ್ಯಾಕ್ ಮೆಷಿನ್ ನಲ್ಲಿ..
  3. "David Kopf". History at Minnesota. Regents of the University of Minnesota. Archived from the original on 16 May 2006. Retrieved 5 November 2006.
  4. (Kopf 1979, pp. 125)


ಉಲ್ಲೇಖನಗಳು

ಬದಲಾಯಿಸಿ
  • Kopf, David (1979), The Brahmo Samaj and the Shaping of the Modern Indian Mind, Princeton University Press, ISBN 0-691-03125-8 
  • Sengupta, Subodh Chandra and Bose, Anjali (editors), (1976/1998), Sansad Bangali Charitabhidhan (Biographical dictionary) in Bengali, pp 79–80, ISBN 81-85626-65-0
  • Murshid, Ghulam (2012). "Ganguly, Kadambini". In Islam, Sirajul; Jamal, Ahmed A. (eds.). Banglapedia: National Encyclopedia of Bangladesh (Second ed.). Asiatic Society of Bangladesh.
  • Nandy, Ashis (1995), The Savage Freud and Other Essays on Possible and Retrievable Selves, Princeton University Press, ISBN 0-691-04411-2 

ಬಾಹ್ಯ ಕೊಂಡಿಗಳು

ಬದಲಾಯಿಸಿ