ಕಣಹಬ್ಬ
ರೈತ ಬೆಳೆದ ಬೆಳೆಗಳನ್ನು ಹಸನು ಮಾಡಿ, ತೂಕ ಮಾಡಿ ಮಾರುಕಟ್ಟೆಗೆ ಕಳುಹಿಸಬೇಕಾಗುತ್ತದೆ. ಹಾಗೆ ಕಳುಹಿಸುವ ಮೊದಲು ಸಂತೋಷದಿಂದ ಹಬ್ಬದ ಸಂಭ್ರಮದಲ್ಲಿರುತ್ತಾನೆ. ಇದಕ್ಕೆ ಕಣಹಬ್ಬವೆಂದು ಹೆಸರು.ಸುಮಾರಾಗಿ ಇಂಥ ಸುಗ್ಗಿ ಬೇಸಗೆಯಲ್ಲಿಯೇ ಬರುತ್ತದೆ. ಮನೆಮಂದಿ, ಕೆಲಸಗಾರರು ಮತ್ತು ಬಂಧುಗಳೂ ಕೂಡ ಈ ಕಣಹಬ್ಬದಲ್ಲಿ ಭಾಗವಹಿಸುತ್ತಾರೆ.
ಕಣದಲ್ಲಿಯೇ ಊಟ
ಬದಲಾಯಿಸಿಕಣಹಬ್ಬದಂದು ಮನೆಯವರೆಲ್ಲರೂ ಕಣದಲ್ಲಿಯೇ ಕೆಲಸ ಮಾಡುತ್ತಿರುತ್ತಾರೆ. ಮನೆಗೆ ಹೋಗಲೂ ಬಿಡುವಿರುವುದಿಲ್ಲ. ಹಾಗಾಗಿ ಊಟದ ವ್ಯವಸ್ಥೆಯನ್ನೂ ಕಣದಲ್ಲಿಯೇ ಮಾಡುತ್ತಾರೆ. ಕೆಲಸಗಾರರು, ಬಂಧುಗಳು ಎಲ್ಲರೂ ಅಲ್ಲಿಯೇ ಸೇರುತ್ತಾರೆ. ಆಸಕ್ತಿ ಹಾಗೂ ಅರ್ಹತೆ ಇದ್ದವರು ಹಾಡುತ್ತಾರೆ, ಮಕ್ಕಳು ಕುಣಿಯುತ್ತಾರೆ. ಎಲ್ಲರೂ ಒಂದಾಗಿ ಕಣದಲ್ಲಿಯೇ ಊಟಮಾಡುತ್ತಾರೆ.
ಕಣದಲ್ಲಿಯೇ ತೂಕ
ಬದಲಾಯಿಸಿರೈತರಿಗೆ ಸಹಜವಾಗಿಯೇ ಒಂದು ಹುಮ್ಮಸ್ಸಿರುತ್ತದೆ. ತಾವು ಬೆಳೆದ ಬೆಳೆಗಳನ್ನೆಲ್ಲ ತಾವೇ ತೂಕ ಮಾಡಿ, ಚೀಲಗಳಿಗೆ ತುಂಬುತ್ತಾರೆ. ಅನುಕೂಲವಿದ್ದವರು ತಮ್ಮ ವಾಹನಗಳಲ್ಲಿಯೇ ಪೇಟೆಗೆ ಸಾಗಿಸುತ್ತಾರೆ. ಕೊನೆಗೆ ಕಣದಲ್ಲಿ ಏನೂ ಉಳಿದಿಲ್ಲವೆಂದು ಖಾತ್ರಿ ಮಾಡಿಕೊಂಡೇ ಕಣವನ್ನು ಬಿಟ್ಟು ಹೊರಡುತ್ತಾರೆ.
ಉಳ್ಳವರು ಇಲ್ಲದವರಿಗೆ
ಬದಲಾಯಿಸಿಒಂದು ಊರಿನ ಎಲ್ಲರೂ ಕಣಮಾಡಿಕೊಳ್ಳುವಷ್ಟು ಶ್ರೀಮಂತರಾಗಿರುವುದಿಲ್ಲ. ಅಥವಾ ಅವರ ಬೆಳೆಯೂ ಅತ್ಯಂತ ಕಡಿಮೆಯಿರಬಹುದು. ಆದರೂ ಒಕ್ಕಲುತನ ಮಾಡಲೇಬೇಕಲ್ಲವೇ? ಅಂಥವರಿಗಾಗಿ ಉಳ್ಳವರು ಇಲ್ಲದವರಿಗೆ ಕಣ ಬಿಟ್ಟುಕೊಡುವ ಸಹೃದಯರೂ ಇದ್ದಾರೆ.
ಅಪಾಯಗಳೂ, ಅನಾಹುತಗಳೂ
ಬದಲಾಯಿಸಿಕಣ ಹಬ್ಬಗಳ ಸಮಯದಲ್ಲಿ ಅನೇಕ ಅಪಾಯಗಳು ಆಗಬಹುದು. ಅಕಾಲಿಕ ಮಳೆ ಬಂದು ಎಲ್ಲವೂ ನೀರಿನಲ್ಲಿ ಕೊಚ್ಚಿಹೋಗಬಹುದು. ಅಪರೂಪಕ್ಕೆ ಬೆಂಕಿ ತಾಗಿ ಎಲ್ಲವೂ ಸುಟ್ಟು ಹೋಗಬಹುದು. ಭತ್ತ ಅಥವಾ ಧಾನ್ಯ ತೂರುವಾಗ ಪುಟ್ಟ ಮಕ್ಕಳ ಕಣ್ಣಿಗೆ ತಾಗಿ ದೃಷ್ಟಿ ದೋಷ ಆಗಲೂಬಹುದು.
ಕಣದ ರಕ್ಷಣೆ ಸಂಸ್ಕೃತಿಯ ರಕ್ಷಣೆ
ಬದಲಾಯಿಸಿಕಣದ ಮತ್ತೊಂದು ವಿಶೇಷವೆಂದರೆ ಇಲ್ಲಿ ಹಾಡುಗಾರರು, ಕೋಲಾಟವಾಡುವವರು, ಬಸವನಾಡಿಸುವವರು ಮೊದಲಾದವರೆಲ್ಲರೂ ಸೇರುತ್ತಾರೆ.ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಹೀಗೆ ಕಣದ ರಕ್ಷಣೆಯೊಂದಿಗೆ ಸಂಸ್ಕೃತಿಯ ರಕ್ಷಣೆಯೂ ಆಗುತ್ತದೆ.
ಇದು ಕಣ ಹಬ್ಬದ ಆಶಯ
ಬದಲಾಯಿಸಿಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವೈ ನಮ ಓಷಧೀಭ್ಯಃ ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ.