ಕಣಲೆ ಕಡ್ಲೆ
ಕಣಿಲೆ (ಎಳೆ ಬಿದಿರು) ಆರೋಗ್ಯಕ್ಕೆ ಉತ್ತಮವಾದ ಕಣಿಲೆಯು ಕಾಡಿನಲ್ಲಿ ಯಥೇಚ್ಛವಾಗಿ ಬೆಳೆದಿರುತ್ತದೆ.ಕರಾವಳಿಭಾಗದ ಜನರು ಆಟಿ ತಿಂಗಳಲ್ಲಿ (ಶ್ರಾವಣ) ತಮ್ಮ ಆಹಾರದಲ್ಲಿ ಬಳಸಿಕೊಳ್ಳುವ ಪ್ರಸಿದ್ದ ಕಣಲೆಗೆ ಕಳಲೆ,ಕಳಲೆಕಣಿಲೆ,ಎಳೆಬಿದಿರು,ಎಂಬ ಹೆಸರು ಇದೆ.ಮಳೆಗಾಲದಲ್ಲಿ ಹೆಚ್ಚಾಗಿ ಕಾಣಸಿಗುವ ಕಣಲೆಯಲ್ಲಿ ಸೋಡಿಯಂ ಮತ್ತು ಕ್ಯಾಲ್ಸಿಯಂ ಪ್ರಮಾಣ ಹೆಚ್ಚು ಇರುವುದರಿಂದ ಮೂರು ದಿನ ನೀರಿನಲ್ಲಿ ನೆನೆಸಿ ಅಗತ್ಯವಾಗಿದೆ.ಕಣಿಲೆಯಿಂದ[೧] ಕೆಲವು ಆಹಾರ ಭಕ್ಷ್ಯಗಳನ್ನು ತಯಾರಿಸಬಹುದು.
ಕಣಲೆ ಮತ್ತು ಕಡ್ಲೆ ಹಾಕಿ ಮಾಡುವ ಸಾರಿಗೆ ಬೇಕಾಗುವ ಸಾಮಗ್ರಿಗಳು
ಬದಲಾಯಿಸಿಕಡ್ಲೆ-ಕಣಲೆ ಸಾರು ಮಾಡುವ ವಿಧಾನ
ಬದಲಾಯಿಸಿಮೊದಲಿಗೆ ಕಡ್ಲೆ,ಕಡಲೇಕಾಯಿ ಕಣಲೆಕಳಲೆ, ಈರುಳ್ಳಿ, ಟೊಮೆಟೊ, 1 ಹಸಿ ಮೆಣಸು (ಬೇಕಿದ್ದರೆ) ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ, ಬೇಯಲು ತಕ್ಕ ನೀರು ಹಾಕಿ ಬೇಯಿಸ ಬೇಕು.ಕಣಲೆ ಕಡ್ಲೆ ಮುಳುಗುವಷ್ಟು ನೀರು ಹಾಕಬೇಕು . ತೆಂಗಿನ ತುರಿಯನ್ನು ಹುರಿದು , ತೆಂಗಿನ ತುರಿ ಉರಿಯುವಾಗ ಅದಕ್ಕೆ ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಅರಿಶಿಣ ಪುಡಿ, ಜೀರಿಗೆ, ಚಕ್ಕೆ, ಲವಂಗಲವಂಗ, ಬೆಳ್ಳುಳ್ಳಿ, ಶುಂಠಿಶುಂಠಿ ಸ್ವಲ್ಪ ಹುಣಸೆಹಣ್ಣು ಎಲ್ಲಾ ಹಾಕಿ ಹುರಿಯಬೇಕು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಆದರೆ ಒಗ್ಗರಣೆಗೆ ಹಾಕುವಾಗ ಹಾಕಿ ಈಗ ಸಾರಿನ ಪಾತ್ರೆಯನ್ನು ಇಟ್ಟು ಎಣ್ಣೆ ಹಾಕಿ , ನಂತರ ಸಾಸಿವೆ ಹಾಕಿ, ಶಬ್ದ ಮಾಡುವಾಗ ಕರಿ ಬೇವು ಹಾಕಿ, ನಂತರ ಬೇಯಿಸಿದ ಕಡ್ಲೆ, ಕಣಲೆ ಹಾಕಿ, ರುಬ್ಬಿದ ಮಸಾಲೆ ಹಾಕಿ ಬೇಯಿಸಿ, ಉಪ್ಪು ಸರಿಯಾಗಿ ನೋಡಿಕೊಂಡು , ಬೇಕಿದ್ದರೆ ಇನ್ನೂ ಸ್ವಲ್ಪ ಉಪ್ಪು ಸೇರಿಸಿದರೆ ರುಚಿ-ರುಚಿಯಾದ ಕಣಲೆ ಸಾರು ರೆಡಿ. ಸಲಹೆ: ಕಣಲೆಯನ್ನು ಈ ರೀತಿ ಕಡ್ಲೆ, ತಡುಗಿಣಿ, ಬೀನ್ಸ್ ಕಾಳು ಇವುಗಳ ಜೊತೆಗೆ ಕೂಡ ಮಾಡಬಹುದು.
ಕಣಲೆಯಲ್ಲಿರುವ ಪೋಷಕಾಂಶಗಳು
ಬದಲಾಯಿಸಿಕಣಲೆಯಲ್ಲಿ ಪೊಟಾಷ್ಯಿಯಂ ಕ್ಯಾಲ್ಸಿಯಂ ಮ್ಯಾಂಗನೀಸ್ ವಿಟಮಿನ್ ಎ ವಿಟಮಿನ್ ಬಿ6 ವಿಟಮಿನ್ ಇ ಸತು ಕ್ರೋಮಿಯಂ ಕಬ್ಬಿಣದಂಶ ಥೈಯಾಮಿನ್ ನಿಯಾಸಿನ್.
ಕಣಿಲೆ ಕಡ್ಲೆ ಗಸಿಗೆ ಬೇಕಾಗುವ ಪದಾರ್ಥಗಳು
ಬದಲಾಯಿಸಿಸಣ್ಣಗೆ ಹೆಚ್ಚಿದ ಕಣಲೆ - 2 ಕಪ್(ಬಿದಿರಿನ ಮೊಳಕೆ),ಕಡಲೆ -1/2ಕಪ್(ನೆನೆಸಿದ ಕಡಲೆ) ಈರುಳ್ಳಿ - 1,ಹಸಿ ಮೆಣಶಿನ ಕಾಯಿ-2,ಎಣ್ಣೆ - 2 ಚಮಚ,ಇಂಗು - 1 ಚಿಟಿಕೆ,ಅರಸಿಣ - ಸ್ವಲ್ಪ ಸಾಸಿವೆ - ಸ್ವಲ್ಪ,ಕರಿಬೇವು - ಸ್ವಲ್ಪ,ನಿಂಬೆರಸ - 1ಚಮಚ,ಉಪ್ಪು - ರುಚಿಗೆ ತಕ್ಕಷ್ಟು,ತೆಂಗಿನ ತುರಿ-ಸ್ವಲ್ಪ(ಬೇಕಾದರೆ ಮಾತ್ರ)
ಮಾಡುವ ವಿಧಾನಗಳು
ಬದಲಾಯಿಸಿಬಾಣೆಲೆಯಯಲ್ಲಿ ಎಣ್ಣೆ ಹಾಕಿ ಕಾದ ಬಳಿಕ ಸಾಸಿವೆ, ಕತ್ತರಿಸಿದ ಹಸಿಮೆಣಸು, ಕರಿಬೇವು ಹಾಕಿ. ಬಳಿಕ ಹೆಚ್ಚಿಟ್ಟ ಕಣಲೆ, ಕಡಲೆ,ಅರಿಸಿಣ, ಇಂಗು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರನ್ನು ಸೇರಿಸಿ ಕೈಯಾಡಿಸಿ. ನಂತರ ಪ್ಲೇಟ್ ಮುಚ್ಚಿಡಿ, ಆಗಾಗ ಕೈಯಾಡಿಸುತ್ತಿರಿ. 20 ನಿಮಿಷದ ಬಳಿಕ ಒಂದು ಹದಕ್ಕೆ ಕಣಲೆ ಹಾಗೂ ಕಡಲೆ ಬೆಂದ ಬಳಿಕ ಅದಕ್ಕೆ ಈರುಳ್ಳಿ ಸೇರಿಸಿ. ಎಲ್ಲವೂ ಚೆನ್ನಾಗಿ ಹುರಿಯುವ ವರೆಗೆ ಕೈಯಾಡಿಸುತ್ತಿರಿ. ಹುರಿದ ಬಳಿಕ ಉರಿಯಾರಿಸಿ. ಅದಕ್ಕೆ ನಿಂಬೆರಸ ಸೇರಿಸಿ. ನಿಮಗೆ ಇಷ್ಟವಾಗುವಂತಿದ್ದಲ್ಲಿ ತೆಂಗನ ತುರಿ ಸೇರಿಸಬಹುದು. ಈಗ ರುಚಿ ರುಚಿಯಾದ ಕಣಲೆ ಪಲ್ಯ ಸವಿಯಲು ಸಿದ್ಧ.