ಕಟ್ಟತ್ತಿಲ ಮಠ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ಸ್ಥಳ. ಇದು ಉಡುಪಿಯ ಅದಮಾರು ಮಠದ ಆಡಳಿತಕ್ಕೊಳಪಟ್ಟಿದೆ. ಈ ಮಠದಲ್ಲಿ ಮಧ್ವಚಾರ್ಯರು ಪ್ರತಿಷ್ಥಾಪಿಸಿದ ಕೃಷ್ಣನನ್ನು ಆರಾಧಿಸುತ್ತಾರೆ. ಕಟ್ಟತ್ತಿಲ ಮಠವು ಮಂಗಳೂರಿನ ವಿಟ್ಲ ಸಮೀಪದ ಸಾಲೆತ್ತೂರು ಎಂಬಲ್ಲಿದೆ.[೧]

ಕಟ್ಟತ್ತಿಲ ಮಠ

ಇತಿಹಾಸ ಬದಲಾಯಿಸಿ

ಕಟ್ಟತ್ತಿಲ ಮಠಕ್ಕೆ ಸುಮಾರು ೭೦೦ ವರ್ಷಗಳ ಇತಿಹಾಸವಿದೆ. ಈ ಸ್ಥಳಕ್ಕೆ ಮಧ್ವಚಾರ್ಯರು ಕಡೆಯದಾಗಿ ಭೇಟಿ ನೀಡಿದ್ದರು. ಮಧ್ವಚಾರ್ಯರ ಸಂಚಾರದ ಕೊನೆಯ ಸ್ಥಳವಾದ ಕಾರಣ ಇಲ್ಲಿಗೆ ಕಡ್ತಿಲ ಎಂದು ಕರೆಯುತ್ತಿದ್ದರು. ಕಡ್ತಿಲ ಎಂಬ ಹೆಸರು ಕ್ರಮೇಣ ಕಟ್ಟತ್ತಿಲ ಎಂದಾಯಿತು.[೨]

ವಿಶೇಷತೆ ಬದಲಾಯಿಸಿ

ಮಠದ ಸಮೀಪದಲ್ಲಿ ಪುಸ್ತಕ ತೀರ್ಥವಿದೆ. ಇಲ್ಲಿ ಮಧ್ವಚಾರ್ಯರು ತಮ್ಮ ಸಿದ್ಧಾಂತಗಳನ್ನು ತಾಮ್ರದ ಹಾಳೆಗಳಲ್ಲಿ ಬರೆದು ಮಣ್ಣಿನಡಿಯಲ್ಲಿ ಇಟ್ಟಿದ್ದಾರೆಂಬ ನಂಬಿಕೆ ಇದೆ. ಪುಸ್ತಕ ತೀರ್ಥದ ಹತ್ತಿರದಲ್ಲಿ ನಾಗಸಾನಿಧ್ಯವಿದೆ. ವಾದಿರಾಜರೂ ಈ ಮಠಕ್ಕೆ ಭೇಟಿ ನೀಡಿದ್ದಾರೆಂಬ ಕುರುಹಾಗಿ ವಾದಿರಾಜರ ಶಿಷ್ಯರನ್ನು ಭೂತರಾಜ ಎಂಬ ಹೆಸರಿನಿಂದ ಆರಾಧಿಸುತ್ತಾರೆ. ಇಲ್ಲಿನ ದೇವರಿಗೆ ಹಾಲು ಪಾಯಸ ಮತ್ತು ಸಿಹಿ ಅವಲಕ್ಕಿ ಪ್ರಿಯವಾದ ನೈವೇದ್ಯ.

ಆಡಳಿತ ಬದಲಾಯಿಸಿ

ಕಟ್ಟತ್ತಿಲ ಮಠವು ಉಡುಪಿಯ ಅದಮಾರು ಮಠದ ಆಡಳಿತಕ್ಕೊಳಪಟ್ಟಿದೆ. ಗೋಪಾಲಕೃಷ್ಣ ಸೇವಾ ಸಂಘದವರು ಮಠದ ನಿರ್ವಹಣೆಯನ್ನು ಮಾಡುತ್ತಿದ್ದಾರೆ.

ವಿಶೇಷ ಆಚರಣೆಗಳು ಬದಲಾಯಿಸಿ

  • ವಿಷು ಸಂಕ್ರಮಣ
  • ಶ್ರೀಕೃಷ್ಣ ಜನ್ಮಾಷ್ಟಮಿ
  • ವರ್ಷಾವಧಿ ಉತ್ಸವ

ಮಾರ್ಗ ಸೂಚಿ ಬದಲಾಯಿಸಿ

ಮಂಗಳೂರಿನಿಂದ ಸುಮಾರು ೩೦ಕಿಮೀ ದೂರದಲ್ಲಿದೆ. ವಿಟ್ಲದಿಂದ ಮುಡಿಪು ಮಾರ್ಗದ ನಡುವೆ ಸಾಲೆತ್ತೂರು ಎಂಬ ಊರಿನಲ್ಲಿ ಕಟ್ಟತ್ತಿಲ ಮಠವಿದೆ.

ಉಲ್ಲೇಖ ಬದಲಾಯಿಸಿ

ಮಂಗಳೂರು ವಿಭಾಗದ ಪ್ರಜಾವಾಣಿ ದಿನ ಪತ್ರಿಕೆ(೩೦ ಜುಲೈ,ಕರಾವಳಿ ಪುರವಣಿ)

  1. https://www.youtube.com/watch?v=OnyzLOJYLyM
  2. https://indiathedestiny.com/india-philosophers/madhvacharya-life-history/