ಮುಡಿಪು
ಮುಡಿಪು ಎಂದರೆ ಹುಂಡಿ. ತಿರುಪತಿ ತಿಮ್ಮಪ್ಪ ದೇವರ ಹೆಸರಿನಲ್ಲಿ ಹುಂಡಿ ತಯಾರಿಸುತ್ತಾರೆ. ಗೌಡರ ಮನೆದೇವರು ತಿರುಪತಿ ದೇವರು. ಹುಂಡಿಯಲ್ಲಿ ಕಾಳು ಮೆಣಸು ಮತ್ತು ನಾಣ್ಯಗಳನ್ನು ಹಾಕುತ್ತಾರೆ. ಗೌಡರು ಮದುವೆ ಸಂದರ್ಭದಲ್ಲಿ ಮುಡಿಪನ್ನು ಅಟ್ಟದಿಂದ ಇಳಿಸಿ ದಾಸಯ್ಯರನ್ನು ಕರೆಸಿ ಮುಡಿಪು ಶುದ್ಧ ಮಾಡಿಸುತ್ತಾರೆ.