ಅತಿರಸ

(ಕಜ್ಜಾಯ ಇಂದ ಪುನರ್ನಿರ್ದೇಶಿತ)

ಅತಿರಸ ತಮಿಳು ಅಥವ ಕಜ್ಜಾಯ ಕರ್ನಾಟಕದ ಒಂದು ಬಗೆಯ ದಕ್ಷಿಣ ಭಾರತೀಯ ಸಿಹಿತಿಂಡಿ. ವಡೆ‍ ಯಂತೆ ಇರುವ ಈ ಕರಿದ ತಿಂಡಿ ತಮಿಳು ನಾಗರಿಕತೆಯಲ್ಲಿ ಜನಪ್ರಿಯತೆಯ ದೀರ್ಘ ಇತಿಹಾಸ ಹೊಂದಿದೆ. ಅವು ಆಕಾರದಲ್ಲಿ ವಡೆಯನ್ನು ಹೋಲುತ್ತವೆ, ಆದರೆ ಖಾರವಾಗಿರುವುದಿಲ್ಲ ಮತ್ತು ಡಿಜ಼ರ್ಟ್ ಆಗಿ ತಿನ್ನಲ್ಪಡುತ್ತವೆ.

ಅತಿರಸವು ದೇವರ ಪೂಜೆ ಪ್ರಾರ್ಥನೆಗಳಲ್ಲಿ ನೈವೇದ್ಯವಾಗಿ ಜನಪ್ರಿಯವಾಗಿದೆ, ಮನೆ ಮತ್ತು ದೇವಸ್ಥಾನಗಳು ಎರಡರಲ್ಲೂ.[] ಕೃಷ್ಣದೇವರಾಯನ ಕಾಲದ ಶಾಸನಗಳ ಪ್ರಕಾರ, ಈ ತಿನಿಸು ಅಕ್ಕಿ ಹಿಟ್ಟು, ಬೆಲ್ಲ, ಬೆಣ್ಣೆ ಮತ್ತು ಮೆಣಸಿನಿಂದ ತಯಾರಾಗುತ್ತಿತ್ತು. ಕುಂಬಕೋಣಮ್ ಹತ್ತಿರದ ನಲ್ಲೂರಿನ ಪಂಚವರ್ಣೇಶ್ವರ ದೇವಸ್ಥಾನದ ವಾರ್ಷಿಕ ಉತ್ಸವದಲ್ಲಿ, ದೇವರಿಗೆ ೬೦೦೦ ಅತಿರಸಗಳು ಮತ್ತು ೬೦೦೦ ವಡೆಗಳ ನೈವೇದ್ಯವನ್ನು ಅರ್ಪಿಸಲಾಗುತ್ತದೆ; ಇಡೀ ತಿನಿಸನ್ನು ದೇವಾಲಯದ ಅಡುಗೆಮನೆಯಲ್ಲಿ ಸೂರ್ಯೋದಯ ಮತ್ತು ರಾತ್ರಿ ೧೧ರ ನಡುವೆ ತಯಾರಿಸಲಾಗುತ್ತದೆ, ಮತ್ತು ಪ್ರಾರ್ಥನೆಗಳು ಮಧ್ಯರಾತ್ರಿ ನಡೆಯುತ್ತವೆ.

ಅತಿರಸ

ತಮಿಳು ಮನೆಗಳಲ್ಲಿ ದೀಪಾವಳಿ ಸಿಹಿತಿಂಡಿ ತಯಾರಿಕೆಯಲ್ಲಿ ಇದಕ್ಕೆ ಪಟ್ಟಿಯಲ್ಲಿ ಮೊದಲ ಸ್ಥಾನ. ಪಾರಂಪರಿಕ ತಯಾರಿಕೆಗೆ ಸುಮಾರು ಒಂದು ವಾರ ಹಿಡಿಯುತ್ತದೆ. ಮೊದಲು ಅಕ್ಕಿಯನ್ನು ನೀರಿನಲ್ಲಿ ನೆನೆಸಿ ನಂತರ ನೆರಳಿನಲ್ಲಿ ಒಣಗಿಸಿ, ಅಕ್ಕಿ ಮುಕ್ಕಾಲು ಭಾಗ ಒಣಗಿ ಸ್ವಲ್ಪ ತೇವಾಂಶ ಇರುವಾಗಲೇ ನುಣುಪಾದ ಪುಡಿ ಮಾಡಿಕೊಳ್ಳಲಾಗುತ್ತದೆ. ನಂತರ ಬೆಲ್ಲವನ್ನು ನೀರಿನಲ್ಲಿ ಸೇರಿಸಿ ಕುದಿಸಿ ಕರಗಿಸಲಾಗುತ್ತದೆ, ಮೃದು ಚೆಂಡು ಸ್ಥಿರತೆ ಬರುವವರೆಗೆ. ನಂತರ ಅದನ್ನು ಅಕ್ಕಿ ಹಿಟ್ಟಿಗೆ ಏಲಕ್ಕಿ ಪುಡಿಯೊಂದಿಗೆ ಸೇರಿಸಿ ಗಟ್ಟಿಯಾದ ಕಣಕವನ್ನು ಮಾಡಿಕೊಳ್ಳಲಾಗುತ್ತದೆ. ನಂತರ ಈ ಕಣಕವನ್ನು ಜೇಡಿಮಣ್ಣು ಮಡಕೆಗೆ ವರ್ಗಾಯಿಸಿ, ಮಡಕೆಯನ್ನು ತೆಳು ಬಿಳಿ ಬಟ್ಟೆಯಿಂದ ಮುಚ್ಚಲಾಗುತ್ತದೆ. ಅದನ್ನು ನಂತರ ಹುದುಗು ಬರಲು ಸುಮಾರು ೩-೫ ದಿನ ಬಿಡಲಾಗುತ್ತದೆ, ಹಗಲು ಹೊತ್ತಿನಲ್ಲಿ ಇದನ್ನು ಬೆಳಕಿನಲ್ಲಿ ಇಟ್ಟು. ಕಣಕ ತಯಾರಿಕೆಗೆ ಸಿದ್ಧವಾದಾಗ, ಕಣಕದ ಸಣ್ಣ ಗುಂಡುಗಳನ್ನು ತೆಗೆದುಕೊಂಡು ಎಣ್ಣೆ ಸವರಿದ ಬಾಳೆ ಎಲೆ ಮೇಲೆ ಬೆರಳಿನಿಂದ ಒತ್ತಿ ಚಪ್ಪಟೆಮಾಡಲಾಗುತ್ತದೆ. ಆಮೇಲೆ ಬಂಗಾರ ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಆಮೇಲೆ ಹೆಚ್ಚುವರಿ ಎಣ್ಣೆಯನ್ನು ತೆಗೆಯಲು ಅದನ್ನು ಚಪ್ಪಟೆ ತಳದ ಬೋಗುಣಿಯಿಂದ ಒತ್ತಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Matthews, Christine M. E. (1979). Health and culture in a South Indian village. New Delhi, India: Sterling Publishers. p. 254. OCLC 6703271.


"https://kn.wikipedia.org/w/index.php?title=ಅತಿರಸ&oldid=1025792" ಇಂದ ಪಡೆಯಲ್ಪಟ್ಟಿದೆ