ಕಚ್ಚುಕಂಬಿಯು ಕುದುರೆ ಸವಾರಿಯ ಚಟುವಟಿಕೆಗಳಲ್ಲಿ ಬಳಸಲಾದ ಒಂದು ಪ್ರಕಾರದ ಕುದುರೆ ಉಪಕರಣ. ಇದನ್ನು ಸಾಮಾನ್ಯವಾಗಿ ಲೋಹ, ಅಥವಾ ಸಂಶ್ಲೇಷಿತ ವಸ್ತುವಿನಿಂದ ತಯಾರಿಸಲಾಗಿರುತ್ತದೆ. ಇದನ್ನು ಕುದುರೆಯ ಬಾಯಿಯಲ್ಲಿ ಇರಿಸಲಾಗುತ್ತದೆ ಮತ್ತು ಕುದುರೆಯೊಂದಿಗೆ ಸಂಪರ್ಕ ಹೊಂದುವಲ್ಲಿ ಸವಾರನಿಗೆ ನೆರವಾಗುತ್ತದೆ. ಇದು ಬಾಯಿಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಾಚುತ್ತದೆ ಮತ್ತು ಬಾಯಿಯ ಬಾರ್‌ಗಳ ಮೇಲೆ ನಿಂತಿರುತ್ತದೆ. ಬಾರ್ ಎಂದರೆ ಬಾಚಿಹಲ್ಲುಗಳು ಮತ್ತು ಕಡೆಹಲ್ಲುಗಳ ನಡುವಿನ ಹಲ್ಲುಗಳಿಲ್ಲದ ಒಂದು ಪ್ರದೇಶವಾಗಿದೆ. ಇದನ್ನು ಕುದುರೆಯ ತಲೆಯ ಮೇಲೆ ಲಗಾಮಿನಿಂದ ಹಿಡಿದಿಡಲಾಗುತ್ತದೆ ಮತ್ತು ಇದಕ್ಕೆ ಸವಾರನ ಬಳಕೆಗಾಗಿ ಇರುವ ಲಗಾಮುಗಳನ್ನು ಜೋಡಿಸಲಾಗಿರುತ್ತದೆ.

ಕುದುರೆಯು ಕಚ್ಚುಕಂಬಿಯನ್ನು ಧರಿಸಿರುವುದು

ಕಚ್ಚುಕಂಬಿಯು ನಕಾರಾತ್ಮಕ ಬಲವರ್ಧನೆಯ ತತ್ವದ ಮೂಲಕ ಕಾರ್ಯಮಾಡುತ್ತದೆ: ಒಂದು ವರ್ತನೆಗೆ ಬಲವರ್ಧನೆಯಾಗಿ ಒತ್ತಡವನ್ನು ಕಡಿಮೆಮಾಡುವುದು ಅಥವಾ ಸಡಿಲಿಸುವುದು. ಸವಾರನು ಕುದುರೆಯ ಬಾಯಿಯಲ್ಲಿರುವ ಕಚ್ಚುಕಂಬಿಗೆ ಲಗಾಮುಗಳ ಮೂಲಕ ಒತ್ತಡವನ್ನು ಹಾಕುತ್ತಾನೆ ಮತ್ತು ಸರಿಯಾದ ಪ್ರತಿಕ್ರಿಯೆಗೆ ಸವಾರಿಯ ಶೈಲಿಯನ್ನು ಅವಲಂಬಿಸಿ ಕುದುರೆಗೆ ಮೃದು ಸಂಪರ್ಕ ಅಥವಾ ಸಡಿಲಗೊಳಿಸುವಿಕೆ ಅಥವಾ ಒತ್ತಡದ ಮೂಲಕ ಶಕ್ತಿತುಂಬಲಾಗುತ್ತದೆ ಅಥವಾ ಬಹುಮಾನ ನೀಡಲಾಗುತ್ತದೆ. ಸವಾರ ಮತ್ತು ಕುದುರೆಯ ನಡುವೆ ಮೃದು, ಸ್ಥಿರ ಕಚ್ಚುಕಂಬಿ ಸಂಪರ್ಕವು ಪ್ರಾಣಿಗೆ ಬಿಟ್ಟುಬಿಟ್ಟು ಆಗುವ ಅಥವಾ ಅನಿರೀಕ್ಷಿತ ಸಂಪರ್ಕಕ್ಕಿಂತ ಕಡಿಮೆ ಒತ್ತಡವನ್ನು ಉಂಟುಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ.

ಮೊದಲ ಕಚ್ಚುಕಂಬಿಗಳನ್ನು ಹಗ್ಗ, ಮೂಳೆ, ಕೊಂಬು, ಅಥವಾ ಗಟ್ಟಿ ಕಟ್ಟಿಗೆಯಿಂದ ತಯಾರಿಸಲಾಗಿತ್ತು. ಕ್ರಿ.ಪೂ. ೧೩೦೦ ಮತ್ತು ೧೨೦೦ರ ನಡುವೆ ಲೋಹದ ಕಚ್ಚುಕಂಬಿಗಳು ಬಳಕೆಗೆ ಬಂದವು, ಮೂಲತಃ ಇವನ್ನು ಕಂಚಿನಿಂದ ತಯಾರಿಸಲಾಗುತ್ತಿತ್ತು. ಆಧುನಿಕ ಕಾಲದಲ್ಲಿ, ಸುಮಾರು ೧೯೪೦ರ ವರೆಗೆ ನಿಕಲ್ ಒಲವುಳ್ಳ ವಸ್ತುವಾಗಿತ್ತು, ಮತ್ತು ಆಮೇಲೆ ಅದರ ಬದಲಿಗೆ ತುಕ್ಕುರಹಿತ ಉಕ್ಕು ಹೆಚ್ಚಾಗಿ ಬಂದಿತು. ಕುದುರೆಯ ಬಾಯಿಯಲ್ಲಿ ಲಾಲೋತ್ಪಾದನೆಯನ್ನು ಪ್ರೋತ್ಸಾಹಿಸಲು ಕೆಲವು ಕಚ್ಚುಕಂಬಿಗಳಲ್ಲಿ ತಾಮ್ರ, ಓರ್‌ಗಾನ್ ಮತ್ತು ತಂಪಾಗಿ ಸುರುಳಿಸುತ್ತಿದ ಉಕ್ಕನ್ನು ಸೇರಿಸಲಾಗುತ್ತದೆ. ಇದು ಹೆಚ್ಚು ಮೃದುವಾದ ಬಾಯಿಯನ್ನು ಮತ್ತು ಹೆಚ್ಚು ಸಡಿಲಾದ ದವಡೆಯನ್ನು ಪ್ರೋತ್ಸಾಹಿಸುತ್ತದೆ. ಕಚ್ಚುಕಂಬಿಗಳನ್ನು ರಬ್ಬರು ಅಥವಾ ಪ್ಲಾಸ್ಟಿಕ್‍ನಂತಹ ಇತರ ವಸ್ತುಗಳಿಂದ ಕೂಡ ತಯಾರಿಸಬಹುದು, ಕೆಲವೊಮ್ಮೆ ಲೋಹಗಳ ಸಂಯೋಜನೆಯಲ್ಲಿ ತಯಾರಿಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ