ಕಚಗುಳಿ ಇಡುವುದು

(ಕಚಗುಳಿ ಇಂದ ಪುನರ್ನಿರ್ದೇಶಿತ)

ಕಚಗುಳಿ ಇಡುವುದು ಎಂದರೆ ಅನೈಚ್ಛಿಕ ತಟ್ಟನೆಯ ಎಳೆತದ ಚಲನೆಗಳು ಅಥವಾ ನಗೆಯನ್ನು ಉಂಟುಮಾಡುವ ರೀತಿಯಲ್ಲಿ ದೇಹದ ಭಾಗವನ್ನು ಮುಟ್ಟುವ ಕ್ರಿಯೆ. ೧೮೯೭ರಲ್ಲಿ, ಮನಃಶಾಸ್ತ್ರಜ್ಞರಾದ ಸ್ಟ್ಯಾನ್ಲಿ ಹಾಲ್ ಮತ್ತು ಆರ್ಥರ್ ಆಲಿನ್ "ಕಚಗುಳಿ"ಯನ್ನು ಎರಡು ಭಿನ್ನ ಪ್ರಕಾರಗಳ ವಿದ್ಯಮಾನಗಳೆಂದು ವಿವರಿಸಿದರು.[೧] ಒಂದು ಪ್ರಕಾರವು ಚರ್ಮಕ್ಕೆ ಅಡ್ಡಲಾಗಿ ಬಹಳ ಹಗುರ ಚಲನೆಯಿಂದ ಉಂಟಾಗುತ್ತದೆ. ಈ ಪ್ರಕಾರದ ಕಚಗುಳಿಯನ್ನು ನಿಸ್ಮೆಸಿಸ್ ಎಂದು ಕರೆಯಲಾಗುತ್ತದೆ ಮತ್ತು ಇದು ಸಾಮಾನ್ಯವಾಗಿ ನಗೆಯನ್ನು ಉಂಟುಮಾಡುವುದಿಲ್ಲ ಮತ್ತು ಇದರ ಜೊತೆ ಕೆಲವೊಮ್ಮೆ ನವೆಯ ಸಂವೇದನೆ ಇರುತ್ತದೆ.

ಒಂದು ಸಂವೇದನೆಯಾಗಿ ಅದರ ಗುಣಗಳ ಪರಿಭಾಷೆಯಲ್ಲಿ ಕಚಗುಳಿಯನ್ನು ಪರಿಗಣಿಸುವಾಗ, ಅದು ಚರ್ಮಕ್ಕೆ ಅಡ್ಡಲಾಗಿ ಚಲಿಸುವ ಸೌಮ್ಯ ಉತ್ತೇಜನೆಯಿಂದ ಉಂಟಾಗುತ್ತದೆ. ಕಚಗುಳಿಯ ಉಭಯ ಲಕ್ಷಣವು ಸಂಬಂಧಿತ ವರ್ತನೆಗಳನ್ನು ಸೂಚಿಸುತ್ತದೆ. ಈ ವರ್ತನೆಗಳಲ್ಲಿ ನಸುನಗುವುದು, ನಗುವುದು, ತಟ್ಟನೆಯ ಎಳೆತ, ಹಿಂತೆಗೆತ ಮತ್ತು ಚರ್ಮದ ನವಿರು ಸ್ಥಿತಿ ಸೇರಿವೆ. ಕಚಗುಳಿಯನ್ನು ಎರಡು ಪ್ರತ್ಯೇಕ ಸಂವೇದನಾ ವರ್ಗಗಳಾಗಿ ವಿಭಜಿಸಬಹುದು, ನಿಸ್ಮೆಸಿಸ್ ಮತ್ತು ಗಾರ್ಗಲೀಸಿಸ್. "ಚಲಿಸುವ ನವೆ" ಎಂದೂ ಪರಿಚಿತವಿರುವ ನಿಸ್ಮೆಸಿಸ್ ಚರ್ಮದ ಮೇಲೆ ಹಗುರಾದ ಚಲನೆಯಿಂದ ಉಂಟಾಗುವ ಒಂದು ಸೌಮ್ಯವಾಗಿ ಕಿರಿಕಿರಿಗೊಳಿಸುವ ಸಂವೇದನೆಯಾಗಿದೆ, ಉದಾಹರಣೆಗೆ ಮೆಲ್ಲಗೆ ಸರಿಯುವ ಕೀಟದಿಂದ. ಅನೇಕ ಪ್ರಾಣಿಗಳಲ್ಲಿ ಇದು ಏಕೆ ವಿಕಸನಗೊಂಡಿದೆ ಎಂಬುದನ್ನು ಇದು ವಿವರಿಸಬಹುದು. ಗಾರ್ಗಲೀಸಿಸ್ ಪ್ರತಿಕ್ರಿಯೆಗಳೆಂದರೆ ಚರ್ಮಕ್ಕೆ ಅಡ್ಡಲಾಗಿ ದೇಹದ ವಿವಿಧ ಪ್ರದೇಶಗಳಲ್ಲಿ ನೇವರಿಸುವಿಕೆಯ ಹೆಚ್ಚು ಬಿರುಸಾದ, ಹೆಚ್ಚು ಆಳದ ಒತ್ತಡದಿಂದ ಉಂಟಾದ ಹಿತಕರ, ನಗೆಯುಂಟುಮಾಡಡುವ ಅನಿಸಿಕೆ. ಈ ಪ್ರತಿಕ್ರಿಯೆಗಳು ಮಾನವರು ಮತ್ತು ಇತರ ಪ್ರೈಮೇಟ್‍ಗಳಿಗೆ ಸೀಮಿತವಾಗಿವೆ ಎಂದು ಭಾವಿಸಲಾಗಿದೆ, ಆದರೆ ಇಲಿಗಳಿಗೆ ಕೂಡ ಈ ರೀತಿಯಲ್ಲಿ ಕಚಗುಳಿ ಇಡಬಹುದು ಎಂದು ಸ್ವಲ್ಪ ಸಂಶೋಧನೆಯು ಸೂಚಿಸಿದೆ.

ಕಚಗುಳಿಯ ಸಂವೇದನೆಯು ನೋವು ಮತ್ತು ಸ್ಪರ್ಶ ಎರಡಕ್ಕೂ ಸಂಬಂಧಿಸಿದ ನರತಂತುಗಳ ಸಂಜ್ಞೆಗಳನ್ನು ಒಳಗೊಳ್ಳುತ್ತದೆ ಎಂದು ತೋರುತ್ತದೆ. ಕಚಗುಳಿಯ ಅವಧಿಯಲ್ಲಿ ಬಿಡುಗಡೆಗೊಂಡ ಎಂಡಾರ್ಫ಼ಿನ್ ಅನ್ನು ಕ್ಯಾರೋಲೀನ್ ಎಂದು ಕೂಡ ಕರೆಯಲಾಗುತ್ತದೆ. ಕಚಗುಳಿಯ ಸಂವೇದನೆಯು ಭಾಗಶಃ ನೋವನ್ನು ಉಂಟುಮಾಡುವ ನರಗಳನ್ನು ಅವಲಂಬಿಸಿತ್ತು ಎಂದು ಜ಼ಾಟರ್‌ಮನ್ ಕಂಡುಕೊಂಡರು. ನಿಯಂತ್ರಿಸಲು ಕಷ್ಟವಾದ ನೋವನ್ನು ಕಡಿಮೆಮಾಡುವ ಪ್ರಯತ್ನವಾಗಿ ಶಸ್ತ್ರಚಿಕಿತ್ಸಕರು ನೋವಿನ ನರಗಳನ್ನು ವಿಚ್ಛೇದಿಸಿದಾಗ ಕಚಗುಳಿಯ ಪ್ರತಿಕ್ರಿಯೆ ಕೂಡ ಕಡಿಮೆಯಾಗುತ್ತದೆ ಎಂದು ಮತ್ತಷ್ಟು ಅಧ್ಯಯನಗಳು ಕಂಡುಹಿಡಿದಿವೆ. ಆದರೆ, ಬೆನ್ನುಹುರಿಯ ಗಾಯದ ಕಾರಣದಿಂದ ನೋವಿನ ಸಂವೇದನೆಯನ್ನು ಕಳೆದುಕೊಂಡ ಕೆಲವು ರೋಗಿಗಳಲ್ಲಿ, ಕಚಗುಳಿ ಸಂವೇದನೆಯ ಕೆಲವು ಅಂಶಗಳು ಉಳಿದುಕೊಂಡಿರುತ್ತವೆ.

ಉಲ್ಲೇಖಗಳು ಬದಲಾಯಿಸಿ

  1. Hall, G. S., and A. Allin. 1897. The psychology of tickling, laughing and the comic. The American Journal of Psychology 9:1-42.