ಕೋಣೆ

(ಕಕ್ಷ (ಕೊಠಡಿ) ಇಂದ ಪುನರ್ನಿರ್ದೇಶಿತ)

ಒಂದು ಕಟ್ಟಡದಲ್ಲಿ, ಕೋಣೆಯು ನಾಲ್ಕು ಗೋಡೆಗಳಿಂದ ಆವೃತವಾಗಿರುವ ಯಾವುದೇ ಸ್ಥಳ ಮತ್ತು ಯಾವುದಕ್ಕೆ ಪ್ರವೇಶ ಕೇವಲ ಬಾಗಿಲಿನಿಂದ ಸಾಧ್ಯವೊ ಅಂತಹ ಸ್ಥಳ. ಈ ಬಾಗಿಲು ಕೋಣೆಯನ್ನು ನಡುವಣಂಕ, ಮತ್ತೊಂದು ಕೋಣೆ, ಅಥವಾ ಹೊರಾಂಗಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಕೋಣೆಯು ಹಲವಾರು ಜನರು ಚಲಿಸುವಷ್ಟು ದೊಡ್ಡದಾಗಿರುತ್ತದೆ. ಇದರ ಗಾತ್ರ, ನೆಲೆವಸ್ತುಗಳು, ಫ಼ರ್ನಿಶಿಂಗ್‍ಗಳು, ಮತ್ತು ಕೆಲವೊಮ್ಮೆ ಕಟ್ಟಡದೊಳಗಿನ ಅದರ ನಿಯೋಜನೆಯು ಅದರಲ್ಲಿ ನಡೆಸಬೇಕಾದ ಚಟುವಟಿಕೆಗೆ ಆಧಾರ ಒದಗಿಸುತ್ತದೆ.

ವಾಸದ ಕೊಠಡಿ

ಕೆಲವು ಕೋಣೆಗಳನ್ನು ವಿಶೇಷವಾಗಿ ಮನೆಯ ಕೆಲಸಕ್ಕೆ ಆಧಾರ ನೀಡಲು ವಿನ್ಯಾಸಗೊಳಿಸಲಾಗಿರುತ್ತದೆ, ಉದಾಹರಣೆಗೆ ಅಡುಗೆಮನೆಗಳು, ಅಡುಗೆ ವಸ್ತುಗಳ ಉಗ್ರಾಣ, ಮತ್ತು ಬೇರು ತರಕಾರಿಗಳ ನೆಲಮಾಳಿಗೆಗಳು. ಆಹಾರದ ತಯಾರಿಕೆ ಮತ್ತು ಸಂಗ್ರಹ ಇವುಗಳೆಲ್ಲದರ ಉದ್ದೇಶವಾಗಿರುತ್ತದೆ. ಮನೆ ಕಾರ್ಯಾಲಯ ಅಥವಾ ವ್ಯಾಸಂಗದ ಕೋಣೆಯನ್ನು ಮನೆಯ ಬರಹಕಾರ್ಯ ಅಥವಾ ಬಾಹ್ಯ ವ್ಯವಹಾರ ಉದ್ದೇಶಗಳಿಗೆ ಬಳಸಬಹುದು. ಕೆಲವು ಕೆಲಸದ ಕೋಣೆಗಳನ್ನು ಉದ್ದೇಶಿತ ಚಟುವಟಿಕೆಯ ಅನುಸಾರವಾಗಿ ಹೆಸರಿಸಲಾಗುತ್ತದೆ: ಉದಾಹರಣೆಗೆ, ಹೊಲಿಗೆ ಕೋಣೆಯನ್ನು ಹೊಲಿಗೆಗೆ ಬಳಸಲಾಗುತ್ತದೆ, ಒಗೆಯುವ ಕೋಣೆಯನ್ನು ಬಟ್ಟೆ ಒಗೆಯಲು ಮತ್ತು ಇಸ್ತ್ರಿ ಮಾಡಲು ಬಳಸಲಾಗುತ್ತದೆ.

ಆರಾಮ ಮತ್ತು ಸ್ವಚ್ಛತೆಯನ್ನು ಪ್ರೋತ್ಸಾಹಿಸುವುದು ಇತರ ಕೋಣೆಗಳ ಉದ್ದೇಶವಾಗಿರುತ್ತದೆ, ಉದಾಹರಣೆಗೆ ಶೌಚಾಲಯ ಮತ್ತು ಸ್ನಾನದ ಮನೆ, ಮತ್ತು ಇವೆರಡನ್ನು ಒಗ್ಗೂಡಿಸಬಹುದು ಅಥವಾ ಇವೆರಡೂ ಪ್ರತ್ಯೇಕ ಕೋಣೆಗಳಲ್ಲಿ ಇರಬಹುದು. ಇದರ ಸಾರ್ವಜನಿಕ ಸಮಾನವೆಂದರೆ ಶೌಚಾಲಯ ಮತ್ತು ಕೈತೊಳೆದುಕೊಳ್ಳುವ ಸೌಕರ್ಯಗಳನ್ನು ಸಾಮಾನ್ಯವಾಗಿ ಹೊಂದಿರುವ, ಆದರೆ ಸಾಮಾನ್ಯವಾಗಿ ಶಾವರ್ ಅಥವಾ ಸ್ನಾನದ ತೊಟ್ಟಿಯನ್ನು ಹೊಂದಿರದ ಸಾರ್ವಜನಿಕ ಶೌಚಾಲಯ.

ಹಿಂದಿನ ಶತಮಾನಗಳಲ್ಲಿ, ಬಹಳ ದೊಡ್ಡ ಮನೆಗಳು ಹಲವುವೇಳೆ ದೊಡ್ಡ ವಾಸಕೋಣೆಯನ್ನು ಹೊಂದಿರುತ್ತಿದ್ದವು. ಈ ಕೋಣೆಯು ಬಹಳ ದೊಡ್ಡದಾಗಿರುತ್ತಿತ್ತು. ಮೂಲತಃ ಇದು ಒಂದು ಸಾರ್ವಜನಿಕ ಕೋಣೆಯಾಗಿತ್ತು ಮತ್ತು ಹೆಚ್ಚಾಗಿ ಕುಲೀನ ಆಸ್ತಿಯ ಮುಖ್ಯ ಮನೆಯಲ್ಲಿ ಕಾಣಿಸುತ್ತದೆ. ಈ ಕೋಣೆಯಲ್ಲಿ, ಸ್ಥಳೀಯ ಭೂಮಾಲಿಕ ಅಥವಾ ಮನೆಯವರೊಂದಿಗೆ ವ್ಯವಹಾರ ನಡೆಸುತ್ತಿದ ಜನರು ಭೇಟಿಯಾಗಬಹುದಿತ್ತು. ಅತ್ಯಂತ ದೊಡ್ಡದಾದ ಕೋಣೆಯಾಗಿ, ಅದನ್ನು ದೊಡ್ಡ ಔತಣಕೂಟಗಳಿಗೆ ಊಟದ ಕೋಣೆಯಾಗಿ ಕೂಡ ಬಳಸಬಹುದಾಗಿತ್ತು, ಅಥವಾ ಮೇಜುಗಳನ್ನು ತೆರವುಗೊಳಿಸಿ ಸಂಗೀತವನ್ನು ಒದಗಿಸಬಹುದು, ಮತ್ತು ನೃತ್ಯ ಮಂದಿರವಾಗಿ ಮಾರ್ಪಾಡಿಸಬಹುದು. ಪಕ್ಕದಲ್ಲಿ, ಅಥವಾ ಮನೆಯ ಬೇರೆ ಭಾಗದಲ್ಲಿ, ದಿವಾನಖಾನೆ ಇರಬಹುದು. ಇದನ್ನು ಹೆಚ್ಚಿನ ಗೋಪ್ಯತೆಯಿರುವ ಕೋಣೆಯಾಗಿ ಬಳಸಲಾಗುತ್ತದೆ, ವಿಶೇಷವಾಗಿ ಮಾಲೀಕನ ಕುಟುಂಬ ಮತ್ತು ಅವರ ಸ್ನೇಹಿತರು ಮಾತಾಡಲು.

"https://kn.wikipedia.org/w/index.php?title=ಕೋಣೆ&oldid=868903" ಇಂದ ಪಡೆಯಲ್ಪಟ್ಟಿದೆ