ಕಂಪ್ಯೂಟರ್ ಯಂತ್ರಾಂಶ

ಕಂಪ್ಯೂಟರ್ ಯಂತ್ರಾಂಶ (=ಹಾರ್ಡ್ವೇರ್) ದ ಅನೇಕ ಬಿಡಿ ಭಾಗಗಳನ್ನು ಜೋಡಿಸಿ ಪರ್ಸನಲ್‌ ಕಂಪ್ಯೂಟರ್‌ (ವೈಯಕ್ತಿಕ ಕಂಪ್ಯೂಟರ್)ಅನ್ನು ರೂಪಿಸಲಾಗಿದೆ. ಈ ಯಂತ್ರಾಂಶಗಳನ್ನು ಆಧರಿಸಿ ಕಾರ್ಯಾಚರಣಾ ವ್ಯವಸ್ಥೆ(ಆಪರೇಟಿಂಗ್‌ ಸಿಸ್ಟಮ್‌) ಹಾಗೂ, ಬಳಕೆದಾರನ ಅಪೇಕ್ಷಿತ ಕ್ರಿಯೆಗಳನ್ನು ನೆರವೇರಿಸಲು ಸಾಫ್ಟ್‌ವೇರ್‌ (=ತಂತ್ರಾಂಶ)ಗಳನ್ನು ಬಹುಸಂಖ್ಯೆಯಲ್ಲಿ ಅಳವಡಿಸಲಾಗಿದೆ.

ಗಣಕಯಂತ್ರಗಳು

ಬದಲಾಯಿಸಿ

ಯಂತ್ರದ ಭಾಗಗಳು. ಕಂಪ್ಯೂಟರ್ ಯಂತ್ರಾಂಶ (ಕಂಪ್ಯೂಟಿಂಗ್ ಸಂದರ್ಭವನ್ನು ಸಾಮಾನ್ಯವಾಗಿ ಕೇವಲ ಹಾರ್ಡ್ವೇವೇರ್ ಎಂದು ಕರೆಯಲಾಗುತ್ತದೆ.) ಒಂದು ಕಂಪ್ಯೂಟರ್ ವ್ಯವಸ್ಥೆ ರೂಪಿಸುವ ಭೌತಿಕ ಅಂಶಗಳ ಸಂಗ್ರಹ. ಕಂಪ್ಯೂಟರ್ ಯಂತ್ರಾಂಶ ಎಂದರೆ ಭೌತಿಕ ಭಾಗಗಳು .ಹೀಗೆ ಮಾನಿಟರ್, ಮೌಸ್, ಕೀಬೋರ್ಡ್, ಕಂಪ್ಯೂಟರ್ ಸಂಗ್ರಹ, ಹಾರ್ಡ್ ಡಿಸ್ಕ್ ಡ್ರೈವ್ (ಎಚ್ಡಿಡಿ), ಗ್ರಾಫಿಕ್ ಕಾರ್ಡ್ ಧ್ವನಿ ಕಾರ್ಡ್ಗಳನ್ನು, ಮೆಮೊರಿ, ಮದರ್ ಗಣಕಯಂತ್ರದ ಭೌತಿಕ ಭಾಗಗಳು ಅಥವಾ ಘಟಕಗಳನ್ನು, ಮತ್ತು ಸ್ಪಷ್ಟವಾದ ಭೌತಿಕ ವಸ್ತುಗಳು. ಇದಕ್ಕೆ ವಿರುದ್ಧವಾಗಿ, ಸಾಫ್ಟ್ವೇರ್ ಸೂಚನೆಗಳನ್ನು ಒಳಗೊಂಡಿದೆ. ಇದನ್ನುಸಂಗ್ರಹಿಸುತ್ತವೆ ಮತ್ತು ನಡೆಸಲ್ಪಡುತ್ತವೆ.

 
ಹಾರ್ಡ್ ವೇರ್

ಸಾಫ್ಟ್ವೇರ್ ಯಾವುದೆ ಒಂದು ಯಂತ್ರವಾಚನೀಯ ಸೂಚನೆಗಳ ಗುಂಪಾಗಿದೆ ಕಂಪ್ಯೂಟರ್ ಸಂಸ್ಕಾರಕ ನಿರ್ದಿಷ್ಟ ಕಾರ್ಯನಿರ್ವಹಿಸುವಂತೆ ನಿರ್ದೇಶಿಸುತ್ತದೆ . ಯಂತ್ರಾಂಶ ಮತ್ತು ತಂತ್ರಾಂಶ ಸಾಮಾರ್ಥ್ಯ ಒಂದು ಬಳಸಬಹುದಾದ ಲೆಕ್ಕ ಮಾಡುವ ವ್ಯವಸ್ಥೆಯನ್ನು ರೂಪಿಸುತ್ತದೆ.

ವಾನ್ ನ್ಯೂಮನ್ ವಾಸ್ತುಶಿಲ್ಪ

ಬದಲಾಯಿಸಿ

ಎಲ್ಲಾ ಆಧುನಿಕ ಕಂಪ್ಯೂಟರ್ಗಳಿಗೆ ಟೆಂಪ್ಲೇಟ್ ಹಂಗೇರಿಯನ್ ಗಣಿತಜ್ಞ ಜಾನ್ ವಾನ್ ನ್ಯೂಮನ್ ಮೂಲಕ 1945 ಪತ್ರಿಕೆಯಲ್ಲಿ ವಿವರವಾದ ವಾನ್ ನ್ಯೂಮನ್ ವಾಸ್ತುಶಿಲ್ಪ, ಆಗಿದೆ. ಈ ಒಂದು ಅಂಕಗಣಿತ ತರ್ಕಶಾಸ್ತ್ರ ಘಟಕ ಮತ್ತು ಪ್ರೊಸೆಸರ್ ರೆಜಿಸ್ಟರ್ಗಳನ್ನು ಒಳಗೊಂಡ ಸಂಸ್ಕರಣೆ ಘಟಕದ ಉಪ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ ವಿನ್ಯಾಸವನ್ನು ರಚನೆಯನ್ನು ವಿವರಿಸುತ್ತದೆ, ಒಂದು ಸೂಚನಾ ರಿಜಿಸ್ಟರ್ ಮತ್ತು ಪ್ರೊಗ್ರಾಮ್ ಕೌಂಟರ್ ಹೊಂದಿರುವ ನಿಯಂತ್ರಣ ಘಟಕ, ಮಾಹಿತಿ ಮತ್ತು ಸೂಚನೆಗಳನ್ನು, ಬಾಹ್ಯ ಮಾಸ್ ಸ್ಟೋರೇಜ್ ಎರಡೂ ಶೇಖರಿಸಿಡಲು ಒಂದು ಮೆಮೊರಿ, ಮತ್ತು ಇನ್ಪುಟ್ ಮತ್ತು ಔಟ್ಪುಟ್ ಯಾಂತ್ರಿಕ. ಪದದ ಅರ್ಥ ಇದರಲ್ಲಿ ಒಂದು ಸೂಚನಾ ತರಲು ಮತ್ತು ಅವರು ಒಂದು ಸಾಮಾನ್ಯ ಬಸ್ ಏಕೆಂದರೆ ಡೇಟಾ ಕಾರ್ಯಾಚರಣೆ ಅದೇ ಸಮಯದಲ್ಲಿ ಉಂಟಾಗುವುದಿಲ್ಲ ಒಂದು ಸಂಗ್ರಹಿಸಿದ-ಪ್ರೋಗ್ರಾಮ್ ಕಂಪ್ಯೂಟರ್ ಅರ್ಥ ಹೊರಹೊಮ್ಮಿದೆ.

 
ವಾನ್ ನ್ಯೂಮನ್ ವಾಸ್ತುಶಿಲ್ಪ.

ಎಂದು ಕರೆಯಲಾಗುತ್ತದೆ ಮತ್ತು ಸಾಮಾನ್ಯವಾಗಿ ಕಾರ್ಯಕ್ಷಮತೆ ಸೀಮಿತಗೊಳಿಸುತ್ತದೆ .

PC ಯಂತ್ರಾಂಶದ ಮಾದರಿ

ಬದಲಾಯಿಸಿ
 
ವೈಯಕ್ತಿಕ ಕಂಪ್ಯೂಟರ್ ಯಂತ್ರಾಂಶ.1. ದರ್ಶಕ2. ಮದರ್‌ಬೋರ್ಡ್‌3. CPU4. RAM ಸ್ಮೃತಿಕೋಶ 5. ವಿಸ್ತರಣಾ ಕಾರ್ಡ್‌6. ವಿದ್ಯುತ್‌ ಪೂರೈಕೆ7. CD-ROM ಡ್ರೈವ್‌ 8. ಹಾರ್ಡ್ ಡಿಸ್ಕ್‌9. ಕೀಲಿಮಣೆ10. ಮೌಸ್‌
 
ಗಿರಾಕಿಯ ಆದೇಶಾನುಸಾರ ಜೋಡಿಸಲಾದ ಕಂಪ್ಯೂಟರ್ದೊಳಗೆ.

PC ಹಲವು ರೂಪಗಳಲ್ಲಿ ಲಭ್ಯವಿದ್ದರೂ, ಮಾದರಿ ಪರ್ಸನಲ್‌ ಕಂಫ್ಯೂಟರ್‌ (ವೈಯಕ್ತಿಕ ಕಂಫ್ಯೂಟರ್‌ ) ಒಂದು ಗೋಪುರಾಕಾರದ (ಡೆಸ್ಕ್‌ಟಾಪ್‌) ಪೆಟ್ಟಿಗೆ ಅಥವಾ ಆಧಾರ ಚೌಕಟ್ಟು (ಚ್ಯಾಸಿ) ಹೊಂದಿದ್ದು, ಇದರ ಜೊತೆಗೆ ಕೆಳಕಂಡ ಬಿಡಿಗಳನ್ನು ಹೊಂದಿದೆ:

ಮದರ್‌ಬೋರ್ಡ್‌

ಬದಲಾಯಿಸಿ

ಮದರ್‌ಬೋರ್ಡ್‌ ಪಟ್ಟಿಗೆಯೊಳಗಿರುವ ಮುಖ್ಯ ಭಾಗ. ಇದು ಇಂಟೆಗ್ರೆಟೆಡ್‌ ಸರ್ಕ್ಯೂಟ್ರಿ (ಅನುಕಲಿತ ಮಂಡಲ) ಹೊಂದಿರುವ ಒಂದು ದೊಡ್ಡ ಆಯತಾಕಾರದ ಫಲಕ. ಇದು CPU, RAM, ಡಿಸ್ಕ್‌ ಡ್ರೈವ್‌ಗಳು (CD, DVD, ಹಾರ್ಡ್‌ ಡಿಸ್ಕ್‌ , ಇನ್ನೂ ಮೊದಲಾದವು) ಸೇರಿದಂತೆ,ಕಂಪ್ಯೂಟರ್‌ನ ಇತರೆ ಭಾಗಗಳೊಂದಿಗೆ ಹಾಗೂ ಪೋರ್ಟ್‌ಗಳ ಅಥವಾ ವಿಸ್ತರಿತ ಸ್ಲಾಟ್‌ಗಳ ಮೂಲಕ ಸಂಪರ್ಕ ಹೊಂದಿರುವ ಕಂಪ್ಯೂಟರ್‌ ಪೆರಿಫೆರಲ್‌ (ಬಾಹ್ಯಭಾಗ) ಗಳೊಂದಿಗೆ ಈ ಇಂಟೆಗ್ರೆಟೆಡ್‌ ಸರ್ಕ್ಯೂಟ್ರಿ ಸಂಪರ್ಕ ಹೊಂದಿದೆ.

ನೇರವಾಗಿ ಮದರ್‌ಬೋರ್ಡ್‌ಗೆ ಸಂಪರ್ಕ ಹೊಂದಿರುವ ಭಾಗಗಳು ಹೀಗಿವೆ:

  • ಸೆಂಟ್ರಲ್‌ ಪ್ರಾಸೆಸಿಂಗ್‌ ಯುನಿಟ್‌ (ಕೇಂದ್ರೀಯ ಸಂಸ್ಕರಣಾ ಘಟಕ=CPU)) ಕೆಲಸ ಮಾಡಲು ಅನುಕೂಲವಾಗುವಂತಹ ಹಲವಾರು ಸಂಸ್ಕರಣಾ ಕ್ರಿಯೆಗಳನ್ನು ಮಾಡುತ್ತದೆ. ಹಾಗಾಗಿ ಇದನ್ನು ಕಂಪ್ಯೂಟರ್‌ನ 'ಮೆದುಳು' ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಒಂದು ಫ್ಯಾನ್‌ ಮತ್ತು ಹೀಟ್‌ ಸಿಂಕ್‌ (ಶಾಖಚೋಷಕ) ಮೂಲಕ ಇದನ್ನು ತಂಪಾಗಿಇರಿಸಲಾಗುತ್ತದೆ.
  • ಚಿಪ್‌ಸೆಟ್‌ CPU ಹಾಗೂ ಮೆಮೊರಿ ಸೇರಿದಂತೆ ಸಿಸ್ಟಮ್‌ನ ಇತರೆ ಭಾಗಗಳ ನಡುವೆ ಚಿಪ್‌ಸೆಟ್‌ ಸಂವಹನವನ್ನು ಕಲ್ಪಿಸುತ್ತದೆ.
  • RAM ಚಾಲ್ತಿಯಲ್ಲಿರುವ ಎಲ್ಲಾ ತಂತ್ರಾಂಶಗಳ ಸಂಸ್ಕರಣೆಗಳನ್ನು ಮತ್ತು ಪ್ರಸ್ತುತ ಕಾರ್ಯಾಚರಣಾ ವ್ಯವಸ್ಥೆಯನ್ನು ಶೇಖರಿಸುತ್ತದೆ. RAM ಎಂದರೆ ರಾಂಡಮ್‌ ಆಕ್ಸೆಸ್‌ ಮೆಮೊರಿ.
  • BIOS ಬೂಟ್‌ ಫರ್ಮ್‌ವೇರ್‌ ಮತ್ತು ವಿದ್ಯುತ್‌ ನಿರ್ವಹಣೆಯನ್ನು ಒಳಗೊಂಡಿದೆ. B ಬೇಸಿಕ್‌ I ಇನ್‌ಪುಟ್‌ O ಔಟ್‌ಪುಟ್‌ S ಸಿಸ್ಟಮ್‌ (BIOS) ಕ್ರಿಯೆಗಳನ್ನು ಕಾರ್ಯಾಚರಣಾ ವ್ಯವಸ್ಥೆಯ ಡ್ರೈವರ್‌ಗಳು ನಿರ್ವಹಿಸುತ್ತವೆ.
  • ಇಂಟರ್ನಲ್‌ ಬಸಸ್‌ (ಆಂತರಿಕ ವಾಹಕಗಳು) CPU ಮತ್ತು ವಿವಿಧ ಆಂತರಿಕ ಭಾಗಗಳಿಗೆ ಮತ್ತು ಗ್ರ್ಯಾಫಿಕ್ಸ್‌ ಹಾಗೂ ಧ್ವನಿಗಾಗಿ ವಿಸ್ತರಣಾ ಕಾರ್ಡ್‌ಗಳ ನಡುವೆ ಸಂಪರ್ಕ ಒದಗಿಸುತ್ತದೆ.
    • ಪ್ರಸ್ತುತ ಬಳಕೆಯಲ್ಲಿರುವುದು:
      • RAM ಮತ್ತು PCI ಎಕ್ಸ್‌ಪ್ರೆಸ್‌ಗಾಗಿ ನಾರ್ತ್‌ಬ್ರಿಡ್ಜ್‌ ಮೆಮೊರಿ ಕಂಟ್ರೊಲರ್‌
        • ಗ್ರಾಫಿಕ್ಸ್‌ ಮತ್ತು ಭೌತಿಕ ಸಂಸ್ಕರಣೆಗಳು (ಪ್ರೊಸೆಸರ್ಸ್‌) ಹಾಗೂ ಹೈ-ಎಂಡ್‌ ನೆಟ್ವರ್ಕ್‌ ಇಂಟರ್ಫೇಸಸ್ ನಡುವಿನ ಸಂಪರ್ಕ ಸಾಧನ ಕಾರ್ಡ್‌ಗಳಾಗುವ PCI ಎಕ್ಸ್‌ಪ್ರೆಸ್‌
      • ಇತರೆ ವಿಸ್ತರಿತ ಕಾರ್ಡ್‌ಗಳಿಗಾಗಿ PCI
      • ಡಿಸ್ಕ್‌ ಡ್ರೈವ್‌ಗಳಿಗಾಗಿ SATA
    • ಅಪ್ರಸ್ತುತ (ಬಳಕೆಯಲ್ಲಿಲ್ಲದ್ದು)
      • ATA (ATAಯನ್ನು SATA ಹಿಂದಿಕ್ಕಿದೆ)
      • AGP (AGP ಯನ್ನು PCI ಎಕ್ಸ್‌ಪ್ರೆಸ್‌ ಹಿಂದಿಕ್ಕಿದೆ)
      • VLB VESA ಲೋಕಲ್‌ ಬಸ್‌ (AGP ಇದನ್ನು ಹಿಂದಿಕ್ಕಿದೆ)
      • ISA (PCಗಳಲ್ಲಿ ವಿಸ್ತರಿತ ಕಾರ್ಡ್‌ ಸ್ಲಾಟ್‌ ಫಾರ್ಮ್ಯಾಟ್‌ ವರ್ಜಿಸಲ್ಪಡ್ಡಿದೆ, ಆದರೂ ಔದ್ಯೋಗಿಕ ಕಂಪ್ಯೂಟರ್ಗಳಲ್ಲಿ ಇನ್ನೂ ಬಳಸಲಾಗುತ್ತಿವೆ)
  • ಎಕ್ಸ್ಟರ್ನಲ್‌ ಬಸ್‌ ಕಂಟ್ರೊಲರ್‌ಗಳು (ಬಾಹ್ಯ ಬಸ್‌ ನಿಯಂತ್ರಕಗಳು) ಬಾಹ್ಯ ಭಾಗಗಳ (ಪೆರಿಫೆರಲ್ಸ್‌) ಪೊರ್ಟ್‌ಗಳಿಗೆ ಆಧಾರ ಒದಗಿಸುತ್ತವೆ. ಈ ಪೊರ್ಟ್‌ಗಳನ್ನು ಸೌತ್‌ಬ್ರಿಡ್ಜ್‌ I/O ನಿಯಂತ್ರಕಗಳು ನೇರವಾಗಿ ನಿಯಂತ್ರಿಸಬಹುದು; ಅಥವಾ PCI ಬಸ್‌ ಮೂಲಕ ಮದರ್‌ಬೋರ್ಡ್‌ಗೆ ಜೋಡಿಸಲಾದ ವಿಸ್ತರಿತ ಕಾರ್ಡ್‌ಗಳನ್ನು ಆಧರಿಸಿ ನಿಯಂತ್ರಣ ಮಾಡಬಹುದು.

ವಿದ್ಯುತ್‌ ಪೂರೈಕೆ

ಬದಲಾಯಿಸಿ

ವಿದ್ಯುತ್‌ ತಂತಿ ಮತ್ತು ಸ್ವಿಚ್‌ ವಿದ್ಯುತ್‌ ಪೂರೈಕೆ ಸಾಧನಗಳಾದರೆ,ವ್ಯವಸ್ಥೆ ತಂಪಾಗಿರುವ ಸಲುವಾಗಿ ಫ್ಯಾನ್‌ಗಳನ್ನು ಅಳವಡಿಸಲಾಗಿರುತ್ತೆ. ಮದರ್‌ಬೋರ್ಡ್‌ ಮತ್ತು ಒಳಗಿರುವ ಡಿಸ್ಕ್‌ ಡ್ರೈವ್‌ಗಳಿಗೆ ಇದು ಸೂಕ್ತ ಮಟ್ಟದ ವೊಲ್ಟೇಜ್‌ಗಳಲ್ಲಿ ವಿದ್ಯುತ್‌ ಪೂರೈಕೆ ಮಾಡುತ್ತದೆ. ಇದು ವಿದ್ಯುತ್ತನ್ನು ಪರ್ಯಾಯ ಪ್ರವಾಹ (AC) ದಿಂದ ನೇರ ಪ್ರವಾಹ(DC)ಕ್ಕೆ ಪರಿವರ್ತಿಸಿ ಕಂಪ್ಯೂಟರ್‌ನ ವಿವಿಧ ಭಾಗಗಳಿಗೆ ವಿವಿಧ ಮಟ್ಟದ ವೋಲ್ಟೇಜ್‌ಗಳಲ್ಲಿ ಸರಬರಾಜು ಮಾಡುತ್ತದೆ.

ವಿಡಿಯೊ ಡಿಸ್ಪ್ಲೇ ಕಂಟ್ರೊಲರ್‌ (ದೃಶ್ಯ ಪ್ರದರ್ಶನ ನಿಯಂತ್ರಕ)

ಬದಲಾಯಿಸಿ

ಕಂಪಯೂಟರ್‌ನ ತೆರೆ (ಮಾನಿಟರ್‌) ಮೇಲೆ ಮೂಡಬೇಕಾದ್ದನ್ನು (ಔಟ್ಪುಟ್‌‌ ಅನ್ನು) ಇದು ಸಿದ್ಧಗೊಳಿಸುತ್ತದೆ. ಮದರ್‌ಬೋರ್ಡ್‌ನೊಳಗೇ ಇದು ಅಂತರ್ನಿರ್ಮಿತವಾಗಿರುತ್ತದೆ ಅಥವಾ, ಗ್ರಾಫಿಕ್ಸ್ ಕಾರ್ಡ್‌ ರೂಪದಲ್ಲಿ, ಅದರದೇ ಪ್ರತ್ಯೇಕ ಸ್ಥಾನ(ಸ್ಲಾಟ್‌) (PCI, PCI-E, PCI-E 2.0, ಅಥವಾ AGP)ದಲ್ಲಿ ಜೋಡಿಸಲಾಗಿರುತ್ತದೆ. ಬಹುಪಾಲು ವಿಡಿಯೊ ಕಾರ್ಡ್‌ಗಳು ಮೂಲಭೂತ ಅಗತ್ಯಗಳನ್ನು ಪೂರೈಸುತ್ತವೆ. ವಿಡಿಯೊ ಕಾರ್ಡ್‌ ತಯಾರಿಕೆಯ ಉದ್ದಿಮೆಗಳು (ವಿಡಿಯೊ) ಆಟಗಳಿಗೆ ಬೇಕಾದ ಅವಶ್ಯತೆಗಳನ್ನು ಪೂರೈಸುವ ಹೊಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿವೆ. ಆದಾಗ್ಯೂ, ತಯಾರಿಕಾ ಉದ್ದಿಮೆಗಳು ಆಸ್ಥೆ ವಹಿಸಿರುವ ಕಾರಣ,ಆಟಗಳ ವಿಕಸನದ ವೇಗ ವಿಡಿಯೂಗಳಿಗಿಂತಲೂ ಹೆಚ್ಚಾಗಿದೆ.

ರಿಮೂವಬಲ್‌ ಮೀಡಿಯಾ ಡಿವೈಸೆಸ್‌ (ತೆಗೆಯಬಹುದಾದ ಮಾಧ್ಯಮ ಸಾಧನಗಳು)

ಬದಲಾಯಿಸಿ
  • CD (ಕಾಂಪ್ಯಾಕ್ಟ್‌ ಡಿಸ್ಕ್‌) - ತೆಗೆಯಬಹುದಾದ ಮಾಧ್ಯಮಗಳಲ್ಲಿ ಸರ್ವೇಸಾಮಾನ್ಯ ಸಾಧನವಾದ ಇದು ಮಾಹಿತಿ ಮತ್ತು ಸಂಗೀತ ಸಂಗ್ರಹಿಸಲು ಸೂಕ್ತ.
    • CD-ROM ಡ್ರೈವ್‌ - ಇದು CDಯಲ್ಲಿರುವ ಮಾಹಿತಿಯನ್ನು ಓದಲು ಬಳಸಲಾಗುವ ಸಾಧನ.
    • CD ರೈಟರ್‌ - ಇದು CDಯಲ್ಲಿರುವ ಮಾಹಿತಿಯನ್ನು ಓದಲು ಹಾಗೂ ಮಾಹಿತಿಯನ್ನು CDಯಲ್ಲಿ ಬರೆಯಲು ಬಳಸಲಾಗುವ ಸಾಧನ.
  • DVD (ಡಿಜಿಟಲ್‌ ವರ್ಸಟೈಲ್‌ ಡಿಸ್ಕ್‌) - CDಯಂತೆಯೇ ಇರುವ ಇದು ಒಂದು ಜನಪ್ರಿಯ 'ತೆಗೆಬಯುದಾದ ಮಾಧ್ಯಮ' ಸಾಧನ. ಆದರೆ ಇದರ ಮಾಹಿತಿ ಶೇಖರಣಾ ಸಾಮರ್ಥ್ಯ CDಗಿಂತಲೂ 12 ಪಟ್ಟು ಹೆಚ್ಚು. ಡಿಜಿಟಲ್‌ ವಿಡಿಯೊಗಳನ್ನು ವರ್ಗಾಯಿಸಲು ಇದನ್ನು ಬಳಸುವುದು ಸರ್ವೇಸಾಮಾನ್ಯ. ಮಾಹಿತಿಯನ್ನು ಶೇಖರಿಸಿಡಲು ಇದೊಂದು ಜನಪ್ರಿಯ ಸಾಧನ.
    • DVD-ROM ಡ್ರೈವ್‌ - ಇದು DVDಯಲ್ಲಿರುವ ಮಾಹಿತಿಯನ್ನು ಓದಲು ಬಳಸಲಾಗುವ ಸಾಧನ.
    • DVD ರೈಟರ್‌ - ಇದು DVDಯಲ್ಲಿರುವ ಮಾಹಿತಿಯನ್ನು ಓದಲು ಹಾಗೂ ಬರೆಯಲು,DVDಯಿಂದ DVDಗೆ ಮಾಹಿತಿ ವರ್ಗಾವಣೆ ಮಾಡಲು ಬಳಸಲಾಗುವ ಸಾಧನ.
    • DVD-RAM ಡ್ರೈವ್‌ - ಇದು ವಿಶೇಷ ರೀತಿಯ DVDಯಲ್ಲಿ ಶೇಖರಿಸಲಾಗಿರುವ ಮಾಹಿತಿಯನ್ನು ಓದಲು ಮತ್ತು ಅದರಲ್ಲಿ ಮಾಹಿತಿಯನ್ನು ಬರೆಯಲು ಬಳಸಲಾಗುವ ಸಾಧನ.
  • ಬ್ಲೂ-ರೇ ಡಿಸ್ಕ್‌ - ಇದು ಮಾಹಿತಿ ಹಾಗೂ ಹೈ-ಡೆಫಿನಿಷನ್‌ ವಿಡಿಯೊಗಳನ್ನು ಶೇಖರಿಸಿಡಲು ಬಳಸಲಾಗುವ ಹೈ-ಡೆನ್ಸಿಟಿ(ಹೆಚ್ಚು ಕಾಂತರೇಖಾ-ಸಾಂದ್ರತೆಯ) ಅಪ್ಟಿಕಲ್‌ ಡಿಸ್ಕ್‌. ಇದಕ್ಕಿರುವ ಮಾಹಿತಿ ಶೇಖರಣಾ ಸಾಮರ್ಥ್ಯ CDಗಿಂತಲೂ 70 ಪಟ್ಟು ಹೆಚ್ಚು.
    • BD-ROM ಡ್ರೈವ್‌ - ಇದು ಬ್ಲೂ-ರೇ ಡಿಸ್ಕ್‌ನಿಂದ ಮಾಹಿತಿಯನ್ನು ಓದಲು ಬಳಸಲಾಗುವ ಸಾಧನ.
    • BD ರೈಟರ್‌ - ಬ್ಲೂ-ರೇ ಡಿಸ್ಕ್‌ನಲ್ಲಿರುವ ಮಾಹಿತಿಯನ್ನು ಓದಲು ಅಥವಾ ಮಾಹಿತಿಯನ್ನು ಅದರಲ್ಲಿ ಬರೆಯಲು ಬಳಸಲಾಗುವ ಸಾಧನ.
  • HD DVD -ಇದು ಬ್ಲೂ-ರೇ ಫಾರ್ಮ್ಯಾಟ್‌ಗೆ ಸ್ಥಗಿತಗೊಂಡ ಪ್ರತಿಸ್ಪರ್ಧಿ.
  • ಫ್ಲಾಪಿ ಡಿಸ್ಕ್‌ - ಮೃದುವಾದ ಆಯಸ್ಕಾಂತೀಯ ಶೇಖರಣಾ ಮಾಧ್ಯಮವನ್ನು ಹೊಂದಿರುವ ತೆಳ್ಳಗಿನ ಬಿಲ್ಲೆಯ ರೂಪದಲ್ಲಿರುವ ಒಂದು ಶೇಖರಣಾ ಸಾಧನ.ಚಾಲ್ತಿಯಲ್ಲಿಲ್ಲದ ಗತಕಾಲದ ಸಾಧನವಿದು.ಅದನ್ನು ಈಗ RAID ಡ್ರೈವರ್‌ಗಳನ್ನು ಅಳವಡಿಷಲು ಬಳಸಲಾಗುತ್ತದೆ.
  • ಅಯೊಮೆಗಾ ಜಿಪ್‌ ಡ್ರೈವ್‌ - ಮಧ್ಯಮ-ಕ್ಷಮತೆಯುಳ್ಳ, ಗತಕಾಲದ, ತೆಗೆಯಬಹುದಾದ ಡಿಸ್ಕ್‌ ಶೇಖರಣಾ ವ್ಯವಸ್ಥೆಯಿದು. ಇದನ್ನು ಮೊದಲ ಬಾರಿಗೆ ಅಯೊಮೆಗಾ ಸಂಸ್ಥೆಯು 1994ರಲ್ಲಿ ಪರಿಚಯಿಸಿತು.
  • USB ಫ್ಲ್ಯಾಷ್ ಡ್ರೈವ್‌ - ಸಣ್ಣ ಗಾತ್ರವುಳ್ಳ, ಕಡಿಮೆ ತೂಕವುಳ್ಳ, ಪುನಃ ಬರೆಯಬಹುದಾದ (ರಿರೈಟಬಲ್‌)ಇದು ತೆಗೆಯಬಹುದಾದ ಒಂದು ಸಾಧನ. ಇದು ಒಂದು ಫ್ಲ್ಯಾಷ್‌ ಮೆಮೊರಿ ಮಾಹಿತಿ ಶೇಖರಣಾ ಸಾಧನವಾಗಿದೆ. ಇದಕ್ಕೆ USB ಇಂಟರ್‌ಫೇಸ್ ಇದೆ. ಇದರ ವಿವಿಧ ಶೇಖರಣಾ ಕ್ಷಮತೆಗಳಲ್ಲಿ ಲಭ್ಯ. ಕೆಲವು (CDಗಳಂತೆ) ನೂರಾರು ಮೆಗಾಬೈಟ್‌ಗಳಷ್ಟು ಮಾಹಿತಿಯನ್ನು ಶೇಖರಿಸಬಹುದಾದರೆ, ಇನ್ನು ಕೆಲವು ಹತ್ತಾರು ಗಿಗಾಬೈಟ್‌ಗಳಷ್ಟು ಮಾಹಿತಿಯನ್ನು ಸಂಗ್ರಹಿಸಬಲ್ಲವು. (ಇವು ಬ್ಲೂ-ರೇ ಡಿಸ್ಕ್‌ಗಳ ಶೇಖರಣಾ ಸಾಮರ್ಥ್ಯವನ್ನೂ ಮೀರಿಸಬಲ್ಲವು).
  • ಟೇಪ್‌ ಡ್ರೈವ್‌ - ಆಯಸ್ಕಾಂತೀಯ ಸುರುಳಿಯ ಮೇಲೆ ಮಾಹಿತಿಯನ್ನು ಓದಬಹುದಾದ/ಬರೆಯಬಹುದಾದ ಸಾಧನವಿದು. ದೀರ್ಘಾವಧಿಯ ಮಾಹಿತಿ ಶೇಖರಣೆ ಮತ್ತು ಬ್ಯಾಕಪ್‌ (ಮುಂದಿನ ಬಳಕೆಗಾಗಿ ಸಂಚಯಿಸಿದ ಮಾಹಿತಿ)ಗಾಗಿ ಇದನ್ನು ಬಳಸಲಾಗುತ್ತದೆ.

ಆಂತರಿಕ ಶೇಖರಣೆ

ಬದಲಾಯಿಸಿ

ಯಂತ್ರಾಂಶವು ಮಾಹಿತಿಯನ್ನು ಕಂಪ್ಯೂಟರ್‌‌ನಲ್ಲಿ ಶೇಖರಿಸಿ ಇಟ್ಟುಕೊಂಡಿರುತ್ತದೆ, ಕಂಪ್ಯೂಟರ್‌ಗೆ ವಿದ್ಯುತ್ ಪೂರೈಕೆ ಇಲ್ಲದಾಗಲೂ ಮಾಹಿತಿಯನ್ನು ಅದು ತನ್ನ ಒಡಲೊಳಗೆ ಇಟ್ಟುಕೊಂಡಿರುತ್ತದೆ.

  • ಹಾರ್ಡ್‌ ಡಿಸ್ಕ್‌ - ಮಧ್ಯಮ-ಅವಧಿಯ ಮಾಹಿತಿ ಶೇಖರಣೆಗಾಗಿ ಇದನ್ನು ಬಳಸಲಾಗುತ್ತದೆ.
  • ಸಾಲಿಡ್‌-ಸ್ಟೇಟ್‌ ಡ್ರೈವ್‌ - ಹಾರ್ಡ್ ಡಿಸ್ಕ್‌ನಂತೆಯೇ ಇರುವಂತಹ ಸಾಧನವಿದು. ಆದರೆ ಇದರಲ್ಲಿ ಯಾವುದೇ ಚಲಿಸುವ ಭಾಗಗಳಿಲ್ಲ. ಮಾಹಿತಿಯನ್ನು ಇದು ಡಿಜಿಟಲ್‌ ರೂಪದಲ್ಲಿ ಶೇಖರಿಸುತ್ತದೆ.
  • RAID ಅರೇ ಕಂಟ್ರೊಲರ್‌ (RAID ಶ್ರೇಣಿ ನಿಯಂತ್ರಕ) - 'RAID ಶ್ರೇಣಿ'- ಇದು ಆಂತರಿಕ ಮತ್ತು ಬಾಹ್ಯ ಹಾರ್ಡ್ ಡಿಸ್ಕ್‌ಗಳನ್ನು ನಿರ್ವಹಿಸುತ್ತದೆ.ಕೆಲವೊಮ್ಮೆ ಇದು ಬಾಹ್ಯಭಾಗಗಳ (ಪೆರಿಫೆರಲ್‌)ಕಾರ್ಯವನ್ನೂ ನೋಡಿಕೊಳ್ಳುತ್ತದೆ. ವ್ಯವಸ್ಥೆಯಲ್ಲಿನ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಬಳಸಲಾಗುವ ಸಾಧನವಿದು.ಇದನ್ನು RAID ಅರೇ ಎನ್ನಲಾಗಿದೆ.

ಸೌಂಡ್‌ ಕಾರ್ಡ್‌ (ಧ್ವನಿ ವಾಹಕ‌)

ಬದಲಾಯಿಸಿ

ಇದು ಧ್ವನಿ ರೂಪದ ಮಾಹಿತಿಯನ್ನು ಮೈಕ್ರೊಫೋನ್‌ (ಧ್ವನಿಗ್ರಾಹಕ) ಮೂಲಕ ಸ್ವೀಕರಿಸಿ, ಧ್ವನಿವರ್ಧಕಗಳ ಮೂಲಕ ಧ್ವನಿಯನ್ನು ಹೊರ ಹೊಮ್ಮಿಸುವ ಸಾಧನ. ಬಳಕೆದಾರರು ಕಂಪ್ಯೂಟರ್‌ ಯಂತ್ರವನ್ನು ಉತ್ತಮಪಡಿಸಲು, ಪ್ರತ್ಯೇಕವಾಗಿ ಧ್ವನಿ ಕಾರ್ಡ್‌ನ್ನು ಅಳವಡಿಸುವುದು ಸರ್ವೇಸಾಮಾನ್ಯವಾದರೂ, ಆಧುನಿಕ ಕಂಪ್ಯೂಟರ್ಗಳಲ್ಲಿ ಹಲವು ಮದರ್‌ಬೋರ್ಡ್‌ಗಳಲ್ಲಿಯೇ ಧ್ವನಿ ಕಾರ್ಡ್‌ಗಳನ್ನು ಹೊಂದಿವೆ. ಅಂತರ್ನಿರ್ಮಿತವಾದ ಅಥವಾ ಹೆಚ್ಚುವರಿಯಾಗಿ ಒದಗಿಸಲ್ಪಟ್ಟ ಬಹಳಷ್ಟು ಧ್ವನಿ ಕಾರ್ಡ್‌ಗಳು 'ಸರೌಂಡ್‌ ಸೌಂಡ್‌' ಕ್ಷಮತೆಯನ್ನು ಹೊಂದಿವೆ.

ಇತರೆ ಬಾಹ್ಯೋಪಕರಣಗಳು

ಬದಲಾಯಿಸಿ

ಇದಲ್ಲದೆ, ಯಂತ್ರಾಂಶ ಸಾಧನಗಳು ಕಂಪ್ಯೂಟರ್ ವ್ಯವಸ್ಥೆಯ ಬಾಹ್ಯೋಪಕರಣಗಳನ್ನು ಒಳಗೊಂಡಿದೆ. ಪ್ರಮಾಣಿತ ಅಥವಾ ಸರ್ವೇಸಾಮಾನ್ಯವಾದ ಸಾಧನಗಳು ಕೆಳಕಂಡಂತಿವೆ.

 
ವೀಲ್‌ ಮೌಸ್‌

ಇದು ಸಾಮಾನ್ಯವಾಗಿ ಕಂಪ್ಯೂಟರ್ ವ್ಯವಸ್ಥೆಗೆ ಬಾಹ್ಯವಾಗಿರುವಂತಹ ವಿವಿಧ ಇನ್ಪುಟ್‌ ಸ್ವೀಕರಿಸುವ ಮತ್ತು ಔಟ್ಪುಟ್‌ ನೀಡುವ ಸಾಧನಗಳನ್ನು ಒಳಗೊಂಡಿದೆ.

ಇನ್ಪುಟ್‌ (ದತ್ತಮಾಹಿತಿ)

ಬದಲಾಯಿಸಿ
  • ದತ್ತಮಾಹಿತಿಯ ಪಠ್ಯ ಸಾಧನಗಳು
    • ಕೀಬೋರ್ಡ್‌ (ಕೀಲಿಮಣೆ) - ಕೀಲಿಮಣೆಯ ಗುಂಡಿಗಳನ್ನು ಒತ್ತುವುದರ ಮೂಲಕ ಪಠ್ಯ-ಅಕ್ಷರ-ಅಂಕಿಗಳುಳ್ಳ ಮಾಹಿತಿಯನ್ನು ಕಂಪ್ಯೂಟರ್‌ನೊಳಗೆ ರವಾನಿಸಲಾಗುವುದು. (ಈ ಪ್ರಕ್ರಿಯೆಯೇ ಇನ್ಪುಟ್‌)ಬೆರಳಚ್ಚು ಯಂತ್ರದಂತೆ ಎನ್ನಬಹುದು. ಕೀಲಿಮಣೆಯು ಇಂಗ್ಲಿಷ್‌ ಭಾಷೆಯದ್ದಿಂದ್ದಂತೆ QWERTYಕೀಲಿಮಣೆಯ ಸರ್ವೇಸಾಮಾನ್ಯ ವಿನ್ಯಾಸದಲ್ಲಿ ರೂಪುಗೊಂಡಿದೆ.
  • ಸೂಚಕ ಸಾಧನಗಳು
    • ಮೌಸ್‌ - ಅದಕ್ಕೆ ಆಸರೆಯಾಗಿರುವ ಮೇಲ್ಮೈಗೆ ಅನುಗುಣವಾಗಿ ಎರಡು ರೀತಿಯ ಚಲನಗಳನ್ನು ಪತ್ತೆ ಮಾಡುತ್ತದೆ.
    • ಆಪ್ಟಿಕಲ್‌ ಮೌಸ್‌ - ಇದು ಹೊಸ ರೀತಿಯ ತಂತ್ರಜ್ಞಾನವಾಗಿದೆ. ಇದು ಲೇಸರ್‌ಗಳನ್ನು ಅಥವಾ ಸಾಮಾನ್ಯವಾಗಿ LEDಗಳನ್ನು ಬಳಸಿ, ಮೌಸ್‌ ಕೆಳಗಿನ ಮೇಲ್ಮೈಯನ್ನಾಧರಿಸಿ, ಮೌಸ್‌ನ ಚಲನವಲನಗಳನ್ನು ಕಂಪ್ಯೂಟರ್ ಪರದೆಯ ಮೇಲೆ ಸೂಚಿಸುತ್ತದೆ.
    • ಟ್ರ್ಯಾಕ್‌ಬಾಲ್‌ - ಗೂಡೊಂದರಲ್ಲಿ ಮುಂಚಾಚುವಂತಹ ಚೆಂಡನ್ನು ಹೊಂದಿರುವ ಒಂದು ಸೂಚಕ ಸಾಧನವಿದು. ಇದು ಎರಡು ಅಕ್ಷಗಳ ಸುತ್ತ ತಿರುಗುವುದನ್ನು ಪತ್ತೆಹಚ್ಚುತ್ತದೆ.
  • ಆಟದ ಸಾಧನಗಳು
    • ಜಾಯ್‌ಸ್ಟಿಕ್‌ - ಇದು ಕೈಯಲ್ಲಿ ಹಿಡಿಯುವಂತಹ, ಒಂದು ತುದಿಯಲ್ಲಿ ತಿರುಗಿ ಎರಡು ಅಥವಾ ಮೂರು ಕೋನಗಳನ್ನು ಪತ್ತೆ ಮಾಡುವ ಸಾಮಾನ್ಯ ನಿಯಂತ್ರಣಾ ಸಾಧನ.
    • ಗೇಮ್‌ಪ್ಯಾಡ್‌ - ಕೈಯಲ್ಲಿ ಹಿಡಿದು, ಗುಂಡಿಯನ್ನು ಒತ್ತಿ (ಸಾಮಾನ್ಯವಾಗಿ ಹೆಬ್ಬೆರಳುಗಳಿಂದ) ಸೂಚನೆಗಳನ್ನು ನೀಡಿ ಆಟದ ಗತಿಯನ್ನು ನಿಯಂತ್ರಿಸುವಂತಹ ಸಾಧನವಿದು.
    • ಗೇಮ್‌ ಕಂಟ್ರೋಲರ್‌ (ಆಟ ನಿಯಂತ್ರಕ) - ಇದು ಕೆಲವು ಆಟಗಳಿಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಒಂದು ಆಟ ನಿಯಂತ್ರಕ.
  • ಚಿತ್ರ, ವಿಡಿಯೊ ಇನ್ಪುಟ್‌ (ದತ್ತಮಾಹಿತಿ) ಸಾಧನಗಳು
    • ಚಿತ್ರಗಳ ಸ್ಕ್ಯಾನರ್‌ - ಚಿತ್ರ, ಅಚ್ಚಾದ ಪಠ್ಯ, ಕೈಬರಹ ಅಥವಾ ಒಂದು ವಸ್ತುವನ್ನು ವಿಶ್ಲೇಷಿಸಿ ಇನ್ಪುಟ್‌ ಮಾಡಲು ನೆರವಾಗುವ ಸಾಧನವಿದು.
    • ವೆಬ್‌ಕ್ಯಾಮ್‌ - ಇದು ಅಲ್ಪ ರೆಸೊಲ್ಯೂಷನ್‌ ವಿಡಿಯೊ ಕ್ಯಾಮೆರಾ. ಅಂತರ್ಜಾಲದ ಮೂಲಕ ಸುಲಭವಾಗಿ ರವಾನಿಸಬಹುದಾದ ಚಾಕ್ಷುಷ ಇನ್ಪುಟ್‌ ಸಾಧನವಿದು.
  • ಶ್ರವ್ಯಾಂಶ ಇನ್ಪುಟ್‌ ಸಾಧನಗಳು
    • ಮೌಕ್ರೊಫೊನ್‌ (ಧ್ವನಿಗ್ರಾಹಕ) - ಇದು ಒಂದು ಶ್ರಾವ್ಯ ಸಂವೇದಕ. ಇದು ಧ್ವನಿಯನ್ನು ವಿದ್ಯುತ್‌ ಸಂಕೇತಗಳನ್ನಾಗಿ ಪರಿವರ್ತಿಸಿ ದತ್ತಮಾಹಿತಿಯನ್ನು ಒದಗಿಸುತ್ತದೆ.

ಹೊರಗಿನ ಕೊಂಡಿಗಳು

ಬದಲಾಯಿಸಿ

yy:ಕಂಪ್ಯೂಟರ್ ಯಂತ್ರಾಂಶ