ಹೇರಳೆಕಾಯಿ

(ಕಂಚಿಕಾಯಿ ಇಂದ ಪುನರ್ನಿರ್ದೇಶಿತ)

ಈ ಹಣ್ಣಿನಲ್ಲಿ ವಿಟಮಿನ್ ಸಿ ಹೊಂದಿದೆ. ಅಲೋಪತಿ ಮಾತ್ರೆ ನುಂಗಿ ನಾಲಿಗೆ ರುಚಿಯನ್ನು ಗ್ರಹಿಸದಾದರೆ ಇದನ್ನು ನಾಲಿಗೆಯಲ್ಲಿ ನೆಕ್ಕುವುದರಿಂದ ಗುಣಪಡಿಸಬಹುದಾಗಿದೆ. ಅಜೀರ್ಣ ಸಮಸ್ಯೆಗೆ ಇದು ಒಂದು ರೀತಿಯ ಪರಿಹಾರ. ಔಷದಿ ತಯಾರಿಕೆ ಮತ್ತು ಸುಂಗಧ ದ್ರವ್ಯ ತಯಾರಿಕೆಯಲ್ಲೂ ಸಹ ಬಳಸುತ್ತಾರೆ . ಆಹಾರದ ಬಳಕೆಯಲ್ಲಿ ಇವುಗಳನ್ನು ಪ್ರಮುಖವಾಗಿ ಉಪ್ಪಿನಕಾಯಿ ತಯಾರಿಕೆಯಲ್ಲಿ ಬಳಸುತ್ತಾರೆ. ಇದರ ರಸವನ್ನು ಚಿತ್ರಾನ್ನ , ರಸಂ, ಸಾರು, ಗೊಜ್ಜು, ಚಟ್ನಿ, ಜ್ಯೂಸ್ ,ಪಾನಕ ತಯಾರಿಕೆಯಲ್ಲಿ ಬಳಸುತ್ತಾರೆ. ಸಿಟ್ರಸ್ ಜಾತಿಯ ರುಟಾಶಿಯಾ ಕುಟುಂಬವರ್ಗಕ್ಕೆ ಸೇರಿರುವ ಇದನ್ನು ಇಂಗ್ಲೀಷನಲ್ಲಿ ಸಿಟ್ರಿನ್ ಎಂದೂ ,ಹಿಂದಿಯಲ್ಲಿ ಬಡಾನಿಂಬು ಎಂದೂ ಕರೆಯುತ್ತಾರೆ . ಹೇರಳೆಕಾಯಿ ಗಿಡಗಳನ್ನು ಬೆಳೆಸಲು ಹೆಚ್ಚೇನೂ ಮುತುವರ್ಜಿಯ ಅಗತ್ಯವಿಲ್ಲ . ಕಳಿತ ಹೇರಳೆಕಾಯಿಯಲ್ಲಿನ ಬೀಜವನ್ನು ತೆಗೆದು ಮಣ್ಣು ತುಂಬಿದ ಪ್ಲಾಸ್ಟಿಕ್ಕ ಕವರನಲ್ಲಿ ಹಾಕಿ , ಮಣ್ಣಿನಲ್ಲಿ ತೇವಾಂಶವಿರುವಂತೆ ನೋಡಿಕೊಂಡರೆ ಕೆಲವೇ ದಿನಗಳಲ್ಲಿ ನಿಂಬೆ ಎಲೆಯನ್ನು ಹೋಲುವ ಗಿಡ ಹುಟ್ಟುತ್ತದೆ .ಪ್ಲಾಸ್ಟಿಕ್ ನಲ್ಲಿ ಬೆಳೆದ ಗಿಡಗಳನ್ನು ಅಡಿಕೆ, ತೆಂಗು, ಬಾಳೆ ಮತ್ತು ಕಾಫಿ ತೋಟದ ತೇವಾಂಶವನ್ನೇ ಹೀರಿಕೊಂಡು ಬೆಳೆಯುತ್ತವೆ.

ಹೆರಳೆಕಾಯಿ

ಬೆಳೆಯುವ ಲಕ್ಷಣಗಳು

ಬದಲಾಯಿಸಿ

ಆಡು ,ಕುರಿ ,ದನಗಳು ಈ ಗಿಡಗಳನ್ನು ತಿನ್ನುವುದಿಲ್ಲ . ಗೊಬ್ಬರ ಹಾಕಿ, ಗುಣಿ ಕಟ್ಟುವ ಅವಶ್ಯಕತೆಯೂ ಇಲ್ಲ . ನಿಂಬೆಯ ರೀತಿಯೇ ಮುಳ್ಳುಗಳಿಂದ ಕೂಡಿದ ಮರವಾಗುತ್ತವೆ . ಆದರೆ ಇವುಗಳ ಎಲೆ ಮತ್ತು ಮರ ಗಿಂತ ದೊಡ್ದದು . ಭೂಮಿಯ ಸತ್ವದ ಆಧಾರದ ಮೇಲೆ ಮೂರು ವರ್ಷಕ್ಕೆಲ್ಲಾ ಫಸಲಿಗೆ ಬರುತ್ತವೆ .

ಆರ್ಥಿಕ ಲಾಭ

ಬದಲಾಯಿಸಿ

ಸಣ್ಣ ಮರವಾದರೆ ೨೦೦ ರಿಂದ ೨೫೦ ಕಾಯಿಗಳು ; ದೊಡ್ದ ಮರವಾದರೆ ೩೦೦ ರಿಂದ ೪೦೦ ಕಾಯಿಗೆ ಬೇಡಿಕೆ ಆಧಾರದ ಮೇಲೆ ೧ ರಿಂದ ೨ ರೂಪಾಯಿ ಸಿಗುತ್ತದೆ . ಮದುವೆ ಸೀಸನ್ ನಲ್ಲಿ ಕೊಂಚ ತುಟ್ಟಿಯಾಗುತ್ತದೆ.ಹೆರಳೇಕಾಯಿ ಮರದಲ್ಲಿ ಕಾಯಿಗಳು ವರ್ಷದ ಒಂದೆರೆಡು ತಿಂಗಳು ಫಸಲು ತೆಳುವಾಗಿರುತ್ತದೆ. ಕಾಯಿಗಳು ಮೊದಲು ಎಲೆಹಸಿರಿನ ಬಣ್ಣದಲ್ಲಿರುತ್ತದೆ . ಕೆಲವು ದಿನಗಳಲ್ಲಿ ಹಳದಿ ಮತ್ತು ಕಿತ್ತಳೆ ಬಣ್ಣಕ್ಕೆ ಬಂದಾಗ ರಸಭರಿತವಾಗಿದ್ದು ಮಾರಾಟಕ್ಕೆ ಯೋಗ್ಯ.

 
ವೈದ್ಯಕೀಯ ಬಳಕೆಗಳು

ಆರೋಗ್ಯಕ್ಕೆ ಸಹಾಯ

ಬದಲಾಯಿಸಿ

ಸಿಟ್ರಸ್ ಜಾತಿಯ ಕಿತ್ತಳೆ ಮತ್ತು ಮೋಸಂಬಿ ಹಣ್ಣುಗಳಂತೆ ಹೇರಳೆಕಾಯಿಯ ಸಿಪ್ಪೆ ಸುಲಿಯಲು ಆಗುವುದಿಲ್ಲ . ತೋಳೆ ಬಿಡಿಸಲಾಗುವುದಿಲ್ಲ. ಈ ಕಾಯಿಗಳನ್ನು ಸಮುದ್ರ ಸಂಬಂಧಿ ಕಾಯಿಲೆಗಳು, ಶ್ವಾಸಕೋಶ ಮತ್ತು ಕರುಳು ಸಂಬಂಧಿ ಕಾಯಿಲೆಗಳ ನಿವಾರಣೆಗೆ ಬಳಸುತ್ತಾತಾರೆ. ಹಳದಿ ಬಣ್ಣದ ಹಣ್ಣಿನ ಸಿಪ್ಪೆಯಿಂದ ತೆಗೆದ ಎಣ್ಣೆಯನ್ನು ಆಂಟಿಬಯೋಟೆಕ್ ಆಗಿ ಉಪಯೋಗಿಸತ್ತಾರೆ. ವೈನ್ ಜೊತೆ ಈ ಹಣ್ಣಿನ ಜ್ಯೂಸ್ ಬೆರೆಸಿದರೆ ವಿಷಕ್ಕೆ ಪರಿಣಾಮಕಾರಿ ಆಂಟಿಡೋಟ್ ಎನ್ನಬಹುದು.ಹೇರಳೆಕಾಯಿ ಯಿಂದ ತಯಾರಿಸುವ ಖಾದ್ಯಗಳು ದೇಹವನ್ನು ತಂಪಾಗಿಸುತ್ತವೆ.

 
ಹೆರಳೆಕಾಯಿ ಜಾಮ್

ಹೇರಳೆಕಾಯಿಗಳನ್ನು ಇರಾನ್ ಮತ್ತು ಪಾಕಿಸ್ತಾನದಲ್ಲಿ ಜಾಮ್ ಮತ್ತು ಉಪ್ಪಿನಕಾಯಿ ತಯಾರಿಕೆಯಲ್ಲಿ ಬಳಸುತ್ತಾರೆ, ಕೊರಿಯಾದಲ್ಲಿ ಟೀ ತಯಾರಿಸಲು ಬಳಸುತ್ತಾರೆ . ತೈವಾನ್, ಜಪಾನಗಳಲ್ಲೂ ಬೇಡಿಕೆಯಿದೆ. ನಿಂಬೆಗೆ ಪರ್ಯಾಯವಾಗಿ ಇದನ್ನು ಬಳಸಬಹುದು.

ಹೊಂದಿರುವ ಪೌಷ್ಟಿಕಾಂಶಗಳು

ಬದಲಾಯಿಸಿ

ಅಮೇರಿಕಾ ವಿಶ್ಲೇಷಣೆ ಪ್ರಕಾರ ಮತ್ತು ಪರ್ಡ್ಯೂ ತೋಟಗಾರಿಕೆ ಲೇಖನದ ಪ್ರಕಾರ ಹೇಳುವುದಾದರೆ ಈ ಹಣ್ಣಿನಲ್ಲಿ ಇರುವ ಪೌಷ್ಟಿಕಾಂಶಗಳನ್ನು ಹೊಂದಿದೆ :೦.೦೪ಗ್ರಾಂ ಫ್ಯಾಟ್, .. .೦೮೧ಗ್ರಾಂಪ್ರೋಟೀನ್,೧.೧ಗ್ರಾಂ ಫೈಬರ್, ೩೬.೫ಮಿಲಿ ಗ್ರಾಂ ಕ್ಯಾಲ್ಸಿಯಂ, ೧೬ನಮಿಲಿ ಗ್ರಾಂ ಪಾಸ್ಪರಸ್ , .೫೫ಮಿಲಿ ಗ್ರಾಂ ಐರನ್ ,.೦೦೦೯ಮಿಲಿಗ್ರಾಮಂ ಕೆರೋಟಿನ್ ,.೦೫೨ಮಿಲಿ ಗ್ರಾಂ ಥಿಯಾಮೈನ್ / ಬಿ 1,.೦೨೯ಮಿಲಿ ಗ್ರಾಂ ಲಿಂಕಿಂಗ್,.೧೨೫ಮಿಲಿ ಗ್ರಾಂ ನಿಯಾಸಿನ್, ೩೬೮ ಮಿಲಿ ಗ್ರಾಂ ಆಸ್ಕೋರ್ಬಿಕ್ ಅಸಿಡ್.ಇದು ಹೊಟ್ಟೆ, ಜೀರ್ಣಾಂಗ ವ್ಯವಸ್ಥೆ, ಗಂಟಲು ಮತ್ತು ಹೃದಯದ , ಕಫ ಮತ್ತು ವಾತ ರೋಗಗಳು ಚಿಕಿತ್ಸೆ ಸಹಾಗೆ ಸಹಾಯಕರಿ.

ವಿವಿಧತೆ

ಬದಲಾಯಿಸಿ

ಭಾರತದಲ್ಲಿ ಸಿಟ್ರನ್ ಲಭ್ಯತೆಗಳು:ಸಿಟ್ರಿನ್ ಮುಖ್ಯವಾಗಿ ಉತ್ತರ ಭಾಗದಲ್ಲಿ ಕಾಣಿಸುತ್ತದೆ . ಇದು ಎರಡು ಬಗೆಯ ಹಣ್ಣುಗಳಲ್ಲಿ ಕಾಣಬಹುದು .'ಬಜೋರಿ' ಎಂದು ಒಂದು ತರಹದ ಹಣ್ಣು ,ಇದು ಒಂದು ತರಹದ ನೇರಳೆ ಹೂವು ಬಿಡುತ್ತದೆ,ಮತ್ತು ಈ ಹಣ್ಣು ಹುಳಿ ಇರುತ್ತದೆ. ಇದು ಮುಖ್ಯವಾಗಿ ಭಾರತದ ಉತ್ತರ-ಪಶ್ಚಿಮ ಭಾಗದಲ್ಲಿ ಕಾಣಬಹುದು. ಇನ್ನೊಂದು ತರಹದ ಹಣ್ಣು ಅಂಬ್ರುಫ್ಲ್ ಈ ಹಣ್ಣಿನಲ್ಲಿ ಅಸಿಡ್ ಪ್ರಮಾಣತೆ ಕಮ್ಮಿ ಇದ್ದು ,ಇದು ಅಮೃತದಷ್ಟು ಸಿಹಿಯಾಗಿರುತ್ತದೆ. ಇದು ಮುಖ್ಯವಾಗಿ ಮೇಘಾಲಯದ ಖಾಶಿ ಬೆಟ್ಟದ ಭಾಗದಲ್ಲಿ ಇದನ್ನು ಬಹಳಷ್ಟು ಬೆಳೆಯುವರು.ಈ ಹಣ್ಣು ೭-೯ ಸೆಲ್ಸಿಯಸ್(೪೫-೫೯ಫ್) ತಾಪಮಾನದ ನಡುವೆ ಫ್ರಿಜ್ ನಲ್ಲಿ ಇಟ್ಟರೆ ಈ ಹಣ್ಣು ಒಂದರಿಂದ ಎರಡು ವಾರಗಳತನಕ ಬಡು ಅವಧಿಯನ್ನು ಹೊಂದಿದೆ.ಈ ಹಣ್ಣನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟರೆ ಈ ಹಣ್ಣಿನ ಬಡು ಅವಧಿ ಹೆಚ್ಚಾಗುತ್ತದೆ.

 
ಅಲಂಕಾರ
 
ಸಿಹಿ ತಿನಿಸು

ವಿವಿಧ ಉಪಯೋಗಗಳು ಮತ್ತು ವಿಷೇಶತೆಗಳು

ಬದಲಾಯಿಸಿ

ಬ್ರಿಟಿಷ್ ಜರ್ನಲ್ ಆಫ್ ರೇಡಿಯಾಲಜಿಯ ಪ್ರಕಾರ ಹೆಸ್ಪೆರಿಡಿನ್ ಎಂಬದು ಮೂಳೆಯನ್ನು ಶಕ್ತಿ ಗೊಳಿಸಲು ಇದು ಬಹಳ ಪ್ರಮುಕ ಪಾತ್ರ ಹೊಂದಿದೆ. ಇದು ನಮ್ಮ ಮೂಳೆಗೆ ಸುರಕ್ಷತೆಯನ್ನು ನಿಡುತ್ತದೆ. 'ಇಂಡಿಯನ್ ಪ್ಲಾನ್ದ್ ಅನ್ದ್ ಡ್ರಗ್ಸ್' ಪ್ರಕಾರ ಇದು ದೇಹದಲ್ಲಿ ಇರುವ ವಿಷವನ್ನು ತೆಗೆಯಲು ಸಹಯ ಮಾಡುತದೆ , ಇದು ಒಂದು ರೀತಿಯಲ್ಲಿ ಹೊಟ್ಟೆ ನೋವಿಗೆ ಔಷಧಿಯಾಗಿಯು ಉಪಯೋಗಿಸುತ್ತರೆ.ಈ ಹಣ್ಣಿನ ಸಿಪ್ಪೆಯನ್ನು ತೆಗೆದು ವಣಗಿಸಿ ಇದನ್ನು ಅಲಂಕಾರಿಕ ವಸ್ತುವಾಗಿ ಬಳಸುತ್ತಾರೆ. ಲಿನಿನ್ ಬಟ್ಟೆಗಳನ್ನು ಸ್ವಛ ಮಾಡಲುಕೊಡ ಬಳಸುವರು.ಇದರ ಗಿಡ ಗಟ್ಟಿಯಿದ್ದು ಇದನ್ನು ನೋಡಿ ಕೊಳ್ಳುವುದು ಮುಖ್ಯ. ಇದರ ಬೀಜ ಬಿಳಿ ಇದ್ದು ,ಇದು ಮೊನೊ-ಬ್ರೋಣದ ಜಾತಿಗೆ ಸೆರಿದ್ದು. ಇದರ ದಿಂಬೆಗಳು ಭಾರತದಲ್ಲಿ ಊರುಗೋಲು ತಯಾರಿಕೆಗೆ ಉಪಯೋಗಿಸುತ್ತಾರೆ ಎಕೆಂದರೆ ಇದರ ದಿಂಬೆ ಗಟ್ಟಿ ಮತ್ತು ಬೆಳ್ಳಗೆ ಇರುತದೆ.ಚರ್ಮದ ರೋಗಕ್ಕು ಸಹ ಸಿಟ್ರಿನ್ ಹಣ್ಣುನ್ನು ಔಷಧಿಯಗಿ ಬಳಸುವರು . ಇದರ ಗಿಡದ ೨-೫ ಮಿಟರ್ ಎತ್ತಿರ ಇರುತ್ತದೆ.ಬಹಳ ಬಿಸಿಲಿನ ತಾಪಮಾನದಲ್ಲಿ ಈ ಗಿಡ ಬೆಳೆಯುವುದಿಲ್ಲ. ವಿವಿಧ ಬಗೆಯ ಸಿಟ್ರಿನ್ ಹಣ್ಣುಗಳು: ಅವು ಸಿಹಿ, ಹುಳಿ ಮತ್ತು ಖಹಿ . ಸಿಹಿ ಹಣ್ಣನ್ನು ಪೆರ್ಪಮೆಟ್ ಮಾಡಲು ಬಳಸುವರು.ದಕ್ಷಿಣ ಭಾರದದಲ್ಲಿ ಇದನ್ನು ಬಿ.ಪಿ ಇರುವವರು ಕಡಿಮೆಯಗಲು ಇದನ್ನು ಔಷಧಿಯಗಿ ಬಳಸುವರು. ಈ ಹಣ್ಣು ಪೊಟ್ಯಾಸಿಯಮ್ ಇರುವುದರಿಂದ ಇದು ಹೃದಯಕ್ಕೆ ಒಳೆಯದು. ಇದರ ಸಿಪ್ಪೆತಯನ್ನು ಮುಖದಲ್ಲಿ ಇರುವ ಮೊಡವೆ ಮತ್ತು ಕಪ್ಪು ಕಲೆಯನ್ನು ಹೋಗಿಸಲು ಉಪಯೊಗಿಸುತ್ತರೆ. ಇದು ಕೂದಲು ಚೆನ್ನಗಿ ಬೆಳೆಯುವುದಲ್ಲಿಯೂ ಸಹಯಡುತದೆ. ಇದುರ ರಸವನ್ನು ಬಿಸಿ ನೀರಿನಲ್ಲಿ ಮತ್ತು ಜೇನಿನತ್ತುಪ್ಪದ ಜೋತೆಗೆ ಬೆರೆಸಿ ಕೊಡಿದರೆ ದೇಹದ ಭಾರವು ಕಡಿಮೆ ಯಾಗುತ್ತದೆ. ಈ ಹಣ್ಣಿನ ಗಿಡ ಬಹಳ ಕಡೆ ಜನ ಬೆಳೆಯುವುದಿಲ್ಲ . ಇದು ಎಲ್ಲ ತರಹದ ಮಣ್ಣಿನ ಗುಣದಲ್ಲು ಬೆಳೆಯುತ್ತದೆ. ಆದರಿಂದ ಇದನ್ನು ಬೆಳೆಸುವುದರಿಂದ ಎಲ್ಲದಕ್ಕು ಬಹಳ ಸಹಯಕಾರಿ ಆಗುತ್ತದೆ.

ಉಲ್ಲೇಖನಗಳು

ಬದಲಾಯಿಸಿ

https://en.wikipedia.org/wiki/List_of_citrus_fruits http://www.healthyeating.org