ಕಂಕಾಳ ಜ್ವರ
ಮೂತ್ರದಲ್ಲಿ ರಕ್ತಬಣ್ಣ (ಹಿಮೋಗ್ಲೋಬಿನ್) [೧] ಹೋಗುತ್ತಿರುವ ವಿಷಮ ಬಗೆಯ ಮಲೇರಿಯ ಜ್ವರ (ಬ್ಲ್ಯಾಕ್ ವಾಟರ್ ಫೀವರ್). ಮಲೇರಿಯ ತೀವ್ರವಾಗಿರುವ ಪ್ರದೇಶಗಳಲ್ಲಿ ಈ ಜ್ವರವೂ ಹರಡಿರುವಂತಿದೆ.
ಲಕ್ಷಣಗಳು
ಬದಲಾಯಿಸಿರೋಗಿಯ ಮೂತ್ರ ಕರಿ ಶಾಯಿಯಂತಿರುವುದರಿಂದ ಈ ಹೆಸರಾಗಿದೆ. ರಕ್ತದಲ್ಲಿ ಸುತ್ತಾಡುತ್ತಿರುವ ಕೆಂಪು ರಕ್ತಕಣಗಳಲ್ಲಿ ಅರೆಪಾಲಿಗೂ ಹೆಚ್ಚಾಗಿ ಒಂದೇ ಬಾರಿ ಇಲ್ಲವೇ ಕೊಂಚಕೊಂಚವಾಗಿ ಮೇಲಿಂದ ಮೇಲೆ ರಕ್ತನಾಳಗಳೊಳಗೇ ಒಡೆದುಕೊಂಡು ಹಾಳಾಗುತ್ತಿರುತ್ತವೆ. ಸಾಮಾನ್ಯವಾಗಿ ಈ ರೋಗ ಹತ್ತಿದವನು ಉಳಿಯುವುದಿಲ್ಲ. ಮೇಲಿಂದ ಮೇಲೆ ಮಲೇರಿಯಗ್ರಸ್ತನಾದ ರೋಗಿ (ಕನಿಷ್ಟ ಪಕ್ಷ ನಾಲ್ಕು ಸಲ) ಅದೇ ಸ್ಥಳದಲ್ಲಿ (ಅಂದರೆ ಮಲೇರಿಯ ಪೀಡಿತ ಸ್ಥಳ) ಆರು ತಿಂಗಳ ಕಾಲ ಇದ್ದಾಗ ಆತನಿಗೆ ಕಂಕಾಳ ಜ್ವರ ಬರುವುದನ್ನು ಗಮನಿಸಿದ್ದಾರೆ.
ಕಾರಣ
ಬದಲಾಯಿಸಿಕಂಕಾಳ ಜ್ವರ ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ ಕೆಂಪು ರಕ್ತ ಕಣಗಳ ಪರಾವಲಂಬಿಯಿಂದ ಉಂಟಾಗುತ್ತದೆ. ಪ್ಲಾಸ್ಮೋಡಿಯಂ ವೈವ್ಯಾಕ್ಸ್[೨] ಮುಖ್ಯ ಕಾರಣವೆಂದು ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ.
ಚಿಕಿತ್ಸೆ
ಬದಲಾಯಿಸಿಅನ್ ಟಿ-ಮಲೇರಿಯ ರಾಸಾಯನಿಕ ಚಿಕಿತ್ಸೆ
ಪ್ರಸ್ತುತ ಈ ರೋಗ
ಬದಲಾಯಿಸಿಇಂದು ಮಲೇರಿಯ ನಿರೋಧ ಸಾಕಷ್ಟು ಪರಿಣಾಮಕಾರಿಯಾಗಿರುವುದರಿಂದಲೂ ಹೊಸ ಮದ್ದುಗಳು ಬಂದಿರುವುದರಿಂದಲೂ ಈ ರೋಗದ ಸುಳಿವೇ ಇಲ್ಲ.
ಉಲ್ಲೇಖಗಳು
ಬದಲಾಯಿಸಿ- ↑ Katongole-Mbidde E, Banura C, Kizito A (1988-03-19). "Blackwater fever caused by Plasmodium vivax infection in the acquired immune deficiency syndrome". Br Med J (Clin Res Ed). 296 (6625): 827. doi:10.1136/bmj.296.6625.827. PMC 2545111. PMID 3130932.
- ↑ https://www.ncbi.nlm.nih.gov/pmc/articles/PMC2545111/