ಔರಾದ ವಿಧಾನಸಭಾ ಕ್ಷೇತ್ರ

ಔರಾದ ವಿಧಾನಸಭಾ ಕ್ಷೇತ್ರ (ಕ್ಷೇತ್ರ ಸಂಖ್ಯೆ-೫೨) ಬೀದರ್ ಜಿಲ್ಲೆಯಲ್ಲಿರುವ ೬ ಕ್ಷೇತ್ರಗಳ ಪೈಕಿ ಒಂದು. ಇದು ಬೀದರ್ (ಲೋಕ ಸಭೆ ಚುನಾವಣಾ ಕ್ಷೇತ್ರ)ದ ಭಾಗವಗಿಯೂ ಗುರುತಿಸಿಕೊಂಡಿದೆ. ೨೦೦೮ರ ನಂತರ ಈ ಕ್ಷೇತ್ರವು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಬದಲಾಗಿದೆ. ಭಾಲ್ಕಿ ಮತ್ತು ಬೀದರ್, ಔರಾದ ವಿಧಾನಸಭಾ ಕ್ಷೇತ್ರದ ಮಗ್ಗುಲಿಗೆ ಇರುವ ವಿಧಾನಸಭಾ ಕ್ಷೇತ್ರಗಳಾಗಿವೆ.

ಬೀದರ್ ಜಿಲ್ಲೆಯ ನಕ್ಷೆ (ಔರಾದ ಕ್ಷೇತ್ರ ಕೆಂಪು ಬಣ್ಣದಲ್ಲಿದೆ)

ಚುನಾವಣಾ ಇತಿಹಾಸ ಬದಲಾಯಿಸಿ

ಧಾರ್ಮಿಕ ಮತ್ತು ವಾಸ್ತುಶಿಲ್ಪ ಪ್ರಾಮುಖ್ಯತೆಗೆ ಹೆಸರು ಪಡೆದಿರುವ ಔರಾದ್ ಕರ್ನಾಟಕದ ಕಿರೀಟಪ್ರಾಯ ಕ್ಷೇತ್ರ. ಮಹತ್ವವೆನ್ನಬಹುದಾದ ಉದ್ದಿಮೆ ಇಲ್ಲಿ ಇಲ್ಲದಿರುವ ಕಾರಣ ಇಲ್ಲಿನ ಬಹುತೇಕ ಮಂದಿ ಉದ್ಯ್ಯೋಗವನ್ನು ಅರಸಿಕೊಂಡು ಪಕ್ಕದ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಗೆ ವಲಸೆ ಹೋಗುವುದು ಸಾಮಾನ್ಯ ಸಂಗತಿಯಾಗಿದೆ. ಕ್ಷೇತ್ರದಲ್ಲಿ ಹರಿಯುವ ಮಾಂಜ್ರಾ ನದಿಪಾತ್ರದ ಗ್ರಾಮಗಳನ್ನು ಬಿಟ್ಟರೆ, ಉಳಿದ ಕಡೆ ನೀರಾವರಿ ಸೌಲಭ್ಯವಿಲ್ಲ. ಹಾಗಾಗಿ ಇಲ್ಲಿನ ಮಂದಿ ಒಣಬೇಸಾಯ ಪದ್ಧತಿಯನ್ನು ಅನುಸರಿಸುತ್ತಾರೆ[೧].

ಔರಾದ ಕ್ಷೇತ್ರಕ್ಕೆ ಮೊದಲ ಬಾರಿಗೆ ೧೯೫೧ರಲ್ಲಿ ಚುನಾವಣೆ ನಡೆಯಿತು. ಆಗ ಇದಕ್ಕೆ ಹುಳ್ಸೂರು ಕ್ಷೇತ್ರ ಎಂಬ ಹೆಸರಿತ್ತು ಮತ್ತು ಹೈದರಾಬಾದ್ ಸಂಸ್ಥಾನದಲ್ಲಿ ಇದ್ದ ಕ್ಷೇತ್ರವಾಗಿತ್ತು. ಅಂದಿನಿಂದ ೨೦೨೩ರವರೆಗೆ ಒಟ್ಟು ೧೬ ಬಾರಿ ಚುನಾವಣೆಗಳು ನಡೆದಿವೆ. ಒಟ್ಟು ೬ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು, ೫ ಬಾರಿ ಬಿಜೆಪಿ ಅಭ್ಯರ್ಥಿಗಳು, ೩ ಬಾರಿ ಜನತಾ ಪಕ್ಷದ ಅಭ್ಯರ್ಥಿಗಳು ಹಾಗೂ ೧ ಬಾರಿ ಪಕ್ಷೇತರ ಅಭ್ಯರ್ಥಿಗಳು ಇಲ್ಲಿ ಜಯ ಸಾಧಿಸಿದ್ದಾರೆ. ಇದರಲ್ಲಿ ಅತೀ ಹೆಚ್ಚು ಬಾರಿ ಅಂದರೆ ೪ ಅವಧಿಗೆ ಇಬ್ಬರು ಅಭ್ಯರ್ಥಿಗಳು ಶಾಸಕರಾಗಿರುವುದು ವಿಶೇಷ. ಗುರುಪಾದಪ್ಪ ನಾಗಮಾರಪಲ್ಲಿ ಅವರು ೧೯೮೫, ೧೯೮೯, ೧೯೯೪ರ ಸಾಲಿನಲ್ಲಿ ಜನತಾ ಪಕ್ಷದಿಂದಲೂ ಮತ್ತು ೨೦೦೪ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಅದೇ ರೀತಿ ೨೦೦೮, ೨೦೧೩, ೨೦೧೮, ೨೦೨೩ರಲ್ಲಿ ಪ್ರಭು ಚೌಹಾಣ್ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ[೧].

ಮತದಾರರು ಬದಲಾಯಿಸಿ

ಅಂಕಿ ಅಂಶ ಬದಲಾಯಿಸಿ

ಔರಾದ ವಿಧಾನಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ ೨,೧೯,೨೧೦[೨]

  • ಪುರುಷ ಮತದಾರರು-೧,೧೩,೯೫೬
  • ಮಹಿಳಾ ಮತದಾರರು-೧,೦೫,೨೫೪

ಜಾತಿವಾರು ಬದಲಾಯಿಸಿ

ಔರಾದ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯಿತ, ಮರಾಠ ಮತ್ತು ಲಂಬಾಣಿ(ಬಂಜಾರ) ಸಮುದಾಯದ ಮತದಾರು ಹೆಚ್ಚಿನ ಪ್ರಾಬಲ್ಯವನ್ನು ಹೊಂದಿದ್ದಾರೆ. ಹಾಗಾಗಿಯೆ ಈ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ಪ್ರಭು ಚೌಹಾಣ್ ಸತತವಾಗಿ ಗೆಲುವು ಸಾಧಿಸುತ್ತಿದ್ದಾರೆ ಎನ್ನಬಹುದು[೧].

ಇವನ್ನೂ ಓದಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ ೧.೨ "ಔರಾದ ವಿಧಾನಸಭಾ ಕ್ಷೇತ್ರ". eedina.com. ಈ ದಿನ. Retrieved 13 May 2023.
  2. "Information- Electoral Population". kgis.ksrsac.in. ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥ್ಹೆ. Retrieved 13 May 2023.