ಒಸ್ವಾಲ್ಡ್ ಥಿಯೊಡೋರ್ ಏವರಿ

(ಒಸ್ವಾಲ್ಡ್ ಯೋಡೋರ್ ಏವರಿ ಇಂದ ಪುನರ್ನಿರ್ದೇಶಿತ)

ಕೆನಡಾದಲ್ಲಿ ಹುಟ್ಟಿದ ಅಮೇರಿಕದ ಶರೀರವಿಜ್ಞಾನಿ ಮತ್ತು ವೈದ್ಯಕೀಯ ಸಂಶೋಧಕರಾದ ಒಸ್ವಾಲ್ಡ್ ಯೋಡೋರ್ ಏವರಿಯವರು 1877ರ ಅಕ್ಟೋಬರ್ 21ರಂದು ನೋವ ಸ್ಕೋಟಿಯಾದ ಹಾಲಿಫಾಕ್ಸ್ನಲ್ಲಿ ಜನಿಸಿದರು. ಜೀವರಸಾಯನ ವಿಜ್ಞಾನಿಗಳು ನಂಬಿದ್ದ ಹಾಗೆ ಅನುವಂಶಿಕ ಮಾಹಿತಿಯನ್ನು ವರ್ಗಾಯಿಸುವುದಕ್ಕೆ ಕಾರಣವಾದ ಮಾಧ್ಯಮ ಪ್ರೋಟೀನ್ ಅಲ್ಲ, ಬದಲಾಗಿ ಅದು ನ್ಯೂಕ್ಲಿಯಕ್ ಆಮ್ಲವಾದಿದೆ ಅಂದರೆ ಅದು ಡಿ.ಎನ್.ಎ. (DNA or deoxyribonucleic acid) ಆಗಿದೆ ಎಂಬುದಾಗಿ ತೋರಿಸಿದವರಲ್ಲಿ ಏವರಿಯವರು ಮೊದಲಿಗರಾಗಿದ್ದಾರೆ. ಏವರಿಯವರು ತಮ್ಮ ವಿಜ್ಞಾನಿಗಳ ತಂಡದ ಜೊತೆ ನಯವಾದ ಮೇಲ್ಮೈಯಿರುವ ಒಂದು ರೀತಿಯ ಸೂಕ್ಷ್ಮಾಣುಜೀವಿಯಿಂದ (bacterium)[] ಒಂದು ಪದಾರ್ಥವನ್ನು ಹೊರತೆಗೆದು ಅದನ್ನು ಒರಟು ಮೇಲ್ಮೈಯಿರುವ ಸೂಕ್ಷ್ಮಾಣುಜೀವಿಯಲ್ಲಿ ಹಾಕಿದರು. ಆಗ ಒರಟು ಮೇಲ್ಮೈಯ ಸೂಕ್ಷ್ಮಾಣುಜೀವಿ ನಂತರ ನಯವಾದ ಮೇಲ್ಮೈಯ ಸೂಕ್ಷ್ಮಾಣುಜೀವಿಯಾಗಿ ಪರಿವರ್ತಿತವಾಯಿತು. ಆಗ ಏವರಿಯ ತಂಡ ಆ ಪದಾರ್ಥವನ್ನು ಶುದ್ಧೀಕರಿಸಿ ಅದು ಶುದ್ಧ ಡಿ.ಎನ್.ಎ. ಎಂಬುದಾಗಿ ಕಂಡುಹಿಡಿಯಲಾಯಿತು. ಏವರಿಯವರು ತಮ್ಮ ಸಂಶೋಧನೆಯ ವಿವರಗಳನ್ನು 1944ರಲ್ಲಿ ಪ್ರಕಟಿಸಿದರು. ಚಂದ್ರನಲ್ಲಿರುವ ಒಂದು ಕುಳಿಗೆ ಕಏವರಿಕಿ ಎಂಬುದಾಗಿ ಅವರ ಗೌರವಾರ್ಥವಾಗಿ ನಾಮಕರಣ ಮಾಡಲಾಗಿದೆ. ಏವರಿಯವರು 1955ರ ಫೆಬ್ರವರಿ 2ರಂದು ಟೆನ್ನಿಸೀಯ ನಾಶ್ವಿಲ್ಲೆಯಲ್ಲಿ ನಿಧನರಾದರು

ಒಸ್ವಾಲ್ಡ್ ಯೋಡೋರ್ ಏವರಿ
ಜನನ
ಒಸ್ವಾಲ್ಡ್ ಯೋಡೋರ್ ಏವರಿ

1877 ಅಕ್ಟೋಬರ್ 21
ಕೆನಡಾ
ರಾಷ್ಟ್ರೀಯತೆಕೆನಡಾ

ಉಲ್ಲೇಖಗಳು

ಬದಲಾಯಿಸಿ