ರೋಗಿ
(ಒಳರೋಗಿ ಇಂದ ಪುನರ್ನಿರ್ದೇಶಿತ)
ರೋಗಿಯು ವೈದ್ಯಕೀಯ ಪರಿಶೀಲನೆ, ಶುಷ್ರೂಷೆ, ಅಥವಾ ಚಿಕಿತ್ಸೆಯನ್ನು ಪಡೆಯುವ ಯಾವುದೇ ವ್ಯಕ್ತಿ. ಆ ವ್ಯಕ್ತಿಯು ಬಹುತೇಕ ಹಲವುವೇಳೆ ಅಸ್ವಸ್ಥ ಅಥವಾ ಗಾಯಗೊಂಡಿರುತ್ತಾನೆ ಮತ್ತು ಒಬ್ಬ ಚಿಕಿತ್ಸಕ ಅಥವಾ ಇತರ ಸ್ವಾಸ್ಥ್ಯ ಸೇವಾ ವೃತ್ತಿಗನಿಂದ ಚಿಕಿತ್ಸೆ ಪಡೆಯುವುದು ಅಗತ್ಯವಾಗಿರುತ್ತದೆಯಾದರೂ, ವಾಡಿಕೆಯ ತಪಾಸಣೆಗಾಗಿ ಒಬ್ಬ ಚಿಕಿತ್ಸಕನನ್ನು ಭೇಟಿಮಾಡುವ ಯಾರನ್ನಾದರೂ ರೋಗಿಯೆಂದು ನೋಡಬಹುದು. ಒಳರೋಗಿಯು ಆಸ್ಪತ್ರೆಗೆ "ಸೇರ್ಪಡೆ"ಗೊಂಡು ಒಂದು ರಾತ್ರಿ ಅಥವಾ ಅನಿರ್ದಿಷ್ಟ ಕಾಲದವರೆಗೆ, ಸಾಮಾನ್ಯವಾಗಿ ಹಲವು ದಿನ ಅಥವಾ ವಾರ (ಕೋಮಾ ರೋಗಿಗಳಂತಹ, ಕೆಲವು ಸಂದರ್ಭಗಳಲ್ಲಿ ರೋಗಿಗಳು ಹಲವು ವರ್ಷ ಆಸ್ಪತ್ರೆಯಲ್ಲಿರುತ್ತಾರೆ) ಇರುತ್ತಾನೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |