ಒಲವೇ ಮಂದಾರ (ಚಲನಚಿತ್ರ)
ಒಲವೇ ಮಂದಾರ ಪ್ರಯಾಣ ವಸ್ತುವುಳ್ಳ ೨೦೧೧ರ ಒಂದು ಕನ್ನಡ ಚಲನಚಿತ್ರ. ಚಿತ್ರವನ್ನು ಜಯತೀರ್ಥ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಹೊಸಬರಾದ ಶ್ರೀಕಾಂತ್ ಹಾಗೂ ಆಕಾಂಕ್ಷಾ ಮನ್ಸುಖಾನಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ರಂಗಾಯಣ ರಘು, ವೀಣಾ ಸುಂದರ್, ನಾಸರ್ ಹಾಗೂ ಸಾಧು ಕೋಕಿಲ ನಟಿಸಿದ್ದಾರೆ.
ಒಲವೇ ಮಂದಾರ | |
---|---|
ಒಲವೇ ಮಂದಾರ | |
ನಿರ್ದೇಶನ | ಜಯತೀರ್ಥ |
ನಿರ್ಮಾಪಕ | ಬಿ. ಗೋವಿಂದ ರಾಜು |
ಚಿತ್ರಕಥೆ | ಜಯತೀರ್ಥ |
ಕಥೆ | ಜಯತೀರ್ಥ |
ಪಾತ್ರವರ್ಗ |
|
ಸಂಗೀತ | ದೇವಾ |
ಛಾಯಾಗ್ರಹಣ | ರವಿಕುಮಾರ್ ಸಾನಾ |
ಸಂಕಲನ | ಕೆ. ಎಂ. ಪ್ರಕಾಶ್ |
ಸ್ಟುಡಿಯೋ | ಅಲಾಯನ್ಸ್ ಪಿಕ್ಚರ್ಸ್ |
ಬಿಡುಗಡೆಯಾಗಿದ್ದು | ೨೧-೧-೨೦೧೧ |
ಅವಧಿ | 147 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಚಲನಚಿತ್ರದ ಉಪಕಥೆಯು ತನ್ನ ಹೆಂಡತಿಯ ನೆನಪಿನಲ್ಲಿ ರಸ್ತೆಯನ್ನು ನಿರ್ಮಿಸಲು ಒಂದು ಕಲ್ಲಿರುವ ಗುಡ್ಡವನ್ನು ೨೨ ವರ್ಷಗಳವರೆಗೆ ಕತ್ತರಿಸಿದ ದಶರಥ್ ಮಾಂಝಿಯ ನಿಜ ಜೀವನದ ಘಟನೆಗಳಿಂದ ಸ್ಫೂರ್ತಿ ಪಡೆದಿದೆ.[೧]
ದಿ ಟೈಮ್ಸ್ ಆಫ್ ಇಂಡಿಯಾ ನಡೆಸಿದ ಆನ್‍ಲೈನ್ ಜನಾಭಿಪ್ರಾಯ ಸಂಗ್ರಹಣೆಯನ್ನು ಆಧರಿಸಿ, ಚಲನಚಿತ್ರದಲ್ಲಿ ತಮ್ಮ ಅಭಿನಯಕ್ಕಾಗಿ ಶ್ರೀಕಾಂತ್‍ರನ್ನು 'ಭರವಸೆಯ ಹೊಸ ನಟ' ಎಂದು ಘೋಷಿಸಲಾಯಿತು.[೨]
ಕಥಾವಸ್ತು
ಬದಲಾಯಿಸಿಒಬ್ಬ ಶ್ರೀಮಂತ ಉದ್ಯಮಿಯ (ನಾಸರ್) ಮಗನಾದ ಶ್ರೀಕಾಂತ್ (ಶ್ರೀಕಾಂತ್), ಕೊಯಂಬತ್ತೂರಿನ ಒಂದು ನೃತ್ಯ ಸ್ಪರ್ಧೆಯಲ್ಲಿ ಒಬ್ಬ ಅಸ್ಸಾಮಿ ಹುಡುಗಿಯಾದ ಪ್ರೀತಿಯನ್ನು (ಆಕಾಂಕ್ಷಾ ಮನ್ಸುಖಾನಿ) ಭೇಟಿಯಾಗಿ ಅವಳನ್ನು ಪ್ರೀತಿಸತೊಡಗುತ್ತಾನೆ. ಅವಳಿಂದ ಕೆಲವು ಮುತ್ತುಗಳನ್ನು ಪಡೆಯುವುದು ಮಾತ್ರ ಅವನ ಮೊದಲಿನ ಉದ್ದೇಶವಾಗಿರುತ್ತದೆ. ತಪ್ಪಿತಸ್ಥ ಭಾವನೆಯಿಂದ, ಅವಳಿಗೆ ಮಾತುಕೊಟ್ಟಂತೆ ಅವಳನ್ನು ಭೇಟಿಯಾಗಲು ಅಸ್ಸಾಂಗೆ ನಡೆದುಕೊಂಡು ಪ್ರಯಾಣ ಮಾಡುತ್ತಾನೆ. ತನ್ನ ಪ್ರಯಾಣದಲ್ಲಿ, ಅವನು ವಿವಿಧ ಪಾತ್ರಗಳನ್ನು ಭೇಟಿಯಾಗಿ ಘಟನೆಗಳನ್ನು ನೋಡಿ, ಉದಾಹರಣೆಗೆ ಒಬ್ಬ ರೈತ ದಂಪತಿ ತಮ್ಮ ಊಟವನ್ನು ಒಬ್ಬ ಕರುಣಾಳು ಕಳ್ಳನೊಂದಿಗೆ (ಸಾಧು ಕೋಕಿಲ) ಹಂಚಿಕೊಳ್ಳುತ್ತಿರುವುದು, ಒಬ್ಬ ಚಮ್ಮಾರ (ರಂಗಾಯಣ ರಘು) ತನ್ನ ಅಂಗವಿಕಲ ಹೆಂಡತಿಯನ್ನು ಕಾಶಿಗೆ ತೀರ್ಥಯಾತ್ರೆಗಾಗಿ ಚಕ್ಕಡಿ ಗಾಡಿ ಮೇಲೆ ಕರೆದುಕೊಂಡು ಹೋಗುತ್ತಿರುವುದು, ಜೀವನದ ವಾಸ್ತವಗಳನ್ನು ಎದುರಿಸುತ್ತಾನೆ. ಇವುಗಳನ್ನು ನೋಡಿ ಶ್ರೀಕಾಂತ್‍ನ್ ಮನ ಕರಗುತ್ತದೆ.
ಅವನು ಪ್ರೀತಿ ವಾಸಿಸುವ ಅಸ್ಸಾಮ್‍ನಲ್ಲಿನ ರಾಣಿಗಾಂವ್ ಹಳ್ಳಿಯನ್ನು ಮುಟ್ಟಿದಾಗ, ಅವಳು ಬೇರೆ ವ್ಯಕ್ತಿಯೊಂದಿಗೆ ಮದುವೆಯಾಗುತ್ತಿರುವುದನ್ನು ಕಾಣುತ್ತಾನೆ.
ಪಾತ್ರವರ್ಗ
ಬದಲಾಯಿಸಿ- ಶ್ರೀಕಾಂತ್ ಆಗಿ ಶ್ರೀಕಾಂತ್
- ಪ್ರೀತಿ ಆಗಿ ಆಕಾಂಕ್ಷಾ ಮನ್ಸುಖಾನಿ
- "ಸ್ಯಾಂಡಿ" ಆಗಿ ಶರಣ್
- ರತ್ನ ಆಗಿ ರಂಗಾಯಣ ರಘು
- ನಂಜಿ ಆಗಿ ವೀಣಾ ಸುಂದರ್
- ಸಾಧು ಕೋಕಿಲ
- ನಾಸರ್
- ಸೂರ್ಯ
- ಸಂಕೇತ್ ಕಾಶಿ
- ಧರ್ಮಾವರಮ್ ಸುಬ್ರಹ್ಮಣ್ಯ
- ಹೊನ್ನವಳ್ಳಿ ಕೃಷ್ಣ
- ಅಶೋಕ್ ಜಂಬೆ
- ರಾಮಚಂದ್ರ ಪ್ರತೀಹಾರಿ
- ಪ್ರಣಯಮೂರ್ತಿ
- ಪ್ರದೀಪ್ ವರ್ಮಾ
- ಶೈಲಜಾ
- ಪ್ರೊ. ರಾಮ್‍ದಾಸ್
- ಅಮೃತಾ ಗೌಡ
- ಅರ್ಚನಾ
- ಡಾ. ಚಿಕ್ಕಹೆಜ್ಜಾಜಿ ಮಹಾದೇವ್
- ಜಯಲಕ್ಷ್ಮಿ
ಧ್ವನಿವಾಹಿನಿ
ಬದಲಾಯಿಸಿOlave Mandara | |
---|---|
Soundtrack album by | |
Released | December 2010 |
Recorded | 2010 |
Genre | Feature film soundtrack |
Label | Lahari Music |
Olave Mandara | |
---|---|
Soundtrack album by | |
Released | December 2010 |
Recorded | 2010 |
Genre | Feature film soundtrack |
Label | Lahari Music |
ದೇವಾ ಚಲನಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದರು ಮತ್ತು ಅದರ ಧ್ವನಿಪಥವನ್ನು ಸಂಯೋಜಿಸಿದರು. ಗೀತೆಗಳ ಸಾಹಿತ್ಯವನ್ನು ಕವಿರಾಜ್, ಕೆ. ಕಲ್ಯಾಣ್, ಕೆ. ವಿ. ರಾಜು, ಹಂಸಲೇಖ ಮತ್ತು ಜಯತೀರ್ಥ ಬರೆದಿದ್ದಾರೆ. "ಒಂದೇ ಕೇರಿಲಿ" ಹಾಡಿನ ಸಾಹಿತ್ಯವನ್ನು ಜಿ.ಪಿ.ರಾಜರತ್ನಂರ ಒಂದು ಕವಿತೆಯಿಂದ ತೆಗೆದುಕೊಳ್ಳಲಾಗಿದೆ. ಧ್ವನಿಸುರುಳಿ ಸಂಗ್ರಹದಲ್ಲಿ ಒಂಭತ್ತು ಹಾಡುಗಳಿವೆ. ಇದನ್ನು ಡಿಸೆಂಬರ್ ೨೦೧೦ರಲ್ಲಿ ಬಿಡುಗಡೆ ಮಾಡಲಾಯಿತು.[೩]
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಗಾಯಕ(ರು) | ಸಮಯ |
1. | "ಶ್ರೀಕಿ ಶ್ರೀಕಿ" | ಕವಿರಾಜ್ | ಕಾರ್ತಿಕ್ | |
2. | "ಜಾನಪದ ಕಣ್ಮರೆ" | ಕೆ. ವಿ. ರಾಜು | ಶಂಕರ್ ಮಹಾದೇವನ್ | |
3. | "ಯಾರಿಟ್ಟ ಪ್ರೀತಿಯೊ" | ಕೆ. ಕಲ್ಯಾಣ್ | ಹರ್ಷ | |
4. | "ಒಲವೇ ಒಲವೇ ಮನ್ನಿಸು" | ಕೆ. ಕಲ್ಯಾಣ್ | ಹರ್ಷ | |
5. | "ನಡಿ ನಡಿ ರಾಜ" | ಹಂಸಲೇಖ | ಹೇಮಂತ್ ಕುಮಾರ್ | |
6. | "ಒಂದೇ ಕೇರೀಲಿ" | ಜಿ.ಪಿ. ರಾಜರತ್ನಂ | ಎಲ್. ಎನ್. ಶಾಸ್ತ್ರಿ | |
7. | "ಒಲವೇ ಮಂದಾರವಾಯ್ತು" | ಕೆ. ಕಲ್ಯಾಣ್ | ರಾಜೇಶ್ ಕೃಷ್ಣನ್, ನಂದಿತಾ | |
8. | "ಕಾಯಾ ವಾಚಾ ಮನಸಾ" | ಜಯತೀರ್ಥ | ಎಲ್. ಎನ್. ಶಾಸ್ತ್ರಿ, ಶ್ರೇಯಾ ಘೋಶಾಲ್ | |
9. | "ಚಿನ್ನ ನಿನ್ನ ಬಳಿ ಸೇರಲು" | ಕೆ. ಕಲ್ಯಾಣ್, ಜಯತೀರ್ಥ | ರಾಜೇಶ್ ಕೃಷ್ಣನ್, ಶ್ರೇಯಾ ಘೋಶಾಲ್ |
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
ಬದಲಾಯಿಸಿ೫೯ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ
ಬದಲಾಯಿಸಿ- ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
- ಫಿಲ್ಮ್‌ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ – ಜಯತೀರ್ಥ
- ನಾಮನಿರ್ದೇಶಿತ, ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ – ರಂಗಾಯಣ ರಘು
- ನಾಮನಿರ್ದೇಶಿತ, ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ – ವೀಣಾ ಸುಂದರ್
೨೦೧೧ರ ಬೆಂಗಳೂರು ಟೈಮ್ಸ್ ಫ಼ಿಲ್ಮ್ ಅವಾರ್ಡ್ಸ್
ಬದಲಾಯಿಸಿ- ಭರವಸೆಯ ಹೊಸ ನಟ – ಶ್ರೀಕಾಂತ್
೧ನೇ ಸೀಮಾ ಪ್ರಶಸ್ತಿಗಳು
ಬದಲಾಯಿಸಿ- ಅತ್ಯುತ್ತಮ ಹೊಸ ನಟ (ಕನ್ನಡ) – ಶ್ರೀಕಾಂತ್
- ಅತ್ಯುತ್ತಮ ಹೊಸ ನಟಿ (ಕನ್ನಡ) – ಆಕಾಂಕ್ಷಾ ಮನ್ಸುಖಾನಿ
ಉಲ್ಲೇಖಗಳು
ಬದಲಾಯಿಸಿ- ↑ "Olave Mandara: A fairytale on the road". Bangalore Mirror. 20 January 2011. Retrieved 6 July 2015.
- ↑ "The Bangalore Times Film Awards 2011". The Times of India. 21 June 2012. Retrieved 6 July 2015.
- ↑ "Olave Mandara Audio Release". supergoodmovies.com. 21 December 2010. Archived from the original on 6 ಜುಲೈ 2015. Retrieved 5 July 2015.