ಒರಿಯೊಸಿರಿಯಸ್
ಒರಿಯೊಸಿರಿಯಸ್: ಕಳ್ಳಿಗಳ ಕುಟುಂಬ. ಶಾಸ್ತ್ರನಾಮ ಕ್ಯಾಕ್ಟೇಸಿ. ಓರಿಯೊಸೆರಿಯಸ್ ಪಾಪಾಸುಕಳ್ಳಿ (ಕುಟುಂಬ ಕ್ಯಾಕ್ಟೇಸಿ) ಕುಲವಾಗಿದೆ, ಇದನ್ನು ಆಂಡಿಸ್‌ನ ಎತ್ತರದ ಪ್ರದೇಶಗಳಿಂದ ಮಾತ್ರ ಪರಿಚಿತವಾಗಿದೆ. ಇದರ ಹೆಸರಿನ ಅರ್ಥ "ಮೌಂಟೇನ್ ಸೆರಿಯಸ್" ಎಂದು, ಇದು ಗ್ರೀಕ್ ಪೂರ್ವಪ್ರತ್ಯಯ ಓರಿಯೊ- (ὀρεο-, ಪರ್ವತ)[೨] ಮತ್ತು ನವ-ಲ್ಯಾಟಿನ್ ಸೆರಿಯಸ್‍ನಿಂದ ರೂಪುಗೊಂಡಿದೆ.
ಒರಿಯೊಸಿರಿಯಸ್ | |
---|---|
Oreocereus celsianus | |
Scientific classification | |
Unrecognized taxon (fix): | Oreocereus |
Type species | |
Oreocereus celsianus | |
Species | |
Synonyms[೧] | |
|
ಸಸ್ಯಗಳು ಬಲು ಆಕರ್ಷಕವಾಗಿರುವುದರಿಂದ ಇವನ್ನು ಕುಂಡಗಳಲ್ಲಿ ಬೆಳೆಸಿ ಮನೆಗಳಲ್ಲಿ ಅಲಂಕಾರಕ್ಕೋಸ್ಕರ ಇಡುವುದುಂಟು. ಕಾಂಡದಲ್ಲಿ ಏಣುಗಳು ಮತ್ತು ಮುಳ್ಳುಗಳುವೆ. ಏಣುಗಳ ಮೇಲಿರುವ ಗಂಟುಗಳಿಂದ ಉದ್ದವಾದ ಬಿಳಿಯ ಬಣ್ಣದ ಕೂದಲುಗಳು ಹೊರಬರುತ್ತವೆ. ಹೂಗಳ ಆಕಾರ ಕೊಳವೆಯಂತೆ. ಇವು ಪ್ರತಿದಿನವೂ ಅರಳುವುವು. ಅಂಡಾಶಯದ ಸುತ್ತಲೂ ಬಿಲ್ಲೆಗಳಂತಿರುವ ಅಸಂಖ್ಯಾತ ಉಪದಳಗಳಿವೆ. ಉಣ್ಣೆಯಂತೆ ಹೆಣೆದುಕೊಂಡಿರುವ ಕೂದಲುಗಳು ಕಂಕುಳಲ್ಲಿ ಇರುವುದರಿಂದ ಹೂ ನೋಡಲು ಆಕರ್ಷಣೀಯವಾಗಿದೆ. ಅಸಂಖ್ಯಾತ ಕೇಸರಗಳು ಹೂದಳಗಳಷ್ಟು ಅಥವಾ ಅವುಗಳಿಗಿಂತ ಉದ್ದವಾಗಿರುತ್ತವೆ.
ಪ್ರಭೇದಗಳು
ಬದಲಾಯಿಸಿಇದರಲ್ಲಿ ಐದು ಪ್ರಭೇದಗಳಿವೆ.ಅದರಲ್ಲಿ ಎರಡು ಮುಖ್ಯ ಪ್ರಭೇದಗಳು ಒ. ಸೆಲ್ಸಿಯಾನಸ್ ಮತ್ತು ಒ. ಫಾಸುಲೇಟಸ್. ಇವು ಬೋಲಿವಿಯ, ಪೆರು ಮತ್ತು ಚಿಲಿ ದೇಶಗಳ ಮೂಲವಾಸಿಗಳು. ಇತ್ತೀಚಿನ ವರ್ಗೀಕರಣದಂತೆ ಅಂಗೀಕಾರವಾಗಿರುವ ಪ್ರಭೇದಗಳು
As of ಸೆಪ್ಟೆಂಬರ್ 2023[update][[ವರ್ಗ:Articles containing potentially dated statements from Expression error: Unexpected < operator.]], ಪ್ಲಾಂಟ್ಸ್ ಆಫ್ ದಿ ವರ್ಲ್ಶ್ ಅನ್‍ಲೈನ್ ಅಂಗೀಕರಿಸಿರುವ ಪ್ರಭೇದಗಳು:[೧]
ಚಿತ್ರ | ವೈಜ್ಞಾನಿಕ ಹೆಸರು | ಹರಡುವಿಕೆ |
---|---|---|
ಒರಿಯೋಸಿರಿಯಸ್ ಸೆಲ್ಸಿಯಾನಸ್ (Lem. ex Salm-Dyck) A.Berger ex Riccob. | ಪೆರು,ಬೊಲಿವಿಯ,ಅರ್ಜಂಟೀನಾ (Jujuy) | |
ಒರಿಯೋಸಿರಿಯಸ್ ಡೊಲ್ಜಿಯಾನಸ್ (Backeb.) Borg | ಪೆರು. | |
ಒರಿಯೋಸಿರಿಯಸ್ ಹೆಂಪೆಲಿಯಾನಸ್ (Gürke) D.R.Hunt | ಪೆರು to ಚಿಲಿ (Tarapacá) | |
ಒರಿಯೋಸಿರಿಯಸ್ ಲೆಕೊಟ್ರಿಚಸ್ (Phil.) Wagenkn. | ಚಿಲಿ, ಪೆರು | |
ಒರಿಯೋಸಿರಿಯಸ್ ಸ್ಯುಡೋಫ಼ೊಸುಲಾಟಸ್ D.R.Hunt | ಬೊಲಿವಿಯ | |
ಒರಿಯೋಸಿರಿಯಸ್ ರಿಟ್ಟರ್ Cullmann | ಪೆರು | |
ಒರಿಯೋಸಿರಿಯಸ್ ಟಕ್ನೆನ್ಸಿಸ್ F.Ritter | ಪೆರು | |
ಒರಿಯೋಸಿರಿಯಸ್ ಟ್ರೋಲ್ಲಿ (Kupper) Backeb. | ,ಬೊಲಿವಿಯ,ಅರ್ಜಂಟೀನಾ |
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "Oreocereus Riccob. — Plants of the World Online". Plants of the World Online. 2020-02-03. Retrieved 2023-09-29.
- ↑ "oreography". Oxford English Dictionary (3rd ed.). Oxford University Press. 2005.
{{cite book}}
: Unknown parameter|chapterurl=
ignored (help); Unknown parameter|month=
ignored (help)