ಒರೆಗನೊ
ಸಸ್ಯಗಳ ಜಾತಿಗಳು
(ಒರಿಗಾನೊ ಇಂದ ಪುನರ್ನಿರ್ದೇಶಿತ)
ಒರೆಗನೊ [೧](ವೈಜ್ಞಾನಿಕ ನಾಮ ಒರಿಗ್ಯಾನಮ್ ವಲ್ಗೇರ್) ಪುದೀನ ಕುಟುಂಬದ (ಲೇಮಿಯೇಸಿಯಿ) ಒಂದು ಜಾತಿಯಾದ ಅರಿಗನಮ್‍ನ ಒಂದು ಸಾಮಾನ್ಯ ಪ್ರಜಾತಿ. ಇದು ಬೆಚ್ಚಗಿನ ಸಮಶೀತೋಷ್ಣ ಪಶ್ಚಿಮ ಹಾಗೂ ನೈಋತ್ಯ ಯೂರೇಷ್ಯಾ ಮತ್ತು ಮೆಡಿಟರೇನಿಯನ್ ಪ್ರದೇಶಕ್ಕೆ ಸ್ಥಳೀಯವಾಗಿದೆ. ಒರೆಗನೊ ೨೦ರಿಂದ ೮೦ ಸೆ.ಮಿ. ಎತ್ತರ ಬೆಳೆಯುವ ಮತ್ತು ೧-೪ ಸೆ.ಮಿ. ಉದ್ದನೆಯ ಅಭಿಮುಖ ಎಲೆಗಳನ್ನು ಹೊಂದಿರುವ ಒಂದು ಬಹುವಾರ್ಷಿಕ ಮೂಲಿಕೆ.