ಒಪನ್ ಸ್ಟ್ರೀಟ್ ಮ್ಯಾಪ್

ಪ್ರಪಂಚದ ಮುಕ್ತ ಹಾಗೂ ಸ್ವತಂತ್ರ ನಕಾಶೆ

ಒಪನ್ ಸ್ಟ್ರೀಟ್ ಮ್ಯಾಪ್ (ಒಎಸ್ಎಂ) ಒಂದು ಪ್ರಪಂಚದ ಸ್ವತಂತ್ರ ಹಾಗೂ ಮುಕ್ತವಾಗಿ ಸಹವರ್ತನೆಯಿಂದ ಸಂಪಾದಿಸಬಲ್ಲ ನಕಾಶೆಯ ಯೋಜನೆ. ಈಗ ಲಭ್ಯವಿರುವ ಸುಮಾರು ನಕಾಶೆಗಳು ಹಲವು ಎಲ್ಲೆಕಟ್ಟು ಅಥವಾ ಪರಿಮಿತಿಗಳನ್ನು ಹೊಂದಿದ್ದು, ಅದನ್ನು ಸರಿದೂಗಲು ಅಗ್ಗದ ರೀತಿಯಲ್ಲಿ ಈ ಯೋಜನೆಯು ನೆರವಾಗಿದೆ.[೪]

ಒಪನ್ ಸ್ಟ್ರೀಟ್ ಮ್ಯಾಪ್
Openstreetmap logo.svg
ತೆರೆಚಿತ್ರ
Karnataka in OSM 2015.png
ಒಪನ್ ಸ್ಟ್ರೀಟ್ ಮ್ಯಾಪ್ ನಲ್ಲಿ ಕರ್ನಾಟಕ
ಜಾಲತಾಣದ ವಿಳಾಸopenstreetmap.org
ಘೋಷಣೆಪ್ರಪಂಚದ ಮುಕ್ತ ಹಾಗೂ ಸ್ವತಂತ್ರ ನಕಾಶೆ
ವಾಣಿಜ್ಯ ತಾಣಅಲ್ಲ
ನೊಂದಾವಣಿಕೊಡುಗೆದಾರರು ನೋಂದಾಯಿಸಬೇಕು
ಲಭ್ಯವಿರುವ ಭಾಷೆಸುಮಾರು ೫೦ಕ್ಕೂ ಹೆಚ್ಚು ತಾಣದಲ್ಲಿ ಹಾಗೂ ನಕಾಶೆಯಲ್ಲಿ ಯಾವು ಮಿತಿಯಿಲ್ಲ[೧]
ಬಳಕೆದಾರರು(ನೊಂದಾಯಿತರೂ ಸೇರಿ)2,547,742[೨]
ವಿಷಯದ ಪರವಾನಗಿಮುಕ್ತ ದತ್ತಾಂಶ ಪರವಾನಿಗೆ (Open Database License - ODbL)
ಒಡೆಯಒಪನ್ ಸ್ಟ್ರೀಟ್ ಮ್ಯಾಪ್ ಸಮುದಾಯ. ಒಪನ್ ಸ್ಟ್ರೀಟ್ ಮ್ಯಾಪ್ ಫೌಂಡೆಶನ್ ನೆರವಿನೊಂದಿಗೆ.[೩]
ಸೃಷ್ಟಿಸಿದ್ದುಸ್ಟೀವ್ ಕೋಸ್ಟ್

ಕೇವಲ ನಕಾಶೆಯಲ್ಲದೆ, ಈ ನಕಾಶೆ ಹಿಂದೆ ಇರುವ ಮುಕ್ತ ಭೂ ದತ್ತಾಂಶವು ಈ ಯೋಜನೆಯ ಪ್ರಮುಖ ಆಗುವಳಿಯಾಗಿದೆ. ಈ ಮುಕ್ತ ಭೂ ದತ್ತಾಂಶವು ಸ್ವತಂತ್ರ ಪರವಾನಿಗೆಯಲ್ಲಿರುವುದರಿಂದ ಒಡೆತನದ ಭೂ ದತ್ತಾಂಶಕ್ಕಿಂತ ಹಲವಾರು ರೀತಿಯಲ್ಲಿ ಉಪಯೋಗವಾಗುತ್ತಿದೆ. [೫][೬]

ಇತಿಹಾಸಸಂಪಾದಿಸಿ

 
2009ರಲ್ಲಿ ಸ್ಟೀವ್ ಕೋಸ್ಟ್

೨೦೦೪ರಲ್ಲಿ ಸ್ಟೀವ್ ಕೋಸ್ಟ್ ರವರು ಮೊದಲಿಗೆ ಇಂಗ್ಲೆಂಡ್ ನಲ್ಲಿ ಒಪನ್ ಸ್ಟ್ರೀಟ್ ಮ್ಯಾಪ್ ಯೋಜನೆಯನ್ನು ಹುಟ್ಟುಹಾಕಿದರು. ಆನಂತರ ಇದು ತನ್ನೊಲವಿಗರ ನೆರವಿನಿಂದ ಪ್ರಪಂಚದ ಎಲ್ಲಾ ದೇಶಗಳಿಗೂ ವಿಸ್ತರಿಸಲಾಯಿತು.

ಸ್ಟೇಟ್ ಆಫ್ ದ ಮ್ಯಾಪ್ಸಂಪಾದಿಸಿ

ಸ್ಟೇಟ್ ಆಫ್ ದ ಮ್ಯಾಪ್ ಎಂಬ ಸಮಾವೇಷವು ಒಪನ್ ಸ್ಟ್ರೀಟ್ ಮ್ಯಾಪ್ ಅನ್ನು ಬಳಸುವ ಮತ್ತು ಕೊಡುಗೆ ನೀಡುವವರನ್ನು ಒಂದೆಡೆ ಸೇರಿಸುವ ವಾರ್ಷಿಕವಾಗಿ ಸಮಾವೇಷವಾಗಿದೆ. ೨೦೦೭ರಿಂದ ಈ ಸಮಾವೇಷವು ಕೆಳಗಿನ ಸ್ಥಳಗಳಲ್ಲಿ ನೆಡೆದಿದೆ:

 • 2007 (2007) – ಮ್ಯಾಂಚೆಷ್ಟರ್, ಇಂಗ್ಲೆಂಡ್[೭]
 • 2008 (2008) – ಲೈಮರಿಕ್, ಐರ್ಲ್ಯಾಂಡ್[೮]
 • 2009 (2009) – ಅಂಸ್ಟೆರ್ಡ್ಯಾಂ, ಹಾಲ್ಯಾಂಡ್[೯]
 • 2010 (2010) – ಗಿರೋನ, ಸ್ಪೇನ್[೧೦]
 • 2011 (2011) – ಡೆನ್ವರ್, ಅಮೇರಿಕ[೧೧]
 • 2012 (2012) – ಟೊಕ್ಯೊ, ಜಪಾನ್[೧೨]
 • 2013 (2013) – ಬರ್ಮಿಂಗ್ಯಾಂ,ಇಂಗ್ಲೆಂಡ್[೧೩]
 • 2014 (2014) – ಬ್ಯುನಸ್ ಎರ್ಸ್, ಅರ್ಜಿಂಟಿನಾ[೧೪]

೨೦೧೫ರ ಸಮಾವೇಷವು ಅಮೇರಿಕದ ನ್ಯೂಯರ್ಕ್ ಹಾಗೂ ಸ್ಕಾಟ್ ಲ್ಯಾಂಡ್ ನಲ್ಲಿ ನೆಡೆಯಲಿದೆ.

ನಕ್ಷೆಗಳ ತಯಾರಿಕೆಸಂಪಾದಿಸಿ

ಮೊದಲಿಗೆ ಹಲವಾರು ತನ್ನೊಲವಿಗರು ಜಿಪಿಎಸ್ ಸಾಧನ ಮತ್ತು ಪುಸ್ತಕ, ಡಿಜಿಟಲ್ ಕ್ಯಾಮರಗಳಿಂದ ಭೂಪ್ರದೇಶದ ಸರ್ವೇಕ್ಷಣೆಯನ್ನು ಮಾಡಿ ಭೂ ದತ್ತಾಂಶವನ್ನು ಒಪನ್ ಸ್ಟ್ರೀಟ್ ಮ್ಯಾಪ್ ನಲ್ಲಿ ಸೇರಿಸುತ್ತಿದ್ದರು. ನಂತರದಲ್ಲಿ, ಉಪಗ್ರಹದ ಚಿತ್ರಗಳನ್ನು ಹಾಗೂ ಸರ್ಕಾರಿ ಮೂಲದ ಮುಕ್ತ ಭೂ ದತ್ತಾಂಶಗಳನ್ನು ಬಳಸಿಕೊಳ್ಳಲಾಯಿತು.

ನಕ್ಷೆ ಸಂಪಾದಿಸುವ ತಂತ್ರಾಂಶಗಳುಸಂಪಾದಿಸಿ

ಒಪನ್ ಸ್ಟ್ರೀಟ್ ಮ್ಯಾಪ್ ಜಾಲತಾಣದಲ್ಲಿ ಮೊದಲ್ಗಾಣುವ ತಂತ್ರಾಶವು ಮ್ಯಾಪ್ ಬಾಕ್ಸ್ ನವರು ಮಾಡಿದ ಐಡಿ ಎಂಬ ವಿನೂತನ ನಕ್ಷೆ ಸಂಪಾದಿಸುವ ತಂತ್ರಾಂಶ.[೧೫] ಇದಕ್ಕಿಂತ ಮೊದಲು, ಪೊಲ್ಟಾಚ್ ಎಂಬ ಫ್ಲಾಷ್ ಆಧಾರಿತ ತಂತ್ರಾಶವು ಮೊದಲ್ಗಾಣುತ್ತಿತ್ತು ಮತ್ತು ಈಗಲೂ ಕೆಲ ಬಳಕೆದಾರರು ಇದನ್ನು ಬಳಸುತ್ತಿದ್ದಾರೆ. ಜೊಸ್ಮ್ ಮತ್ತು ಮೆರ್ಕಾಟರ್ ಎಂಬ ಪ್ರಬಲವಾದ ಗಣಕ ತಂತ್ರಾಶಗಳೂ ಲಭ್ಯವಿದೆ.

 
ಭೂ ಸರ್ವೇಕ್ಷಣೆ ಮುಗಿದ ನಂತರ ಜೊಸ್ಮ್ ನಲ್ಲಿ ನಕ್ಷೆ ಸಂಪಾದಿಸುತ್ತಿರುವುದು.

ಸಂಪಾದಿಸುವವರುಸಂಪಾದಿಸಿ

 
ನೋಂದಾಯಿತ ಬಳಕೆದಾರರು

ಈ ಯೋಜನೆಯು ಪ್ರಾದೇಶಿಕವಾಗಿ ವೈವಿಧ್ಯತೆಯುಳ್ಳ ಸ್ಥಳಿಯ ಜ್ಞಾನವನ್ನು ಅವಧಾರಣೆಗೆ ಪರಿಗಣಿಸುವ ಸಂಪಾದಕರನ್ನು ಹೊಂದಿದೆ. ಮೊದಲಿನ ಕೆಲ ಸಂಪಾದಕರು ಸೈಕಲ್ ನಲ್ಲಿ ಸರ್ವೇಕ್ಷಣೆಯನ್ನು ಮಾಡಿ ಕೊಡುಗೆ ನೀಡುತ್ತಿದ್ದರು ಹಾಗೂ ಇನ್ನೂ ಕೆಲವರು ಜಿಐಎಸ್ ವೃತ್ತಿನಿರತರಾಗಿದ್ದು, ಭೂ ದತ್ತಾಂಶವನ್ನು ಕೊಡುಗೆ ನೀಡುತ್ತಿದ್ದರು.[೧೬][೧೭]

ಆಗಷ್ಟ್ ೨೦೦೮ ರಲ್ಲಿ ೫೦,೦೦೦ ಕೊಡುಗೆದಾರರನ್ನು ಹೊಂದಿದ್ದ ಯೋಜನೆ, ಮಾರ್ಚ್ ೨೦೦೯ರ ವರೆಗೆ ೧೦೦,೦೦೦ ದ ಗಡಿಯನ್ನು ದಾಟಿತ್ತು. ಆರು ವರ್ಷಗಳ ನಂತರ, ಮಾರ್ಚ್ ೨೦೧೫ರಲ್ಲಿ ಸುಮಾರು ೨,೦೦೦,೦೦೦ ಕೊಡುಗೆದಾರರನ್ನು ಹೊಂದಿದೆ.[೧೮]. ಇವರಲ್ಲಿ ಶೇಕಡಾ ೩೦ ರಷ್ಟು ಕನಿಷ್ಠ ಒಂದು ಬಿಂದುವನ್ನು(ಅಕ್ಷಾಂಶ-ರೇಖಾಂಶ) ಕೊಡುಗೆ ನೀಡಿದವರಾಗಿದ್ದಾರೆ.[೧೯]

ನಕಾಶೆಗಳ ಬಳಕೆಸಂಪಾದಿಸಿ

ನಕ್ಷೆಗಳನ್ನು ನೋಡಲು ಬೇಕಾಗುವ ತಂತ್ರಾಂಶಗಳುಸಂಪಾದಿಸಿ

 
ಒಪನ್ ಸ್ಟ್ರೀಟ್ ಮ್ಯಾಪ್ ನಲ್ಲಿ ಬೆಂಗಳೂರಿನ ಇಂದಿರಾನಗರ
 
ಫೆ.೨೦೧೫ ರ ದತ್ತಾಂಶದಂತೆ ಒಪನ್ ಸ್ಟ್ರೀಟ್ ಮ್ಯಾಪ್ ನಲ್ಲಿ ಕರ್ನಾಟಕ ರಸ್ತೆಗಳ ದಟ್ಟಣೆ

ಒಪನ್ ಸ್ಟ್ರೀಟ್ ಮ್ಯಾಪ್ ಜಾಲತಾಣ, ಗ್ನೋಮ್ ಮ್ಯಾಪ್ಸ್ , ಮಾರ್ಬಲ್, ಫೊಕ್ಸ್ ಟ್ರೊಟ್ ಜಿಪಿಎಸ್ [೨೦] , ಎಮೆರಿಲೊನ್ [೨೧] ನಂತಹ ತಂತ್ರಾಂಶಗಳನ್ನು ಬಳಸಿಕೊಡು ಒಪನ್ ಸ್ಟ್ರೀಟ್ ಮ್ಯಾಪ್ ಅನ್ನು ನೋಡಬಹುದು. ಹಾಗೆಯೆ ನಿಮ್ಮದೆ ಆದ ನಕಾಶೆಗಳನ್ನು ಮಾಡಲು ಜಿಐಎಸ್ ತಂತ್ರಾಶಗಳಾದ ಕ್ಯೂ ಜಿಐಎಸ್, ಆರ್ಕ್ ಜಿಐಎಸ್ ನಂತಹ ತಂತ್ರಾಂಶಗಳನ್ನು ಬಳಸಬಹುದು.

ಮಾನವೀಯ ನೆರವುಸಂಪಾದಿಸಿ

೨೦೧೦ರಲ್ಲಿ ಹೈಯಾತಿಯು ತೀವ್ರ ಸ್ವರೂಪದ ಭೂಕಂಪಕ್ಕೆ ತುತ್ತಾಗಿದ್ದಾಗ, ಮಾನವೀಯ ಒಎಸ್ಎಂ ತಂಡವು(ಹಾಟ್) ಕೇವಲ ೨ ದಿನಗಳಲ್ಲಿ ಅಲ್ಲಿನ ರಸ್ತೆ, ಕಟ್ಟಡ ಹಾಗೂ ನೆಲೆಯಿಲ್ಲದವರ ಬೀಡಿಕೆಗಳನ್ನು ಉಪಗ್ರಹದ ಚಿತ್ರಗಳಿಂದ ಪಾರ್ಟು ಪ್ರೀನ್ಸ್ ನ ಸಂಪೂರ್ಣ ನಾಡತಿಟ್ಟವನ್ನು ತಯಾರಿಸಿದರು.[೨೨][೨೩][೨೩].[೨೪]. ಇದರಿಂದಾದ ನಕ್ಷೆ ಹಾಗೂ ಭೂ-ದತ್ತಾಂಶಗಳನ್ನು ರೆಡ್ ಕ್ರಾಸ್ ಹಾಗೂ ಇನ್ನಿತರ ಸಂಸ್ಥೆಗಳು ಪರಿಹಾರ ಕಾರ್ಯಗಳಲ್ಲಿ ಬಳಸಿಕೊಂಡವು.

ಇದನ್ನು ಮುಂದುವರೆಸಿ, ಹಾಟ್ ತಂಡವು ಭಾರತದ ಉತ್ತರಾಖಂಡದ ಪ್ರವಾಹವು ಸೇರಿದಂತೆ ಹಲವೆಡೆ ನೆರವಾಗಿದ್ದಾರೆ.[೨೫][೨೬]

ಪರವಾನಿಗೆಸಂಪಾದಿಸಿ

ಸ್ವತಂತ್ರ್ಯ ಹಾಗೂ ಮುಕ್ತ ಬಳಕೆಯನ್ನು ಪ್ರೋತ್ಸಾಹಿಸಲು ಒಪನ್ ಸ್ಟ್ರೀಟ್ ಮ್ಯಾಪ್ ದತ್ತಾಂಶವನ್ನು ಮೊದಲಿಗೆ ಕ್ರೀಯೆಟಿವ್ ಕಾಮನ್ಸ್ ನ ಮುಕ್ತ ಪರಿವಿಡಿ ಪರವಾನಿಗೆ ಅಡಿಯಲ್ಲಿ ಪ್ರಕಟಿಸಲಾಗಿತ್ತು. ಅನಂತರ ಸೆ. ೨೦೧೨ ರಲ್ಲಿ, ಈ ಪರವಾನಿಗೆಯನ್ನು ಒಪನ್ ಡಾಟಾ ಕಾಮನ್ಸ್ ನ ಮುಕ್ತ ದತ್ತಾಂಶ ಪರವಾನಿಗೆಗೆ(Open Database License-ODbL) ಬದಲಿಸಲಾಯಿತು.

ಉಲ್ಲೀಖಸಂಪಾದಿಸಿ

 1. http://translatewiki.net/wiki/Translating:OpenStreetMap/stats/trunk
 2. "Stats". 10 Years of OSM. Retrieved 27 Feb 2015.
 3. "FAQ". OpenStreetMap Wiki. Retrieved 15 April 2011.
 4. http://news.nationalgeographic.com/news/2006/10/061018-street-maps.html
 5. https://wiki.openstreetmap.org/wiki/OSM_Map_On_Garmin}}
 6. "ಆರ್ಕೈವ್ ನಕಲು" (PDF). Archived from the original (PDF) on 2012-12-15. Retrieved 2015-03-09.
 7. http://2007.stateofthemap.org/
 8. http://2008.stateofthemap.org/
 9. http://2009.stateofthemap.org/
 10. http://2010.stateofthemap.org/
 11. http://2011.stateofthemap.org/
 12. http://2012.stateofthemap.org/
 13. http://2013.stateofthemap.org/
 14. http://2014.stateofthemap.org/
 15. "ಆರ್ಕೈವ್ ನಕಲು". Archived from the original on 2014-09-10. Retrieved 2015-03-09.
 16. http://www.opencyclemap.org/docs/
 17. http://www.esri.com/news/releases/10_3qtr/openstreetmap.html%7C
 18. http://wiki.openstreetmap.org/wiki/Stats
 19. Neis, Pascal. "The OpenStreetMap Contributors Map aka Who's around me?". Retrieved 7 January 2013.
 20. "FoxtrotGPS homepage".
 21. "Emerillon homepage". Archived from the original on 2017-10-11. Retrieved 2015-03-09.
 22. crisiscommons.org
 23. ೨೩.೦ ೨೩.೧ Batty, Peter (14 February 2010). "OpenStreetMap in Haiti – video".
 24. "WikiProject Haiti". OpenStreetMap Wiki. Retrieved 5 February 2010.
 25. [೧]
 26. http://tasks.hotosm.org/

ಬಾಹ್ಯ ಸಂಪರ್ಕಗಳುಸಂಪಾದಿಸಿ