ಒಂಟೆಹುಳು
ಒಂಟೆಹುಳು: ಡಿಕ್ಟಿಯಾಪ್ಟೆರ ಗಣದ ಮ್ಯಾಂಟಿಡೀ ಉಪಗಣಕ್ಕೆ ಸೇರಿದ ಒಂದು ಕೀಟ (ಮ್ಯಾಂಟಿಸ್; ಪ್ರೇಯಿಂಗ್ ಮ್ಯಾಂಟಿಸ್). ಮಳ್ಳಿಕೀಟವೆಂದೂ ಕರೆಯುತ್ತಾರೆ. ತಮ್ಮ ಮುಂಗಾಲುಗಳನ್ನು ಕೈ ಮುಗಿಯುವಂತೆ ಎತ್ತಿ ಹಿಡಿಯುವುದರಿಂದ ಪ್ರಾರ್ಥನೆ ಮಾಡುವಂತೆ ಕಾಣುತ್ತದೆ. ಹಾಗಾಗಿ ಇದನ್ನು ‘ಪ್ರಾರ್ಥನಾ ಕೀಟ’ (ಮ್ಯಾಂಟಿಸ್; ಪ್ರೇಯಿಂಗ್ ಮ್ಯಾಂಟಿಸ್) ಎಂತಲೂ ಕರೆಯುತ್ತಾರೆ. ಸುಮಾರು ೪೩೦ ಕುಲಗಳಲ್ಲಿ ೨೪೦೦ಕ್ಕೂ ಮಿಕ್ಕಿದ ಜಾತಿಯ ಕೀಟಗಳನ್ನು ಗುರುತಿಸಲಾಗಿದೆ.[೧] ಇವುಗಳು ಮುಖ್ಯವಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತವೆಯಾದರೂ, ಆದರೆ ಕೆಲವು ಸಮಶೀತೋಷ್ಣ ಪ್ರದೇಶಗಳಲ್ಲಿ ವಾಸಿಸುತ್ತವೆ[೨]
ಒಂಟೆಹುಳು | |
---|---|
Mantis religiosa, Romania | |
Scientific classification | |
Unrecognized taxon (fix): | Mantodea |
Families | |
See text | |
Synonyms | |
|
ವಾಸಸ್ಥಾನ
ಬದಲಾಯಿಸಿಸಾಮಾನ್ಯವಾಗಿ ಬೇಲಿ, ಹಸುರು ಗಿಡಮರಗಳು, ಹುಲ್ಲುನೆಲಗಳಲ್ಲಿ ಇದರ ವಾಸ. ಇದರ ಆಹಾರ ಇತರ ಕೀಟಗಳು, ಶರೀರ ನೀಳವಾಗಿದೆ. ಉದ್ದವಾದ ಮುಂಗಾಲುಗಳು ಆಹಾರ ಕೀಟವನ್ನು ಹಿಡಿದೆಳೆದುಕೊಳ್ಳಲು ಉಪಯುಕ್ತವಾಗಿವೆ. ಹಿನ್ನೆಲೆಯ ಬಣ್ಣಕ್ಕೆ ಹೊಂದಿಕೊಳ್ಳುವ ಗುಣ ಈ ಕೀಟಕ್ಕಿದೆ. ಸಾಮಾನ್ಯವಾಗಿ ಹಸುರು ಬಣ್ಣದವೇ ಹೆಚ್ಚು. ಈ ಕೀಟ ಮುಂದಿನ ಎರಡು ಕಾಲುಗಳನ್ನು ಮೇಲಕ್ಕೆತ್ತಿಕೊಂಡು ಅಲುಗಾಡದೆ ನಿಂತಿದ್ದು ಮುಂದೆ ಸುಳಿಯುವ ಪುಟ್ಟ ಕೀಟ ಮತ್ತು ದೊಡ್ಡ ಹುಳುಗಳ ಮೇಲೆ ಫಕ್ಕನೆ ಎರಗಿ ಹಿಡಿದು ಆಹಾರವಾಗಿ ಸೇವಿಸುತ್ತದೆ. ನೊಣ, ಚಿಟ್ಟೆ, ಚಿಟ್ಟೆಯ ಮರಿಗಳು ಇತ್ಯಾದಿ ಇದರ ಆಹಾರ. ಒಂಟೆಹುಳುವಿಗೆ ಎರಡು ಸಂಯುಕ್ತ ನೇತ್ರಗಳ ಜೊತೆಗೆ ಮೂರು ಸರಳ ನೇತ್ರಗಳೂ ಇವೆ. ಈ ಹುಳು ತನ್ನ ಮೊಟ್ಟೆಗಳನ್ನು ಸ್ಪಂಜಿನಂಥ ಮೊಟ್ಟೆ ಚೀಲಗಳಲ್ಲಿಡುತ್ತದೆ. ಹೊಟ್ಟೆಬಾಕ ಹೆಣ್ಣು ಸಂಭೋಗಕ್ಕಾಗಿ ಬಂದ ಗಂಡನ್ನೂ ತಲೆ ಮುರಿದು ಕಬಳಿಸುವುದು ಸಾಮಾನ್ಯ
ಉಲ್ಲೇಖಗಳು
ಬದಲಾಯಿಸಿ- ↑ Otte, Daniel; Spearman, Lauren. "Mantodea Species File Online". Retrieved 17 July 2012.
- ↑ Hurd, I. E. (1999). "Mantid in Ecological Research". In Prete, Fredrick R.; Wells, Harrington; Wells, Patrick H.; Hurd, Lawrence E. (eds.). The Praying Mantids. Johns Hopkins University Press. p. 231. ISBN 978-0-8018-6174-1.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Media related to Mantodea at Wikimedia Commons
- Data related to Mantodea at Wikispecies
- Mantis Study Group Archived 2021-01-17 ವೇಬ್ಯಾಕ್ ಮೆಷಿನ್ ನಲ್ಲಿ. – Information on mantises, phylogenetics and evolution.
- Mantodea Species File