ಐಸ್‌ ಡ್ಯಾನ್ಸಿಂಗ್‌

ಐಸ್‌ ಡ್ಯಾನ್ಸಿಂಗ್‌ , ಇದು ಶರೀರವನ್ನು ಕುಣಿಸುತ್ತಾ ಜಾರಾಡುವ ನೃತ್ಯ ಪ್ರಕಾರವಾಗಿದೆ. ಈ ಬಗೆಯ ನೃತ್ಯಕ್ಕಾಗಿನ ವರ್ಲ್ಡ್ ಫಿಗರ್‌ ಸ್ಕೇಟಿಂಗ್‌ ಚಾಂಪಿಯನ್‌ಶಿಪ್‌ ಎಂಬ ಪಂದ್ಯವು ೧೯೫೨ರಲ್ಲಿ ಮೊದಲಬಾರಿಗೆ ನಡೆಯಿತು. ಆದರೆ ೧೯೭೬ಕ್ಕಿಂತ ಮೊದಲು ಚಳಿಗಾಲದ ಒಲಂಪಿಕ್‌ ಪಂದ್ಯಕ್ಕಾಗಿ ಸೇರಲ್ಪಟ್ಟಿರಲ್ಲಿಲ್ಲ.

2008ರ ವಿಶ್ವ ಚಾಂಪಿಯನ್ ಐಸ್ ಡ್ಯಾನ್ಸರ್‌ಗಳಾದ ಇಸಾಬೆಲ್ ಮತ್ತು ಆಲಿವರ್ ಸ್ಚೊನ್‌ಫೆಲ್ಡರ್ ಡ್ಯಾನ್ಸ್‌ ಲಿಫ್ಟ್‌ ಮಾಡುತ್ತಿರುವುದು. ಡ್ಯಾನ್ಸ್ ಲಿಫ್ಟ್ ಇದು ಪೇರ್ ಲಿಫ್ಟ್‌ಗಿಂತ ಬಹಳಷ್ಟು ಬಿನ್ನವಾಗಿದೆ.

ಪೇರ್‌ ಸ್ಕೇಟಿಂಗ್‌ನಲ್ಲಿ ನೃತ್ಯಗಾರರು ಒಂದು ಗಂಡು ಮತ್ತು ಹೆಣ್ಣು ಜೊತೆಗಾರರು ಜೊತೆಯಾಗಿ ನರ್ತಿಸುತ್ತಾರೆ. ಐಸ್‌ ಡ್ಯಾನ್ಸ್‌ ಇದು ಫೆರ್‌ ಸ್ಕೆಟಿಂಗ್‌ಗಿಂತ ಬಿನ್ನವಾಗಿದೆ ಹೇಗೆಂದರೆ, ಇದರಲ್ಲಿ ಒಬ್ಬರನ್ನೊಬ್ಬರು ಎತ್ತಿ ಹಿಡಿದುಕೊಳ್ಳುವುದು, ಕೈಗಳನ್ನು ಹಿಡಿದುಕೊಂಡು ಮತ್ತೊಬ್ಬರನ್ನು ತಿರುಗಿಸುವುದು ಮತ್ತು ಗುಪಾಂಗಿ ಭಾಗವಹಿಸುವುದು ಇರುತ್ತದೆ. ಹಾಗೂ ಇದರಲ್ಲಿ ಎಸೆಯುವುದು ಮತ್ತು ಜಿಗಿಯುವುದಕ್ಕೆ ಅವಕಾಶವನ್ನು ನೀಡಲಾಗುವುದಿಲ್ಲ. ಸಾಮಾನ್ಯವಾಗಿ ಜೋಡಿಯು ಎರಡು ಕೈಅಳತೆಗಿಂತಲೂ ದೂರದಲ್ಲಿರುವುದಿಲ್ಲ. ನಿಜವಾಗಿ ಜೊತೆಗಾರರು ಇಡೀ ಆಟದ ತುಂಬ ಜೊತೆಯಾಗಿಯೇ ಇರಬೇಕೆಂಬ ಕಟ್ಟುಪಾಡು ಇದ್ದಾಗ್ಯೂ ಹೊಸ ನಮುನೆಯ ಐಸ್‌ ಡ್ಯಾನ್ಸ್‌ಗಳಲ್ಲಿ ಈ ಕಟ್ಟುಪಾಡಿಗೆ ವಿನಾಯತಿ ಇದೆ.

ಸ್ಕೆಟಿಂಗ್ ಮತ್ತು ಐಸ್ ಡ್ಯಾನ್ಸ್‌ಗಳ ನಡುವಿನ ಇನ್ನೊಂದು ವ್ಯತ್ಯಾಸವೆಂದರೆ, ಅವರ ನೃತ್ಯದಲ್ಲಿ ಬಳಸುವ ಸಂಗೀತವಾಗಿದೆ. ಐಸ್‌ ಡ್ಯಾನ್ಸಿಂಗ್‌ನಲ್ಲಿ, ನೃತ್ಯಗಾರನು ಹೊರಹೊಮ್ಮುತ್ತಿರುವ ಸಂಗೀತಕ್ಕೆ ತಕ್ಕಂತೆ ಜಾರಬೇಕಾಗುತ್ತದೆ ಮತ್ತು ತಾಳ ಲಯಗಳ ಕಟ್ಟುಪಾಡುಗಳೂ ಕೂಡ ಇರುತ್ತದೆ. ವಯಕ್ತಿಕ ಮತ್ತು ಜೋಡಿ ಸ್ಕೆಟರ್ಸ್‌‌ಗಳು ಸಂಗೀತಕ್ಕೆ ತಕ್ಕಂತೆ ಜಾರುತ್ತಾ ನೃತ್ಯ ಮಾಡುತ್ತಾರೆ ಇವರು ಸಂಗೀತದಲ್ಲಿನ ಹೊಡೆತಕ್ಕೆ ತಕ್ಕಂತೆ ಕುಣಿಯುವ ಅವಶ್ಯಕತೆ ಇರುವುದಿಲ್ಲ. ಆದರೆ ಒಂದು ವೇಳೆ ಐಸ್‌ ಡ್ಯಾನ್ಸ್‌ನಲ್ಲಿ ಈ ರೀತಿ ಮಾಡಿದರೆ ದಂಡವನ್ನು ವಿಧಿಸಲಾಗುತ್ತದೆ.

ಕೆಲವು ISUಅಲ್ಲದ ಪಂದ್ಯಗಳಲ್ಲಿ ಒಂಟಿ ನೃತ್ಯಗಾರರೂ ಕೂಡ ಭಾಗವಹಿಸಬಹುದಾಗಿದೆ.

ಸ್ಪರ್ಧೆಯ ವಿದಿವಿಧಾನಗಳು

ಬದಲಾಯಿಸಿ

ಐಸ್‌ ಡ್ಯಾನ್ಸ್‌ ಸ್ಪರ್ಧೆಯಲ್ಲಿ ಎರಡು ವಿಧಾನಗಳಿರುತ್ತದೆ. ಶಾರ್ಟ್‌ ಡ್ಯಾನ್ಸ್‌("SD") ಮತ್ತು ಫ್ರಿ ಡ್ಯಾನ್ಸ್‌ ("FD")ಗಳಾಗಿವೆ. ಫ್ರೀ ಡ್ಯಾನ್ಸ್‌ ಇದು ಅಂಕಗಳನ್ನು ಗಳಿಸಲು ಅತ್ಯಂತ ಕಷ್ಟಕರವಾದ ವಿಭಾಗವಾಗಿದ್ದು ಇದನ್ನು ಪಂದ್ಯವು ಸಮವಾಗುವುದನ್ನು ತಡೆಯಲು ಬಳಸಿಕೊಳ್ಳಲಾಗುತ್ತದೆ. ೨೦೦೯-೧೦ನೇ ಸಾಲಿನ ಅಂತ್ಯದ ವರೆಗೂ ಒಂದು ಪಂದ್ಯವು, ಒಂದು ಅಥವಾ ಹೆಚ್ಚು ಕಂಪಲ್ಸರಿ ಡ್ಯಾನ್ಸ್‌ ಅಂದರೆ ಮಾಡಲೇ ಬೇಕಾದ ನೃತ್ಯವನ್ನು ("CD"), ಒಂದು ಒರಿಜಿನಲ್‌ ಡ್ಯಾನ್ಸ್‌ ("OD")ಅಂದರೆ ಮೂಲವಾದ ನೃತ್ಯವನ್ನು, ಮತ್ತು ಒಂದು ಫ್ರೀ ಡ್ಯಾನ್ಸ್‌ಗಳನ್ನು ಒಳಗೊಂಡಿರುತ್ತದೆ.

ಮಾಡಲೇ ಬೇಕಾದ ನೃತ್ಯಗಳು

ಬದಲಾಯಿಸಿ
 
ನೆತಾಲಿ ಪೆಚಾಲಟ್ ಮತ್ತು ಫೇಬಿಯನ್ ಬೌರ್ಜಾಟ್ ಇವರು ಫಿನ್‌ಸ್ಟೆಫ್ ಕಂಪಲ್ಸರಿ ಡ್ಯಾನ್ಸ್ ಪ್ರದರ್ಶನ ನೀಡುತ್ತಿರುವುದು.

ಮಾಡಲೇ ಬೇಕದ ನೃತ್ಯಗಳಲ್ಲಿ, ಎಲ್ಲ ಗುಂಪುಗಳೂ ಒಂದೇ ಹಾಡಿಗೆ ಒಂದೇ ದರ್ಜೆಯ ಹೆಜ್ಜೆಗಳನ್ನು ಹಾಕುವುದು ಅನಿವಾರ್ಯವಾಗಿದೆ. ಒಂದು ಅಥವಾ ಅದಕ್ಕಿಂತ ಹೆಚ್ಚು ಮಾಡಲೇ ಬೇಕಾದ ನೃತ್ಯವನ್ನು ಸ್ಪರ್ಧೆಯ ಮೊದಲ ಭಾಗಲದಲ್ಲಿ ಮಾಡಬೇಕಾಗುತ್ತದೆ. ಮತ್ತು ಇದೊಂದು ಮನರಂಜನೆಯ ಮತ್ತು ಸಾಮಾಜಿಕ ನೃತ್ಯವಾಗಿಯೂ ಆಟಗಾರರ ಮಧ್ಯೆ ಪ್ರಖ್ಯಾತವಾಗಿದೆ. ಹೆಚ್ಚಿನ ಪಂದ್ಯಗಳಲ್ಲಿ ಒಂದೋ ಅರ್ಧ ಅಥವಾ ಇಡಿಯಾದ ವರ್ತುಲದ ನುಣುಪುಗಲ್ಲನ್ನು ಬಳಸಿಕೊಳ್ಳುವುದು ರೂಢಿಯಲ್ಲಿದೆ. ಅಂತರಾಷ್ಟ್ರೀಯ ಸ್ಕೆಟಿಂಗ್‌ ಯುನಿಯನ್‌(ISU) ಇದು ಯಾವ ರೀತಿಯ ನೃತ್ಯವನ್ನು ಮಾಡಲೇ ಬೇಕಾದ ನೃತ್ಯವಾಗಿ ಪ್ರತಿಯೊಂದು ಸ್ಪರ್ಧೆಯಲ್ಲೂ ಪ್ರಥಮಬಾರಿಗೆ ಮಾಡಬೇಕೆಂದು ನಿರ್ಧರಿಸುತ್ತದೆ. ನಂತರದ CDಗಳನ್ನು ಆಯಾ ನೃತ್ಯದ ಪ್ರಕಾರದ ಮೇಲೆ ನಿರ್ಧರಿಸಲಾಗುತ್ತದೆ.

೨೦೧೦ ಅವಧಿಯ ನಂತರ ISUದ ಎಲ್ಲ ಸ್ಪರ್ಧೆಗಳಲ್ಲಿಯೂ ಕೂಡ ಮಾಡಲೇ ಬೇಕಾದ ನೃತ್ಯವನ್ನು ಕೈಬಿಡಲಾಗಿದೆ. ೨೦೧೦ರ ವಲ್ಡ್‌ ಫಿಗರ್‌ ಸ್ಕೇಟಿಂಗ್‌ ಚಾಂಪಿಯನ್‌ಶಿಫ್‌ ಕೊನೆಯ CDನೃತ್ಯ(ಗೊಲ್ಡನ್‌ ವಾಜ್‌) ಹೊಂದಿದ ಸ್ಪರ್ಧೆಯಾಗಿದೆ ಮತ್ತು ಇಟಲಿಯ ಫೆಡರಿಕಾ ಫೈಯಿಲ್ಲಾ ಮತ್ತು ಮೆಸಿಮ್ಮೊ ಸ್ಕೆಲಿ ಇವರು ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ, ಕೊನೆಯಲ್ಲಿ ಈ ಪ್ರಕಾರದ ನೃತ್ಯ ಮಾಡಿದವರಾಗಿದ್ದಾರೆ.[]

ಮೂಲ ನೃತ್ಯ

ಬದಲಾಯಿಸಿ
 
ಟೆಸ್ಸಾ ವರ್ಚ್ಯೂ ಮತ್ತು ಸ್ಕಾಟ್‌ ಮೊಯಿರ್ ಅವರು ಫ್ಲೆಮೆಂಕೊ ನೃತ್ಯ ಪ್ರದರ್ಶನ ನೀಡುತ್ತಿರುವುದು. ಇದು ಅವರ ಮೂಲ ಜನಪದ ನೃತ್ಯವಾಗಿದೆ.

ಮೂಲ ನೃತ್ಯವು ಸ್ಪರ್ಧೆಯ ಮೂರು ಭಾಗಗಳಲ್ಲಿ ಎರಡನೇ ಭಾಗವಾಗಿದೆ. ISU ಪ್ರತೀ ವರ್ಷ ಈ ಪ್ರಕಾರದ ನೃತ್ಯಕ್ಕೆ ಯಾವ ಪ್ರಕಾರದ ಸಂಗೀತವನ್ನು ಮತ್ತು ರಾಗ ತಾಳಗಳನ್ನು ಹೊಂದಿರಬೇಕೆಂದು ಆದೇಶ ಹೊರಡಿಸಬೇಕೆಂದು ಆದೇಶಿಸಿರುತ್ತದೆ ಮತ್ತು ಎಲ್ಲ ನರ್ತಕರು ಅದೇ ಪ್ರಕಾರದ ಸಂಗೀತವನ್ನು ನೃತ್ಯಕ್ಕಾಗಿ ಆಯ್ದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಫೋಕ್‌ ಡ್ಯಾನ್ಸ್‌ ಆಗಿದೆ. ಸ್ಪರ್ಧೆಗಳು ನರ್ತಕರಿಗೆ ಅವರವರಿಗೆ ಬೇಕಾದ ಹಾಡುಗಳನ್ನು ಆಯ್ದುಕೊಳ್ಳುವ ಸ್ವತಂತ್ರವನ್ನು ನೀಡುತ್ತವೆ ಮತ್ತು ಅವರಿಗೆ ಬೇಕಾದಂತೆ ವೇಷಭೂಷಣಗಳನ್ನು ಬಳಸಿಕೊಳ್ಳಬಹುದಾಗಿದೆ. ಆದರೆ ಇದರ ಸಮಯಾವಕಾಶವು ಫ್ರೀ ಡ್ಯಾನ್ಸ್‌ಗಿಂತಲೂ ಕಡಿಮೆ ಇರುತ್ತದೆ ಮತ್ತು ಸ್ಕೆಟರ್‌ಗಳು ಇನ್ನೂ ಹೆಚ್ಚು ನಿಯಮಾವಳಿಗಳನ್ನು ಪಾಲಿಸಬೇಕಾಗುತ್ತದೆ. ಈ ನೃತ್ಯವು ಬ್ಯಾಲೆ ನೃತ್ಯದಂತೆ ಇರುವುದರಿಂದ ನರ್ತಕರ ಹೆಜ್ಜೆಗಳು ವರ್ತುಲದ ಮಧ್ಯಕ್ಕಿಂತ ಮುಂದೆ ಬರುವಂತಿಲ್ಲ. ಆದರೆ ಒಂದು ವೇಳೆ ನರ್ತಕರು ತಮ್ಮ ಕಾಲುಗಳ ಸಂಜ್ಞೆಯಿಂದಲೇ ಏನನ್ನಾದರೂ ಕಲಾತ್ಮಕವಾಗಿ ರೂಪಿಸುವುದಿದ್ದರೆ ವರ್ತುಲದ ಅರ್ಧಕ್ಕಿಂತಲೂ ಹೆಚ್ಚು ಭಾಗವನ್ನು ಬಳಸಿಕೊಳ್ಳುವುದಕ್ಕೆ ವಿನಾಯಿತಿ ನೀಡಲಾಗುತ್ತದೆ. ಜೊಡಿಯೊಂದಿಗೆ ಹತ್ತಿರದಲ್ಲಿರುವುದು ಮತ್ತು ಹತ್ತಿರದಲ್ಲಿಯೇ ಸ್ಕೆಟಿಂಗ್ ಮಾಡುವುದೂ ಕೂಡ ಈ ನೃತ್ಯದ ನಿಯಮಾವಳಿಗಳಲ್ಲಿ ಒಂದಾಗಿದೆ.

OD ನೃತ್ಯವನ್ನು ೨೦೧೦ರಿಂದ ಕೈ ಬಿಡಲಾಗಿದೆ.

ಕಡಿಮೆ ಸಮಯಾವಧಿಯ ನೃತ್ಯ

ಬದಲಾಯಿಸಿ

೨೦೦೯-೧೦ರ ಅವಧಿಯ ನಂತರದಲ್ಲಿ ISU ಕಾಂಗ್ರೆಸ್‌ ಐಸ್‌ ಡ್ಯಾನ್ಸ್‌ನ್ನು ಕೂಡ ವಯಕ್ತಿಕ ಮತ್ತು ಜೋಡಿ ಸ್ಕೆಟಿಂಗ್‌ನಂತೆಯೇ ಅದರ ರೂಪು ರೇಷೆಗಳನ್ನು ಬದಲಾಯಿಸಬೇಕೆಂದು ತಿರ್ಮಾನಿಸಿತು. ಇದರಿಂದಾಗಿ ಹೊಸ ಮಾದರಿಯ ಶಾರ್ಟ್‌ ಡ್ಯಾನ್ಸ್‌ ಅಥವಾ ಚಿಕ್ಕ ನೃತ್ಯಗಳು ೨೦೧೦-೧೧ಅವಧಿಯಿಂದ ಅಸ್ಥಿತ್ವಕ್ಕೆ ಬಂದವು. ಈ ವಿಧಾನವು ಮೊದಲು ಇದ್ದ ಮಾಡಲೇ ಬೇಕಾದ ನೃತ್ಯ ಮತ್ತು ಮೂಲ ನೃತ್ಯಗಳೆರಡರ ಗುಣಲಕ್ಷಣಗಳೆರಡನ್ನೂ ಒಳಗೊಂಡಿರುತ್ತದೆ. ಇದರಲ್ಲಿ ಮೊದಲಾರ್ಧದಲ್ಲಿ ತಾವು ಮಾಡಲೇ ಬೇಕಾದ ನೃತ್ಯಪ್ರಕಾರಗಳನ್ನು ಪೂರೈಸುತ್ತವೆ ಮತ್ತು ನಂತರದಲ್ಲಿ ತಾವು ಹಾಕಿಕೊಂಡ ಯೋಜನೆಯಂತೆ ಕೆಲವು ಅವಶ್ಯಕ ಗುಣಲಕ್ಷಣಗಳನ್ನು ಅಳವಡಿಸಿಕೊಂಡು ISUದಿಂದ ಹೇಳಲ್ಪಟ್ಟಗುಣಗಳನ್ನು ಹೊಂದಿರುವ ಮತ್ತು ರಾಗತಾಳಗಳನ್ನು ಹೊಂದಿದ ಸಂಗೀತಕ್ಕೆ ನೃತ್ಯ ಮಾಡುತ್ತಾ ಸಾಗುತ್ತಾರೆ. ಆದರೆ ಸ್ಕೆಟರ್‌ಗಳು ಅವರಿಗೆ ಬೇಕಾದ ವಾದನಗಳನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ. ಆದರೆ ರೀತಿ ರಿವಾಜುಗಳನ್ನು ಹೊಂದಿರುವುದು ಅನಿವಾರ್ಯವಾಗಿದೆ.

ಫ್ರೀ ಡ್ಯಾನ್ಸ್‌(ಮುಕ್ತ ನೃತ್ಯ)

ಬದಲಾಯಿಸಿ

ಫ್ರೀ ಡ್ಯಾನ್ಸ್ ಇದೊಂದು ಐಸ್‌ ಡ್ಯಾನ್ಸ್‌ನ ವಿಭಾಗವಾಗಿದೆ. ಒಂದು ಸ್ಪರ್ಧೆಯಲ್ಲಿ ಕಂಪಲ್ಸರಿ ಡ್ಯಾನ್ಸ್‌ ಮತ್ತು ಒರಿಜಿನಲ್‌ ಡ್ಯಾನ್ಸ್‌ನ ನಂತರ ಮಾಡಬೇಕಾದ ಕೊನೆಯ ಮತ್ತು ಅಂತಿಮವಾಗಿ ಮಾಡುವ ನೃತ್ಯ ಪ್ರಕಾರವಾಗಿದೆ.

ಈ ವಿಭಾಗದಲ್ಲಿ ನರ್ತಕ ಗುಂಪುಗಳು ಅವುಗಳದ್ದೇ ಆದ ಹಾಡಿನ ಪ್ರಕಾರಗಳನ್ನು ಮತ್ತು ವಿಷಯವಸ್ತುವನ್ನು ಮತ್ತು ಅದರೊಂದಿಗಿನ ಸಂಗೀತವನ್ನು ಆಯ್ದುಕೊಳ್ಳಬಹುದಾಗಿದೆ. ಇದರಲ್ಲಿ ಕೌಶಲ್ಯಬಳಕೆಗೆ ಹೆಚ್ಚು ಆದ್ಯತೆಯನ್ನು ನೀಡಲಾಗುತ್ತದೆ. ೧೯೯೮ರಿಂದ ನರ್ತಕರು, ಕೆಲವೊಂದು ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದ್ದು, ಅವುಗಳಲ್ಲಿ ಹೆಜ್ಜೆಗಳನ್ನಿಡುವಿಕೆ, ಎತ್ತುವಿಕೆ, ನೃತ್ಯದಲ್ಲಿನ ತಿರುಗಿಸುವಿಕೆ, ಟ್ವಿಜಲ್ಸ್‌ ಎಂದು ಕರೆಯಲ್ಪಡುವ ಹಲವಾರು ಬಾರಿ ತನ್ನ ಸಹನರ್ತಕಿಯನ್ನು ಸುತ್ತಿಸುವಿಕೆಗಳು ಒಳಗೊಂಡಿವೆ. ಅನುಭವಿಕರ ಮಟ್ಟದಲ್ಲಿನ ಸ್ಪರ್ದೆಯು ನಾಲ್ಕು ಹೆಚ್ಚುವರಿ ನಿಮಿಷಗಳನ್ನು ಹೊಂದಿರುತ್ತವೆ(ಹೆಚ್ಚು ಅಥವಾ ಕಡಿಮೆ ೧೦ಸೆಕೆಂಡುಗಳು). ಮತ್ತು ಹಲವಾರು ಬಗೆಯ ತುಂಡುತುಂಡಾದ ಸಂಗೀತಗಳನ್ನು ಹೊಂದಿದ್ದು ಒಂದೇರೀತಿಯ ನೃತ್ಯದಲ್ಲಿ ವಿಭಿನ್ನತೆಯನ್ನು ತುಂಬಲು ಸಹಾಯಕವಾಗುತ್ತದೆ. ಮಾಡಲೇ ಬೇಕಾದ ಮತ್ತು ಮೂಲ ನೃತ್ಯಕ್ಕಿಂತ ಇದರಲ್ಲಿ ಕೈ ಹಿಡಿದುಕೊಂಡು ನೃತ್ಯಮಾಡುವುದಕ್ಕೆ ವಿನಾಯಿತಿ ನೀಡಲಾಗುತ್ತದೆ. ಆಗಿಂದಾಗೆ ತಂಡವು ಅತ್ಯಂತ ಕಷ್ಟಕರವಾದ ಭಂಗಿಗಳನ್ನು ಪ್ರದರ್ಶಿಸಿ ಕಷ್ಟಕರ ಭಂಗಿ ವಿಭಾಗದಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಪ್ರಯತ್ನಿಸುತ್ತವೆ. ಫ್ರೀ ಡ್ಯಾನ್ಸ್‌ನಲ್ಲಿ ಒರಿಜಿನಲ್‌ ಡ್ಯಾನ್ಸ್‌ಗಿಂತ ಎತ್ತುವಿಕೆಯು ಹೆಚ್ಚಾಗಿರುತ್ತದೆ.

ಸ್ಪರ್ಧೆಯ ಅಂಶಗಳು

ಬದಲಾಯಿಸಿ

ಎತ್ತುವಿಕೆ

ಬದಲಾಯಿಸಿ

ಎತ್ತುವಿಕೆಯು ಐಸ್‌ ಡ್ಯಾನ್ಸ್‌ಗಳಲ್ಲಿ ಬೇರೆ ತೆರನಾಗಿದ್ದು, ಪೇರ್‌ ಸ್ಕೆಟಿಂಗ್‌ಗಳಂತೆ ಗಂಡಸು ತನ್ನ ಕೈಗಳನ್ನು ತಲೆಗಿಂತ ಹೆಚ್ಚಿಗೆ ಮೇಲೆತ್ತುವುದನ್ನು ನಿಷೇಧಿಸಲಾಗಿದೆ ಆದರೆ ವಿವಿಧ ರೀತಿಯಲ್ಲಿ ಹಿಡಿದುಕೊಳ್ಳುವುದನ್ನು ಅನುಮತಿ ನೀಡಲಾಗಿದೆ. ಎತ್ತುವಿಕೆಯಲ್ಲಿ ಹೆಚ್ಚು ಕೋನ ಬದಲಾವಣೆ, ಹೊಂದಾಣಿಕೆ ಮತ್ತು ಎತ್ತರಕ್ಕೆ ಎತ್ತುವಿಕೆಯು ನಿರ್ಧಾರಕರಿಂದ ಹೆಚ್ಚು ಅಂಕಗಳನ್ನು ಪಡೆಯಲು ಸಹಾಯಮಾಡುತ್ತದೆ.

ಜಿಗಿಯುವಿಕೆ ಮತ್ತು ತಿರುಗುವಿಕೆ

ಬದಲಾಯಿಸಿ

ಎರಡು ಮೂರು ಬಾರಿ ತಿರುಗುತ್ತಾ ಜಿಗಿಯುವುದನ್ನು ಅನುಮೋದನೆ ಮಾಡಲಾಗಿಲ್ಲ. ಅರ್ಧ ಜಿಗಿಯುವುದನ್ನೂ ಕೂಡ ನಿಷೇಧಿಸಲಾಗಿದೆ. ತಿರುಗುವಿಕೆಯು ಜೋಡಿಯಿಂದ ಒಂದೇ ದಿಕ್ಕಿನಲ್ಲಿ ಇಬ್ಬರೂ ತಿರುಗುವುದು ಅನಿವಾರ್ಯವಾಗಿದೆ ಮತ್ತು ಹೇಗೆ ಜೋಡಿಗಳು ತಿರುಗುತ್ತಾರೆಯೋ ಹಾಗೆಯೇ ತಿರುಗುವುದು ಅವಶ್ಯಕವಾಗಿದೆ.

ಐಸ್‌ ಡ್ಯಾನ್ಸ್‌ನ ಇತಿಹಾಸ

ಬದಲಾಯಿಸಿ

ಐಸ್‌ ಡ್ಯಾನ್ಸ್‌ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಬಲವಾದ ಸಂಪ್ರದಾಯವನ್ನು ಹೊಂದಿದೆ. ಹಲವಾರು ಮಾಡಲೇ ಬೇಕಾದ ನೃತ್ಯವು ಬ್ರಿಟಿಷ್‌ ನರ್ತ್ಯಕಾರರಿಂದ ೧೯೩೦ರ ದಶಕದಲ್ಲಿ ಕಂಡುಹಿಡಿಲ್ಪಟ್ಟ ನೃತ್ಯವನ್ನು ಒಳಗೊಂಡಿರುತ್ತವೆ. ಇದುವರೆಗೆ ನಡೆದ ಹದಿನಾರು ಚಾಂಪಿಯನ್‌ಶಿಫ್‌ ಪಂದ್ಯಗಳಲ್ಲಿ ಹನ್ನೆರಡು ಪಂದ್ಯಗಳನ್ನು ಬ್ರಿಟಿಷ್‌ ಜೋಡಿಗಳೆ ಗೆದ್ದುಕೊಂಡಿವೆ. ಬ್ರಿಟಿಷ್‌ ತಂಡವಾದ ಜಯ್ನೆ ತೊರ್ವಿಿಲ್‌ ಮತ್ತು ಕ್ರಿಸ್ಟೊಪರ್‌ ಡಿಯೊನ್‌ ಇವರು ಸರ್ಜಿವೊದಲ್ಲಿ ನಡೆದ ಒಲಂಪಿಕ್‌ನಲ್ಲಿ, ರಾವೆಲ್ಸ್‌ ಬೊಲೆರೊ ಪಡೆದ ಅಸಾಮಾನ್ಯ ಅಂಕವಾದ ೬.೦ವನ್ನು ಮೀರಿಸಿ ಮಾಂತ್ರಿಕವಾದ ರೀತಿಯಲ್ಲಿ ಸ್ಕೆಟ್‌ ಮಾಡಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಬ್ರಿಟಿಷ್‌ ವಿಧಾನದ ಐಸ್‌ ಡ್ಯಾನ್ಸ್‌ನಲ್ಲಿ ತನ್ನ ಮೊಣಕಾಲುಗಳನ್ನು ಹೆಚ್ಚಾಗಿ ಬಗ್ಗಿಸಿಕೊಂಡು ಸಾಗುವುದರ ಮೂಲಕ ಬಲವಾದ ಅಭಿಪ್ರಾಯವನ್ನು ಸಂಗ್ರಹಿಸಿದೆ. ೧೯೬೦ದಶಕದಲ್ಲಿ ಪೂರ್ವ ಯುರೋಪಿಯನ್‌ ದೇಶಗಳಲ್ಲಿನ ಸ್ಕೆಟರ್‌ಗಳು ಹೆಚ್ಚಾಗಿ ಕೈಗಳನ್ನು ಬಿಡಿಸಿಕೊಂಡು ನೃತ್ಯ ಮಾಡುವುದನ್ನು ಪ್ರಾರಂಭಿಸಿದರು. ಇದರಿಂದಾಗಿ ಬರ್ಪದ ಮೇಲೆ ಜೋರಾಗಿ ಸಾಗುವುದು, ಮೇಲಿನ ಶರೀರದ ಭಾಗವನ್ನು ಬಳಸಿಕೊಳ್ಳಲು, ಮತ್ತು ಸಾಧ್ಯವಾಗುತ್ತದೆ. ಮತ್ತು ಪ್ರೇಕ್ಷಕರಿಗೆ ಹೆಚ್ಚು ಕಲ್ಪನೆಯನ್ನು ನೀಡುತ್ತದೆ.[] ೧೯೭೦ರ ದಶಕದಲ್ಲಿ ಸೋವಿಯತ್‌ನ ಪ್ರಖ್ಯಾತ ನರ್ತಕರು ಪ್ರಭಾಶಾಲಿಯಾಗಿ ಐಸ್‌ ಡ್ಯಾನ್ಸ್‌ಗಳಲ್ಲಿ ಕಥಾನಕಗಳನ್ನು ಒಳಗೊಂಡ ಮತ್ತು ಹೊಸಮಾದರಿಯ ಬ್ಯಾಲೆ ನೃತ್ಯಗಳನ್ನು ಮಾಡುವುದನ್ನು ಪ್ರಾರಂಭಿಸಿದರು.[] ರಷ್ಯಾದ ವಿಧವಾದ ನೃತ್ಯವು ಅತ್ಯಂತ ವೇಗವಾದ ಹೆಜ್ಜೆಯನ್ನು ಮತ್ತು ಸಂಗೀತದೊಂದಿಗೆ ಹೆಜ್ಜೆ ಹಾಕುವುದಕ್ಕೆ ಅತ್ಯಂತ ಕಷ್ಟಕರವಾದ ಪ್ರಕಾರಗಳನ್ನು ಒಳಗೊಂಡಿರುತ್ತವೆ.[] ಕೆಲವು ಸಂದರ್ಭಗಳಲ್ಲಿ, ಪರಿಶ್ರಮದ ರೂಪುರೇಷೆಯನ್ನು ತನ್ನ ಮೇಲಿನ ದೇಹದ ಭಾಗಗಳನ್ನು ಅತ್ಯಂತ ಕಷ್ಟಕರವಾದ ಹೆಜ್ಜೆಗಳನ್ನು ಹಾಕಲು ಬೇಕಾಗುವಂತೆ ಬಗ್ಗಿಸಿಕೊಳ್ಳುವಂತೆ ರೂಪಿಸಿಕೊಳ್ಳಲಾಗುತ್ತದೆ.[] ೧೯೯೦ಪೂರ್ವಾರ್ಧದಿಂದ, ಉತ್ತಮ ನೃತ್ಯಗಾರರು ಬ್ಯಾಲೆ ನೃತ್ಯದ ಪ್ರಕಾರವನ್ನು ಬಿಟ್ಟು, ಒಂದೇ ರೀತಿಯ ನೃತ್ಯದ ಪ್ರಕಾರವನ್ನು ಬಳಸಿಕೊಳ್ಳುತ್ತಾರೆ.[][]

ಈ ಸಂದರ್ಭದಲ್ಲಿ, ಅಂತರಾಷ್ಟ್ರೀಯ ಸ್ಕೆಟಿಂಗ್‌ ಸಂಘವು ಐಸ್‌ಡ್ಯಾನ್ಸ್‌ನ್ನು ಪ್ರಭಾವಶಾಲಿಯನ್ನಾಗಿಸಲು ಪ್ರಯತ್ನವನ್ನು ಮಾಡತೊಡಗಿದ್ದವು ಮತ್ತು ಸಂಗೀತ ಮತ್ತು ನೃತ್ಯಗಳಲ್ಲಿ ಹೆಚ್ಚು ಕಟ್ಟುಪಾಡುಗಳನ್ನು ತಂದು ಬಾಲ್‌ರೂಮ್‌ ಪದ್ದತಿಯತ್ತ ನರ್ತಕರನ್ನು ಸೆಳೆಯುವ ಪ್ರಯತ್ನವನ್ನು ಮಾಡಿತು. ಈ ಮಧ್ಯೆ ಐಸ್‌ ಡ್ಯಾನ್ಸ್‌ ತುಂಬ ನಿರಸವಾಗುತ್ತಿದ್ದೆ ಎಂಬ ಅಪಸ್ವರವು ಕೇಳಿ ಬರತೊಡಗಿತು. ನಂತರ ಕಟ್ಟುಪಾಡುಗಳನ್ನು ತೆಗೆದು ಕೆಲವೊಂದು ವಿಷಯವಸ್ತುಗಳನ್ನು ಒರಿಜಿನಲ್‌ ಡ್ಯಾನ್ಸ್‌ ಮತ್ತು ಫ್ರೀ ಡ್ಯಾನ್ಸ್‌ನಲ್ಲಿ ಅಳವಡಿಸಿಕೊಳ್ಳುವಂತೆ ನಿಯಮವನ್ನು ತಿದ್ದಿಕೊಳ್ಳಲಾಯಿತು. ಇದರಿಂದಾಗಿ ಕೌಶಲ್ಯ ಮತ್ತು ಅಂಗಸಾಧನೆಗಳನ್ನು ಆಧರಿಸಿ ಅಂಕನಿರ್ಧಾರಗಳನ್ನು ಮಾಡುವುದು ಸುಲಭದ ಕೆಲಸವಾಯಿತು ಮತ್ತು ನಾಟಕೀಯತೆಯನ್ನು ಕಡಿಮೆಗೊಳಿಸಿತು. ಐಸ್‌ ಡ್ಯಾನ್‌್ಂನಲ್ಲಿ ಸಂಗೀತದ ಹೊಡೆತಗಳಿಗೆ ಸರಿಯಾದ ಹೆಜ್ಜೆಗಳನ್ನು ಹಾಕಲೇಬೇಕಾದ ನಿಯಮದಿಂದಾಗಿ, ಹಾಡಿನಂತಹ ಗದ್ಯವನ್ನು ರಾಗಬದ್ದವಾಗಿ ಹಾಡುತ್ತಾ ಕುಣಿಯುವ ಒಟ್ಟಾರೆ ಶರಿರವನ್ನು ಕುಣಿಸುತ್ತಾ ಜಾರಾಡುವ ನೃತ್ಯಗಳಲ್ಲಿ ಅತ್ಯಂತ ಶಿಸ್ತುಬದ್ದವಾದ ನೃತ್ಯವೆಂದು ಹೆಸರಾಗಿದೆ.

ಐತಿಹಾಸಿಕ ಫಲಿತಾಂಶಗಳು

ಬದಲಾಯಿಸಿ

ನೋಡಿ:

  • ಓಲಂಪಿಕ್ಸ್‌ನಲ್ಲಿ ಫಿಗರ್ ಸ್ಕೇಟಿಂಗ್
  • ವಿಶ್ವ ಫಿಗರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ಸ್
  • ಯುರೋಪಿಯನ್ ಫಿಗರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್
  • ನಾಲ್ಕು ಖಂಡಗಳ ಚಾಂಪಿಯನ್‌ಶಿಪ್ಸ್
  • ಯುನೈಟೆಡ್ ಸ್ಟೇಟ್ಸ್‌ ಫಿಗರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ಸ್

ಉಲ್ಲೇಖಗಳು‌‌

ಬದಲಾಯಿಸಿ
  1. "ISU Congress News". Archived from the original on 2012-03-20. Retrieved 2011-05-21.
  2. ಬೆವರ್ಲಿ ಸ್ಮಿತ್, ಫಿಗರ್ ಸ್ಕೇಟಿಂಗ್‌: ಎ ಸೆಲೆಬ್ರೇಶನ್ , p ೧೮೫-೧೮೬
  3. ಎಲ್ಲಿನ್ ಕೆಸ್ಟನ್‌ಬೌಮ್, ಕಲ್ಚರ್ ಆನ್ ಐಸ್‌ , p ೨೨೮
  4. ಎಲ್ಲಿನ್ ಕೆಸ್ತನ್‌ಬೌಮ್, ಕಲ್ಚರ್ ಆನ್‌ ಐಸ್ , p ೨೪೬
  5. ಬೆವರ್ಲಿ ಸ್ಮಿತ್, ಫಿಗರ್ ಸ್ಕೇಟಿಂಗ್: ಎ ಸೆಲೆಬ್ರೇಷನ್ , p ೧೯೨-೧೯೬
  6. ಎಲ್ಲಿನ್ ಕೆಸ್ತನ್‌ಬೌಮ್, ಕಲ್ಚರ್ ಆನ್ ಐಸ್ , ಚಾಪ್ಟರ್ ೧೧
  7. ಬೆವರ್ಲಿ ಸ್ಮಿತ್, ಫಿಗರ್ ಸ್ಕೇಟಿಂಗ್: ಎ ಸೆಲೆಬ್ರೇಷನ್ , ಪುಟ ೧೯೭


ಬಾಹ್ಯ ಕೊಂಡಿಗಳು‌‌

ಬದಲಾಯಿಸಿ
  • Ice-dance.com
  • ISU Home - ಇಂಟರ್‌ನ್ಯಾಷನಲ್ ಸ್ಕೇಟಿಂಗ್ ಯುನಿಯನ್ ವೆಬ್‌ಸೈಟ್‌