ಐಸೊಲೆಪಿಸ್ ಗ್ರಾಸಿಲಿಸ್
ಐಸೊಲೆಪಿಸ್ ಗ್ರಾಸಿಲಿಸ್ | |
---|---|
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | I. cernua
|
Binomial name | |
Isolepis cernua (Vahl) Roem. & Schult.
|
ಐಸೊಲೆಪಿಸ್ ಗ್ರಾಸಿಲಿಸ್: ಹೆಚ್ಚು ತೇವಾಂಶವಿರುವ ಪ್ರದೇಶಗಳಲ್ಲಿ ಹುಲ್ಲಿನಂತೆ ಬೆಳೆಯುವ ಒಂದು ಅಲಂಕಾರಸಸ್ಯ. ಇದನ್ನು ಉದ್ಯಾನವನಗಳಲ್ಲೂ ಹೆಚ್ಚು ತೇವಾಂಶವಿರುವ ಇತರ ಸ್ಥಳಗಳ ಅಂಚುಗಳಲ್ಲೂ ಬೆಳೆಸುತ್ತಾರೆ. ಕೆಲವು ಸಾರಿ ಇದನ್ನು ಕುಂಡಗಳಲ್ಲೂ ಬೆಳೆಸಿ ಸಮಾರಂಭಗಳಲ್ಲಿ ಅಲಂಕಾರವಸ್ತುಗಳನ್ನಾಗಿ ಬಳಸುವುದುಂಟು.
ವೈಜ್ಞಾನಿಕ ಹೆಸರು
ಬದಲಾಯಿಸಿಸೈಪರೇಸಿ ಕುಟುಂಬದ ಐಸೊಲೆಪಿಸ್ ಜಾತಿಯ ಒಂದು ಪ್ರಭೇದ.ಇದನ್ನು ಐಸೋಲೆಪಿಸ್ ಸೆರ್ನುವ ಎಂದೂ ವರ್ಗೀಕರಿಸುತ್ತಾರೆ.[೧]
ಲಕ್ಷಣಗಳು
ಬದಲಾಯಿಸಿಇದು 1'-1ಳಿ’ ಎತ್ತರ ಬೆಳೆಯುವ ಬಹುವಾರ್ಷಿಕ ಪುರ್ಣಸಸಿ. ಕಾಂಡದಲ್ಲಿ ಗಿಣ್ಣುಗಳಿವೆ. ನಡುಗಿಣ್ಣು ಟೊಳ್ಳು. ತುದಿಯಲ್ಲಿ ತುರಾಯಿ ಆಕಾರದ ಹೂಗೊಂಚಲಿದೆ. ಸಸ್ಯ ಎಳೆಯದಾಗಿದ್ದಾಗ ನೇರವಾಗಿ ನಿಂತಿದ್ದು. ವಯಸ್ಸಾದ ಅನಂತರ ಬಾಗುತ್ತದೆ. ಕೆಲವು ಸಸ್ಯಗಳಲ್ಲಿ ಎಲೆಗಳು ಇರುವುದಿಲ್ಲ, ಇದ್ದರೂ ಬಹು ಚಿಕ್ಕವಾಗಿರುತ್ತವೆ. ಸಸ್ಯದ ತುದಿಯಲ್ಲಿ ಅನೇಕ ಚೂಪು ತುದಿಯ ಸ್ಪೈಕ್ ಹೂಗೊಂಚಲುಗಳಿವೆ. ಅವುಗಳ ಮಧ್ಯೆ ಚಿಕ್ಕದಾಗಿರುವ ಉಪ ಎಲೆಗಳು ಇವೆ.
ಉಲ್ಲೇಖಗಳು
ಬದಲಾಯಿಸಿ- ↑ "Scirpus cernuus". Retrieved 13 December 2015.