ಐಸೊಪ್ರೊಪೈಲ್ ಆಲ್ಕೊಹಾಲ್
ಐಸೊಪ್ರೊಪೈಲ್ ಆಲ್ಕೊಹಾಲ್: ಸುವಾಸನೆ ಬೀರುವ ಬಣ್ಣವಿಲ್ಲದ ದ್ರವವಸ್ತು. ಅಣುಸೂತ್ರ C3H8O .
| |||
ಹೆಸರುಗಳು | |||
---|---|---|---|
ಐಯುಪಿಎಸಿ ಹೆಸರು
Isopropanol
| |||
Other names
Propan-2-ol; Isopropanol; Rubbing alcohol; sec-Propyl alcohol; s-Propanol; iPrOH; IPA
| |||
Identifiers | |||
ECHA InfoCard | 100.000.601 | ||
ಗುಣಗಳು | |||
ಆಣ್ವಿಕ ಸೂತ್ರ | C3H8O | ||
ಮೋಲಾರ್ ದ್ರವ್ಯರಾಶಿ | ೬೦.೧0 g mol−1 | ||
ಸಾಂದ್ರತೆ | 0.786 g/cm3 (20 °C) | ||
ಕರಗು ಬಿಂದು |
−89 °C, 184 K, -128 °F | ||
ಕುದಿ ಬಿಂದು |
82.6 °C, 356 K, 181 °F | ||
ಕರಗುವಿಕೆ ನೀರಿನಲ್ಲಿ | miscible | ||
ಕರಗುವಿಕೆ | miscible in benzene, chloroform, ethanol, ether, glycerin soluble in acetone insoluble in salt solutions | ||
ಅಮ್ಲತೆ (pKa) | 16.5[೧] | ||
ವಕ್ರೀಕಾರಕ ಸೂಚಿ (nD) (ರಿಫ್ರಾಕ್ಟಿವ್ ಇಂಡೆಕ್ಸ್) | 1.3776 | ||
ಸ್ನಿಗ್ಧತೆ (ವಿಸ್ಕಾಸಿಟಿ) | 2.86 cP at 15 °C 1.96 cP at 25 °C[೨] 1.77 cP at 30 °C[೨] | ||
ದ್ವಿಧ್ರುವ ಚಲನೆ | 1.66 D (gas) | ||
Hazards | |||
Main hazards | Flammable | ||
Safety data sheet | External MSDS | ||
ಇಯು ವರ್ಗೀಕರಣ | {{{value}}} | ||
ಆರ್-ಹಂತಗಳು | R11 R36 R67 | ||
ಎಸ್-ಹಂತಗಳು | S7 S16 S24 S25 S26 | ||
ಚಿಮ್ಮು ಬಿಂದು (ಫ್ಲಾಶ್ ಪಾಯಿಂಟ್) |
|||
399 °C (750 °F; 672 K) | |||
Lethal dose or concentration (LD, LC): | |||
LD50 (median dose)
|
12800 mg/kg (dermal, rabbit)[ಸೂಕ್ತ ಉಲ್ಲೇಖನ ಬೇಕು] 3600 mg/kg (oral, mouse) 5045 mg/kg (oral, rat) 6410 mg/kg (oral, rabbit) | ||
LC50 (median concentration)
|
53000 mg/m3 (inhalation, mouse)[ಸೂಕ್ತ ಉಲ್ಲೇಖನ ಬೇಕು] 12,000 ppm (rat, 8 hr) | ||
LCLo (lowest published)
|
16,000 ppm (rat, 4 hr) 12,800 ppm (mouse, 3 hr) | ||
US health exposure limits (NIOSH): | |||
REL (Recommended)
|
TWA 400 ppm (980 mg/m3) ST 500 ppm (1225 mg/m3)[೩] | ||
Except where otherwise noted, data are given for materials in their standard state (at 25 °C [77 °F], 100 kPa). > | |||
Infobox references | |||
ರಾಸಾಯನಿಕ ಗುಣಗಳು
ಬದಲಾಯಿಸಿ200 ಸೆಂ. ಉಷ್ಣತೆಯಲ್ಲಿ ಸಾಂದ್ರತೆ 0.7856. ಕುದಿಯುವ ಬಿಂದು 82.40 ಸೆಂ.ನೀರು ಮತ್ತು ಆಗಾರ್ಯ್‌ನಿಕ್ ಲೀನಕಾರಿಗಳೊಡನೆ ಬೆರೆಯುವುದು. ನೀರಿನೊಡನೆ ನಿಯತ ಕುದಿಮಿಶ್ರಣ (ಕುದಿಯುವ ಬಿಂದು 80.40 ಸೆಂ.) ಕೊಡುವುದು. ಈ ಮಿಶ್ರಣದಲ್ಲಿ ಗಾತ್ರಾನುಸಾರ 91% ಆಲ್ಕೊಹಾಲ್ ಇರುತ್ತದೆ. ಪೆಟ್ರೋಲಿಯಂ ಎಣ್ಣೆಯಲ್ಲಿ ಹಲವು ಭಾರವಾದ ಹೈಡ್ರೊಕಾರ್ಬನುಗಳಿರುತ್ತವೆ. ಇವನ್ನು ವಿಭಜನಾತಂತ್ರಕ್ಕೆ ಗುರಿಪಡಿಸಿದಾಗ ದೊರೆಯುವ ಕಿರಿಯ ಹೈಡ್ರೊಕಾರ್ಬನುಗಳಲ್ಲಿ ಪ್ರೊಪೈಲೀನ್ ಸಹ ಒಂದು. ಇದನ್ನು 90%-95% ಸಲ್ಫ್ಯೂರಿಕ್ ಆಮ್ಲದಲ್ಲಿ ವಿಲೀನಗೊಳಿಸಿ ಅನಂತರ ನೀರು ಸೇರಿಸಿ ಕುದಿಸಿದರೆ ಐಸೊಪ್ರೊಪೈಲ್ ಆಲ್ಕೊಹಾಲ್ ಬಟ್ಟಿ ಇಳಿಯುವುದು; ಸ್ವಲ್ಪ ಐಸೊಪ್ರೊಪೈಲ್ ಈಥರ್ ಉಪವಸ್ತುವಾಗಿ ದೊರೆಯುವುದು. ಈ ಕ್ರಿಯೆಗಳನ್ನು ಕೆಳಕಂಡ ಸಮೀಕರಣಗಳು ಸೂಚಿಸುತ್ತವೆ.
ತಯಾರಿಕೆ
ಬದಲಾಯಿಸಿಅಸಿಟೋನನ್ನು ಸೋಡಿಯಂ ಅಮಾಲ್ಗಮ್‍ನಿಂದ ಅಪಕರ್ಷಿಸಿದಾಗ ಅಥವಾ 1500-1800 ಸೆಂ. ಉಷ್ಣತೆಯಲ್ಲಿ ಒತ್ತಡ ಹೇರಿ ನಿಕ್ಕಲ್ ಅಥವಾ ತಾಮ್ರ ವೇಗವರ್ಧಕದ ಸಮ್ಮುಖದಲ್ಲಿ ಹೈಡ್ರೊಜನನ್ನು ಕೂಡಿಸಿದಾಗ ಐಸೊಪ್ರೊಪೈಲ್ ಆಲ್ಕೊಹಾಲ್ ಉಂಟಾಗುವುದು.
ಲಕ್ಷಣಗಳು
ಬದಲಾಯಿಸಿಐಸೊಪ್ರೊಪೈಲ್ ಆಲ್ಕೊಹಾಲಿಗೆ ದ್ವಿತೀಯಕ ಆಲ್ಕೊಹಾಲುಗಳಿಗೆ ಇರಬೇಕಾದ ಸಮಸ್ತ ಲಕ್ಷಣಗಳೂ ಇವೆ.
ಉಪಯೋಗಗಳು
ಬದಲಾಯಿಸಿಇದರ ಮುಖ್ಯ ಉಪಯೋಗ ಅಸಿಟೋನ್ ತಯಾರಿಕೆಯಲ್ಲಿ. ಸ್ಫೋಟಕಗಳು ಮತ್ತು ಪ್ಲಾಸ್ಟಿಕ್ಕುಗಳ ತಯಾರಿಕೆಯಲ್ಲಿ ಅಗಾಧ ಪ್ರಮಾಣದ ಅಸಿಟೋನ್ ಬೇಕಾಗುತ್ತದೆ. 3000ಸೆಂ. ಉಷ್ಣತೆಗೆ ಕಾಯಿಸಿದ ತಾಮ್ರದ ತಂತಿಬಲೆಯೊಂದರ ಮೂಲಕ ಐಸೊಪ್ರೊಪೈಲ್ ಆಲ್ಕೊಹಾಲಿನ ಆವಿಯನ್ನು ಹಾಯಿಸಿ ಆಸಿಟೋನ್ ಪಡೆಯುತ್ತಾರೆ. ಐಸೊಪ್ರೊಪೈಲ್ ಆಲ್ಕೊಹಾಲ್ ನೀರು ಘನೀಭವಿಸುವುದನ್ನು ವಿರೋಧಿಸುತ್ತದೆ. ಆದ್ದರಿಂದ ಮೋಟಾರ್ ವಾಹನಗಳಲ್ಲಿ ಬಳಸುವ ನೀರು ಹೆಪ್ಪುಗಟ್ಟದಿರಲು ಇದನ್ನು ನೀರಿನೊಡನೆ ಸೇರಿಸುತ್ತಾರೆ. ಉಗುರಿನ ಪಾಲಿಷ್, ಕ್ಷೌರಕ್ಕೆ ಉಪಯೋಗಿಸುವ ಲೋಷನ್, ಅಂಗರಾಗಗಳು, ಸುಗಂಧಗಳು, ಥೈಮಾಲ್ ಇತ್ಯಾದಿಗಳ ತಯಾರಿಕೆಯಲ್ಲಿ ಐಸೊಪ್ರೊಪೈಲ್ ಆಲ್ಕೊಹಾಲಿನ ಪಾತ್ರವಿದೆ. ಇದರ ಎಸ್ಟರುಗಳು ಮೆರುಗೆಣ್ಣೆಗಳಿಗೆ (ಲಾಕ್ವರ್ಸ್) ಉತ್ತಮ ಲೀನಕಾರಿಗಳು.
ಉಲ್ಲೇಖಗಳು
ಬದಲಾಯಿಸಿ- ↑ Reeve, W.; Erikson, C.M.; Aluotto, P.F. (1979). "A new method for the determination of the relative acidities of alcohols in alcoholic solutions. The nucleophilicities and competitive reactivities of alkoxides and phenoxides". Can. J. Chem. 57 (20): 2747–2754. doi:10.1139/v79-444.
{{cite journal}}
: CS1 maint: multiple names: authors list (link) - ↑ ೨.೦ ೨.೧ Yaws, C.L. (1999). Chemical Properties Handbook. McGraw-Hill. ISBN 0-07-073401-1.
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedPGCH
ಬಾಹ್ಯ ಸಂಪರ್ಕಗಳು
ಬದಲಾಯಿಸಿ- CDC – NIOSH Pocket Guide to Chemical Hazards - Isopropyl alcohol
- Environmental Health Criteria 103: 2-Propanol