ಐರೋಪ್ಯ ಸಮುದಾಯಗಳು

ಐರೋಪ್ಯ ಸಮುದಾಯಗಳು ಬೆಲ್ಜಿಯಂ, ಫ್ರಾನ್ಸ್‌, ಜರ್ಮನ್ ಗಣರಾಜ್ಯ, ಇಟಲಿ, ಲಕ್ಸೆಂಬರ್ಗ್ ಮತ್ತು ನೆದರ್ಲೆಂಡ್ಸ್‌ ರಾಷ್ಟ್ರಗಳು ಸೇರಿ ರಚಿಸಿಕೊಂಡಿರುವ ಮೂರು ಸಮುದಾಯಗಳು (ಯುರೋಪಿಯನ್ ಕಮ್ಯೂನಿಟೀಸ್) ಐರೋಪ್ಯ ಆರ್ಥಿಕ ಸಮುದಾಯ. ಐರೋಪ್ಯ ಕಲ್ಲಿದ್ದಲು ಮತ್ತು ಉಕ್ಕು ಸಮುದಾಯ ಮತ್ತು ಐರೋಪ್ಯ ಪರಮಾಣು ಶಕ್ತಿ ಸಮುದಾಯ (ವಿವರಗಳಿಗೆ ಆಯಾ ಶೀರ್ಷಿಕೆಗಳನ್ನು ನೋಡಿ).

ಈ ಮೂರು ಸಂಸ್ಥೆಗಳೂ ಕಾನೂನಿನ ದೃಷ್ಟಿಯಿಂದ ಪ್ರತ್ಯೇಕವಾದರೂ ಇವಕ್ಕೆಲ್ಲ ಸಮಾನವಾದ ಕೆಲವು ವ್ಯವಸ್ಥೆಗಳಿವೆ. ಐರೋಪ್ಯ ಸಂಸತ್ತು, ನ್ಯಾಯಾಲಯ ಇವು ಎಲ್ಲಕ್ಕೂ ಒಂದೇ. ನ್ಯಾಯಿಕ, ಸಾಂಖ್ಯಿಕ ಮತ್ತು ಸಮಾಚಾರ ಸೇವಾ ವ್ಯವಸ್ಥೆಗಳೂ ಸಮಾನವೇ. ಸಂಬಂಧಿಸಿದ ರಾಷ್ಟ್ರಗಳು 1965ರಲ್ಲಿ ಸಹಿ ಹಾಕಲಾದ ಕೌಲಿಗೆ ಅನುಗುಣವಾಗಿ ಈಗ ಮೂರು ಸಮುದಾಯಗಳಿಗೂ ಒಂದೇ ಮಂತ್ರಿ ಸಮಿತಿಯೂ ಒಂದೇ ಆಯೋಗವೂ ಇವೆ. ಪಶ್ಚಿಮ ಯುರೋಪಿನ ರಾಷ್ಟಗಳು ತಮ್ಮ ನಡುವಣ ಗೋಡೆಗಳನ್ನೆಲ್ಲ ಕೆಳತಳ್ಳಿ ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ಇವು ಒಂದು ಸಶಕ್ತ ಸಮುದಾಯವಾಗಿ ಬಾಳುವ ಹಾಗೆ ಮಾಡಲು ಇದು ಮೊದಲ ಘಟ್ಟ. ಮೂರು ಐರೋಪ್ಯ ಸಮುದಾಯಗಳಿಗೂ ಸಮಾನವಾದ ಸಂಸ್ಥೆಗಳ ರೂಪುರೇಷೆಗಳನ್ನು ಮುಂದೆ ಕೊಟ್ಟಿದೆ.

ಐರೋಪ್ಯ ಸಂಸತ್ತು

ಬದಲಾಯಿಸಿ

ಮೂರೂ ಸಮುದಾಯಗಳ ನಿರ್ವಹಣಾಂಗಗಳ ಮೇಲೆ ಉಸ್ತುವಾರಿ ಮಾಡುವುದೂ ಸಮುದಾಯಗಳ ವಾರ್ಷಿಕ ಸಾಮಾನ್ಯ ವರದಿಗಳನ್ನೂ ಅವಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನೂ ಕುರಿತು ಚರ್ಚಿಸುವುದೂ ಇದರ ಉದ್ದೇಶ. ಇದಕ್ಕಾಗಿ ಸಂಸತ್ತು ಅನೇಕ ಸ್ಥಾಯೀ ಸಮಿತಿಗಳನ್ನು ರಚಿಸಿದೆ. ಆರು ರಾಷ್ಟ್ರಗಳ ಸಂಸತ್ತುಗಳಿಂದ ಇದಕ್ಕೆ ಸದಸ್ಯರು ನಾಮಕರಣಗೊಳ್ಳುತ್ತಾರೆ.

ನ್ಯಾಯಾಲಯ:

ಬದಲಾಯಿಸಿ

ಮೂರು ಸಮುದಾಯಗಳನ್ನು ಸ್ಥಾಪಿಸಿರುವ ಕೌಲುಗಳ ಅನ್ವಯದ ಬಗ್ಗೆ ಕ್ರಮಕೈಕೊಳ್ಳುವುದೂ ರಾಷ್ಟ್ರಗಳ ನಡುವೆ ಉದ್ಭವಿಸಬಹುದಾದ ವ್ಯಾಜ್ಯಗಳ ಬಗ್ಗೆ ತೀರ್ಪು ನೀಡುವುದೂ ಇದರ ಗುರಿ. ನ್ಯಾಯಾಲಯದ ಅಧ್ಯಕ್ಷನನ್ನು ಸದಸ್ಯರಾಷ್ಟ್ರಗಳು ನೇಮಿಸುತ್ತವೆ. []

ಮಂತ್ರಿ ಸಮಿತಿ

ಬದಲಾಯಿಸಿ

ಸದಸ್ಯರಾಷ್ಟ್ರಗಳ ಆರ್ಥಿಕನೀತಿಗಳ ಸಂಯೋಜನೆ ಮತ್ತು ಕೌಲುಗಳ ಅನ್ವಯಕ್ಕೆ ಅಗತ್ಯವಾದ ತೀರ್ಮಾನ ಕೈಗೊಳ್ಳುವುದಕ್ಕಾಗಿ ಇದು ಸ್ಥಾಪಿತವಾಗಿದೆ. ಪ್ರತಿ ರಾಷ್ಟ್ರವೂ ಒಬ್ಬ ಪ್ರತಿನಿಧಿಯನ್ನು ಇದಕ್ಕೆ ನಾಮಕರಣ ಮಾಡುತ್ತದೆ.

ಐರೋಪ್ಯ ಸಮುದಾಯ ಆಯೋಗ

ಬದಲಾಯಿಸಿ

ಇದರ ವ್ಯಾಪ್ತಿ ವಿಶಾಲ. ಕೌಲಿನ ಅನ್ವಯದ ಸ್ಥೂಲ ಪರಿಶೀಲನೆಯೇ ಅಲ್ಲದೆ ವ್ಯತ್ಯಸ್ತ ಹಾಗೂ ವಿಶಿಷ್ಟ ಪರಿಸ್ಥಿತಿಗಳಿಗೆ ಅನುಗುಣವಾಗಿ ಆಗಿಂದಾಗ್ಗೆ ಸದಸ್ಯರಾಷ್ಟ್ರಗಳಿಗೆ ಸಲಹೆ ನೀಡುವುದು ಉದ್ದೇಶ. ಇದರ ಸದಸ್ಯರೂ ಕೌಲಿನ ರಾಷ್ಟ್ರಗಳಿಂದಲೇ ನೇಮಕವಾಗುತ್ತಾರೆ. *



ಉಲ್ಲೇಖಗಳು

ಬದಲಾಯಿಸಿ
  1. http://www.maadhyamanet.com/coverstory/page/15[ಶಾಶ್ವತವಾಗಿ ಮಡಿದ ಕೊಂಡಿ]