ಐರಿಸ್
ಐರಿಸ್ | |
---|---|
Iris sibirica | |
Scientific classification | |
Unrecognized taxon (fix): | Iris |
Type species | |
Iris germanica L.
| |
Subgenera | |
Synonyms | |
Belamcanda |
ಐರಿಸ್: ಇರಿಡೇಸಿ ಕುಟುಂಬಕ್ಕೆ ಸೇರಿದ ಒಂದು ಸಸ್ಯಜಾತಿ. ಕಾಮನ ಬಿಲ್ಲಿನಂತೆ ರಂಗುರಂಗಾದ ಹೂಗಳಿವೆಯಾಗಿ ಈ ಹೆಸರು (ಐರಿಸ್-ಕಾಮನಬಿಲ್ಲು). ಇದು ಸುಂದರವಾದ ಹೂ ಬಿಡುವ ಲಶುನ ಸಸ್ಯ. ಆಕರ್ಷಕವಾದ ಈ ಸಸ್ಯ ಆರ್ಕಿಡ್ಡಿನಂತೆ ಕಾಣುತ್ತದೆ. ಇದನ್ನು ಸುಲಭವಾಗಿ ಎಲ್ಲ ಕಡೆಗಳಲ್ಲೂ ಬೆಳೆಸಬಹುದಾದ್ದರಿಂದ ಇದನ್ನು ಬಡವನ ಆರ್ಕಿಡ್ಡು ಎಂದೂ ಕರೆಯುತ್ತಾರೆ. ಇದನ್ನು ಕುಂಡಸಸ್ಯ, ಕಲ್ಲೇರಿ ಸಸ್ಯ ಮತ್ತು ಮನೆ ಅಲಂಕಾರ ಸಸ್ಯಗಳನ್ನಾಗಿ ಬೆಳೆಸುತ್ತಾರೆ. ಹೂಗಳನ್ನು ಬಿಡಿ ಹೂವಾಗಿಯೂ ಕಳಶದ ಅಲಂಕಾರದ ಹೂವಾಗಿಯೂ ಉಪಯೋಗಿಸುತ್ತಾರೆ. [೧]
ಐರಿಸ್ ಜಾತಿ
ಬದಲಾಯಿಸಿಐರಿಸ್ ಜಾತಿಯಲ್ಲಿ 200ಕ್ಕೂ ಹೆಚ್ಚು ಪ್ರಭೇದಗಳಿವೆ. ಇವಕ್ಕೆಲ್ಲ ಗುಪ್ತಕಾಂಡಗಳು (ರೈಜೋóಮ್ಸ್) ಇವೆ. ನೇರವಾಗಿ ಸರಳವಾಗಿ ಅಥವಾ ಕವಲೊಡೆದು ಬೆಳೆಯುವ ಈ ಸಸ್ಯಗಳ ತುದಿಯಲ್ಲಿ ಹೂ ಮೊಳೆಯುತ್ತದೆ. ಸಾಮಾನ್ಯವಾಗಿ ಬೇರು ಮೂಲಕವೇ ಎಲೆ. ಕೆಲವು ಎಲೆಗಳು ಮಾತ್ರ ಕಾಂಡದ ಮೇಲಿರುತ್ತವೆ. ಎಲೆಂiÀi ಆಕಾರ ಕತ್ತಿಯಂತೆ ನೀಳ. ಹೂ ಒಂಟಿ ಯಾಗಿಯೂ ಗೊಂಚಲಾಗಿಯೂ ಇರುವುದುಂಟು. ಗೊಂಚಲು ಅಂತ್ಯಾರಂಬಿ, ಇಲ್ಲವೆ ಮಿಶ್ರ ಮಾದರಿಯದು. ಒಂದೊಂದು ಪ್ರಭೇದದಲ್ಲೂ ಹೂವಿನ ಬಣ್ಣ ಒಂದೊಂದು ರೀತಿ. ಹೂವನ್ನು ಎರಡು ಉಪದಳಗಳು ಆವರಿಸಿವೆ. ಹೂಗಳು ದ್ವಿಲಿಂಗಿಗಳು. ಹೂ ರಚನೆ ಸಾಮಾನ್ಯ ರೀತಿಯದು. ಪುಷ್ಪಪತ್ರ ಗಳಂತೆ ದಳಗಳೂ ಸಂಯೋಗ ವಾಗಿರುತ್ತವೆ. ಒಂದೇ ಸ್ವರೂಪವನ್ನು (ಪೆರಿಯಾಂತ್) ತಾಳಿವೆ. ಇವು ಆರಾರರ ಎರಡು ವೃತ್ತಗಳಲ್ಲಿವೆ; ಕೇಸರಗಳು 3; ಬಹುಬೀಜಗಳ ಮೂರು ಕೋಶದ ಕೆಳ ಅಂಡಾಶಯವಿದೆ. ಹಣ್ಣು 3 ಅಥವಾ 6 ಮುಖದ ಕ್ಯಾಪ್ಸೂಲ್ ಮಾದರಿಯದು.[೨]
ಜಾತಿಯ ಪ್ರಭೇದಗಳು
ಬದಲಾಯಿಸಿಈ ಜಾತಿಯ ಹಲವು ಪ್ರಭೇದಗಳಲ್ಲಿ ಉದ್ಯಾನಗಾರಿಕೆಯ ದೃಷ್ಟಿಯಿಂದ ಐರಿಸ್ ಚೈನೆನ್ಸಿಸ್, ಐರಿಸ್ ಜಮಾರ್ಯ್‌ನಿಕ, ಐರಿಸ್ ಜಾಪೋನಿಕ, ಐರಿಸ್ ಸೈಬೀರಿಕ, ಐರಿಸ್ ಹಿಸ್ಪ್ಯಾನಿಕ, ಐರಿಸ್ ಪ್ಲೊರೆಂಟೀನ, ಐರಿಸ್ ಸಿಪಿಯೋಡೆಸ್ ಮತ್ತು ಐರಿಸ ನೆಪಾಲೆನ್ಸಿಸ್ ಎಂಬುವು ಮುಖ್ಯವಾದವು.
- ಐರಿಸ್ ಚೈನೆನ್ಸಿಸ್ ಪ್ರಭೇದ ಸಸ್ಯ ಊದಾ ಮತ್ತು ನೀಲಿಮಿಶ್ರಿತ ಬಣ್ಣದ ಹೂಗಳನ್ನು ಬಿಡುತ್ತದೆ. ಇದು ತಗ್ಗುಪ್ರದೇಶಗಳಲ್ಲಿ ಬೆಳೆಯಲು ಯೋಗ್ಯವಾಗಿದೆ.
- ಐರಿಸ್ ಜಮಾರ್ಯ್‌ನಿಕ ಸಸ್ಯದ ಹೂಗಳು ನೀಲಿ, ನಸುಗೆಂಪು ಅಥವಾ ಬಿಳಿಯ ಬಣ್ಣದವು. ಏಪ್ರಿಲ್-ಮೇ ತಿಂಗಳುಗಳಲ್ಲಿ ಹೂ ಬಿಡುತ್ತದೆ.
- ಐರಿಸ್ ಜಾಪೋನಿಕ ಪ್ರಭೇದದ ಸಸ್ಯ ಬಿಳುಪು, ನಸುಗೆಂಪು, ಕೆಂಪು, ನೀಲಿ, ಊದಾ ಮುಂತಾದ ಹಲವು ಬಣ್ಣಗಳಲ್ಲಿ ಹೂ ಬಿಡುತ್ತದೆ. ದೊಡ್ಡ ಗಾತ್ರದ ಹೂಗಳಿಗೆ ಈ ಸಸ್ಯ ಪ್ರಸಿದ್ಧಿಯಾಗಿದೆ.
- ಸಾಮಾನ್ಯವಾಗಿ ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಹೂ ಅರಳುತ್ತದೆ.
- ಐರಿಸ್ ಸೈಬೀರಿಕ ಸುಂದರವಾದ ಕಿರಿದಾದ ಎಲೆಗಳ ಮಧ್ಯದಲ್ಲಿ ಹೊಳಪಾದ ನೀಲಿ ಹೂಗಳನ್ನು ಬಿಡುವ ಪ್ರಭೇದ.
- ಐರಿಸ್ ಹಿಸ್ಪ್ಯಾನಿಕ ಪ್ರಭೇದ ನೀಲಿ, ಹಳದಿ, ಬಿಳುಪು, ಅತಿ ನಸುಗೆಂಪು ಮುಂತಾದ ಬಣ್ಣಗಳ ಹೂ ಬಿಡುತ್ತದೆ.
- ಐರಿಸ್ ಪ್ಲೊರೆಂಟೀನ ಪ್ರಭೇದದ ಸಸ್ಯಗಳು ತಂಪಾದ ಹವಾಗುಣಕ್ಕೆ ಹೊಂದಿಕೊಂಡು ಬೆಳೆಯುವ ಗುಣವುಳ್ಳವು. ಬಿಳುಪು ಬಣ್ಣದ ಹೂಗಳನ್ನು ಬಿಡುತ್ತವೆ.
- ಐರಿಸ್ ಸಿಪಿಯೋಡೆಸ್ ಪ್ರಭೇದದ ಸಸ್ಯ ಸುಮಾರು 0.6096 ಮೀ ಎತ್ತರ ಬೆಳೆದು ವಿವಿಧ ಬಣ್ಣದ ಹೂಗಳನ್ನು ಬಿಡುತ್ತದೆ.
- ಐರಿಸ್ ನೆಪಾಲೆನ್ಸಿಸ್ ಪ್ರಭೇದ ಹಿಮಾಲಯ ಸರಹದ್ದು ಪ್ರದೇಶಗಳಲ್ಲಿ ಹೆಚ್ಚಿನ ಬೇಸಾಯದಲ್ಲಿದೆ. ಇದು ನಸು-ಊದಾ ಬಣ್ಣದ ಹೂಗಳನ್ನು ಬಿಡುತ್ತದೆ.
ಸಸ್ಯವಿಜ್ಞಾನ
ಬದಲಾಯಿಸಿಒಂದೊಂದು ಪ್ರಭೇದಕ್ಕೂ ಬೆಳೆವಣಿಗೆಯಲ್ಲಿ ವ್ಯತ್ಯಾಸವಿರುವುದರಿಂದ ಇವು ಸಸ್ಯವಿಜ್ಞಾನದಲ್ಲಿ ಪ್ರಾಮುಖ್ಯ ಪಡೆದಿವೆ. ಇವನ್ನು ಗುಪ್ತಕಾಂಡದಂತೆ ಬೇರುಬಿಡುವ ಅಥವಾ ಎತ್ತರವಾಗಿ ಬೆಳೆಯುವ ವಿಧ, ಕುಳ್ಳಾಗಿ ಬೆಳೆಯುವ ಅಥವಾ ಜರ್ಮನ್ ವಿಧ. ಲಶುನ ಬೇರು ಬಿಡುವ ಅಥವಾ ಡಚ್, ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ವಿಧ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು. ಗುಪ್ತಕಾಂಡದಂತೆ ಬೇರು ಬಿಡುವ ವಿಧಗಳ ಬೇಸಾಯ ಸುಲಭ. ಹೆಚ್ಚು ತೇವಾಂಶವಿರುವ ಒಣ ಹವಾಗುಣದ ಫಲವತ್ತಾದ ಮಣ್ಣಿನಲ್ಲಿ ಇವು ಸಮೃದ್ಧಿಯಾಗಿ ಬೆಳೆಯುತ್ತವೆ. ಇವನ್ನು ಗುಪ್ತಕಾಂಡಗಳಿಂದ ಸುಲಭವಾಗಿ ವೃದ್ಧಿ ಮಾಡಬಹುದು. ಈ ವಿಧದಲ್ಲಿ ಐರಿಸ್ ನೆಪಾಲೆನ್ಸಿಸ್, ಐರಿಸ್ ಕುಮಾವೊನೆನ್ಸಿಸ್ ಮತ್ತು ಐರಿಸ್ ಕಾಶ್ಮೀರಿಯಾನ ಪ್ರಭೇದಗಳು ಸೇರಿವೆ. ಇವುಗಳ ಮುಖ್ಯವಾದ ತಳಿಗಳು ಎಂದರೆ ಬಿಳುಪಾದ ಹೂ ಬಿಡುವ ವೈಟ್ ಸಿಟಿ, ಹಳದಿ ಹೂ ಬಿಡುವ ಸಹರ, ಅತೀ ಹಳದಿ ಹೂ ಬಿಡುವ ಸೆಯಿಂಟ್ರೋಲಕ್ಸ್, ತಿಳಿನೀಲಿ ಬಣ್ಣದ ಹೂ ಬಿಡುವ ಅಲೈನ್, ನೀಲಿ ಬಣ್ಣದ ಹೂ ಬಿಡುವ ಸಿರಿಯಸ್, ಕಪ್ಪು ಅಥವಾ ಕಂದು ಬಣ್ಣದ ಹೂ ಬಿಡುವ ಬ್ಲಾಕ್ ಪ್ಯಾಂತರ್, ಕಡುಗೆಂಪು ಬಣ್ಣದ ಹೂ ಬಿಡುವ ಕೊನಸ್ಟನ್ಸ್ ಮೇಯರ್, ತಾಮ್ರದ ಕೆಂಪು ಬಣ್ಣದ ಹೂ ಬಿಡುವ ಹೆಸ್ಟರ್ಪ್ರಿನ್, ಚಿನ್ನದ ಕಂದು ಬಣ್ಣದ ಹೂ ಬಿಡುವ ಕಿಂಗ್ ಮೀಡಸ್ ಮುಂತಾದುವುಗಳು ಹೆಚ್ಚಿನ ಬೇಸಾಯದಲ್ಲಿದೆ. ಕುಳ್ಳಾಗಿ ಬೆಳೆಯುವ ಐರಿಸ್ ಸಸ್ಯಗಳಲ್ಲಿ ಮುಖ್ಯವಾದ ಪ್ರಭೇದಗಳೆಂದರೆ ಐರಿಸ್ ಜಾಪೋನಿಕ ಮತ್ತು ಐರಿಸ್ ಸೈಬೀರಿಕ. ಇವುಗಳಲ್ಲಿ ಮುಖ್ಯವಾಗಿ ಬೇಸಾಯದಲ್ಲಿರುವ ತಳಿಗಳನ್ನು ಮುಂದೆ ಕಾಣಿಸಿದೆ. ರಕ್ತಬಣ್ಣದ ಹೂ ಬಿಡುವ ಬರ್ಗಂಡಿ, ಕಪ್ಪು ಮಿಶ್ರಿತ ಕಂದುಬಣ್ಣದ ಹೂ ಬಿಡುವ ಮರೊಕಯಿನ್, ಹಳದಿ ಬಣ್ಣದ ಹೂ ಬಿಡುವ ಆರೆಂಜ್ ಕ್ವೀನ್, ನೀಲಿ ಬಣ್ಣದ ಹೂ ಬಿಡುವ ಪ್ರೀನ್ ಲೂಯಿಸ್. ಈ ತಳಿಗಳು ಹೆಚ್ಚು ಸುಣ್ಣದ ಅಂಶವಿರುವ ಮಣ್ಣಿನಲ್ಲಿ ಯಶಸ್ವಿಯಾಗಿ ಬೆಳೆಯುವುದಿಲ್ಲ. ಲಶುನ ಬೇರು ಬಿಡುವ, ಡಚ್, ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ಸಸ್ಯಗಳು ಅಂಚು ಸಸ್ಯಗಳನ್ನಾಗಿ ಬೆಳೆಸಲು ಯೋಗ್ಯವಾದುವು. ಇವುಗಳ ಬಿಡಿ ಹೂಗಳು ಪ್ರಸಿದ್ಧಿಯಾಗಿವೆ.
ಇಂಗ್ಲಿಷ್ ತಳಿಗಳ ಬೇಸಾಯ
ಬದಲಾಯಿಸಿಇಂಗ್ಲಿಷ್ ತಳಿಗಳ ಬೇಸಾಯ ಹೆಚ್ಚು ತೇವಾಂಶವಿರುವ ಮತ್ತು ತಂಪಾದ ಹವಾಗುಣದಲ್ಲಿ ಸುಗಮವಾಗುತ್ತದೆ; ಡಚ್ ಮತ್ತು ಸ್ಪ್ಯಾನಿಷ್ ಸಸ್ಯಗಳಿಗೆ ಹೆಚ್ಚಿನ ತೇವಾಂಶ ಅಗತ್ಯವಿಲ್ಲ. ಇವುಗಳ ಮುಖ್ಯ ತಳಿಗಳನ್ನು ಮುಂದೆ ಕಾಣಿಸಿದೆ. ನಸುನೀಲಿ ಬಣ್ಣದ ಹೂ ಬಿಡುವ ಚಾಂಪಿಯನ್; ಕಂಚು ಮಿಶ್ರಿತ ನೀಲಿ ಬಣ್ಣದ ಹೂ ಬಿಡುವ ಬ್ರಾಂಜ್ó ಬ್ಯೂಟಿ, ನೀಲಿ, ಹಳದಿ ಮತ್ತು ಕಿತ್ತಲೆ ಬಣ್ಣಗಳ ಹೂ ಬಿಡುವ ಹಾರ್ಮೊನಿ, ಅತಿನೀಲಿ ಬಣ್ಣದ ಹೂ ಬಿಡುವ ಇಂಪರೇಟರ್, ಹಾಲಿನ ಬಿಳುಪು ಬಣ್ಣದ ಹೂ ಬಿಡುವ ಇಂಪರೇಟರ್, ಹಾಲಿನ ಬಿಳುಪು ಬಣ್ಣದ ಹೂ ಬಿಡುವ ಜೋನ್ ಆಫ್ ಆರ್ಕ್, ನಸುಹಳದಿ ಬಣ್ಣದ ಹೂ ಬಿಡುವ ಲೆಮನ್ಕ್ವೀನ್, ನೀಲಿ ಬಣ್ಣದ ಹೂ ಬಿಡುವ ವೆಡ್ಜುಹುಡ್, ಬಿಳಿ ಹೂ ಬಿಡುವ ಎಕ್ಸ್‌ಲ್ಷಿಯರ್. ಸ್ಪ್ಯಾನಿಷ್ ತಳಿಗಳಲ್ಲಿ ಹೆಚ್ಚಿನ ಬೇಸಾಯದಲ್ಲಿರುವ ತಳಿಗಳು ಎಂದರೆ, ಹಳದಿ ಬಣ್ಣದ ಹೂ ಬಿಡುವ ಜಿಪ್ಸಿ ಗರ್ಲ್, ಅತಿಯಾದ ನೀಲಿಬಣ್ಣದ ಹೂ ಬಿಡುವ ಕಿಂಗ ಆಫ್ ದಿ ಬ್ಲೂ, ಕಂಚು ಮಿಶ್ರಿತ ಕಂದುಬಣ್ಣದ ಹೂ ಬಿಡುವ ಲಿ ಮೊಗೊಲ್, ಕೆನೆ ಬಣ್ಣದ ಹೂ ಬಿಡುವ ಸಲ್ಫರ್ ಬ್ಯೂಟಿ. ಇಂಗ್ಲಿಷ್ ಐರಿಸ್ ತಳಿಗಳಲ್ಲಿ ಹೆಚ್ಚಿನ ಬೇಸಾಯದಲ್ಲಿರುವ ತಳಿಗಳನ್ನು ಮುಂದೆ ಕಾಣಿಸಿದೆ. ಅತಿಯಾದ ಕಂದು ಬಣ್ಣದ ಹೂ ಬಿಡುವ ಮ್ಯಾನ್ಸ್‌ಫೀಲ್ಡ್, ಬಿಳಿ ಹೂ ಬಿಡುವ ಮೌಂಟ್ ಬ್ಲಾಂಕ್, ಅತಿಯಾದ ನೀಲಿ ಬಣ್ಣದ ಹೂ ಬಿಡುವ ಡಲ್ಪ್ಟ್‌ಸ್ ಬ್ಲೂ ಮತ್ತು ಬಣ್ಣದ ಹೂ ಬಿಡುವ ಕ್ವೀನ್ ಆಫ್ ದಿ ಬ್ಲೂ.ಐರಿಸ್ ಸಸ್ಯಗಳನ್ನು ಗುಪ್ತಕಾಂಡದ ತುಂಡು ಮತ್ತು ಲಶುನಗಳಿಂದ ವೃದ್ಧಿ ಮಾಡಬಹುದು. ಬೀಜಗಳಿಂದಲೂ ವೃದ್ಧಿ ಸಾಧ್ಯ.ಐರಿಸ್ ಸಸ್ಯಗಳು ಸಮುದ್ರಮಟ್ಟಕ್ಕಿಂತ 3,000' ಎತ್ತರದವರೆಗೆ ಸುಲಭವಾಗಿ ಬೆಳೆಯುತ್ತವೆ. ಫಲವತ್ತಾಗಿರುವ ಮತ್ತು ಜೌಗಿಲ್ಲದ ಮರಳುಗೋಡು ಮಣ್ಣು ಬೇಸಾಯಕ್ಕೆ ಶ್ರೇಷ್ಠವಾದುದು.