ಐನ್‍ಸ್ಟೈನ್ (ಏಕಮಾನ)
ಐನ್‌ಸ್ಟೈನ್ (ಚಿಹ್ನೆ E ) ಎಂಬುದು ಫೋಟಾನ್‌ಗಳ ಒಂದು ಮೋಲ್‌ನಲ್ಲಿನ ಶಕ್ತಿ ಎಂದು ವ್ಯಾಖ್ಯೆ ಮಾಡಲಾಗಿರುವ ಏಕಮಾನವಾಗಿದೆ (6.022 × 1023 ಫೋಟಾನ್ಗಳು). [೧] [೨] ಶಕ್ತಿಯು ತರಂಗಾಂತರಕ್ಕೆ ವಿಲೋಮ ಅನುಪಾತದಲ್ಲಿರುವುದರಿಂದ, ಈ ಏಕಮಾನವು ಆವರ್ತನಾಂಕವನ್ನು ಅವಲಂಬಿಸಿರುತ್ತದೆ. ಈ ಘಟಕವು ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆ (SI) ಯ ಭಾಗವಾಗಿಲ್ಲ ಮತ್ತು ಜೌಲ್ ಎಂಬ ಏಕಮಾನವು ಇರುವ ಕಾರಣ ಅನಗತ್ಯವಾಗಿದೆ.
ದ್ಯುತಿಸಂಶ್ಲೇಷಣೆಯ ಅಧ್ಯಯನಗಳಲ್ಲಿ ಐನ್‍ಸ್ಟೈನ್ ಅನ್ನು ಕೆಲವೊಮ್ಮೆ ಫೋಟಾನ್‍ಳ ಒಂದು ಮೋಲ್‍ನ ವಿಭಿನ್ನ ವ್ಯಾಖ್ಯೆಗಳೊಡನೆ ಬಳಸಲಾಗುತ್ತದೆ. [೩] ಅಂತೆಯೇ, ದ್ಯುತಿಸಂಶ್ಲೇಷಕವಾಗಿ ಸಕ್ರಿಯ ವಿಕಿರಣವು ಹಿಂದೆ ಸಾಮಾನ್ಯವಾಗಿ ಪ್ರತಿ ಸೆಕೆಂಡಿಗೆ ಪ್ರತಿ ಚದರ ಮೀಟರ್‌ಗೆ ಇಂತಿಷ್ಟು ಮೈಕ್ರೊಐನ್‌ಸ್ಟೈನ್ ಎಂದು ವರದಿ ಮಾಡಲಾಗುತ್ತಿತ್ತು(μE m -2 s -1 ). ಈ ಬಳಕೆಯು SI ನ ಭಾಗವಾಗಿಲ್ಲ ಮತ್ತು ಈ ರೀತಿಯಲ್ಲಿ ಬಳಸಿದಾಗ ಅದು ಮೋಲ್‌ನೊಂದಿಗೆ ಅನಗತ್ಯವಾಗಿರುತ್ತದೆ.
ಈ ಏಕಮಾನವು ಪ್ರಮಾಣಿತ ವ್ಯಾಖ್ಯೆಯನ್ನು ಹೊಂದಿಲ್ಲ ಮತ್ತು SI ವ್ಯವಸ್ಥೆಯ ಭಾಗವಾಗಿಲ್ಲದ ಕಾರಣ, ಅದರ ಬಳಕೆಯನ್ನು ಮಾಡದಿರಲು ಸೂಚಿಸಲಾಗುತ್ತದೆ.[೩]
ಈ ಏಕಮಾನಕ್ಕೆ ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್‌ಸ್ಟೈನ್ ಅವರ ಹೆಸರನ್ನಿಡಲಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ W. Albert Noyes and P. A. Leighton, The photochemistry of gases. p. 14. Rochester, New York. 1940. Viking
- ↑ Albrecht Folsing, Albert Einstein: a biography. p. 299. New York. 1997. Viking
- ↑ ೩.೦ ೩.೧ Incoll, L. D., S. P. Long, and M. A. Ashmore. 1981. "SI units in publications in plant science". Commentaries in Plant Science. 2: pp. 83–96.