ಐಎನ್ಎ ಹುತಾತ್ಮರ ಸ್ಮಾರಕ

ಐಎನ್ಎ ಹುತಾತ್ಮರ ಸ್ಮಾರಕ ಸಂಕೀರ್ಣವು ಭಾರತದ ಮೊಯಿರಾಂಗ್‍ನಲ್ಲಿರುವ ಒಂದು ಯುದ್ಧ ಸ್ಮಾರಕವಾಗಿದೆ. ಇದು ಭಾರತೀಯ ರಾ‌‌ಷ್ಟ್ರೀಯ ಸೇನೆಯ ಸೈನಿಕರಿಗೆ ಸಮರ್ಪಿತವಾಗಿದೆ. ಈ ಸಂಕೀರ್ಣದ ಮುಖ್ಯ ವೈಶಿಷ್ಟ್ಯವೆಂದರೆ ಅದರ ಮೃತ ಸೈನಿಕರಿಗಾಗಿ ಸಿಂಗಾಪುರದಲ್ಲಿ ನಿಂತಿದ್ದ ಐಎನ್ಎ ಸ್ಮಾರಕದ ಪುನರ್ನಿರ್ಮಾಣ. ಅದು ೧೯೪೫ರಲ್ಲಿ ಬ್ರಿಟಿಷ್-ಭಾರತೀಯ ಭೂಸೇನಾ ಸುರಂಗಕಾರರ ಕೈಯಲ್ಲಿ ನಾಶಗೊಂಡಿತು. ಈ ಸಂಕೀರ್ಣವು ಐಎನ್ಎಗೆ ಸಮರ್ಪಿತವಾದ ವಸ್ತುಸಂಗ್ರಹಾಲಯವನ್ನು, ಜೊತೆಗೆ ಒಂದು ಗ್ರಂಥಾಲಯ ಮತ್ತು ಸಭಾಂಗಣ ಮತ್ತು ಸುಭಾಷ್ ಚಂದ್ರ ಬೋಸ್‍ರ ಒಂದು ಪ್ರತಿಮೆಯನ್ನು ಕೂಡ ಹೊಂದಿದೆ. ಸ್ಮಾರಕ ಸಮಾಧಿ ಮೇಲಿನ ಕೆಲಸವು ಅಕ್ಟೋಬರ್ ೧೯೬೮ರಲ್ಲಿ ಆರಂಭವಾಗಿ ಸೆಪ್ಟೆಂಬರ್ ೧೯೬೯ರಲ್ಲಿ ಮುಗಿಯಿತು ಮತ್ತು ಇದನ್ನು ಇಂದಿರಾ ಗಾಂಧಿ ಅನಾವರಣಗೊಳಿಸಿದರು. ಸ್ಮಾರಕ ಸಂಕೀರ್ಣವನ್ನು ಇಂದಿನ ದಿನದ ಗಾತ್ರಕ್ಕೆ ವಿಸ್ತರಿಸುವ ಕೆಲಸವು ೨೦೦೫ರಲ್ಲಿ ಅಂತ್ಯಗೊಂಡು, ಆಗ ಅದನ್ನು ಅನಾವರಣಗೊಳಿಸಲಾಯಿತು.

ಐಎನ್ಎ ಸ್ಮಾರಕ, ಮೊಯಿರಾಂಗ್, ಇಂದಿನ ದಿನದಲ್ಲಿರುವಂತೆ

ಉಲ್ಲೇಖಗಳು ಬದಲಾಯಿಸಿ