ಏರ್ ಜಿಂಬಾಬ್ವೆ
ಏರ್ ಜಿಂಬಾಬ್ವೆ (ಪ್ರೈ) ಲಿಮಿಟೆಡ್ (ಏರ್ ಜಿಂಬಾಬ್ವೆ ಎಂದು ಕಾರ್ಯನಿರ್ವಹಿಸುತ್ತಿರುವ) ಜಿಂಬಾಬ್ವೆಯ ಧ್ವಜ ವಾಹಕ ವಿಮಾನಯಾನ ಸಂಸ್ಥೆ, ಮತ್ತು ಇದರ ಮುಖ್ಯಕಚೇರಿ ಹರಾರೆಯಲ್ಲಿ ಇರುವ ಹರಾರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಸ್ತಿಯ ಮೇಲಿದೆ. ಹರಾರೆ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣವನ್ನು ತನ್ನ ಕೇಂದ್ರವನ್ನಾಗಿಸಿಕೊಂಡ ಈ ವಾಹಕ ಏಷ್ಯಾ ಮತ್ತು ಲಂಡನ್ ಗ್ಯಾಟ್ವಿಕ್ಅನ್ನು ಒಳಗೊಂಡಂತೆ ಆಫ್ರಿಕಾದ ದಕ್ಷಿಣದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಹಣಕಾಸಿನ ತೊಂದರೆಗಳ ಕಾರಣ, ಏರ್ ಜಿಂಬಾಬ್ವೆ ತನ್ನ ದೇಶಿಯ ನೆಟ್ವರ್ಕ್ ಸೇವೆಯನ್ನು ಫೆಬ್ರವರಿ 2012 ರ ಕೊನೆಯಲ್ಲಿ ನಿಲ್ಲಿಸಿತು. ಮತ್ತೆ ಕೆಲವು ದೇಶೀಯ ಮಾರ್ಗಗಳಲ್ಲಿ ಹಾಗೂ ಪ್ರಾದೇಶಿಕ ಸೇವೆಯನ್ನೂ 2012 ಮೇ ಮತ್ತು ಜುಲೈ ನಡುವೆ ಅಲ್ಪ ಕಾಲದವರೆಗೆ ಕಾರ್ಯಾಚರಣೆ ಶುರುಮಾಡಲಾಯಿತು, ಆದರೆ ಮತ್ತೆ ಅವನ್ನು ನಿಲ್ಲಿಸಲಾಯಿತು. ಕೆಲವು ಹಾರಾಟಗಳನ್ನು ಆ ವರ್ಷದ ನವೆಂಬರ್‍ನಲ್ಲಿ ವಿಚ್ಛಿನ್ನವಾದ ಆಧಾರದ ಮೇಲೆ ಪುನಃ ಪ್ರಾರಂಭ ಮಾಡಲಾಯಿತು. ವಿಮಾನಯಾನ ಏಪ್ರಿಲ್ 2013 ರಲ್ಲಿ ಪ್ರತಿದಿನವು ಜೊಹಾನೆಸ್‍ಬರ್ಗ್‍ಗೆ ಮತ್ತು ಕೆಲವು ಪ್ರಾದೇಶಿಕ ತಾಣಗಳಿಗೆ ಸೇವೆಯನ್ನು ಆರಂಭಿಸಿತು.
1981ರಿಂದ ಕಂಪನಿ ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಶನ್ ಮತ್ತು ಆಫ್ರಿಕನ್ ಏರ್ಲೈನ್ಸ್ ಅಸೋಸಿಯೇಷನ್‍ನ ಸದಸ್ಯವಾಗಿದೆ.[೧] ಜುಲೈ 2014 ರಲ್ಲಿ ಅದು ಜಿಂಬಾಬ್ವೆಯ ಸರ್ಕಾರದ ಅಧೀನದಲ್ಲಿದೆ.
ಕಾರ್ಪೊರೇಟ್ ವ್ಯವಹಾರಗಳು
ಬದಲಾಯಿಸಿಮಾಲೀಕತ್ವ ಮತ್ತು ನಿರ್ವಹಣೆ
ಬದಲಾಯಿಸಿಮಾರ್ಚ್ 2012 ರಿಂದ ವಿಮಾನಯಾನವು[೨] ಸಂಪೂರ್ಣವಾಗಿ ಜಿಂಬಾಬ್ವೆ ಸರ್ಕಾರದ ಒಡೆತನದಲ್ಲಿರುವ ಏರ್ ಜಿಂಬಾಬ್ವೆ ಪ್ರೈವೇಟ್ ಲಿಮಿಟೆಡ್ ಮೂಲಕ ನಿರ್ವಹಣೆ ಮಾಡಲಾಗಿದೆ, ಆದರೆ ದೀರ್ಘ ಕಾಲದಿಂದ ವಿಮಾನಯಾನವನ್ನು ಒಂದಷ್ಟು ಪ್ರಮಾಣದಲ್ಲಿ ಖಾಸಗೀಕರಣಗೊಳಿಸುವ ಯೋಜನೆಗಳಿವೆ.
ಏಪ್ರಿಲ್ 2014 ರ ವೇಳೆಗೆ, ವ್ಯಾಲೆಂಟೈನ್ಸ್ ಸಿನೆಮನೆ ವಿಮಾನಯಾನ ಸಂಸ್ಥೆಯ ಮಂಡಳಿ ಅಧ್ಯಕ್ಷರಾಗಿದ್ದರು.
ಉದ್ಯಮದ ಒಟ್ಟಾರೆ ದಿಕ್ಕುಗಳು
ಬದಲಾಯಿಸಿಏರ್ ಜಿಂಬಾಬ್ವೆ ಅನಿಯಮಿತ ಸೇವೆಗಳ ಸಹಿತ, ಅನೇಕ ವರ್ಷಗಳಿಂದ ನಷ್ಟದಲ್ಲಿದೆ. ವಿಮಾನಯಾನ ಸರ್ಕಾರಿ ಮಾಲೀಕತ್ವದಲ್ಲಿದ್ದರೂ, ಪೂರ್ಣ ವಾರ್ಷಿಕ ವರದಿಗಳು ಪ್ರಕಟುತವಾಗಿಲ್ಲ, ನಿಜಕ್ಕೂ ಲೆಕ್ಕ ಪರಿಶೋಧನೆ ಮಾಡಿದ ಖಾತೆಗಳನ್ನು ಕೊನೆಯ ಬಾರಿಗೆ 2008ರಲ್ಲಿ ಸಲ್ಲಿಸಲಾಗಿತ್ತು.
ಗಮ್ಯಸ್ಥಾನಗಳು
ಬದಲಾಯಿಸಿಚೀನೀ-ಜಿಂಬಾಬ್ವೆ ಆರ್ಥಿಕ ಸಂಬಂಧಗಳ ಏರಿಕೆಯ ಕಾರಣ, ಹರಾರೆ-ಬೀಜಿಂಗ್ ಸೇವೆಯನ್ನು ನವೆಂಬರ್ 2004 ರಲ್ಲಿ ಆರಂಭಿಸಲಾಯಿತು. ಅದೇ ರೀತಿ, 2009ರಲ್ಲಿ ವಾಹಕವು ತನ್ನ ಜಾಲಕ್ಕೆ ಕೌಲಾಲಂಪುರ್ ಅನ್ನು ಸೇರಿಸಿಕೊಂಡಿತು. 1 ಏಪ್ರಿಲ್ 2011 ರಿಂದ ಹರಾರೆ-ಲಂಡನ್-ಗ್ಯಾಟ್ವಿಕ್ ಮಾರ್ಗದಲ್ಲಿ ಸಾಮರ್ಥ್ಯ ವೃದ್ಧಿ ಉಂಟಾಗುತ್ತದೆಂದು ಬಹಿರಂಗಪಡಿಸಲಾಗಿತ್ತು. ಈ ಮಾರ್ಗದಲ್ಲಿ ಬ್ರಿಟಿಷ್ ಏರ್ವೇಸ್ ಮತ್ತು ಏರ್ ಜಿಂಬಾಬ್ವೆ ಎರಡೂ ಸೇವೆಯನ್ನು ಕೊಡುತ್ತಿದ್ದವು, ಬ್ರಿಟಿಷ್ ವಾಹಕ 2007 ರಲ್ಲಿ ಸೇವೆ ನಿಲ್ಲಿಸಿದ್ದರಿಂದ, ಹರಾರೆ-ಲಂಡನ್ ಮಾರ್ಗ[೩] ಏರ್ ಜಿಂಬಾಬ್ವೆಗೆ ಅತ್ಯಂತ ಲಾಭದಾಯಕ ಮಾರ್ಗವಾಗಿ ಮಾರ್ಪಾಟಾಯಿತು.
2011/2012 ಹಾರಾಟ ಅಡೆತಡೆಗಳು
ಬದಲಾಯಿಸಿಮರುಪಾವತಿಸದ ಸಾಲಗಳ ಕಾರಣ ಸಾಲಗಾರರಿಂದ ಅದರ ವಿಮಾನಗಳ ಸಂಭಾವ್ಯ ಮುಟ್ಟುಗೋಲಿನ ಭಯದಿಂದ, ವಿಮಾನಯಾನ ಸಂಸ್ಥೆಯು ತಾತ್ಕಾಲಿಕವಾಗಿ ಜೊಹ್ಯಾನೆಸ್‍ಬರ್ಗ್‍ಗೆ ಹೋಗುವ ವಿಮಾನಗಳನ್ನು ಸ್ಥಗಿತಗೊಳಿಸಿದೆಯೆಂದು ಫೆಬ್ರುವರೀ 2011 ರಲ್ಲಿ ಬಹಿರಂಗಗೊಳಿಸಲಾಯಿತು. ನಿರ್ವಹಣಾ ಕಳವಳಗಳ ಕಾರಣ ಜಿಂಬಾಬ್ವೆಯ ನಾಗರಿಕ ವಿಮಾನಯಾನ ಪ್ರಾಧಿಕಾರದಿಂದ ತನ್ನ ಬೋಯಿಂಗ್ 737-200 ವಿಮಾನಪಡೆಯ ಹಾರಾಟ ನಿಷೇಧ, ಮತ್ತು $ 460,000 ಪಾವತಿಯಾಗದ ಸಾಲದ ಮೇಲೆ ಜಾಂಬೆಜಿ ಏರ್‍ಲೈನ್ಸ್‌ನ ಒಂದು ಗುತ್ತಿಗೆ ವಿಮಾನದ ಮುಟ್ಟುಗೋಲಿನ ನಂತರ, ಪ್ರಾದೇಶಿಕ ಮತ್ತು ದೇಶೀಯ ಸೇವೆಗಳನ್ನು ಮೇ 2011ನಲ್ಲಿ ಅಲ್ಪ ಕಾಲದವರೆಗೆ ಸ್ಥಗಿತಗೊಳಿಸಲಾಯಿತು. ಎರಡೂ ವಿಮಾನಯಾನ ಸಂಸ್ಥೆಗಳ ನಡುವೆ ಒಪ್ಪಂದವಾದ ನಂತರ, 2011ರ ಮೇ ಕೊನೆಯಲ್ಲಿ ಕಾರ್ಯಾಚರಣೆಗಳು ಪುನಃ ಆರಂಭವಾದವು, ಆದರೂ ಮಾಲೀಕರಿಂದ ವಿಮಾನವನ್ನು ಜೂನ್ 2011 ಕೊನೆಯಲ್ಲಿ ಮತ್ತೆ ಪಡೆಯಲಾಯಿತು.
ಮಧ್ಯ ಜೂನ್ 2011 ರಲ್ಲಿ, ಲಂಡನ್ ಮತ್ತು ದಕ್ಷಿಣ ಆಫ್ರಿಕಾ ಗೆ ವಿಮಾನಗಳನ್ನು ತಾತ್ಕಾಲಿಕವಾಗಿ ಇಂಧನ ಪೂರೈಕೆದಾರರ ಸಾಲದ ಕಾರಣ ರದ್ದುಪಡಿಸಲಾಯಿತು[೪]. 737-200 ವಿಮಾನಪಡೆಯ ಹಾರಾಟ ನಿಷೇಧ ಮತ್ತು ದೇಶದಲ್ಲಿ ಇಂಧನ ಕೊರತೆಯ ಕಾರಣ, ದೇಶೀಯ ಸೇವೆಗಳನ್ನು ರದ್ದುಗೊಳಿಸಲಾಯಿತು ಮತ್ತು ಪ್ರಾದೇಶಿಕ ಹಾರಾಟಗಳನ್ನು ಅನಿಯಮಿತ ಆಧಾರದಲ್ಲಿ ನಡೆಸಲಾಯಿತು. ಮೂರು ನಿಷೇಧಿತ 737-200ರಲ್ಲಿ ಒಂದನ್ನು ಕಾರ್ಯನಿರ್ವಹಿಸಲು ಸಿಎಎಝೆಡ್‍ನಿಂದ ಅನುಮತಿ ಸಿಕ್ಕ ನಂತರ, ವಿಮಾನಯಾನ ಸಂಸ್ಥೆಯು ಜುಲೈ 2011 ರಲ್ಲಿ ಮಧ್ಯಮ ಮತ್ತು ಕಡಿಮೆ ದೂರದ ಪ್ರಯಾಣಗಳ ಕಾರ್ಯಾಚರಣೆ ಆರಂಭಿಸಿತು.
ಕಾರ್ಯಾಚರಣೆಗಳನ್ನು ಜುಲೈ 2011 ರಲ್ಲಿ ಮತ್ತೆ ನಿಲ್ಲಿಸಲಾಯಿತು, ಈ ಸಲ ಪೈಲಟ್‍ಗಳ ಮುಷ್ಕರದ ಕಾರಣ, ಮತ್ತು 50 ದಿನಗಳ ಕಾಲದ ಮುಷ್ಕರದ ನಂತರ ಮಧ್ಯ ಸೆಪ್ಟೆಂಬರ್ನಲ್ಲಿ ಪುನರಾರಂಭವಾಯಿತು. ಮತ್ತೊಮ್ಮೆ, ಸಾಗರೋತ್ತರ ಮತ್ತು ದೇಶೀಯ ವಿಮಾನಗಳನ್ನು ತಾತ್ಕಾಲಿಕವಾಗಿ ನವೆಂಬರ್ ಆರಂಭದಲ್ಲಿ 2011 ರಲ್ಲಿ ರದ್ದುಮಾಡಲಾಯಿತು, ಈ ಸಲ ಇಂಧನ ಪೂರೈಕೆದಾರರ ಪಾವತಿಯಾಗದ ಸಾಲದ ಕಾರಣದಿಂದ. ಸಾಗರೋತ್ತರ ಮಾರ್ಗಗಳಲ್ಲಿ ಹಾರಾಟ ನವೆಂಬರ್ 2011 11 ರಂದು ಪುನರಾರಂಭವಾಯಿತು. ಆದಾಗ್ಯೂ, ಯುನೈಟೆಡ್ ಕಿಂಗ್ಡಮ್ ಮತ್ತು ದಕ್ಷಿಣ ಆಫ್ರಿಕಾ ಗೆ ಹಾರಾಟಗಳನ್ನು ಸ್ಥಗಿತಗೊಳಿಸಲಾಯಿತು.
ಉಲ್ಲೇಖಗಳು
ಬದಲಾಯಿಸಿ- ↑ "AFRAA Current Members - Air Zimbabwe". afraa.org. Archived from the original on 12 ಸೆಪ್ಟೆಂಬರ್ 2012. Retrieved 24 December 2015.
- ↑ "Air Zimbabwe flights". cleartrip.com. Retrieved 24 December 2015.
- ↑ "ROUTES: Air Zimbabwe eyes London and Beijing return". flightglobal.com. Retrieved 21 September 2015.
- ↑ "Air Zimbabwe cancels flights after fuel suppliers close taps". webcitation.org. Archived from the original on 8 ಜನವರಿ 2014. Retrieved 16 June 2011.