ಹೊಡೆತ

(ಏಟು ಇಂದ ಪುನರ್ನಿರ್ದೇಶಿತ)

ಹೊಡೆತ ಎಂದರೆ ಮಾನವ ಶರೀರದ ಒಂದು ಭಾಗದಿಂದ ಅಥವಾ (ಆಯುಧದಂತಹ) ನಿರ್ಜೀವ ವಸ್ತುವಿನಿಂದ ಗುರಿಯಿಡಲಾದ ಶಾರೀರಿಕ ದಾಳಿ. ಇದರ ಉದ್ದೇಶ ಎದುರಾಳಿಗೆ ಮಂದ ಆಘಾತ ಅಥವಾ ಮರ್ಮಭೇದಿ ಆಘಾತವನ್ನು ಉಂಟುಮಾಡುವುದು ಆಗಿರುತ್ತದೆ. ಹೊಡೆತಗಳ ಅನೇಕ ವಿಭಿನ್ನ ರೂಪಗಳಿವೆ. ಮುಷ್ಟಿಯಾಗಿ ಮುಚ್ಚಲ್ಪಟ್ಟ ಹಸ್ತದಿಂದ ನೀಡಲಾದ ಹೊಡೆತವನ್ನು ಮುಷ್ಟಿ ಹೊಡೆತ/ಗುದ್ದು ಎಂದು ಕರೆಯಲಾಗುತ್ತದೆ, ಕಾಲು ಅಥವಾ ಪಾದದಿಂದ ನೀಡಲಾದ ಹೊಡೆತವನ್ನು ಒದೆ ಎಂದು ಕರೆಯಲಾಗುತ್ತದೆ ಮತ್ತು ತಲೆಯಿಂದ ನೀಡಲಾದ ಹೊಡೆತವನ್ನು ಹೆಡ್‍ಬಟ್ ಎಂದು ಕರೆಯಲಾಗುತ್ತದೆ. ಸಮರ ಕಲೆಗಳು ಮತ್ತು ಯುದ್ಧ ಕ್ರೀಡೆಗಳಲ್ಲಿ ಬಳಸಲಾದ ಇತರ ಭಿನ್ನ ರೂಪಗಳು ಕೂಡ ಇವೆ.

ಹೊಡೆತಗಳು ಹಲವಾರು ಕ್ರೀಡೆಗಳು ಮತ್ತು ಕಲೆಗಳ ಪ್ರಧಾನ ಕೇಂದ್ರಬಿಂದುಗಳಾಗಿವೆ. ಇದರಲ್ಲಿ ಬಾಕ್ಸಿಂಗ್, ಸವ್ಯಾಟ್, ಕರಾಟೆ, ಮೊಯೆ ಥಾಯ್, ಟೇಕ್ವಾಂಡೋ ಮತ್ತು ವಿಂಗ್ ಚನ್ ಸೇರಿವೆ. ಕೆಲವು ಸಮರ ಕಲೆಗಳು ಎದುರಾಳಿಗೆ ಏಟು ಕೊಡಲು ಬೆರಳ ತುದಿಗಳು, ಮಣಿಕಟ್ಟುಗಳು, ಮುಂದೋಳುಗಳು, ಭುಜಗಳು, ಬೆನ್ನು ಮತ್ತು ನಡುವನ್ನು ಕೂಡ ಬಳಸುತ್ತವೆ, ಜೊತೆಗೆ ಯುದ್ಧ ಕ್ರೀಡೆಗಳಲ್ಲಿ ಸಾಮಾನ್ಯವಾದ ಹೆಚ್ಚು ಸಾಂಪ್ರದಾಯಿಕವಿರುವ ಮುಷ್ಟಿಗಳು, ಅಂಗೈಗಳು, ಮೊಣಕೈಗಳು, ಮಂಡಿಗಳು ಮತ್ತು ಪಾದಗಳನ್ನು ಬಳಸುತ್ತವೆ. ಕುಸ್ತಿಯಂತಹ ಇತರ ಕ್ರೀಡೆಗಳು ಮತ್ತು ಕಲೆಗಳು ಹೊಡೆತಗಳನ್ನು ಬಳಸುವುದಿಲ್ಲ ಮತ್ತು ಮುಷ್ಟಾಮುಷ್ಟಿ ಹೊಡೆದಾಟ ತಂತ್ರಗಳ ಮೇಲೆ ಕೇಂದ್ರೀಕರಿಸುತ್ತವೆ. ಗೋಜು ರ‍್ಯೂ ಎಂದು ಕರೆಯಲ್ಪಡುವ ಕರಾಟೆಯ ಒಂದು ರೂಪವಿದೆ. ಇದು ಕಾಲುಗಳು ಮತ್ತು ಕೈಗಳಲ್ಲಿನ ಒತ್ತಡ ಬಿಂದುಗಳ (ಕೀಲುಗಳು) ಮೇಲೆ ಕೇಂದ್ರೀಕರಿಸುತ್ತದೆ.

ಅಂಗೈಯಿಂದ ಹೊಡೆತ ಕೊಡಬಹುದು. ಕೈಯು ತೆರೆದಿದ್ದರೂ ಅಥವಾ ಬೆರಳತುದಿಗಳು ಕೆಳಗಿನ ಗೆಣ್ಣುಗಳಿಗೆ ಮಡಚಿಕೊಂಡಿದ್ದರೂ, ಅಂಗೈ ಹೊಡೆತಗಳು ಅಂಗೈಯ ಕೆಳಗಿನ ಭಾಗದಿಂದ ಏಟು ನೀಡುತ್ತವೆ, ಅಂದರೆ ಕೈಯು ಮಣಿಕಟ್ಟಿಗೆ ಸೇರುವ ಭಾಗ. ಹೆಚ್ಚು ಮೃದುವಾದ ಒಳ ಮಣಿಕಟ್ಟನ್ನು ಗುರಿಯಿಡಲಾದ ವಸ್ತುವಿಗೆ ಹೊಡೆಯದಂತೆ ತಪ್ಪಿಸಲು ಕೈಯನ್ನು ಮಣಿಕಟ್ಟಿಗೆ ಲಂಬವಾಗಿ ಹಿಡಿದಿಡಲಾಗುತ್ತದೆ. ಅಂಗೈಯ ಕೆಳ ಏಣುಗೆರೆಯು ಆಶ್ಚರ್ಯಕರವಾಗಿ ಗಟ್ಟಿಯಾದ ಹೊಡೆತದ ಮೇಲ್ಮೈಯಾಗಿದೆ, ಮತ್ತು ಸರಿಯಾಗಿ ಬಳಸಿಕೊಳ್ಳಲಾದಾಗ ಮುಚ್ಚಿದ ಮುಷ್ಟಿಯಷ್ಟೇ ಹಾನಿಯನ್ನು ಮಾಡಬಲ್ಲದು (ಅಂಗೈ ಹೊಡೆತವು ಗುದ್ದಿಗಿಂತ ಹೆಚ್ಚು ಶಕ್ತಿಯನ್ನು ಉತ್ಪಾದಿಸಬಲ್ಲದು ಎಂದು ಕೆಲವು ಅಧ್ಯಯನಗಳು ತೋರಿಸಿಕೊಟ್ಟಿವೆ). ಜೊತೆಗೆ ಇದರಿಂದ ಹೊಡೆತಗಾರನ ಸ್ವಂತ ಕೈಗೆ ಗಾಯದ ಅಪಾಯವೂ ಬಹಳ ಕಡಿಮೆ. ಅಂಗೈ ಹೊಡೆತವು ಉಪಯುಕ್ತವಾಗಿರುತ್ತದೆ ಏಕೆಂದರೆ ಬಿಗಿಹಿಡಿದ ಮುಷ್ಟಿಗಿಂತ ಅದನ್ನು ಹೆಚ್ಚು ಶಾಂತವಾದ ರೀತಿಯಲ್ಲಿ ನೀಡಲಾಗುತ್ತದೆ.

"https://kn.wikipedia.org/w/index.php?title=ಹೊಡೆತ&oldid=849321" ಇಂದ ಪಡೆಯಲ್ಪಟ್ಟಿದೆ