ಎಸ್.ಪಿ.ವೈ.ರೆಡ್ಡಿ
ಎಸ್.ಪಿ.ವೈ.ರೆಡ್ಡಿ (ಎಸ್. ಪೆಡ ಯೆರಿಕಲ್ ರೆಡ್ಡಿ ೪ ಜೂನ್ ೧೯೫೦- ೩೦ ಏಪ್ರಿಲ್ ೨೦೧೯) ಅವರು ಮೂರು ಬಾರಿ ಲೋಕಸಭಾ ಸಂಸದರಾಗಿದ್ದರು. ರೆಡ್ಡಿ ನಂದಿ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಮುಖ್ಯಸ್ಥರಾಗಿದ್ದರು.[೨] ಅವರು ೪ ಜೂನ್ ೧೯೫೦ ರಂದು ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಅಂಕಲಮ್ಮಗುಡೂರು ಗ್ರಾಮದಲ್ಲಿ ಜನಿಸಿದರು. ಅವರು ಎನ್‌ಐಟಿ(NIT) ವಾರಂಗಲ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಮುಂಬೈ ಮೂಲದ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್, ಭಾರತದ ಪ್ರೀಮಿಯಂ ನ್ಯೂಕ್ಲಿಯರ್ ಸೌಲಭ್ಯವನ್ನು ಸೇರಿದರು.[೩] ಅವರು ೧೯೭೭ ರಲ್ಲಿ ವೈಜ್ಞಾನಿಕ ಅಧಿಕಾರಿ ಹುದ್ದೆಯನ್ನು ತೊರೆದರು. ೧೯೭೯ ರಲ್ಲಿ ಪ್ಲಾಸ್ಟಿಕ್ ಕಂಟೈನರ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದರು. ನಂತರ ಅವರು ತಮ್ಮ ಕಂಪನಿಯ ಕಾರ್ಯಾಚರಣೆಯನ್ನು ೧೯೮೪ ರಲ್ಲಿ ನಂದಿ ಪೈಪ್ಸ್ ಎಂಬ ಹೆಸರಿನಲ್ಲಿ ಪಿವಿಸಿ(PVC) ಪೈಪ್‌ಗಳ ತಯಾರಿಕೆಯಲ್ಲಿ ವಿಸ್ತಾರಗೊಳಿಸಿದರು.[೪]
ಎಸ್.ಪಿ.ವೈ.ರೆಡ್ಡಿ | |
---|---|
ಸಂಸತ್ ಸದಸ್ಯ, ಲೋಕಸಭೆ
| |
ಅಧಿಕಾರ ಅವಧಿ ೧೬ ಮೇ ೨೦೦೪ – ೩೦ ಏಪ್ರಿಲ್ ೨೦೧೯ | |
ಪೂರ್ವಾಧಿಕಾರಿ | ಭೂಮಾ ನಾಗಿ ರೆಡ್ಡಿ |
ಉತ್ತರಾಧಿಕಾರಿ | ಪೋಚಾ ಬ್ರಹ್ಮಾನಂದ ರೆಡ್ಡಿ |
ಮತಕ್ಷೇತ್ರ | ನಂದ್ಯಾಳ |
ವೈಯಕ್ತಿಕ ಮಾಹಿತಿ | |
ಜನನ | ಎಸ್. ಪೆಡ ಯೆರಿಕಲ್ ರೆಡ್ಡಿ ೪ ಜೂನ್ ೧೯೫೦ ಅಂಕಲಮ್ಮ ಗುಡೂರು, ಕಡಪ ಜಿಲ್ಲೆ, ಆಂಧ್ರ ಪ್ರದೇಶ |
ಮರಣ | 30 April 2019[೧] ಹೈದರಾಬಾದ್ | (aged 68)
ರಾಜಕೀಯ ಪಕ್ಷ | ಜನ ಸೇನಾ ಪಕ್ಷ(೨೦೧೯) ತೆಲುಗು ದೇಶಂ ಪಕ್ಷ (೨೦೧೬–೨೦೧೯) |
ಸಂಗಾತಿ(ಗಳು) | ಎಸ್.ಪಾರ್ವತಿ |
ಮಕ್ಕಳು | ೨ |
ವಾಸಸ್ಥಾನ | ನಂದ್ಯಾಳ |
As of 15 January, 2015 ಮೂಲ: [೧] |
ಜೀವನಚರಿತ್ರೆ
ಬದಲಾಯಿಸಿಎಸ್.ಪಿ.ವೈ.ರೆಡ್ಡಿಯವರು ಬಿಜೆಪಿಯೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ೧೯೯೧ ರ ಚುನಾವಣೆಯಲ್ಲಿ ನಂದ್ಯಾಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವಿಫಲರಾದರು.[೫] ೧೯೯೯ ರ ಅಸೆಂಬ್ಲಿ ಚುನಾವಣೆಯಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಂದ್ಯಾಳ ಮತ್ತು ಗಿಡ್ಡಲೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರು ಮತ್ತು ಎರಡೂ ಸ್ಥಾನಗಳನ್ನು ಕಳೆದುಕೊಂಡರು.[೫] ೨೦೦೦ ರಲ್ಲಿ, ಅವರು ಕಾಂಗ್ರೆಸ್‌ಗೆ ಪುರಸಭೆಯ ಅಧ್ಯಕ್ಷ ಅಭ್ಯರ್ಥಿಯಾಗಲು ಟಿಕೆಟ್ ಪಡೆದರು. ದಾಖಲೆಯ ಬಹುಮತದೊಂದಿಗೆ ಗೆದ್ದರು. ೨೦೦೪ ರಲ್ಲಿ ನಂದ್ಯಾಲದಿಂದ ಸಂಸದರಾಗಿ ಸ್ಪರ್ಧಿಸಿ ೧ ಲಕ್ಷ ಬಹುಮತದೊಂದಿಗೆ ಗೆದ್ದಿದ್ದರು. ೨೦೦೯ ರಲ್ಲಿ, ಅವರು ಮತ್ತೊಮ್ಮೆ ಅದೇ ಕ್ಷೇತ್ರದಿಂದ ಗೆದ್ದರು.[೨] ೨೦೧೪ ರಲ್ಲಿ ನಂದ್ಯಾಳದಿಂದ ಮೂರನೇ ಬಾರಿಗೆ ಸಂಸದರಾಗಿ ಗೆದ್ದರು.[೬]
ಅವರು ೨೦೧೪ ರ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ(YSRCP) ಟಿಕೆಟ್‌ನಲ್ಲಿ ಗೆದ್ದರು. ನಂತರ ಟಿಡಿಪಿಗೆ ಪಕ್ಷಾಂತರಗೊಂಡರು.[೭] ೨೦೧೯ ರಲ್ಲಿ, ಅವರು ಟಿಡಿಪಿ ತೊರೆದರು. ನಂತರ ಜನಸೇನಾ ಪಕ್ಷಕ್ಕೆ ಸೇರಿಕೊಂಡರು ಮತ್ತು ಅದರ ಟಿಕೆಟ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದರು.[೬] ಬಹು ಅಂಗಾಂಗ ವೈಫಲ್ಯದಿಂದಾಗಿ ಅವರು ೩೦ ಏಪ್ರಿಲ್ ೨೦೧೯ ರಂದು ೬೯ ನೇ ವಯಸ್ಸಿನಲ್ಲಿ ನಿಧನರಾದರು.[೫]
ಉಲ್ಲೇಖಗಳು
ಬದಲಾಯಿಸಿ- ↑ Rao, M. Sambasiva (30 ಏಪ್ರಿಲ್ 2019). "Jana Sena contestant from Nandyal SPY Reddy dies". www.thehansindia.com.
- ↑ ೨.೦ ೨.೧ ANI (1 ಮೇ 2019). "Nandyal MP SPY Reddy passes away after prolonged illness". Business Standard India – via Business Standard.
- ↑ "Member profile - S. P. Y. Reddy". Lok Sabha. Archived from the original on 22 ಜೂನ್ 2008. Retrieved 16 ಆಗಸ್ಟ್ 2008.
- ↑ "About Nandi Pipes". Nandi Pipes. Archived from the original on 9 ಮೇ 2008. Retrieved 16 ಆಗಸ್ಟ್ 2008.
- ↑ ೫.೦ ೫.೧ ೫.೨ "Jana Sena's SPY Reddy contesting from Nandyal parliament seat passes away at 69". The New Indian Express. ಮೇ 2019.
- ↑ ೬.೦ ೬.೧ "Lok Sabha polls: Jana Sena Party candidate S P Y Reddy dies after prolonged illness". India Today. Press Trust of India. 1 ಮೇ 2019.
- ↑ India, The Hans (4 ಜನವರಿ 2019). "MP SPY Reddy to contest from Nandyal Lok Sabha in AP elections". www.thehansindia.com.