ಎಸ್.ಜಿ.ಶಾಸ್ತ್ರಿ
ಎಸ್.ಜಿ.ಶಾಸ್ತ್ರಿ ಯವರ ಹೆಸರಿನ ಪೂರ್ತಿ ರೂಪ "ಸೋಸಲೆ ಅಯ್ಯಶಾಸ್ತ್ರೀ ಗರಳಪುರಿ ಶಾಸ್ತ್ರೀ". ಇವರ ತಂದೆಯ ಹೆಸರು ಅಯ್ಯಶಾಸ್ತ್ರೀ. ಎಸ್ ಎಂದರೆ ಸೋಸಲೆ ಅಯ್ಯಶಾಸ್ತ್ರೀ. ಜಿ ಎಂದರೆ ಗಳಗಪುರಿ ಶಾಸ್ತ್ರಿ. ಎಸ್. ಜಿ. ಶಾಸ್ತ್ರಿಯವರ ಮನೆತನದಲ್ಲಿ ಗರಳಪುರಿ ಶಾಸ್ತ್ರಿ ಎಂಬ ಇನ್ನೊಬ್ಬ ಲೇಖಕರು ಇದ್ದರು. ಅವರು ಎಸ್.ಜಿ.ಶಾಸ್ತ್ರಿಗಳ ತಾತಂದಿರು ಆಗಿದ್ದಾರೆ. ಅಯ್ಯಶಾಸ್ತ್ರಿಗಳ ಪ್ರಚಲಿತ ಹೆಸರೇ "ಸೋಸಲೆ ಅಯ್ಯಶಾಸ್ತ್ರೀ" ಎಂದಿರುವುದರಿಂದ ಅದು ಊರಿನ ಹೆಸರಿನ ಸೂಚನೆಯಾದರೂ ವ್ಯಕ್ತಿನಾಮವಾಗಿರುವುದರಿಂದ ಅದನ್ನು ಪ್ರತ್ಯೇಕಿಸುವಂತಿಲ್ಲ. ತಮ್ಮ ಮಗನಿಗೆ ಪ್ರೀತಿಯಿಂದ ಮತ್ತು ಅವರ ತಂದೆಯ ಮೇಲಿನ ಅಭಿಮಾನದಿಂದ ಹಾಗು ಸಂಪ್ರದಾಯದ ವಾಡಿಕೆಯಂತೆ ತಮ್ಮ ತಂದೆ ಯವರ ಹೆಸರನ್ನೇ ಇಟ್ಟಿರುತ್ತಾರೆ.[೧]
ಜೀವನ ಪರಿಚಯ
ಬದಲಾಯಿಸಿಎಸ್ .ಜಿ.ಶಾಸ್ತ್ರಿಗಳು ೧೮೯೦ರಲ್ಲಿ ಮೈಸೂರಿನಲ್ಲಿ ಸೋಸಲೆ ಅಯ್ಯಶಾಸ್ತ್ರಿ -ಲಕ್ಷ್ಮೀದೇವಮ್ಮ ದಂಪತಿಗಳಿಗೆ ಜೇಷ್ಠಪುತ್ರರಾಗಿ ಜನಿಸಿದರು. ಮೈಸೂರಿನಲ್ಲೇ ವಿದ್ಯಾಭ್ಯಾಸವನ್ನೆಲ್ಲ ಮುಗಿಸಿದರು. ತಂದೆಯವರು ಅರಮನೆಯ ಆಶ್ರಮದಲ್ಲಿದ್ಧ ಅಸ್ಥಾನ ವಿದ್ವಾಂಸಾರಾಗಿದ್ದರು. ಹಲವು ಕನ್ನಡ ಸಂಸ್ಕೃತದ ಕಾವ್ಯ ನಾಟಕ ರಚಿಸುವುದಲ್ಲದೆ ಪ್ರಾಚೀನ ಕನ್ನಡ ಕಾವ್ಯಗಳ್ಳನ್ನು ಸಂಪಾದಿಸಿದರು; ಅರಮನೆಯ ಅರಸು ಮಕ್ಕಳಿಗೆ ವಿದ್ಯಾ ಗುರುಗಳಾಗಿದ್ಧರು. ಹೀಗಾಗಿ ಅರಮನೆಯ ಸಂಪರ್ಕದಲ್ಲಿ ಎಸ್.ಜಿ.ಶಾಸ್ತ್ರಿಗಳ ವಿದ್ಯಾಭ್ಯಾಸ ನಿರ್ವಿಗ್ನವಾಗಿ ನಡೆಯಿತು . ಮನೆಯಲ್ಲಿಯೂ ತಂದೆಯವರಿಂದಲೇ ಸಂಸ್ಕೃತ ಕನ್ನಡ ಸಾಹಿತ್ಯ ಆಸಕ್ತಿಯನ್ನು ಬೆಳ್ಳೆಸಿಕೊಳ್ಳಲು ಅಗತ್ಯವಾದ ವಾತಾವರಣವಿತು .ಸೋಸಲೆ ಅಯ್ಯಶಾಸ್ತ್ರಿಗಳದ್ದು ತುಂಬು ಕುಟುಂಬ . ಎಸ್.ಜಿ.ಶಾಸ್ತ್ರಿಗಳಿಗೆ ಮೂರೂ ಜನ ತಮ್ಮಂದಿರು ಹಾಗು ನಾಲ್ಕು ಜನ ಅಕ್ಕತಂಗಿಯರು. ಎವರಲ್ಲಿ ತಮ್ಮ ಕೃಷ್ಣಸ್ವಾಮಿಶಾಸ್ತ್ರಿಯವರು ಅಣ್ಣನಂತೆಯೇ ಸಾಹಿತ್ಯಾಸಕ್ತಿ ರೂಡಿಸಿಕೊಂಡಿದ್ದರಲ್ಲದೆ ಮುಂದೆ ತಂದೆಯವರ ಆಸ್ಥಾನ ಗೌರವವನ್ನು ಪಡೆದಿದ್ದ ವಿದ್ವಾಂಸರೆನಿಸಿಕೊಂಡರು . ಪ್ರಾಚ್ಯ ವಿದ್ಯಾ ಸಂಶೋದನಾ ಸಂಸ್ಥೆಯಲ್ಲಿ ಸಂಶೋಧಕರಾಗಿ ಕಾರ್ಯನಿರ್ವಾಹಿಸಿ ಹಲವಾರು ಪ್ರಮುಖ ಕೃತಿಗಳನ್ನು ಕನ್ನಡಕ ಕೊಟ್ಟಿದಾರೆ. ಒಬ್ಬ ತಂಗಿ ಎಂ.ಎಸ್.ಪುಟ್ಟಣ್ಣನವರ ಸೊಸೆಯಾಗಿದಾರೆ.
ಶಿಕ್ಷಣ ಮತ್ತು ವೃತ್ತಿ
ಬದಲಾಯಿಸಿಎಸ್ .ಜಿ .ಶಾಸ್ತ್ರಿಗಳು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ೧೯೧೩ ಬಿ.ಎ. ಪದವಿ ಪಡೆದ ನಂತರ ಉನ್ನತ ವ್ಯಾಸಂಗಕಾಗಿ ಲಂಡನ್‍ಗೆ ಹೋಗಿ ೧೯೧೬ ರಲ್ಲಿ ರಾಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ಪಡೆದು ಬಂದರು. ಆ ಕಾಲಕ್ಕೆ ವಿದೇಶಿ ಪ್ರಯಾಣ ಮಾಡಿಬಂದಿದ್ದ ಕೆಲವೇ ಭಾರತೀಯರಲ್ಲಿ ಇವರು ಒಬ್ಬರೆನಿಸಿದರು. ಮೈಸೂರು ಸಾಬೂನು ಕಾರ್ಖಾನೆಯಲ್ಲಿ ವ್ಯವಸ್ಥಾಪಕರಾಗಿ ಸೇವೆ ಆರಂಭಿಸುವ ಮೂಲಕ ಬೆಂಗಳೂರಿನಲ್ಲಿ ವ್ರಿತಿಗಿವನ ಆರಂಭಿಸಿದರು. ಮೈಸೂರು ಸ್ಯಾಂಡಲ್ ಸೋಪನ್ನು ಜಗದ್ವಿಖ್ಯಾತ ಗೊಳಿಸಿದ ಕೀರ್ತಿವಂತರು. ಆದ್ದರಿಂದಲೇ ಉದ್ಯಮವಲಯದಲಿ ಇವರನ್ನು ಸೂಪಶಾಸ್ತ್ರಿ ಎಂದೇ ಕರೆಯಲು ಆರಂಭಿಸಿದರು. ನಂತರ ಇವರು ೧೯೪೮ ರಲ್ಲಿ ನಿವೃತಿ ಗೊಂಡರು.
ಪ್ರವೃತ್ತಿ
ಬದಲಾಯಿಸಿ- ಎಸ್ .ಜಿ .ಶಾಸ್ತ್ರಿಗಳು ವೃತಿಯಲ್ಲಿ ವಿಜ್ನ್ಯಾನಿಗಳು ಉದ್ಯಮಿಗಳು ಆಗಿದ್ದರೂ ಪ್ರವೃತಿಯಲ್ಲಿ ಸಾಹಿತಿಗಳೇ . ಮನುತನದಿಂದ ಬಂದಿದ್ದು ಬಳುವಳಿಯಾಗಿ ರಕ್ತತಗವಾಗಿದ್ಧ ಸಾಹಿತ್ಯಾಸಕ್ತಿ ಅವರಲ್ಲಿ ಸದಾ ಜಾಗೃತಿ ಆದಂತೆ ತೋರುತದೆ. ಜೊತೆಗೆ ಉನ್ನತ ಅಭ್ಯಾಸದಿಂಧ ದೊರೆತ ಇಂಗ್ಲಿಷ್ ಸಾಹಿತ್ಯದ ತಿಳುವಳಿಕೆಯು ಕನ್ನಡದತ್ತ ಹೊರಳಿ ಕನ್ನಡಕ್ಕೆ ಅದರ ಪರಿಚಯ ಮಾಡಿಕೊಡುವ ಹಂಬಲ ವ್ಯಕ್ತವಾಗಿರುವುದು ಸಹಜವಾದುದೇ ಆಗಿದೆ. ವೃತಿಯಲ್ಲಿ ಇದ್ದುಕೊಂಡು ಹಲವು ಇಂಗ್ಲಿಷ್ ಕೃತಿಗಳನ್ನು ಕನ್ನಡಕೆ ಕೊಟ್ಟಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ನಾಟಕಗಳಾಗಿದ್ದವು. ಜೊತೆಗೆ ಅರಮನೆಯ ಕಂಪನಿಯ ಮೂಲಕ ತಂದೆಯವರ ಮತ್ತು ಬಸವಪ್ಪಶಾಸ್ತ್ರಿಗಳಂತಹ ಪ್ರಮುಖ ನಾಟಕಕಾರರು ರಚಿಸಿದ ನಾಟಕಗಳನ್ನು ಪ್ರದರ್ಸಿಸುತಿದ್ದ ನಾಟಕ ಪ್ರಭಾವವಿದ್ಯಾ ಕಾಲವಾದ್ದರಿಂದ ಇಂಗ್ಲೀಷ್‍ನಿಂದಲೂ ಕೆಲವು ನಾಟಕಗಳನ್ನು ಪರಿಚಯಿಸಬೇಕೆಂಬ ತುಡಿತ ಎಸ್.ಜಿ .ಶಾಸ್ತ್ರಿಗಳಲಿ ಮೊಳೆತಿದ್ದು ಸಂದರ್ಭೋಚಿವು ಆಗಿದೆ .
ಕೃತಿಗಳು
ಬದಲಾಯಿಸಿ- ಹೆನ್ರಿಕ್. ಇಬ್ಸನ್ನನ ದಿ ವಾರಿಯನ್ ಇನ್ ಹೆಗಲ್ಲ್ಯಾಂಡ್ ನಾಟಕದ ಅನುವಾದ ಆರ್ಯಕ (೧೯೧೬),
- ದಿ ಡಾಲ್‌ಹೌಸ್ ನಾಟಕದ ಅನುವಾದ ಸೂತ್ರದ ಬೊಂಬೆ(೧೯೬೨)
- ಲಾರೆನ್ಸ್ ಹೌಸ್ ನ ಡೆತ್ ಓಫ್ ಸಾಕ್ರಟಿಸ್ ಅನ್ನು ಸಾಕ್ರೆಟೀಸ್ ಮರಣ (೧೯೩೭) ಅನುವಾದಿಸಿದ್ದಾರೆ . ಇದು ಪ್ರಸಿದ್ಧವಾಗಿ ಹಲವಾರು ಯಶಸ್ವಿ ಪ್ರಯೋಗಗಳನ್ನು ಕಂಡಿರುವುದುದಲ್ಲದೆ ಹಲವು ಬಾರಿ ಪಠ್ಯ ಪುಸ್ತಕವಾಗಿಯೂ ಜನಪ್ರಿಯವಾಗಿತ್ತು.
- ಮಾರಿಸ್ ಮ್ಯಾಟರ್ಲಿಂಕ್‍ನ ಒಂದು ನಾಟಕವನ್ನು ಮೋನ್ನ-ವನ್ನ ಎಂಬ ಹೆಸರಿನಲ್ಲಿ ೧೯೫೫ ರಲ್ಲಿ ಅನುವಾದ ಮಾಡಿದ್ದಾರೆ.
- ಕಣ್ಣು ಬಿಚ್ಚಲೆಏಕಾಂಕ ನಾಟಕ ಮುಂತಾದ ಇನ್ನು ಕೆಲವು ಕೃತಿಗಳನ್ನು ಅನುವಾದಿಸಿದ್ದಾರೆ.
ಉಲ್ಲೇಖ
ಬದಲಾಯಿಸಿ- ↑ ಹೊಂಬಿದಿರು. ಪ್ರಧಾನ ಸಂಪಾದಕ:ಡಾ. ನಾ. ದಾಮೋದರ ಶೆಟ್ಟ, ಸ್ವಾಗತ ಸಮಿತಿ ಅಖಿಲ ಭಾರತ ೭೧ನೆಯ ಸಾಹಿತ್ಯ ಸಮ್ಮೇಳನ, ಮೂಡುಬಿದಿರೆ