ಎಲ್ ಆಲಮೇನ್
ಎಲ್ ಆಲಮೇನ್: ಈಜಿಪ್ಟಿನ ಅಲೆಕ್ಸಾಂಡ್ರಿಯ ನಗರದ ಪಶ್ಚಿಮಕ್ಕೆ 80 ಕಿ.ಮೀ ದೂರದಲ್ಲಿರುವ ಸ್ಥಳ.ಮೆಡಿಟರೇನಿಯನ್ ಸಮುದ್ರ ತೀರದಲ್ಲಿದೆ.೨೦೦೭ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೭೩೯೭[೧]
El Alamein
العلمين | |
---|---|
Country | Egypt |
Governorate | Matrouh |
Time zone | UTC+2 (EST) |
ಪ್ರಾಮುಖ್ಯತೆ
ಬದಲಾಯಿಸಿಎರಡನೆಯ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಕಾಮನ್ವೆಲ್ತಿನ ಎಂಟನೆಯ ಸೇನೆಗೂ ಮಾರ್ಷಲ್ ಎಡ್ವಿನ್ ರಾಮೆಲನ ನೇತೃತ್ವದಲ್ಲಿ ಆಫ್ರಿಕದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಜರ್ಮನ್-ಇಟಾಲಿಯನ್ ಸಂಯುಕ್ತ ಪಡೆಗಳಿಗೂ ನಡುವೆ ಇಲ್ಲಿ ಎರಡು ಕದನಗಳು ನಡೆದವು (1942). ಮೊದಲನೆಯ ಕದನ ನಡೆದದ್ದು ಜೂನ್ 30ರಿಂದ ಜುಲೈ 25ರ ವರೆಗೆ. ಆಗ ಜನರಲ್ ಸರ್ ಕ್ಲಾಡ್ ಆಕಿನ್ಲೆಕ್ನ ನೇತೃತ್ವದಲ್ಲಿ ಮೊದಲ ಬಾರಿಗೆ ರಾಮೆಲನ ಸೇನೆಯನ್ನು ತಡೆಯಲಾಯಿತು. ಎರಡನೆಯ ಯುದ್ಧ ಅಕ್ಟೋಬರ್ ೨೩ರಂದು ಆರಂಭವಾಗಿ ನವೆಂಬರ್ ೪ರಂದು ಕೊನೆಗೊಂಡಿತು. ಈ ಎರಡನೆಯ ಕದನ ನಿರ್ಣಾಯಕವಾದದ್ದು. ಇದರಲ್ಲಿ ಬ್ರಿಟಿಷ್ ಸೇನೆ ಸಂಪುರ್ಣವಾಗಿ ಮೇಲುಗೈ ಸ್ಥಾಪಿಸಿತಲ್ಲದೆ, ಅನಂತರ ಆಕ್ರಮಣಕಾರರನ್ನು ಅಟ್ಟಿಸಿಕೊಂಡು ಹೋಗಿ ಇಡೀ ಉತ್ತರ ಆಫ್ರಿಕದಿಂದ ಅವರು ಕಾಲ್ತೆಗೆಯುವ ಹಾಗೆ ಮಾಡಿತು. ಎರಡನೆಯ ಕದನದ ಸಮಯದಲ್ಲಿ ಎಂಟನೆಯ ಸೇನೆಯ ದಂಡನಾಯಕನಾಗಿದ್ದವನು ಜನರಲ್ ಸರ್ ಬರ್ನಾಡ್ (ಅನಂತರ ಲಾರ್ಡ್) ಮಾಂಟ್ಗಮರಿ.
ಛಾಯಾಂಕಣ
ಬದಲಾಯಿಸಿ-
Cross of Sacrifice, El Alamein Commonwealth cemetery
-
South African Memorial El Alamein Commonwealth cemetery
-
El Alamein Commonwealth cemetery plaque- '1939–1945 The land on which this cemetery stands is the gift of the Egyptian people for the perpetual resting place of the sailors, soldiers and airmen who are honoured here.'
-
El Alamein Commonwealth cemetery
-
El Alamein Italian memorial entrance
-
El Alamein German memorial
-
El Alamein Commonwealth cemetery 'A soldier of the 1939–1945 war known unto God'
-
In El Alamein museum
-
German Cannon
-
The list of fallen German soldiers
-
German Memorial
-
British Crusader tank
ಉಲ್ಲೇಖಗಳು
ಬದಲಾಯಿಸಿ- ↑ "Al 'Alamayn at tencarta". Archived from the original on 31 ಅಕ್ಟೋಬರ್ 2009. Retrieved 9 ಅಕ್ಟೋಬರ್ 2015.
{{cite web}}
: Unknown parameter|deadurl=
ignored (help)
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Falling Rain Genomics, Inc. "Geographical information on Al `Alamayn, Egypt".
- Matteo Ferrari. "El Alamein photos: Commonwealth war cemetery, Italian and German memorial, El Alamein war museum, Egypt".