ಎಲ್.ಎಸ್.ಶಶಿಧರ
ಲಿಂಗಾಧಹಳ್ಳಿ ಸುಬ್ರಹ್ಮಣ್ಯ ಶಶಿಧರ (೨೩ ಮಾರ್ಚ್ ೧೯೬೩) ರವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್ ಪೂನಾದಲ್ಲಿ ಜೀನ್ ತಜ್ಞ ಮತ್ತು ಭಾರತೀಯ ಪ್ರಾಧ್ಯಾಪಕ ಜೀವಶಾಸ್ತ್ರಜ್ಞರಾಗಿದ್ದಾರೆ .[೨] ಅವರು ಐಎಸ್ಎಸ್ಇಆರ್ ನಲ್ಲಿನ ಎಲ್ಎಸ್ಎಸ್ ಪ್ರಯೋಗಾಲಯದಲ್ಲಿ ನೇತೃತ್ವವಹಿಸುತ್ತಿದ್ದಾರೆ . ಅವರು ತಮ್ಮ ಡ್ರೊಸೋಫಿಲಾ ದ ಅಧ್ಯಯನಕ್ಕೆ ಹೆಸರುವಾಸಿಯಾಗಿದ್ದಾರೆ . ವಿಶೇಷವಾಗಿ ಅದರ ಅನುಬಂಧಗಳ ವಿಕಸನ ಮತ್ತು ಹೋಮಿಯೋಟಿಕ್ ಸೆಲೆಕ್ಟರ್ ಜೀನ್ ಗಳ ಕಾರ್ಯಕ್ಕೆ ಹೆಸರುವಾಸಿಯಾಗಿದ್ದಾರೆ . ಅವರು ಸೈನ್ಸ್ ಅಂಡ್ ಟೆಕ್ನಾಲಜಿ ಇಲಾಖೆಯ ಜೆ.ಸಿ. ಬೋಸ್ ರಾಷ್ಟ್ರೀಯ ಫೆಲೋ ಮತ್ತು ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ [೩], ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಮತ್ತು ಭಾರತದ ರಾಷ್ಟ್ರೀಯ ಅಕಾಡೆಮಿ ಆಫ್ ಸೈನ್ಸಸ್ ನ ಚುನಾಯಿತ ಸದಸ್ಯರಾಗಿದ್ದಾರೆ.[೪] ವೈಜ್ಞಾನಿಕ ಸಂಶೋಧನೆಗಾಗಿ ಭಾರತ ಸರ್ಕಾರದ ಅತ್ಯುನ್ನತ ಸಂಸ್ಥೆಯಾದ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಅವರು ಜೈವಿಕ ವಿಜ್ಞಾನಿಗಳು ನೀಡಿದ ಕೊಡುಗೆಗಳಿಗಾಗಿ , ೨೦೦೮ ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅತ್ಯುನ್ನತ ಪ್ರಶಸ್ತಿಯಾದ , ಭಾರತೀಯ ವಿಜ್ಞಾನ ಪ್ರಶಸ್ತಿಗಳಲ್ಲಿ ಒಂದಾದ , ಶಾಂತಿ ಸ್ವರೂಪ್ ಭಟ್ ನಗರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.[೫]
ಎಲ್.ಎಸ್.ಶಶಿಧರ | |
---|---|
ಜನನ | ೨೩ ಮಾರ್ಚ್ ೧೯೬೩ ಕರ್ನಾಟಕ, ಭಾರತ |
ವಾಸಸ್ಥಳ | ಪೂನಾ. ಮಹಾರಾಷ್ಟ್ರ,ಭಾರತ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ |
|
ಸಂಸ್ಥೆಗಳು |
|
ಅಭ್ಯಸಿಸಿದ ವಿದ್ಯಾಪೀಠ |
|
ಪ್ರಸಿದ್ಧಿಗೆ ಕಾರಣ | ಡ್ರೊಸೊಫಿಲಾ ಮೇಲಿನ ಅಧ್ಯಯನಕ್ಕೆ[೧] |
ಗಮನಾರ್ಹ ಪ್ರಶಸ್ತಿಗಳು |
|
ಜನನ
ಬದಲಾಯಿಸಿಶಿಕ್ಷಣ
ಬದಲಾಯಿಸಿಶಶಿಧರ ರವರು ೧೯೮೫ ರಲ್ಲಿ ಧಾರವಾಡ ವಿಶ್ವವಿದ್ಯಾನಿಲಯದಿಂದ ಕೃಷಿ ವಿಜ್ಞಾನದಲ್ಲಿ ಪದವಿಯನ್ನು ಪಡೆದರು[೮] , ನಂತರ ಅದೇ ವಿಶ್ವವಿದ್ಯಾನಿಲಯದಿಂದ ಜೆನೆಟಿಕ್ಸ್ ಮತ್ತು ಪ್ಲಾಂಟ್ ಬ್ರೀಡಿಂಗ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು . ೧೯೯೧ ರಲ್ಲಿ ಅವರು ಡಾಕ್ಟರೇಟ್ ಅಧ್ಯಯನಕ್ಕಾಗಿ ಕೇಂಬ್ರಿಡ್ಜ್ ಗೆ ತೆರಳಿದರು . ಕೇಂಬ್ರಿಡ್ಜ್ ನಲ್ಲಿ(೧೯೯೧-೧೯೯೩) ಅವರ ಡಾಕ್ಟರೇಟ್ ಅಧ್ಯಯನಗಳು ಪೂರ್ಣಗೊಂಡ ನಂತರ, ಅವರು ಜೈವಿಕ ವಿಜ್ಞಾನದ ರಾಷ್ಟ್ರೀಯ ಕೇಂದ್ರದಲ್ಲಿ ಸೇರಲು ಭಾರತಕ್ಕೆ ಹಿಂದಿರುಗಿದರು ಮತ್ತು ಎರಡು ವರ್ಷಗಳ ಕಾಲ ಸಂದರ್ಶಕರಾಗಿ ಕೆಲಸ ಮಾಡಿದರು. ಪ್ರಸ್ತುತ ಶಶಿಧರ ರವರು ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಸ್ಥಾನಿಕ ಸದಸ್ಯರಾಗಿದ್ದಾರೆ .[೯]
ಲೀಗಸಿ
ಬದಲಾಯಿಸಿಶಶಿಧರ ರವರ ಸಂಶೋಧನಾ ಬೆಳವಣಿಗೆಗಳು ಜೀವಶಾಸ್ತ್ರದ ಮೇಲೆ ಕೇಂದ್ರೀಕೃತವಾಗಿದ್ದವು . ನಿರ್ದಿಷ್ಟವಾಗಿ ಅವಯಗಳ ಬೆಳವಣಿಗೆ ಮತ್ತು ಅಲ್ಟ್ರಾಬಿಥೊರಾಕ್ಸ್ ,[೧೦] ಒಂದು ಹಾಕ್ಸ್ ಜೀನ್ ಸಂಶೋಧನಾ ಕಾರ್ಯದಲ್ಲಿ ಆಸಕ್ತಿ ವಹಿಸಿದ್ದರು .
ಪ್ರಶಸ್ತಿಗಳು
ಬದಲಾಯಿಸಿ- ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ನಿಂದ ಜೈವಿಕ ವಿಜ್ಞಾನದಲ್ಲಿ ತಂತ್ರಜ್ಞಾನ ಪ್ರಶಸ್ತಿ - ೨೦೦೩ .
- ಸೈನ್ಸ್ ರಿಸರ್ಚ್ ಕೌನ್ಸಿಲ್ ಆಫ್ ಅಟಾಮಿಕ್ ಎನರ್ಜಿ ಇಲಾಖೆಯಿಂದ ಅತ್ಯುತ್ತಮ ರಿಸರ್ಚ್ ಇನ್ವೆಸ್ಟಿಗೇಟರ್ ಅವಾರ್ಡ್ - ೨೦೦೬ .[೧೧]
- ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ - ೨೦೦೮ .[೧೨]
ಉಲ್ಲೇಖಗಳು
ಬದಲಾಯಿಸಿ- ↑ ಡ್ರೊಸೊಫಿಲಾ
- ↑ ಐಐಎಸ್ಸಿ
- ↑ "ಇಂಡಿಯನ್ ಫೆಲೋ". Archived from the original on 2019-05-30. Retrieved 2019-05-30.
- ↑ [೧]
- ↑ ಭಟ್ನಗರ್ ಪ್ರಶಸ್ತಿ ಪುರಸ್ಕೃತರು
- ↑ ಎಲ್.ಎಸ್.ಶಶಿಧರ
- ↑ ಜನನ
- ↑ "ಬಿ.ಎಸ್ಸಿ". Archived from the original on 2019-05-30. Retrieved 2019-05-30.
- ↑ ಪ್ರೊ.ಎಲ್.ಎಸ್.ಶಶಿಧರ , ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಚುನಾಯಿತ ಸದಸ್ಯರು
- ↑ ಅಲ್ಟ್ರಾಬಿಥೊರಾಕ್ಸ್
- ↑ ಅತ್ಯುತ್ತಮ ರಿಸರ್ಚ್ ಇನ್ವೆಸ್ಟಿಗೇಟರ್ ಪ್ರಶಸ್ತಿ
- ↑ ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ