ಎಲ್.ಇ.ಡಿ

ಅರೆವಾಹಕ ಮತ್ತು ಘನ ಸ್ಥಿತಿಯ ಬೆಳಕಿನ ಮೂಲ

ಎಲ್.ಇ.ಡಿ (ಲೈಟ್ ಎಮಿಟಿಂಗ್ ಡೈಯೋಡ್)ಸಂಪಾದಿಸಿ

ಎಲ್.ಇ.ಡಿ ಎಂಬುದು ಲೈಟ್ ಎಮಿಟಿಂಗ್ ಡೈಯೋಡ್ ಎಂಬುದರ ಹೃಸ್ವರೂಪವಾಗಿದ್ದು ಕನ್ನಡದಲ್ಲಿ ಇದನ್ನು ಬೆಳಕನ್ನು ಉತ್ಸರ್ಜಿಸುವ ದ್ವಯಾಗ್ರ(ಡಯೋಡ್) ಎನ್ನುತ್ತೇವೆ. ಎಲ್.ಇ.ಡಿ ಯು ಎರಡು ಎಳೆಗಳುಳ್ಳು ಬೆಳಕನ್ನು ಉತ್ತೇಜಿಸುವ ಅರೆವಾಹಕ ಸಾಧನ. ಇದು ಪಿ.ಎನ್ ರೀತಿಯ ಅರೆವಾಹಕಗಳ ಮಿಶ್ರಣದ ದ್ವಯಾಗ್ರ. ಯಾವಾಗ ಈ ದ್ವಯಾಗ್ರ ಧನ ತುದಿ (ಪಾಸಿಟಿವ್ ಲೀಡ್‍ಗೆ) ಸೂಕ್ತ ರೀತಿಯ ವಿದ್ಯತ್ ವಿಭಾವಂರತವನ್ನು (ವೋಲ್ಟೇಜ್) ನೀಡಲಾಗುತ್ತದೋ ಆವಾಗ ಇದರಲ್ಲಿರುವ ಎಲೆಕ್ಟ್ರಾನ್‍ಗಳು ರಂಧ್ರಗಳ ಜೊತೆಗೆ ಮರು ಹಂಚಿಕೆಗೊಂಡು ಪ್ರೋಟೋನ್ ರೂಪದಲ್ಲಿ( ಚಿಕ್ಕ ಸೂಕ್ಷ್ಮ ಕಣ) ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಈ ಪರಿಣಾಮಕ್ಕೆ ವಿದ್ಯುತ್ ದೀಪ್ತತೆ ( ಇಲೆಕ್ಟ್ರೋ ಲ್ಯೂಮಿನೆಸೆನ್ಸ್) ಎನ್ನುತ್ತಾರೆ. ಹಾಗೂ ಈ ವಿದ್ಯಾಮಾನದಲ್ಲಿ ಉತ್ಪತ್ತಿ ಆಗುವ ಬೆಳಕಿನ ಬಣ್ಣ ಅರೆವಾಹಕಗಳಲ್ಲಿನ ಶಕ್ತಿಯ ಪಟ್ಟಿಯ ಅಂತರದ( ಎನರ್ಜಿ ಬ್ಯಾಂಡ್ ಗ್ಯಾಪ್) ಮೇಲೆ ಅವಲಂಬಿತವಾಗಿರುತ್ತದೆ.

1962 ಕ್ಕೂ ಮೊದಲ ಎಲ್.ಇ.ಡಿ ಗಳು ಕಡಿಮೆ ತೀವ್ರತೆಯುಳ್ಳ ಅವಗೆಂಪು ಬೆಳಕನ್ನು ಉತ್ಸರ್ಜಿಸುತ್ತಿದ್ದವು. ಈ ದಿನಗಲಳಲ್ಲಿಯೂ ನಾವು ಇದನ್ನು ದೂರದರ್ಶನಗಳ ದೂರ ನಿಯಂತ್ರಕಗಳಲ್ಲಿ( ರಿಮೋಟ್ ಕಂಟ್ರೋಲ್) ಕಾಣಬಹುದಾಗಿದೆ. ಹಾಗೆಯೇ ಮೊದಲ ದೃಗ್ಗೋಚರ ಬೆಳಕನ್ನು ಉತ್ಸರ್ಜಿಸಿದ ಎಲ್.ಇ.ಡಿಯ ಬೆಳಕು ಸಹ ಕಡಿಮೆ ತೀವ್ರತೆಯನ್ನು ಹೊಂದಿತ್ತು. ಹಾಗೂ ಇದು ಕಂಪು ಬಣ್ಣವನ್ನು ಅಂದರೆ ಕೆಂಪು ಬೆಳಕನ್ನು ಉತ್ಸರ್ಜಿಸಿತ್ತು. ಇತ್ತೀಚಿನ ದಿನಗಳಲ್ಲಿ ಎಲ್.ಇ.ಡಿ ಗಳು ಧೃಗ್ಗೋಚರ, ಅತಿ ನೇರಳೆ ಅವಗೆಂಪು ತರಂಗಾತರಗಳ ಬೆಳಕನ್ನು ಉತ್ಸರ್ಜಿಸುವ ಸಾಮಥ್ರ್ಯವನ್ನು ಪಡೆದಿವೆ. ಅಷ್ಟೇಯಲ್ಲದೆ ಅತಿ ಪ್ರಕಾಶಮಾನವಾಹಿ ಆಗಿ ಸಹ ಉರಿಯುತ್ತದೆ.

ದ್ವಯಾಗ್ರ(ಡಯೋಡ್)ಸಂಪಾದಿಸಿ

ದ್ವಯಾಗ್ರ(ಡಯೋಡ್) ಎಂದರೆ ಇದೊಂದು ಎಲೆಕ್ಟ್ರಾನಿಕ್ ಸಾಧನವಾಗಿದ್ದು, ಪರ್ಯಾಯ ವಿದ್ಯುತ್‍ನ್ನು ನೇರ ವಿದ್ಯುತ್ ಅಥವಾ ಏಕ ಮುಖ ವಿದ್ಯುತ್ ಪ್ರವಾಹವನ್ನಾಗಿಸಲು ಬಳಸುವ ಉಪಕರಣವಾಗಿದೆ. ಒಂದು ಶುದ್ದ ಅರೆವಾಹಕದ ಅರಳಿನ ಒಂದು ಭಾಗದಲ್ಲಿ ದಾನಿ ಬೆರಕೆ, ಇನ್ನೊಂದು ಭಾಗದಲ್ಲಿ ಸ್ವೀಕಾರಿ ಬೆರಕೆಯನ್ನು ಸೇರಿಸಿದಾಗ ಮೊದಲ ಭಾಗವು 'ಎನ್' ರೀತಿಯ ಇನ್ನೊಂದು ಭಾಗವು 'ಪಿ' ರೀತಿಯ ಅರೆವಾಹಕವಾಗುತ್ತದೆ. ಇದನ್ನೇ ನಾವು ಪಿ-ಎನ್ ಜಂಕ್ಷನ್ ಡೈಯೋಡ್ ಪಿ-ಎನ್ ಸಂಧಿ ದ್ವಯಾಗ್ರ ಎನ್ನುತ್ತೇವೆ.

ಎಲ್.ಇ.ಡಿ.ಯ ಇತಿಹಾಸಸಂಪಾದಿಸಿ

1907 ರಲ್ಲಿ ಬ್ರೀಟಿಷ್ ಪ್ರಯೋಗಕಾರ ಹೆಚ್.ಜೆ ರೌಂಡ್ ಎಂಬುವವರು ವಿದ್ಯತ್ ದೀಪ್ತತೆ ( ಇಲೆಕ್ಟ್ರೋ ಲ್ಯೂಮಿನೆಸೆನ್ಸ್)ಯ ವಿದ್ಯಮಾನವನ್ನು ಕಂಡು ಹಿಡಿದರು. ಇವು ಇದಕ್ಕೆ ಉಪಯೋಗಿಸಿದ್ದು ಸಿಲಿಕಾನ್ ಕಾರ್ಬೈಡ್ ಮತ್ತು ಬೆಕ್ಕಿನ ಕೊದಲನ್ನು ಪತ್ತ ಮಾಡುವ ವಿಶೇಷ ಸಾಧನ. ಆದರೆ 1927 ರಲ್ಲಿ ಸೋವಿಯತ್ ಸಂಶೋಧಕ ಓಲಗ್ ಲೋಸವ್ ಎಲ್.ಇ.ಡಿ. ತಯಾರಿಕೆಯ ಕುರಿತು ಒಂದು ವರದಿ ಸಿದ್ದ ಪಡಿಸಿದರು. ಇವರ ಈ ಸಂಶೋಧನ ವರದಿಯು ಸೋವಿಯತ್‍ನೆಲ್ಲೆಡೆಯಲ್ಲಿ ಹಂಚಿಕೆಯಾಯಿತು. ಅಷ್ಟೇಯಲ್ಲದೆ ಬ್ರೀಟಿಷ್ ಹಾಗೂ ಜರ್ಮನ್ ವೈಜ್ಞಾನಿಕ ನಿಯತಕಾಲಿಕೆಗಳಲ್ಲಿಯೂ ಸಹ ಇದರ ಕುರಿತು ವರದಿ ಪ್ರಕಟವಾಯಿತು. ಆದರೆ ಕೆಲ ದಶಕಗಳವೆರೆಗೆ ಇದರ ಪ್ರಾಯೋಗಿಕ ಅನ್ವೇಷಣ ಮುಂದುವರೆಯಲೇ ಇಲ್ಲ. 1951 ರಲ್ಲಿ ಕರ್ಥ ಲೀಹೋಕ್, ಕಾರ್ಲ್ ಅಕಾರ್ಡೋ, ಎಡ್ವರ್ಡ್ ಜಮಾಗೋಷಿಯನ್ ಎಂಬ ಮೂವರು ಸಂಶೋಧಕರು ಸಿಲಿಕಾನ್ ಕಾರ್ಬೈಡ್ ಮತ್ತು ವಿದ್ಯುತ್ ಶುಷ್ಕಕೋಶವನ್ನು ಬಳಸಿ ಎಲ್‍ಇಡಿ ಬಲ್ಬ್ ಬಗ್ಗೆ ಸವಿವರವನ್ನು ನೀಡಿದರು. ಇವರು ಪ್ರಯೋಗದ ಸಮಯದಲ್ಲಿ ವಿಭಿನ್ನ ಮಾದರಿಯ ಸ್ಪಟಿಕಾಕೃತಿ( ಕ್ರಿಸ್ಟೆಲ್)ಯನ್ನು ಉಪಯೋಗಿಸಿದರು.

1955 ರಲ್ಲಿ ರೇಡಿಯೋ ಕಾರ್ಪೋರೇಶನ್ ಅಮೆರಿಕಾದ ರುಬಿನ್ ಬ್ರಾನ್ಸಸ್‍ಟಿಯನ್ ಎಂಬುವರು ಗೆಲಿಲಿಯಮ್ ಆರ್ಸನೈಡ್ ಎಂಬ ಅರೆವಾಹಕದಿಂದ ಅವÉಗೆಂಪು ವಿಕಿರಣ ಅಥವಾ ಬೆಳಕು ಉತ್ಸರ್ಜಿತವಾಗುವುದನ್ನು ತೋರಿಸಿಕೊಟ್ಟರು. ಇವರು ಸರಳ ದ್ವಯಾಗ್ರ(ಡಯೋಡ್) ಒಂದು ಮಾದರಿಯನ್ನಿ ಇಂಡಿಯಮ್ ಫಾಸ್ಪೈಡ್, ಸಿಲಿಕಾನ್ ಜರ್ಮೇನಿಯಮ್ ಗ್ಯಾಲಿಯಮ್ ಆ್ಯಂಟಿಮೊನೈಡ್ ಮುಂತಾದ ಮಿಶ್ರ ಲೋಹಗಳ ಮೂಲಕವು ಸಹ ಅವಗೆಂಪು ಬೆಳಕು ಕೊಠಡಿಯ ಉಷ್ಣತೆ ಹಾಗೂ 77 ಕೆಲ್ವಿನ್ ತಾಪದಲ್ಲಿಯೂ ಉತ್ಸರ್ಜಿತವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟರು. ಅಕ್ಟೋಬರ 1961 ರ ವೇಳೆಗೆ ಟೆಕ್ಸಾಸ್, ಜೇಮ್ಸ್, ಆರ್.ಬಿಯರ್ಡ್ ಮತ್ತು ಗ್ಯಾರಿ ಪಿಟ್‍ಮನ್ ಎಂಬುವರು ಒಂದು ಪ್ರಯೋಗದ ಮೂಲಕ ಗ್ಯಾಲಿಯಮ್ ಆರ್ಸನೈಡ್ ಪಿ-ಎನ್ ಸಂಧಿ(ಜಂಕ್ಷನ್) ಬೆಳಕು ಉತ್ಸರ್ಜಕ ಮತ್ತು ವಿದ್ಯುತ್ ಪ್ರತ್ಯೇಕಿತ ಅರೆವಾಹಕ ಬೆಳಕು ಪತ್ತೆ ಕಾರಿಯ ಮಧ್ಯೆ ಸ್ಪಷ್ಟವಾದ ಬೆಳಕು ಉತ್ಸರ್ಜಿತವಾಗುವುದನ್ನು ತೋರಿಸಿ ಕೊಟ್ಟರು.1962 ಅಕ್ಟೋಬರ್‍ನಲ್ಲಿ ಮೊದಲ ವಾಣಿಜ್ಯೀಕರಣಗೊಂಡ ಎಲ್‍ಇಡಿ ಬಲ್ಬ್‍ಗಳು ಮಾರಾಟಕ್ಕೆ ಮಾರುಕಟೆ ಪ್ರವೇಶಿಸಿದವು ಆದರೆ ಇವು ಕೇವಲ ಅವಗೆಂಪು ಬಣ್ಣಗಳನ್ನು ಮಾತ್ರ ಉತ್ಸರ್ಜಿಸುತ್ತಿದ್ದವು. ಇಲ್‍ಇಡಿಯು ಶುದ್ದ ಗ್ಯಾಲಿಯಮ್ ಆರ್ಸನೈಡ್ ಸ್ಪಟಿಕದಿಂದ ಕೂಡಿತ್ತು. ಮತ್ತು ಇದು 890 ನ್ಯಾನೋ ಮೀಟರ್‍ನಷ್ಟು ಬೆಳಕನ್ನು ಉತ್ಸರ್ಜಿಸಿತ್ತು. 1963 ಅಕ್ಟೋಬರ್ ರಲ್ಲಿ ಅಧಿಕೃತವಾಗಿ ಅರ್ಧ ಗೋಳಾಕೃತಿಯ ಎಸ್-ಎನ್-ಎಕ್ಸ್-110 ಎಂಬ ಎಲ್‍ಇಡಿಯು ಮಾರುಕಟ್ಟೆ ಪ್ರವೇಶ ಮಾಡಿತು.

1962ರಲ್ಲಿ ನಿಕ್‍ಹೋಲೋನೈಕ್ ಎಂಬುವವರು ಪ್ರಥಂ ಧೃಗ್ಗೋಚರ ಬೆಳಕಿನ ಎಲ್‍ಇಡಿಯನ್ನು ಅಭಿವೃಧ್ದಿ ಪಡಿಸಿದರು, ಇವರು ತಮ್ಮ ವರದಿಯನ್ನು ಪ್ರಥಮವಾಗಿ ಅನ್ವಯಿಕ ಭೌತಶಸ್ರ್ತದ ಅಕ್ಷರಗಳು ಎಂಬ ನಿಯತಕಾಲಿಕೆಲ್ಲಿ ಡಿಸೆಂಬರ್ 1, 1962 ರಲ್ಲಿ ಪ್ರಕಟಿಸಿದರು. ನಿಕ್‍ಹೋಲೋನೈಕ್ ಇವರ ಹಳೇ ವಿದ್ಯಾರ್ಥಿ ಎಂ.ಜಾರ್ಜ್ ಕ್ರಾಫ್‍ಪೋರ್ಡ್ ಪ್ರಥಮವಾಗಿ ಹಳದಿ ಬಣ್ಣದ ಎಲ್‍ಇಡಿಯನ್ನು ಸಂಶೋಧಿಸಿದರಲ್ಲದೆ ಕೆಂಪು ಮತ್ತು ಕೆಂಪು ಮಿಶ್ರಿತ ಹಳದಿ ಬಣ್ಣದ ಎಲ್‍ಇಡಿಯ ಪ್ರಕಾಶತೆಯನ್ನು ಸಹ ಹೆಚ್ಚಿಸಿದರು.

ಎಲ್‍ಇಡಿಯ ಕಾರ್ಯ ನಿರ್ವಹಣ ತತ್ವಸಂಪಾದಿಸಿ

ಒಂದು ಅರೆವಾಹಕದ ಪಿ-ಎನ್ ಸಂಧಿ ಜಂಕ್ಷನ್ ಮೂಲಕ ವಿದ್ಯತ್ ವಿಭಾಂವರತರವನ್ನು ಹಾಯಿಸಿದಾಗ ಬೆಳಕು ಉತ್ಸರ್ಜಿತವಾಗುವುದಕ್ಕೆ ವಿದ್ಯತ್ ಪ್ರದೀಪ್ತತೆ ಎನ್ನುತೇವೆ. ಅಂದರೆ ಈ ವಿದ್ಯಾಮಾನವು ವಿದ್ಯುತ್ ಕ್ಷೇತ್ರದ ಪ್ರಭಾವದಿಂದ ಅರೆವಾಹಕಗಳಲ್ಲಿ ಬೆಳಕು ಉತ್ಸರ್ಜಿತವಾಗುವ ಕ್ರಿಯೆ. ವಿದ್ಯುತ್ ಪೂರಣ (ಚಾರ್ಜ್) ಅರೆವಾಹಕದ ಮುನ್ನಡೆ ಒಲೊಮೆಗೆ ನೀಡಿದ ವಿದ್ಯುತ್ ಪೂರಣದಲ್ಲಿರುವ ಎಲೆಕ್ಟ್ರಾನ್‍ಗಳು ಎನ್ ವಲಯದಿಂದ ದಾಟುತ್ತವೆ. ಮತ್ತು ಪಿ ವಲಯದಲ್ಲಿರುವ ರಂಧ್ರಗಳ ಜೊತೆ ಮರು ಹೊಂದಾಣಿಕೆ ಮಾಡಿಕೊಳ್ಳುತ್ತವೆ. ಶಕ್ತಿ ಹಂಚಿಕೆಯ ವ್ಯವಸ್ಥೆಯಲ್ಲಿ ಸ್ವತಂತ್ರ್ಯ ಎಲೆಕ್ಟ್ರಾನ್‍ಗಳು ವಹನ ಪಟ್ಟಿ(ಕಂಡಕ್ಷನ್ ಬ್ಯಾಂಡ್) ಮತ್ತು ರಂಧ್ರಗಳು ಮತ್ತು ನಿರ್ದಿಷ್ಟ ಭಂದನದ ಚೌಕಟ್ಟಿನಲ್ಲಿಯೂ (ವೇಲ್ಸನ್ ಬ್ಯಾಂಡ್) ಇರುತ್ತವೆ. ಯಾವಾಗ ಈ ರಂಧ್ರ ಇಲೆಕ್ಟ್ರಾನ್‍ಗಳು ಬಾಹ್ಯ ವಿದ್ಯುತ್ ಪ್ರೇರಣೆಯಿಂದ ಮರು ಜೋಡಣೆಗೊಳ್ಳುತ್ತವೆಯೋ ಅವಾಗ ಶಕ್ತಿ ವ್ಯವಸ್ಥೆಯಲ್ಲಿನ ಕೆಲ ಶಕ್ತಿಗಳು ಕಾಣಿಸಿದಂತೆ ಆಗುತ್ತದೆ. ಈ ಕಣ್ಮರೆಯಾದ ಶಕ್ತಿಯೇ ಎಲ್‍ಇಡಿಯಲ್ಲಿ ಬೆಳಕಿನ ಮತ್ತು ಉಷ್ಣದ ರೂಪದಲ್ಲಿ ಉತ್ಸರ್ಜನೆಯಾಗುತ್ತದೆ. ಜರ್ಮೇನಿಯಂ ದ್ವಯಾಗ್ರಗಳಲ್ಲಿ ಗ್ಯಾಲಿಯಮ್ ಆರ್ಸನೈಡ್ ಮತ್ತು ಗ್ಯಾಲಿಯಮ್ ಫಾಸ್ಪೆಟ್ ಅರೆವಾಹಗಳಲ್ಲಿ ಎಲೆಕ್ರ್ಟಾನ್‍ಗಳು ಪ್ರೋಟಾನ್‍ಗಳ ರೂಪದಲ್ಲಿ ಕಣ್ಮರೆಯಾಗುತ್ತದೆ. ಒಂದು ವೇಳೆ ಅರೆವಾಹಕವು ಅರೆ ಪಾರದರ್ಶಕವಾಗಿದ್ದರೆ. ಪಿ-ಎನ್ ಜಂಕ್ಷನ್ ಒಂದು ಬೆಳಕನ್ನು ಉತ್ಸರ್ಜಿಸುವ ಸಾಧನವಾಗಿವೆ ಮಾರ್ಪಾಡಾಗುತ್ತೆದೆ. ಅದೇ ಜಂಕ್ಷನ್ ವ್ಯತಿರಿಕ್ತ ಒಲೊಮೆಯೊಂದಿದ್ದರೆ. ಯಾವುದೇ ಬೆಳಕು ಉತ್ಸಸರ್ಜಿತವಗಲಾರದು ಈ ರೀತಿ ಮಾಡಿದರೆ ಎಲ್‍ಇಡಿ ಹಾನಿಗೊಳಗಬಹುದು.

ಮುನ್ನಡೆ ಓಲುಮೆ ( ಫಾರವರ್ಡ್ ಬೈಯಾಸ್)ಸಂಪಾದಿಸಿ

ಒಂದು ವಿದ್ಯುತ್ ಕೋಶದ ಧನ ತುದಿಯನ್ನ ಇ-ಎನ್ ಜಂಕ್ಷನಿನ ಪಿ-ತುದಿಗೂ ಮತ್ತು ಋಣ ತುದಿಯನ್ನು ಎನ್-ಬದಿಗೂ ಸಂರ್ಕಿಸಿದಾಗ ಮುನ್ನಡೆ ಓಲುಮೆಯಾಗುತ್ತದೆ. ಈ ಸಂದರ್ಭದಲ್ಲಿ ಓದಗಿಸಿದ ವಿದ್ಯತ್ ವಿಭಾವಾಂತರ(ವೋಲ್ಟೇಜ್) ಪಿ-ಎನ್ ಸಂಧಿಯ ವಿಭಾಂವಾಂತರಕ್ಕಿಂತ ಜಾಸ್ತಿಯಾಗಿ ಪಿ-ಯಿಂದ ಎನ್ ಕಡೆಗೆ ರಂದ್ರಗಳ ಹರಿವು ಮತ್ತು ಎನ್ ನಿಂದ ಪಿ- ಕಡೆಗೆ ಇಲೆಕ್ರ್ಟಾನ್ ಹರಿವು ಆರಂಭವಾಗುತ್ತದೆ. ಇಲ್ಲಿ ಇವುಗಳ ಹರಿವಿಕೆಗೆ ಪಿ-ಎನ್ ಜಂಕ್ಷನ್ ಅಲ್ಪ ಪ್ರಮಾಣದ ರೋಧವನ್ನು ಒಡ್ಡುತ್ತದೆ.

ವ್ಯತಿರಿಕ್ತ ಒಲುಮೆ( ರಿವರ್ಸ್ ಬೈಯಾಸ್ )ಸಂಪಾದಿಸಿ

ವ್ಯತಿರಿಕ್ತ ಓಲುಮೆಯಲ್ಲಿ ವಿದ್ಯುತ್‍ಕೋಶದ ಧನ ತುದಿಯನ್ನು ಪಿ-ಎನ್ ಜಂಕ್ಷನ್‍ನಿನ ಎನ್ ಬದಿಗೂ ಮತ್ತು ಋಣ ತುದಿಯನ್ನು ಪಿ-ಬದಿಗೂ ಸಂಪರ್ಕಿಸಿದಾಗ ವ್ಯತಿರಿಕ್ತ ಓಲುಮೆ ಉಂಟಾಗುತ್ತದೆ. ಇಲ್ಲಿ ಜಂಕ್ಷನ್ ಮೂಲಕ ವಿದ್ಯತ್ ಪ್ರವಹಿಸುವುದಿಲ್ಲ ಅಂದರೆ ಓಲುಮೆ ಅಧಿಕ ಶೋಧವನ್ನು ಒಡ್ಡುತ್ತದೆ.

ಎಲ್‍ಇಡಿಯ ರಚನೆಸಂಪಾದಿಸಿ

ಎಲ್‍ಇಡಿಯು ಒಂದು ಅರೆವಾಹಕ ಚಿಪ್ಪನ್ನು ಹೊಂದಿದ್ದು ಪಿ-ಎನ್ ಜಂಕ್ಷನ್ ರಚಿಸಲು ಅದರ ಮೇಲೆ ಕಲ್ಮಶಗಳನ್ನು (ಇಂಪ್ಯರಿಟಿ) ಡೋಪಿಂಗ್ ಮಾಡುತ್ತಾರೆ. ಸಾಮಾನ್ಯವಾಗಿ ಇತರೆ ದ್ವಯಾಗ್ರಗಳಲ್ಲಿ ವಿದ್ಯತ್ ಸರಾಗವಾಗಿ ಪಿ ಬದಿಯಿಂದ ಎನ್ ಬದಿಗೆ ಚಲಿಸುತ್ತದೆ. ಆದರೆ ವ್ಯತಿರಿಕ್ತ ಓಲುಮೆಯಲ್ಲಿ ಯಾವುದೇ ರೀತಿಯ ಪ್ರವಾಹ ಇರುವುದಿಲ್ಲ. ಎಲ್‍ಇಡಿ ಗೆ ಬಾಹ್ಯ ರಂದ್ರಗಳು ವಿದ್ಯುದ್ವಾರ(ಇಲೆಕ್ನೋಡ್)ದಿಂದ ಪಿ-ಎನ್ ಜಂಕ್ಷನ್ ಕಡೆಗೆ ಹರಿಯುತ್ತದೆ. ಯಾವಾಗ ಇಲೆಕ್ಟ್ರಾನ್ ರಂದ್ರವನ್ನು ಸಂಧಿಸುತ್ತದೆಯೋ ಇಲೆಕ್ಟ್ರಾನ್ ಕೆಳಮಟ್ಟದ ಶಕ್ತಿ ಹಂತಕ್ಕೆ ಬೀಳುತ್ತದೆ. ಮತ್ತ ಇದು ಪ್ರೋಟಾನ್ ರೂಪದ ಶಕ್ತಿ\ಬೆಳಕನ್ನು ಬಿಡುಗಡೆ ಮಾಡುತ್ತದೆ. ಉತ್ಸರ್ಜಿತ ಬೆಳಕಿನ ಬಣ್ಣ ನಿರ್ಧಾರವಾಗುತ್ತದೆ. ಸಿಲಿಕಾನ್ ಮತ್ತು ಜರ್ಮೇನಿಯಂ ದ್ವಯಾಗ್ರಗಳ್ಲಿ ಇಲೆಕ್ಟ್ರಾನ್ ಮತ್ತು ರಂಧ್ರಗಳ ವಿಕಿರಣ ರಹಿತ ಪರಿವರ್ತನೆ ಮಾಡಿಕೊಳ್ಳುತ್ತದೆ. ಸಾಮಾನ್ಯವಾಗಿ ಎಲ್‍ಇಡಿಗಳು ಎನ್ ವಿಧದ ತಲಾಧಾರ ಮೇಲೆ ರೂಪುಗೊಳ್ಳೂತ್ತವೆ

ವಕ್ರೀಭವನ ಸೂಚ್ಯಂಕ( ರಿಪ್ರಾಕ್ಟಿವ್ ಇಂಡೆಕ್ಸ್)ಸಂಪಾದಿಸಿ

ಸಿಲಿಕಾನ್‍ನಿಂದ ಯಾವುದೇ ಹೊರ ಕವಚ ಅವರಿಸಿದ ಅರೆವಾಹಕಗಳು ಹೆಚ್ಚಿನ ವಕ್ರೀಭವನ ಸೂಚ್ಯಂಕವನ್ನು ಹೊಂದಿವೆ. ಗಾಳಿಯೊಂದಿಗೆ ಇದು ಫೋಟಾನ್‍ಗಳನ್ನು ಅರೆವಾಹಕದ ಎಲ್ಲಾ ಕೋನಗಳಲ್ಲೂ ತಲುಪುವುದಕ್ಕೆ ತಡೆಗಟ್ಟುತ್ತದೆ. ಅಂದರೆ ಇಲ್ಲಿ ಸಂಪೂರ್ಣ ಆಂತರಿಕ ಪ್ರತಿಫಲನ ನಡೆಯುವುದಿಲ್ಲ ಈ ಗುಣವು ಎಲ್‍ಇಡಿಯಿಂದ ಬೆಳಕು ಉತ್ಸರ್ಜಿತವಾಗುವುದಕ್ಕೆ ದಕ್ಷತೆಯ ಮೇಲೆ ವ್ಯತಿರಿಕ್ತ ಪ್ರಭಾವವನ್ನು ಬೀರುತ್ತದೆ. ಸಿಲಿಕಾನಿನ ವಕ್ರೀಭವನ ಸೂಚ್ಯಂಕವು 3.96 ಇದ್ದರೆ ಗಾಳಿಯದ್ದು 1.0002926. ವಕ್ರಿಭವನ ಸೂಚ್ಯಂಖವೆಂದರೆ ಬೆಳಕಿನ ವಕ್ರೀಭವನದ ಮೇಲಾಗುವ ವಸ್ತುವಿನ ಕೋನದ ಮಾಹಿತಿ.

ಪಾರದರ್ಶಕ ಲೇಪನಸಂಪಾದಿಸಿ

ಎಲ್‍ಇಡಿಯ ತಯಾರಿಕೆಯಲ್ಲಿ ಇದು ಕೊನೆಯ ಹಂತವಾಗಿದ್ದು ಕಲಬೆರೆಕೆಗಳನ್ನು ಡೋಪಿಂಗ್ ಮಾಡಿದ ನಂತರ ಇದನ್ನು ಒಂದೇ ಚಿಕ್ಕ ಆಕೃತಿಗೆ ತುಂಡರಿಸಲಾಗುತ್ತದೆ. ಇದನ್ನೇ ನಾವು ಚಿಪ್ ಎಂದು ಕರೆಯುತ್ತೇವೆ. ನಂತರ ಇವುಗಳಿಗೆ ಬಣ್ಣರಹಿತ ಅಂದರೆ ಒಳ ಅಥವಾ ವಿವಿಧ ಬಣ್ಣದ ಪ್ಲಾಸ್ಟಿಕ್ ಲೇಪನ ಮಾಡಲಾಗುತ್ತದೆ.ಏಕೆಂದರೆ,

 • ಸಿಲಿಕಾನ್ ಚಿಪ್ಪನ್ನ ಇತರೆ ಸಾಧನಗಳಿಗೆ ಅಳವಡಿಸಲು ಸುಲುಭವಾಗುತ್ತದೆ. ಅಂದರೆ ಎಲ್‍ಇಡಿಯನ್ನ ಅರೆವಾಹಕ ಚಿಪ್ಪನು ಅರೋಹಿಸಲು ಸುಲಭ.
 • ಅತಿ ಸೂಕ್ಷ್ಮವಾದ ಕಿರಿದಾದ ವಿದ್ಯುತ್ ತಂತಿಯನ್ನು ಸೇರಿಸಲು ಸುಲಭ ಮತ್ತು ಇದು ಹಾನಿಯಿಂದ ಸುರಕ್ಷಿತವಾಗಿದೆ.
 • ಇದು ಅತಿ ಹೆಚ್ಚಿನ ವಕ್ರೀಭವನ ಅರೆವಾಹಕ ಮತ್ತು ಕಡಿಮೆ ವಕ್ರೀಭವನದ ಸೂಚ್ಯಂಕದ ಗಾಳಿಯ ನಡುವೆ ವಕ್ರೀಭವನ ಮಾಧ್ಯಮಕಾರ ವರ್ತಿಸುತ್ತದೆ.

ಎಲ್‍ಇಡಿಯ ಜೀವಿತವಾಧಿಸಂಪಾದಿಸಿ

ಎಲ್‍ಇಡಿಗಳು ಅತಿ ಹೆಚ್ಚು ಬಾಳಿಕೆ ಬರಬೇಕಾದರೆ ಇವುಗಳನ್ನು ಅತ್ಯಂತ ಕಾಳಜಿಯಿಂದ ನಿರ್ವಹಿಸಬೇಕಾಗುತ್ತದೆ. ಒಂದು ವೇಳೆ ಇವು ಕಡಿಮೆ ವಿದ್ಯುತ್ ಮತ್ತು ಕಡಿಮೆ ಉಷ್ಣದಲ್ಲಿ ಕಾರ್ಯಾನಿರ್ವಹಿಸಿದರೆ ಇವುಗಳ ಕಾಲಾವಾಧಿ 25000 ರಿಂದ 10000 ಗಂಟೆಗಳು ಆದರೆ ಒಂದೇ ಪ್ರಮಾಣದ ವಿದ್ಯುತ್ ಪೂರೈಕೆ ಮತ್ತು ವಾತಾವರಣದಲ್ಲಿ ಉಷ್ಣಾಂಶ ಒಂದೇ ರೀತಿ ಇರುವುದು ಕಷ್ಟ ಸಾಧ್ಯ. ಇವುಗಳ ಕಾರ್ಯ ದಕ್ಷತೆ ಉಷ್ಣತೆಯ ಮೇಲೆ ನಿರ್ಧಾರಿತವಾಗುತ್ತದೆ. ಎಲ್‍ಇಡಿಗಳಿಗೆ ಧನ ಮತ್ತು ಋಣ ತುದಿಯಿದ್ದು ಇವುಗಳನ್ನು ನೇರ ವಿದ್ಯತ್ ಪ್ರವಾಹಕ್ಕೆ ಮಾತ್ರ ಸಂಪರ್ಕಿಸಬಹುದು ಮತ್ತು ಶುಷ್ಕಕೋಶಧ ಧನ ತುದಿಯನ್ನು ಎಲ್‍ಇಡಿಯ ಧನ ತುದಿಗೆ ಹಾಗೂ ಋಣ ತುದಿಯನ್ನು ಎಲ್‍ಇಡಿಯ ಋಣ ತುದಿಗೆ ಸಂಪರ್ಕಿಸಬೇಕು. ಇಲ್ಲವಾದಲ್ಲಿ ಎಲ್‍ಇಡಿ ಹಾಳಾಗುವ ಸಂಭವ ವಿರುತ್ತದೆ.

ಎಲ್‍ಇಡಿ ಆರೋಗ್ಯಕ್ಕೆ ಮಾರಕವೇ?ಸಂಪಾದಿಸಿ

ಖಂಡಿತ ಇಲ್ಲ. ಎಲ್‍ಇಡಿಯಿಂದ ಮಾನವನಿಗೆ ಯಾವುದೇ ರೀತಿಯ ಹಾನಿಗಳಿಲ್ಲ, ಆದಾಗ್ಯೂ ಸಹ ಕೆಲವೊಂದು ಇತಿ ಮಿತಿಗಳ ಕಾರಣ ಅವುಗಳನ್ನು ಕ್ಲಾಸ್-1 ಮತ್ತು ಕ್ಲಾಸ್-2 ಎಂಬ ಎರಡು ವಿಧದಲ್ಲಿ ವರ್ಗಿಕರಿಸಲಾಗುತ್ತದೆ.

 • ಕ್ಲಾಸ್-1 ಎಲ್‍ಇಡಿ; ಇವು ಅತ್ಯಂತ ಸುರಕ್ಷಿತವಾಗಿದ್ದು ಎಲ್ಲಾ ಸಂದರ್ಭದಲ್ಲಿಯೂ ಸಾಮಾನ್ಯವಾಗಿ ಬಳಸಬಹುದು.
 • ಕ್ಲಾಸ್-2 ಎಲ್‍ಇಡಿ; ಇತ್ತೀಚಿನ ದಿನಗಳಲ್ಲಿ ಅತೀ ಪ್ರಕಾಶಮಾನವಾದ ಎಲ್‍ಇಡಿಗಳು ಬರುತ್ತಿದ್ದು ಕಣ್ಣಿಗೆ ಹಾನಿಯಾಗಬಹುದೆಂಬ ಕೆಲವು ವರದಿಗಳಿವೆ ಆದರೆ ಇವುಗಳು ಅತಿ ಪ್ರಕಾಶಮಾನತೆಯಿಂದ ಕಣ್ಣುಗಳಿಗೆ ತಾತ್ಕಲಿಕ ತೊಂದರೆಯೇ ವಿನಃ ಶಾಶ್ವತ ತೊಂದರೆಗಳ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ. ಕ್ಲಾಸ್-2 ಎಲಿಡಿಯನ್ನ ಸಾರ್ವಜನಿಕ ಸ್ಥಳಗಳಲ್ಲಿ ಬಳಸದಂತೆ ಎಚ್ಚರಿಕೆ ನೀಡಲಾಗುತ್ತದೆ.

ಎಲ್‍ಇಡಿಯ ಅನುಕೂಲಗಳುಸಂಪಾದಿಸಿ

 • ಕಡಿಮೆ ಉಷ್ಣ ಉಪಯೋಗಿಸಿಕೊಂಡು ಹೆಚ್ಚಿನ ಬೆಳಕು ನೀಡುತ್ತವೆ.
 • ಯಾವುದೇ ರೀತಿಯ ಬಣ್ಣದ ಮಿಶ್ರಕಗಳನ್ನು ಬಳಸಿಕೊಳ್ಳದೆ ಹಲವು ಬಗೆಯ ಬಣ್ಣದ ಬೆಳಕನ್ನು ನೀಢುತ್ತವೆ.
 • ಗಾತ್ರದಲ್ಲಿ ಅತಿ ಚಿಕ್ಕದಾಗಿರುವುದರಿಂದ ಇಲೆಕ್ಟ್ರಾನಿಕ್ ಸಾಧನಗಳ ಮೇಲೆ ಸುಲಭವಾಗಿ ಕೂರಿಸಬಹುದು
 • ಅತ್ಯಂತ ವೇಗವಾಗಿ ಕಾರ್ಯ ನಿರ್ವಹಣೆ ಮಾಡುತ್ತವೆ.
 • ನಿಧಾನಗತಿಯಲ್ಲಿ ಹಾಳಾಗುತ್ತವೆ.
 • ವಿದ್ಯುತ್ ಅಪಘಾತ ಕಡಿಮೆ.
 • ಅತಿ ಹೆಚ್ಚು ಪ್ರಕಾಶಮಾನತೆಯನ್ನು ನೀಡುತ್ತವೆ.

ಎಲ್‍ಇಡಿಯ ಅನಾನುಕೂಲಗಳುಸಂಪಾದಿಸಿ

 • ಅತಿ ದುಬಾರಿ
 • ಸುಧೀರ್ಘ ಕಾಲ ಕಾರ್ಯ ನಿರ್ವಹಿಸಬೇಕಾದರೆ ಸಮ ಪ್ರಮಾಣದ ಉಷ್ಣಾಂಶ ಅಗತ್ಯ ಇಲ್ಲದಿದ್ದರೆ ಹಾಳಾಗುವ ಸಂಭವ ಹೆಚ್ಚು
 • ಇವುಗಳು ಅತಿಯಾದ ತೀವ್ರತೆಯಿಂದ ಕೂಡಿರುತ್ತದೆ.
 • ನೀಲಿ ಬಣ್ಣದ ತೀವ್ರತೆಯಿಂದ ಕೂಡಿರುವುದರಿಂದ ಕಣ್ಣಿಗೆ ಹಾನಿಯುಂಟಾಗುವ ಸಾಧ್ಯತೆ ಹೆಚ್ಚು
"https://kn.wikipedia.org/w/index.php?title=ಎಲ್.ಇ.ಡಿ&oldid=932857" ಇಂದ ಪಡೆಯಲ್ಪಟ್ಟಿದೆ