ಎಲೆಹುಳು: ಫಿಲ್ಲಿಡಿಡೀ ಕುಟುಂಬಕ್ಕೆ ಸೇರಿದ ಒಂದು ಕೀಟ .(ಲೀಫ್ ಇನ್ಸೆಕ್ಟ್‌; ವಾಕಿಂಗ್ ಲೀಫ್:ಫಿಲ್ಲಿಯಂ). ನೋಡಲು ಹಸಿರು ಎಲೆಯಂತೆ ಇದೆ. ಕಡ್ಡಿಹುಳುಗಳ ಹತ್ತಿರದ ಸಂಬಂಧಿ. ಕುಳಿತಾಗ ಬೆನ್ನನ್ನು ಮುಚ್ಚಿರುವ ಇದರ ಎರಡು ರೆಕ್ಕೆಗಳು ಸಂಪುರ್ಣವಾಗಿ ಎಲೆಯನ್ನು ಹೋಲುತ್ತವೆ. ಹೆಣ್ಣು ಹುಳುವಿನ ಹಿಂದಿನ ರೆಕ್ಕೆಗಳು ಹಾರಲು ಉಪಯುಕ್ತವಾಗಿಲ್ಲ. ಗಂಡು ಹುಳುವಿನಲ್ಲಿ ಎಲೆರೆಕ್ಕೆ ಸಣ್ಣನಾಗಿದ್ದು ಹಿಂದಿನ ರೆಕ್ಕೆಗಳು ಹಾರಲನೂಕೂಲವಾಗುವಂತೆ ಚೆನ್ನಾಗಿ ಬೆಳೆದಿವೆ. ಮರಿ ಕೆಂಪಗಿದ್ದು ಎಲೆ ತಿನ್ನುತ್ತ ತಿನ್ನುತ್ತ ಹಸುರು ಬಣ್ಣಕ್ಕೆ ತಿರುಗುತ್ತದೆ. ಕೇವಲ ಹಸಿರನ್ನು ತಿನ್ನುತ್ತವಾದ್ದರಿಂದ ಹಸುರು ಗಿಡಮರಗಳಲ್ಲೇ ಇರುತ್ತವಾಗಿ ಈ ಕೀಟಗಳ ಬಣ್ಣ ಮತ್ತು ಆಕಾರ ಇವಕ್ಕೆ ಸಾಕಷ್ಟು ರಕ್ಷಣೆ ಕೊಡುತ್ತವೆ. ಕಡ್ಡಿ ಹುಳುಗಳಲ್ಲಿರುವಂತೆ ಇವುಗಳ ತತ್ತಿಗಳು ಬೀಜಗಳನ್ನು ಹೋಲುತ್ತವೆ. ಇದರಿಂದ ತತ್ತಿಗಳಿಗೂ ರಕ್ಷಣೆ ಒದಗುತ್ತದೆ. ಭಾರತದಲ್ಲಲ್ಲದೆ ಪುರ್ವದ ಫಿಜಿ ದ್ವೀಪಗಳವರೆಗೂ ಇವುಗಳ ವ್ಯಾಪ್ತಿಯನ್ನು ಕಾಣಬಹುದು. ಎಲೆಹುಳುಗಳಲ್ಲಿ ಮೂರು ಜಾತಿಗಳನ್ನು ಇಪ್ಪತ್ತು ಪ್ರಬೇಧಗಳನ್ನು ಗುರುತಿಸಲಾಗಿದೆ. ಒಂಟೆ ಹುಳುವಿನ ಪ್ರೇಯಿಂಗ್ ಮ್ಯಾಂಟಿಸ್) ಕೆಲವು ಪ್ರಬೇಧಗಳಲ್ಲೂ ರೆಕ್ಕೆಯ ಬಣ್ಣ ಮತ್ತು ಆಕಾರ ಸ್ವಲ್ಪಮಟ್ಟಿಗೆ ಎಲೆಯನ್ನು ಹೋಲುವುದನ್ನು ಗಮನಿಸಬಹುದು (ನೋಡಿ- ಅನುಕರಣೆ-2). *

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಎಲೆಹುಳು&oldid=1158601" ಇಂದ ಪಡೆಯಲ್ಪಟ್ಟಿದೆ