ಎರ್ನ್‌ಸ್ಟ್ ಬೋರಿಸ್ ಚೈನ್
ಆರ್ಮನಿಯಲ್ಲಿ ಹುಟ್ಟಿ, ಬ್ರಿಟನ್ನಿನ ಜೈವಿಕರಸಾಯನವಿಜ್ಞಾನಿಯಾಗಿದ್ದ ಎರ್ನ್‌ಸ್ಟ್ ಬೋರಿಸ್ ಚೈನ್‌ರವರು ೧೯೦೬ರ ಜೂನ್ ೧೯ರಂದು ಬರ್ಲಿನ್‌ನಲ್ಲಿ ಜನಿಸಿದರು. sಸ್ಕಾಟ್‌ಲೆಂಡಿನ ಜೀವವಿಜ್ಞಾನಿಯಾಗಿದ್ದ ಅಲೆಕ್ಸಾಂಡರ್ ಫ್ಲೆಮಿಂಗ್‌ರವರು (೧೮೮೯-೧೯೫೫) ೧೯೨೯ರಲ್ಲಿ ’ಪೆನ್ಸಿಲಿನ್’ (penicillin) ಕಂಡುಹಿಡಿದಿದ್ದರು. ಚೈನ್‌ರವರು ೧೯೩೯ರಲ್ಲಿ ಹೊವಾರ್ಡ್ ವಾಲ್ಟರ್ ಫ್ಲೋರಿಯವರ ಜೊತೆ ಸೇರಿಕೊಂಡು ಸೂಕ್ಷಾಣುಜೀವಿಗಳಿಂದ (microorganisms) ಉತ್ಪತ್ತಿಯಾಗುವ ಸ್ವಾಭಾವಿಕ ಪ್ರತಿ-ಬ್ಯಾಕ್ಟೀರಿಯಾ ಕಾರಕಗಳ (agents) ಬಗ್ಗೆ ಅಧ್ಯಯನ ನಡೆಸಿದರು. ಆಗ ಅವರಿಬ್ಬರೂ ಪೆನ್ಸಿಲಿನ್‌ನ ಚಿಕಿತ್ಸಕ ಕ್ರಿಯೆ ಮತ್ತು ರಾಸಾಯನಿಕ ಸಂಯೋಜನೆಯನ್ನು ಕಂಡುಹಿಡಿದರು. ಅಲ್ಲದೆ ಚೈನ್‌ರವರು ಪೆನ್ಸಿಲಿನ್‌ನ ರಚನೆಯ ಬಗ್ಗೆ ಪರಿಕಲ್ಪನೆಯನ್ನು ಮಂಡಿಸಿದರು. ಮುಂದೆ ಬ್ರಿಟನ್ನಿನ ಮಹಿಳಾ ರಸಾಯನವಿಜ್ಞಾನಿ ಡೊರೋಥಿ ಹಾಡ್ಕಿನ್‌ರವರು (೧೯೧೦-೧೯೯೪) ’ಕ್ಷ-ಕಿರಣ ಸ್ಪಟಿಕವಿಜ್ಞಾನ’ದ (X-ray crystallography) ವಿಧಾನದಿಂದ ಚೈನ್‌ರವರ ಪರಿಕಲ್ಪನೆಯನ್ನು ದೃಢೀಕರಿಸಿದರು. ಪೆನ್ಸಿಲಿನ್ ಬಗ್ಗೆ ನಡೆಸಿದ ಸಂಶೋಧನೆಗಳಿಗೆ ೧೯೪೫ರ ವೈದ್ಯಕೀಯ ವಿಜ್ಞಾನಕ್ಷೇತ್ರಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ಚೈನ್‌ರವರ ಜೊತೆ ಫ್ಲೋರಿ ಮತ್ತು ಫ್ಲೆಮಿಂಗ್‌ರವರುಗಳ ಜೊತೆ ಜಂಟಿಯಾಗಿ ನೀಡಲಾಯಿತು.[೧] ಚೈನ್‌ರವರು ಚೈನ್‌ರವರು ೧೯೭೯ರ ಆಗಸ್ಟ್ ೧೨ರಂದು ಬ್ರಿಟನ್ನಿನಲ್ಲಿ ನಿಧನರಾದರು.
ಎರ್ನ್‌ಸ್ಟ್ ಬೋರಿಸ್ ಚೈನ್ | |
---|---|
ಜನನ | ಎರ್ನ್‌ಸ್ಟ್ ಬೋರಿಸ್ ಚೈನ್ ೧೯೦೬ ಜೂನ್ ೧೯ ಆರ್ಮನ್ |
ರಾಷ್ಟ್ರೀಯತೆ | ಬ್ರಿಟನ್ನ್ |