ಪೆನ್ಸಿಲಿನ್
ಪೆನ್ಸಿಲಿನ್ ಎ೦ಬುದು ಪೆನಿಸಿಲಿಯಂ ಶಿಲೀಂಧ್ರಗಳಿ೦ದ ಪಡೆದ ಪ್ರತಿಜೀವಕಗಳ ಒಂದು ಗುಂಪು. ಔಷಧಗಳ ಪಟ್ಟಿಯಲ್ಲಿ ಎಲ್ಲಾ ಔಷಧಗಳಿ೦ಥ ಹೆಚ್ಚು ಪರಿಣಾಮಕಾರಿಯಾದ ಆಂಟಿಬಯಾಟಿಕ್ಸ್ ಪೆನ್ಸಿಲಿನ್ ಆಗಿದೆ. ಇದು ಸ್ಟ್ಯಾಫಿಲೊಕೊಸ್ಸಿ ಮತ್ತು ಸ್ಟ್ರೆಪ್ಟೊಕಾಕೈ ಬ್ಯಾಕ್ಟೀರಿಯಾದಿ೦ದಾಗಿ ಉಂಟಾಗುವ ಅನೇಕ ರೀತಿಯ ಗ೦ಭೀರವಾದ ರೋಗಗಳ ವಿರುದ್ಧ ಪರಿಣಾಮಕಾರಿಯಾಗಿ ಹೂರಾಡಿದ ಮೊದಲ ಔಷಧವಾಗಿದೆ.ದುರುಪಯೋಗದ ಕಾರಣ ಹಲವು ಪ್ರಕಾರಗಳ ನಿರೋಧಕ ಬ್ಯಾಕ್ಟೀರಿಯಾಗಳು ಸೃಷ್ಟಿಯಾಗಿದ್ದರೂ ಸಹ ಪೆನಿಸಿಲಿನ್ ಅನ್ನು ಮಾತ್ರ ಇನ್ನೂ ವ್ಯಾಪಕವಾಗಿ ಬಳಸಲಾಗುತ್ತಿದೆ. ಎಲ್ಲಾ ಪೆನಿಸಿಲಿನ್ ಗಳು β-ಲ್ಯಾಕ್ಟಮ್ ಪ್ರತಿಜೀವಕಗಳು. ಇವುಹಗಳನ್ನು ಗ್ರಾಂ-ಪಾಸಿಟಿವ್ ಮೊದಲಾದ ಬ್ಯಾಕ್ಟೀರಿಯಾಗಳಿ೦ದಾಗಿ ಉ೦ಟಾಗುವ ಸೋಂಕುಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.ಆ೦ಟಿಸ್ಟಾಫಿಲೊಕಾಕೈ ಪೆನಿಸಿಲಿನ್, ಅಮೈನೊಪೆನಿಸಿಲಿನ್ಸ್ ಮತ್ತು ಹೆಚ್ಚು-ಪ್ರಬಲ ಆ೦ಟಿಸ್ಯುಡೊಮೊನಲ್ ಪೆನಿಸಿಲಿನ್ ಮೊದಲಾದ ಹಲವಾರು ವರ್ಧಿತ ಪೆನ್ಸಿಲಿನ್ ಕುಟುಂಬಗಳು ಅಸ್ತಿತ್ವದಲ್ಲಿವೆ. ಇವು ಹೆಚ್ಚುವರಿ ಬ್ಯಾಕ್ಟೀರಿಯಾಗಳ ವಿರುದ್ಧ ಪರಿಣಾಮಕಾರಿಯಾಗಿ ಹೂರಡುತ್ತವೆ.
ವೈದ್ಯಕೀಯ ಉಪಯೋಗಳು
ಬದಲಾಯಿಸಿಬೆನಸೈಲ್ಪೆನಿಸಿಲಿನ್ನ (ಪೆನ್ಸಿಲಿನ್ G), ಪ್ರೋಕೇಯ್ನ್ ಬೆನಸೈಲ್ಪೆನಿಸಿಲಿನ್ನ (ಪ್ರೋಕೇಯ್ನ್ ಪೆನ್ಸಿಲಿನ್),ಬೆನ್ಸಾತೈನ್ ಬೆನಸೈಲ್ಪೆನಿಸಿಲಿನ್ ಮತ್ತು ಫೀನೊಕ್ಸಿಮೀತೈಲ್ಪೆನ್ಸಿಲಿನ್ (ಪೆನ್ಸಿಲಿನ್ ವಿ) ಮೊದಲಾದವುಗಲನ್ನು ಉಲ್ಲೇಖಿಸಲು ಸಾರ್ವತ್ರಿಕವಾಗಿ "ಪೆನ್ಸಿಲಿನ್" ಎ೦ಬ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.ಪ್ರೋಕೇಯ್ನ್ ಪೆನ್ಸಿಲಿನ್ ಮತ್ತು ಬೆನ್ಸಾತೈನ್ಪೆನ್ಸಿಲಿನ್,ಬೆನಸೈಲ್ಪೆನಿಸಿಲಿನ್ನಹಾಗೆಯೆ ಜೀವಿರೋಧಿ ಚಟುವಟಿಕೆ ಹೊಂದಿವೆ ಆದರೆ ಅವುಗಳಿಗಿ೦ತ ಸುದೀರ್ಘ ಕಾಲ ಕಾರ್ಯನಿರ್ವಹಿಸುತ್ತದೆ.ಫೀನೊಕ್ಸಿಮೀತೈಲ್ಪೆನ್ಸಿಲಿನ್ಗಿ೦ತ,ಬೆನಸೈಲ್ಪೆನಿಸಿಲಿನ್ ಗ್ರಾಮ್-ನಕರಾತ್ಮಕ ಬ್ಯಾಕ್ಟೀರಿಯಾಗಳ ವಿರುದ್ಧ ಹೆಚ್ಚು ಸಕ್ರಿಯವಾಗಿ ಹೂರಾದುತ್ತದೆ.ಬೆನಸೈಲ್ಪೆನಿಸಿಲಿನ್ನ, ಪ್ರೋಕೇಯ್ನ್ ಪೆನ್ಸಿಲಿನ್ ಮತ್ತು ಪೆನ್ಸಿಲಿನ್ ಬೆನ್ಸಾತೈನ್ ನನ್ನು ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ, ಆದರೆ ಫೀನೊಕ್ಸಿಮೀತೈಲ್ಪೆನ್ಸಿಲಿನ್ ನನ್ನು ಮೌಖಿಕವಾಗಿ ನೀಡಲಾಗುತ್ತದೆ.
ಪ್ರಭಾವಗಳು
ಬದಲಾಯಿಸಿವಿಸ್ತರಿಸುತ್ತಿರುವ ಪೆನ್ಸಿಲಿನ್ ನಿರೋಧಕ ಬ್ಯಾಕ್ಟೀರಿಯಾದ ಸಂಖ್ಯೆಯ ಹೊರತಾಗಿಯೂ, ಈಗಲೂ ಇದನ್ನು ವಿವಿಧ ರೀತಿಯ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕುಗಳ ಚಿಕಿತ್ಸೆಗೆ ಬಳಸಬಹುದಾಗಿದೆ. ಸೊ೦ಕನ್ನು೦ಟುಮಾಡುವ ಬ್ಯಾಕ್ಟೀರಿಯಾಗಳ ಗು೦ಪಿನಲ್ಲಿ ಸ್ಟ್ರೆಪ್ಟೊಕಾಕೈ, ಸ್ಟ್ಯಾಫಿಲೊಕೊಸ್ಸಿ, ಕ್ಲಾಸ್ಟ್ರಿಡಿಯಮ್, ಮತ್ತು ಲಿಸ್ಟೇರಿಯಾ ಕುಲಗಳ ಸೇರಿವೆ
ಪ್ರತಿಕೂಲ ಪರಿಣಾಮಗಳು
ಬದಲಾಯಿಸಿಅತಿಸಾರ, ಅತಿಸೂಕ್ಷ್ಮ, ವಾಕರಿಕೆ, ರಾಶ್ , ನರಗಳ ತೊಂದರೆ, ಚುಚ್ಚುವುದು, ಮತ್ತು (ಕ್ಯಾಂಡಿಡಿಯಾಸಿಸ್ ಸೇರಿದಂತೆ) ಸೂಪರ್ ಇನ್ಪೆಕ್ಷನ್ ಇವು ಸಾಮಾನ್ಯವಾಗಿ ಪೆನ್ಸಿಲಿನ್ಗಳ ಬಳಕೆಯಿಂದಾಗಿ ಉ೦ಟಾಗುವ ಪ್ರತಿಕೂಲ ಪರಿಣಾಮಗಳಾಗಿವೆ.
ಕಾರ್ಯನಿರ್ವೇಧನಾ ಕ್ರಮ
ಬದಲಾಯಿಸಿಬ್ಯಾಕ್ಟೀರಿಯಾಗಳು ತಮ್ಮ ಜೀವಕೋಶ ಗೋಡೆಗಳನ್ನು ನಿರ೦ತರವಾಗಿ ಮರುರೂಪಿಸುತ್ತಿರುತ್ತವೆ. ಪೆನಿಸಿಲಿನ್ ನ, ನಾಲ್ಕು ಸದಸ್ಯರುಳ್ಳ β ಲ್ಯಾಕ್ಟಂ ರಿಂಗ್ ಹೋಗಿ ಡಿಡಿ-ಟ್ರ್ಯಾನ್ಸ್ಪೆಪ್ಟಿಡೇಸ್ ಕಿಣ್ವವನ್ನು ಬಂಧಿಸುವ ಮೂಲಕ; β ಲ್ಯಾಕ್ಟಂ ಪ್ರತಿಜೀವಕಗಳು, ಬ್ಯಾಕ್ಟೀರಿಯಾದ ಕೋಶ ಗೋಡೆಗಳಲ್ಲಿರುವ ಪೆಪ್ಟಿಡೋಗ್ಲೈಕಾನ್ನಿನ ಅಡ್ಡ ಕೊಂಡಿಗಳ ರಚನೆಗೆ ಅಡ್ಡಿಪಡಿಸುತ್ತವೆ.ಇದರ ಪರಿಣಾಮವಾಗಿ, ಡಿಡಿ-ಟ್ರ್ಯಾನ್ಸ್ಪೆಪ್ಟಿಡೇಸ್ ಗೆ ಈ ಅಡ್ಡ ಕೊಂಡಿಗಳ ರಚನೆಯಲ್ಲಿ ವೇಗವರ್ಧಕವಾಗಿ ಪ್ರವರ್ತಿಸಲು ಸಾಧ್ಯವಾಗುವುದಿಲ್ಲ, ಅಲ್ಲದೆ ಕೋಶ ಗೋಡೆಗಳ ನಿರ್ಮಾಣ ಮತ್ತು ಅವನತಿಗಳ ಕ್ರಮದಲ್ಲಿ ಅಸಮತೋಲನಗಳು ಕ೦ಡುಬ೦ದು, ಜೀವಕೋಶಗಳು ವೇಗವಾಗಿ ಸಾಯುವುದಕ್ಕೆಕಾರಣವಾಗುತ್ತದೆ.
ಇದು ಬ್ಯಾಕ್ಟೀರಿಯಾದ ಕೋಶಭಿತ್ತಿಗಳನ್ನು ದುರ್ಬಲಗೊಳಿಸುತ್ತದೆ, ಹಾಗು ಆಸ್ಮೋಸಿಸ್ ಒತ್ತಡ ಹೆಚ್ಚಾಗಿ ಕೋಶ ಮರಣಕ್ಕೆ (ಸೈಟೊಲೈಸಿಸ್) ಕಾರಣವಾಗುತ್ತದೆ.