ಎರಿಕ್ ದಿ ರೆಡ್
ಎರಿಕ್ ದಿ ರೆಡ್: 950-1003, ನಾರ್ವೆದೇಶದ ಪರಿಶೋಧಕ. ಹುಟ್ಟಿದ್ದು ಸ್ಟಾವಾಂಗರಿನ ಸಮೀಪದಲ್ಲಿ. ಎರಿಕ್ ಟೂರ್ ಮ್ಯಲ್ಸನ್ ಎಂಬುದು ಇವನ ನಿಜನಾಮಧೇಯ. ಎರಿಕ್ ದಿ ರೆಡ್ ಎಂಬ ಅಡ್ಡ ಹೆಸರು ಹಾಸ್ಯವಾಗಿ ಇವನಿಗೆ ಅಂಟಿಕೊಂಡಿತು.ಬಹುಶಃ ಇವನ ಗಡ್ಡ ಅಥವಾ ತಲೆಗೂದಲಿನ ಬಣ್ಣದಿಂದ ಇದು ಬಂದಿರಬಹುದು.[೧],[೨] ಈ ಹೆಸರಿನಿಂದಲೇ ಈತ ಪ್ರಸಿದ್ಧನಾಗಿದ್ದಾನೆ. ಕೊಲೆ ಆಪಾದನೆಯ ಮೇಲೆ ಗಡೀಪಾರಾದ ತಂದೆಯೊಂದಿಗೆ ಇವನೂ ದೇಶಭ್ರಷ್ಟನಾಗಬೇಕಾಯಿತು. ಅನಂತರ ಈತ ಐಸ್ಲೆಂಡಿನಲ್ಲಿ ನೆಲೆಸಿದ. ಜಗಳದಲ್ಲಿ ಭಾಗವಹಿಸಿದನೆಂದು ಅಲ್ಲಿಂದಲೂ ಇವನನ್ನು ಹೊರಹಾಕಲಾಯಿತು[೩], ಪಶ್ಚಿಮದಲ್ಲಿ ಇದೆಯೆಂದು ಹೇಳಲಾಗಿದ್ದ ಹೊಸ ಭೂಮಿಗೆ ಆಗ ಈತ ಪಯಣ ಬೆಳೆಸಿದ; ಗ್ರೀನ್ಲೆಂಡ್ ತಲಪಿ ಮುಂದುವರಿದು ಇಂದಿನ ಗಾಟ್ಹಾಪಿನಲ್ಲಿ ಚಳಿಗಾಲ ದಾಟಿ ಕರಾವಳಿಯ ಪರಿಶೋಧನೆಯಲ್ಲೇ ಮೂರು ವರ್ಷ ಕಳೆದು ಐಸ್ಲೆಂಡಿಗೆ ಮರಳಿ 986ರಲ್ಲಿ ಪ್ರಥಮ ವಲಸೆಗಾರರೊಂದಿಗೆ ಗ್ರೀನ್ಲೆಂಡಿಗೆ ಹೋದ. ಈತ ಸಾಯುವುದಕ್ಕೆ ಮುನ್ನ ಇವರ ಮಗ ಲೀಫ್ ಎರಿಕ್ಸನ್ ಅಮೆರಿಕದ ಈಶಾನ್ಯ ಕರಾವಳಿ ಪರಿಶೋಧಿಸಿದ. ಎರಿಕ್ಸನ್ನನೇ ಉತ್ತರ ಅಮೆರಿಕದ ಪ್ರಥಮ ಐರೋಪ್ಯ ಪರಿಶೋಧಕನೆಂದು ನಂಬಲಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ The Little Ice Age: How Climate Made History, 1300–1850, Basic Books, 2002, p. 10. ISBN 0-465-02272-3.
- ↑ Cooper Edens: Sea Stories: A Classic Illustrated Edition, 2007, ISBN 9780811856348, p. 53
- ↑ "Eric the Red." Encyclopedia of World Biography. 2004. Retrieved November 08, 2012 from Encyclopedia.com: http://www.encyclopedia.com/doc/1G2-3404702026.html.