ಎರಿಕಾ ಫರ್ನಾಂಡಿಸ್

ಭಾರತೀಯ ನಟಿ

ಎರಿಕಾ ಜೆನ್ನಿಫರ್ ಫರ್ನಾಂಡಿಸ್ ಒಬ್ಬ ಭಾರತೀಯ ನಟಿ ಮತ್ತು ರೂಪದರ್ಶಿ. ಇವರು ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಮೊದಲು, ಫೆಮಿನಾ ಮಿಸ್ ಇಂಡಿಯಾ ೨೦೧೨ರ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ ಎಂಬ ಧಾರವಾಹಿಯಲ್ಲಿ ಡಾ. ಸೋನಾಕ್ಷಿ ಬೋಸ್ ಪಾತ್ರಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ ಇವರು ಸ್ಟಾರ್ ಪ್ಲಸ್ ನ 'ಕಾಸೌಟಿ ಜಿಂದಾಗಿ ಕೇ' ಧಾರವಾಹಿಯಲ್ಲಿ ಪ್ರೆರ್ನಾ ಶರ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.[][]

ಎರಿಕಾ ಫರ್ನಾಂಡಿಸ್
Born
ಎರಿಕಾ ಜೆನ್ನಿಫರ್ ಫರ್ನಾಂಡಿಸ್

೭ ಮೇ ೧೯೯೩
ಮಂಗಳೂರು, ಕರ್ನಾಟಕ, ಭಾರತ
Nationalityಭಾರತೀಯ
Occupation(s)ನಟಿ, ಮಾಡೆಲ್
Years active೨೦೧೩- ವರ್ತಮಾನ ಕಾಲ
Known for'ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ' ಮತ್ತು 'ಕಾಸೌಟಿ ಜಿಂದಾಗಿ ಕೇ'

ಜನನ , ಆರಂಭಿಕ ಜೀವನ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

ಎರಿಕಾ ಫರ್ನಾಂಡಿಸ್ ರವರು ೭ ಮೇ ೧೯೯೩ ರಲ್ಲಿ ಮಂಗಳೂರಿನ ಒಂದು ಕೊಂಕಣಿ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ರಾಲ್ಫ್ ಫರ್ನಾಂಡಿಸ್ ಮತ್ತು ತಾಯಿ ಲವಿನಾ ಫರ್ನಾಂಡಿಸ್. ನಂತರ ಮುಂಬೈನಲ್ಲಿ ಬೆಳೆದರು.[] ಎರಿಕಾಳ Archived 2019-06-04 ವೇಬ್ಯಾಕ್ ಮೆಷಿನ್ ನಲ್ಲಿ. ಕುಟುಂಬವು ಕ್ಯಾಥೊಲಿಕ್ನಲ್ಲಿ ನಂಬಿಕೆ ಹೊಂದಿದೆ. ಅವರು ಶಾಲಾ ಶಿಕ್ಷಣವನ್ನು ಕುರ್ಲಾದ ಹೋಲಿ ಕ್ರಾಸ್ ಹೈಸ್ಕೂಲಿನಲ್ಲಿ ಮಾಡಿದರು. ಸಿಯಾನ್ ನ ಎಸ್ಐಎಎಸ್ ಕಾಲೇಜಿನಿಂದ ತನ್ನ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದರು.[]

ವೃತ್ತಿಜೀವನ

ಬದಲಾಯಿಸಿ

೨೦೧೦ ರಿಂದ, ಫರ್ನಾಂಡಿಸ್ ಇತರ ಶೀರ್ಷಿಕೆಗಳಲ್ಲಿ ಪ್ಯಾಂಟಲೂನ್ಸ್ ಫೆಮಿನಾ ಮಿಸ್ ಮಹಾರಾಷ್ಟ್ರ ೨೦೧೧ ರಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ನಿರ್ದೇಶಕ ಕುಮಾರ್ ಅವರ ಪುತ್ರ ಸುಜಿವ್ ಅಭಿನಯದ ದ್ವಿಭಾಷಾ ಚಿತ್ರ ವಿರಾಟ್ಟು / ದೇಗಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲು ಅವರು ಆಯ್ಕೆಯಾದರು.
ನಿರ್ದೇಶಕ ಸಸಿ ಅವರು ಮೀರಾ ಕಥಿರಾವನ್ ಅವರ ಕಚೇರಿಯಲ್ಲಿ ಅವರ ಚಿತ್ರಗಳನ್ನು ನೋಡಿದ್ದರು, ಅವರೊಂದಿಗೆ ಅವರು ಮತ್ತೊಂದು ಚಿತ್ರದ ಚಿತ್ರೀಕರಣದಲ್ಲಿದ್ದರು,ಅವರು ಅಯಂತು ಅಯಂತು ಅಯಂತು ಚಿತ್ರಕ್ಕಾಗಿ ನಟಿಸುತ್ತಿದ್ದರು. ಈ ಚಿತ್ರದಲ್ಲಿ ಸಸಿ ಅವರಿಗೆ ಸಾಫ್ಟ್‌ವೇರ್ ಎಂಜಿನಿಯರ್ ಪಾತ್ರವನ್ನು ಭರತ್ ಜೊತೆಗೆ ನೀಡಿದರು. ಅವರ ಇತರ ಚಿತ್ರಗಳ ವಿಳಂಬದಿಂದಾಗಿ, ಅವರ ಅಯಂತು ಅಯಂತು ಅಯಂತು ಚಿತ್ರಮೊದಲ ಬಿಡುಗಡೆಯಾಯಿತು. ೨೦೧೪ ರಲ್ಲಿ, ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಿನ್ನಿಂದಲೇ ಚಿತ್ರದೊಂದಿಗೆ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಕಾಣಿಸಿಕೊಂಡರು. ನಂತರ ನೀಲಾ ಮದ್ಹಬ್ ಪಾಂಡೆ ನಿರ್ದೇಶನದ ಹಿಂದಿ ಚಿತ್ರ ಬಾಬ್ಲೂ ಹ್ಯಾಪಿ ಹೈ ಚಿತ್ರದಲ್ಲಿ ನಟಿಸಿದರು. ಫೆಬ್ರವರಿ ೨೦೧೪ ರಲ್ಲಿ ವಿರಾಟ್ಟು ಅಂತಿಮವಾಗಿ ಬಿಡುಗಡೆ ಮಾಡಲಾಯಿತು. ಅದಾಗ್ಯೂ ಇದರ ತೆಲುಗು ಆವೃತ್ತಿಯನ್ನು ೨೦೧೪ ರ ಅಂತ್ಯಕ್ಕೆ ತಳ್ಳಲಾಯಿತು ಮತ್ತು ಗಾಳಿಪಟಂ ಅವರ ಮೊದಲ ತೆಲುಗು ಚಿತ್ರ ಬಿಡುಗಡೆಯಾಯಿತು.
೨೦೧೬ರಲ್ಲಿ, ಫರ್ನಾಂಡಿಸ್ ಸೋನಿ ಟಿವಿಯ ಕುಚ್ ರಂಗ್ ಪ್ಯಾರ್ ಕೆ ಏಸೆ ಭೀ[] ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಅಲ್ಲಿ ಅವರು ಶಹೀರ್ ಶೇಖ್ ಎದುರು ಡಾ. ಸೋನಾಕ್ಷಿ ಬೋಸ್ ಪಾತ್ರದಲ್ಲಿ ನಟಿಸಿದ್ದಾರೆ. ಶೇಖ್ ಅವರೊಂದಿಗಿನ ಅವರ ಜೋಡಿ ಮೆಚ್ಚುಗೆಗೆ ಪಾತ್ರವಾಯಿತು.[] ಪ್ರದರ್ಶನದಲ್ಲಿನ ಅಭಿನಯಕ್ಕಾಗಿ, ಅವರು ವರ್ಷದ ಮಹಿಳಾ ನಟನಿಗಾಗಿ ಏಷ್ಯನ್ ವೀಕ್ಷಕರ ದೂರದರ್ಶನ ಪ್ರಶಸ್ತಿ ಮತ್ತು ಅತ್ಯುತ್ತಮ ತೆರೆಯ ಜೋಡಿಯ ಪ್ರಶಸ್ತಿಗಾಗಿ ಲಯನ್ಸ್ ಚಿನ್ನದ ಪ್ರಶಸ್ತಿಯನ್ನು ಗೆದ್ದರು.
೨೦೧೮ ರಿಂದ, ಅವರು ಸ್ಟಾರ್ ಪ್ಲಸ್‌ನ ಕಸೌಟಿ ಜಿಂದಗೀ ಕೇ ಧಾರವಾಹಿಯಲ್ಲಿ ಪಾರ್ಥ್ ಸಮಂಥನ್ ಎದುರು ಪ್ರೇರಣಾ ಬಜಾಜ್ / ಪ್ರೇರಣಾ ಶರ್ಮಾ[] / ಪ್ರೇರಣಾ ಅನುರಾಗ್ ಬಸು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರ ಅಭಿನಯಕ್ಕಾಗಿ; ಹೆಚ್ಚು ಜನಪ್ರಿಯ ನಟಿಗಾಗಿ ಕಲಾಕರ್ ಪ್ರಶಸ್ತಿ, ಅತ್ಯುತ್ತಮ ತೆರೆಯ ಜೋಡಿ, ಭಾರತೀಯ ಟೆಲ್ಲಿ ಪ್ರಶಸ್ತಿ, ಅತ್ಯುತ್ತಮ ನಟ ಮಹಿಳಾ ವಿಮರ್ಶಕರಿಗಾಗಿ ಗೋಲ್ಡ್ ಪ್ರಶಸ್ತಿ[] ಮತ್ತು ವರ್ಷದ ಮಹಿಳಾ ನಟನಿಗಾಗಿ ಏಷ್ಯನ್ ವೀಕ್ಷಕರ ದೂರದರ್ಶನ ಪ್ರಶಸ್ತಿ ಪಡೆದರು.[]

ಫಿಲ್ಮೋಗ್ರಾಫಿ

ಬದಲಾಯಿಸಿ

ಚಲನಚಿತ್ರಗಳು

ಬದಲಾಯಿಸಿ
ವರ್ಷ ಫಿಲ್ಮ್ ಪಾತ್ರ ಭಾಷೆ
೨೦೧೩ ಐಂತೂ ಐಂತೂ ಐಂತೂ[೧೦] ಮಂಜರಿ ತಮಿಳು
೨೦೧೪ ನಿನ್ನಿಂದಲೇ[೧೧] ಪ್ರಮಿಳಾ ಕನ್ನಡ
ಬಬ್ಲೂ ಹ್ಯಾಪಿ ಹೆ ನತಾಶ ಹಿಂದಿ
ವಿರಟ್ಟು[೧೨] ಶ್ರೆಗ್ ತಮಿಳು
ಗಾಳಿಪಟಂ[೧೩] ಸ್ವಾತಿ ತೆಲುಗು
ಡೆಗಾ ಶ್ರೀ ತೆಲುಗು
೨೦೧೫ ಬುಗುರಿ[೧೪] ಇಶನ್ಯ ಕನ್ನಡ
೨೦೧೭ ವಿಝಿತಿರು ಕ್ರಿಸ್ಟಿನಾ ತಮಿಳು

ದೂರದರ್ಶನ

ಬದಲಾಯಿಸಿ
ವರ್ಷ ಕಾರ್ಯಕ್ರಮ ಪಾತ್ರ ಚಾನಲ್
೨೦೧೬-೨೦೧೭ ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ[೧೫] ಡಾ. ಸೋನಾಕ್ಷಿ ಬೋಸ್ ಸೋನಿ ಟಿವಿ
೨೦೧೮- ಪ್ರಸ್ತುತ ಕಾಸೌಟಿ ಜಿಂದಾಗಿ ಕೇ[೧೬] ಪ್ರೆರ್ನಾ ಶರ್ಮ ಸ್ಟಾರ್ ಪ್ಲಸ್

ರಿಯಾಲಿಟಿ ಶೋ

ಬದಲಾಯಿಸಿ
ವರ್ಷ ಕಾರ್ಯಕ್ರಮ ಪಾತ್ರ ಚಾನೆಲ್ ಟಿಪ್ಪಣಿಗಳು
೨೦೧೬ ಬಾಕ್ಸ್ ಕ್ರಿಕೆಟ್ ಲೀಗ್ - ಸೀಸನ್ ೨ ಸ್ಪರ್ಧಿ ಕಲರ್ಸ್ ಟಿವಿ ವುಮೆನ್ ಆಫ್ ದಿ ಮ್ಯಾಚ್ ಪ್ರಶಸ್ತಿ
೨೦೧೮ ಬಾಕ್ಸ್ ಕ್ರಿಕೆಟ್ ಲೀಗ್ - ಸೀಸನ್ ೩ ಸ್ಪರ್ಧಿ ಎಂಟಿವಿ ಇಂಡಿಯಾ ಗರ್ಲ್ ಆಫ್ ದಿ ಮ್ಯಾಚ್ ಪ್ರಶಸ್ತಿ

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಬದಲಾಯಿಸಿ
ವರ್ಷ ಪಶಸ್ತಿ ವರ್ಗ ಕಾರ್ಯಕ್ರಮ ಫಲಿತಾಂಶ
೨೦೧೬ ಗೋಲ್ಡ್ ಅವಾರ್ಡ್ ಅತ್ಯುತ್ತಮ ತೆರೆಯ ಮೇಲಿನ ಜೋಡಿ

((ಶಹೀರ್ ಶೇಖ್ ಜೊತೆ))

ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ Nominated
ಅತ್ಯುತ್ತಮ ನಟಿ
ಏಶಿಯನ್ ವಿವರ್ಸ್ ಟೆಲಿವಿಷನ್ ಅವಾರ್ಡ್ಸ್[೧೭] ವರ್ಷದ ಮಹಿಳಾ ನಟಿ ಗೆಲುವು
೨೦೧೭ ಲಯನ್ಸ್ ಗೋಲ್ಡ್ ಅವಾರ್ಡ್ಸ್ ಅತ್ಯುತ್ತಮ ತೆರೆಯ ಮೇಲಿನ ಜೋಡಿ

((ಶಹೀರ್ ಶೇಖ್ ಜೊತೆ))

ಗೆಲುವು
೨೦೧೮ ಏಶಿಯನ್ ವಿವರ್ಸ್ ಟೆಲಿವಿಷನ್ ಅವಾರ್ಡ್ಸ್ ವರ್ಷದ ಮಹಿಳಾ ನಟಿ ಕಾಸೌಟಿ ಜಿಂದಾಗಿ ಕೇ Nominated
೨೦೧೯ ಕಲಾಕಾರ್ ಅವಾರ್ಡ್[೧೮] ಅತ್ಯಂತ ಜನಪ್ರಿಯ ನಟಿ ಗೆಲುವು
ಇಂಡಿಯನ್ ಟೆಲಿ ಅವಾರ್ಡ್[೧೯] ಅತ್ಯುತ್ತಮ ನಟಿ Nominated
ಅತ್ಯುತ್ತಮ ಜನಪ್ರಿಯ ಜೋಡಿ

(ಪಾರ್ಥ್ ಸಂಥಾನ್ ಜೊತೆ)

ಗೆಲುವು

ಉಲ್ಲೇಖಗಳು

ಬದಲಾಯಿಸಿ
  1. ಇಂಡಿಯಾ ಟೈಮ್ಸ್ , 9 Apr 2012 - 19 Sep 2018
  2. "ಆರ್ಕೈವ್ ನಕಲು". Archived from the original on 2019-07-31. Retrieved 2019-07-31.
  3. https://wikibio.in/erica-fernandes/
  4. https://www.indiatoday.in/television/celebrity/story/kuch-rang-pyar-ke-aise-bhi-star-erica-fernandes-reveals-struggles-that-made-her-self-reliant-1300242-2018-07-30
  5. "Erica Fernandes and Shaheer Sheikh's show Kuch Rang Pyar Ke Aise Bhi completes 3 years - Times of India". The Times of India. Retrieved 18 March 2020. {{cite news}}: Cite has empty unknown parameter: |1= (help)
  6. https://starktimes.com/tejaswini-pandit-wiki-biography-age-height-movies-family-husband-career-net-worth-more/
  7. DelhiMay 18, India Today Web Desk New; May 18, India Today Web Desk New; Ist, India Today Web Desk New. "Kasautii Zindagii Kay 2: After Hina Khan, Erica Fernandes to quit the show?". India Today. Retrieved 18 March 2020. {{cite news}}: Cite has empty unknown parameter: |1= (help)CS1 maint: numeric names: authors list (link)
  8. "Gold Awards 2019: Hina Khan, Karan Singh Grover, Erica Fernandes win big. See pics". Hindustan Times. 12 October 2019. Retrieved 18 March 2020. {{cite news}}: Cite has empty unknown parameter: |1= (help)
  9. https://www.republicworld.com/entertainment-news/television-news/erica-fernandes-best-co-stars-with-whom-she-had-great-chemistry.html
  10. "ಐಂತೂ ಐಂತೂ ಐಂತೂ ಸಿನಿಮಾ". Archived from the original on 2019-03-31. Retrieved 2019-03-31.
  11. https://www.imdb.com/title/tt3686226/
  12. https://www.imdb.com/title/tt8076970/
  13. https://www.deccanchronicle.com/140809/entertainment-movie-review/article/movie-review-gaalipatam-innovative-marital-drama
  14. https://www.imdb.com/title/tt4992094/plotsummary?ref_=tt_ov_pl
  15. https://www.imdb.com/title/tt5697728/fullcredits
  16. https://www.imdb.com/title/tt8729932/fullcredits
  17. https://www.bollywoodlife.com/news-gossip/krpkabs-erica-fernandes-bags-the-best-actress-award-at-asian-viewers-television-awards/
  18. "ಆರ್ಕೈವ್ ನಕಲು". Archived from the original on 2019-03-31. Retrieved 2019-03-31.
  19. https://www.filmibeat.com/television/news/2019/indian-telly-awards-2019-jennifer-harshad-parth-erica-hina-nakuul-surbhi-others-sizzle-red-carpet/articlecontent-pf285114-284083.html


Confirm ! Virat Kohli is going to be father, Anushka Sharma showed baby bomb