ಎಮ್.ಎನ್. ಕಾಮತ್
ಉಡುಪಿ ಜಿಲ್ಲೆಯಲ್ಲಿರುವ ಕಾರ್ಕಳದ ಹತ್ತಿರ ಮುಂಡ್ಕೂರು ಎಂಬ ಹಳ್ಳಿಯಿದೆ. ಅಲ್ಲಿ ಶ್ರೀನಿವಾಸ ಕಾಮತ್-ತುಂಗಭದ್ರಾ ಎಂಬ ದಂಪತಿಗಳಿದ್ದರು.ಈ ದಂಪತಿಗಳು ೧೮೮೪ರಲ್ಲಿ ಜನಿಸಿದ ತಮ್ಮ ಮಗನಿಗೆ ನರಸಿಂಗ ಎಂದು ಹೆಸರಿಟ್ಟರು. ಮುಂಡ್ಕೂರು ನರಸಿಂಗ ಕಾಮತರು ಮುಂದೆ ಎಮ್. ಎನ್. ಕಾಮತರೆಂದು ಜನಪ್ರಿಯರಾದರು.
ಸಾಹಿತಿಗಳು
ಬದಲಾಯಿಸಿಬಾಲಕ ನರಸಿಂಗನ ಮನೆಯ ಮಾತು ಕೊಂಕಣಿ. ತಂದೆ ದಾಕು ಹಾಕುವ ಕೆಲಸದಲ್ಲಿದ್ದರೂ ಸಂಸ್ಕೃತ ಬಲ್ಲವರಾಗಿದ್ದರು. ಅವರು ನರಸಿಂಗನಿಗೆ ರಾಮಾಯಣ, ಮಹಾಭಾರತ ಮೊದಲಾದ ಕತೆಗಳನ್ನು ಹೇಳುತ್ತಿದ್ದರು. ಈ ನರಸಿಂಗ ಮುಂದೆ ಮಕ್ಕಳಿಗಾಗಿ ಹಲವಾರು ಕತೆ, ಕವಿತೆ, ನಾಟಕಗಳನ್ನು ಬರೆಯುವ ಲೇಖಕರಾದರು. ನರಸಿಂಗನ ಅಜ್ಜನ ಮನೆ ಕಾರ್ಕಳದಲ್ಲಿತ್ತು. ನರಸಿಂಗ ತನ್ನ ಬಾಲ್ಯದ ಹಲವು ದಿನಗಳನ್ನು ಅಲ್ಲಿ ಕಳೆದ. ಕಾರ್ಕಳದ ಗೊಮಟೇಶ್ವರನಂತೆ ತಾನೂ ಆದರ್ಶ ವ್ಯಕ್ತಿಯಾಗಬೇಕೆಂದು ನರಸಿಂಗ ಕನಸು ಕಂಡ. ಮುಂದೆ ``ರಾಷ್ಟ್ರ ಕವಿ ಎಂದು ಪ್ರಸಿದ್ಧರಾದ ಮಂಜೇಶ್ವರದ ಗೋವಿಂದ ಪೈಗಳೂ ಎಮ್. ಎನ್. ಕಾಮತರು ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಎರ್ಡು ವರ್ಷಗಳ ಕಾಲ ಸಹಪಾಠಿಗಳಾಗಿದ್ದರು. ಕೆನರಾ ಹೈಸ್ಕೂಲಿನಲ್ಲಿ ನರಸಿಂಗನಿಗೆ ೧೮೯೭ರಲ್ಲಿ ಷ್ರೀ ವಾಮನ ಬಾಳಿಗರೂ ೧೮೯೮ರಲ್ಲಿ ಶ್ರೀ ಬಂಟ್ವಾಳ ಪುಂಡರಿಕ ಬಾಳಿಗರೂ ಕನ್ನಡ ಅಧ್ಯಾಪಕರಾಗಿದ್ದರು. ಇಂಗ್ಲಿಷಿನಲ್ಲಿ ಬರೆಯುವುದು ಗೌರವದ ವಿಷಯವಾಗಿತ್ತು. ಕನ್ನಡದ ಬಗ್ಗೆ ತಿರಸ್ಕಾರ ಬರದಿದ್ದರೂ, ಅದರ ಬಗ್ಗೆ ಮಮಕಾರ ಏನೂ ಇರಲಿಲ್ಲ. ಚಿಕ್ಕಂದಿನಲ್ಲಿಯೇ ಸಾಹಿತ್ಯದ ಬಗ್ಗೆ ಒಲವಿದ್ದ ಎಮ್.ಎನ್. ಕಾಮತ್, ಗೋವಿಂದ ಪೈ ಮತ್ತು ಗೆಳೆಯರು ಕೂಡಿ ಕೆನರಾ ಹೈಸ್ಕೂಲಿನಲ್ಲಿ ೧೮೯೯ರಲ್ಲಿ ಕೈ ಬರಹದ ಇಂಗ್ಲಿಷ್ ಪತ್ರಿಕೆಯನ್ನು ಹೊರಡಿಸಿದರು. ಈ ಎಳೆಯರ ಪತ್ರಿಕೆಯ ಹೆಸರು `ಏಂಜಲ್' ಅಂದರೆ ದೇವದೂತ ಎಂದು. ಲೇಖಕರು ತಮ್ಮ ಹೆಸರನ್ನು ತಿಳಿಸದೆ ಗುಪ್ತನಾಮದಿಂದ ಬರೆಯಬೇಕು ಎಂಬುದು ಪತ್ರಿಕೆಯ ನಿಯಮ. ಎಮ್. ಎನ್. ಕಾಮತರ ಕಾವ್ಯ ನಾಮ ಒಂದು ಹಕ್ಕಿಯ ಹೆಸರಾಗಿತ್ತು. `ರೊಬಿನ್ ರೆಡ್ ಬ್ರೆಸ್ಟ್' `ಏಂಜೆಲ್' ಪತ್ರಿಕೆಯ ಎರ್ಡು ಸಂಚಿಕೆಗಳು ಗೋವಿಂದ ಪೈಗಳ ಬಳಿ ಇದ್ದುವಂತೆ. ಅವುಗಳಲ್ಲಿದ್ದ ಕಾಮತರ ಆರು ಇಂಗ್ಲಿಷ್ ಕವಿತೆಗಳ ಬಗ್ಗೆ ಗೋವಿಂದ ಪೈಗಳು,``ಕಾಮತರ ವಯಸ್ಸು ಆಗ ಹದಿನಾರೇ ವರ್ಷ; ಈ ಯಾವತ್ತು ಕವಿತೆಗಳು ಆ ಚಿಕ್ಕಂದಿಗೆ ಮಿಕ್ಕಿವೆ. ಎಂದಿದ್ದಾರೆ. ಎಮ್.ಎನ್. ಕಾಮತರು ಮಂಗಳೂರಿನಲ್ಲಿ ಎಫ಼್ ಎ ವರೆಗೆ ಓದಿದರು. ಎಫ಼್. ಎ ಅಂದರೆ ಈಗಿನ ಪಿ.ಯು.ಸಿ. ಗೆ ಸಮಾನವಾದ ಪರೀಕ್ಷೆ. ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸಲು ಬಡತನ ಅಡ್ಡಿ ಬಂತು. ದಕ್ಷಿಣ ಕನ್ನಡದ ನೂರಾರು ಯುವಕರಂತೆ ಕಾಮತರೂ ಕೆಲಸ ಹುಡುಕಿಕೊಂಡು ಮುಂಬಯಿ ಮಹಾನಗರಕ್ಕೆ ಹೋದರು. ಈ ನಡುವೆ ಅವರಿಗೆ ಮದುವೆಯೂ ಆಗಿತ್ತು. ಅಲ್ಲಿ ಅವರು `ರೋಸ್ ಮತ್ತು ಕಂಪೆನಿ' ಯ ವಾದ್ಯದ ಅಂಗಡಿಯಲ್ಲಿ ಗುಮಾಸ್ತರಾಗಿ ಸೇರಿಕೊಂಡರು. ಒಂದೆರಡು ವಎಷದ ಬಳಿಕ ಕಾಮತರಿಗೆ ಆ ಕಂಪನಿಯ ಕಲ್ಕತ್ತಾ ಶಾಖೆಗೆ ವರ್ಗವಾಯಿತು. ಕಲ್ಕತ್ತಾ ವಾಸ ಕಾಮತರ ಜೀವನದ ದಾರಿ ಬೇರೆಯಾಗಲು ಕಾರಣವಾಯಿತು. ಕಾಮತರು ಬಂಗಾಳಿ ಕಲಿತರು. ಆಗ ಬಂಗಾಳಿ ಸಾಹಿತ್ಯದ ಪುನರುಜ್ಜೀವನದ ಕಾಲ. ಅಲ್ಲಿನ ಬರಹಗಾರರೆಲ್ಲ ಇಂಗ್ಲಿಷಿನ ವ್ಯಾಮೋಹವನ್ನು ತೊರೆದು ಬಂಗಾಳಿಯಲ್ಲಿ ಬರೆಯುತ್ತಿದ್ದರು. ಬಂಗಾಳಿ ಬರಹಗಾರರ ಭಾಷಾ ಪ್ರೇಮದಿಂದ ಪ್ರಭಾವಿತರಾದ ಕಾಮತರು ಕನ್ನಡದ ಬಗ್ಗೆ ಜಾಗೃತಿ ತಳೆದು ಕನ್ನಡದ ಸೇವೆಗೆ ನಿರತರಾದರು. ಸುಮಾರು ೧೯೦೧ರಲ್ಲಿ ಕಾಮತರು ಮಂಗಳೂರಿಗೆ ಮರಳಿ ಬಂದರು. ಊರಿಗೆ ಬಂದ ಕಾಮತರು ಅಧ್ಯಾಪಕ ವೃತ್ತಿಯ ತರಬೇತಿಗಾಗಿ ಮದರಾಸಿಗೆ ಹೋಗಬೇಕಾಯಿತು. ಆದರೆ ತರಬೇತಿಗಾಗಿ ಹೊರಡಲು ಅವರಲ್ಲಿ ಹಣವಿರಲಿಲ್ಲ. ಆಗ ಅವರ ಹೆಂಡತಿ ತನ್ನ ಬಂಗಾರದ ಬಳೆಗಳನ್ನು ತೆಗೆದುಕೊಟ್ಟರು.
ಶಿಕ್ಷಕರು
ಬದಲಾಯಿಸಿಮದರಾಸುನಗರದಲ್ಲಿ ಶಿಕ್ಷಕ ತರಬೇತಿಯನ್ನು ಮುಗಿಸಿ ಬಂದ ಕಾಮತರು ಕೆಲವು ವರ್ಷಗಳ ಕಾಲ ಉಡುಪಿ, ಮೂಲ್ಕಿ, ಬಟ್ವಾಳಗಳಲ್ಲಿ ಅಧ್ಯಾಪಕರಾಗಿದ್ದರು. ಮೂಲ್ಕಿಯಲ್ಲಿದ್ದಾಗ ಆಗ ಪ್ರಸಿದ್ಧ ಕವಿಯಾಗಿದ್ದ ಶ್ರೀ ಬಂಗ್ಲೆಕರ ನಾರಾಯಣ ಕಾಮತರಿಂದ ಎಮ್. ಎನ್. ಕಾಮತರ ಬರವಣಿಗೆಗೆ ತಕ್ಕ ಪ್ರೋತ್ಸಾಹ ಸಿಕ್ಕಿತು. ೧೯೧೮ರಲ್ಲಿ ತಾವು ಕಲಿತ ಕೆನರಾ ಹೈಸ್ಕೂಲಿನಲ್ಲಿ ಅಧ್ಯಾಪಕರಾಗುವ ಅವಕಾಶ ಕಾಮತರಿಗೆ ದೊರಕಿತು. ೧೯೧೦ರಿಂದ ೧೯೪೦ರ ವರೆಗೆ ಕರ್ನಾಟಕದ ಹಲವಾರು ಪತ್ರಿಕೆಗಳಲ್ಲಿ- ಮಧುರವಾಣಿ, ಶ್ರೀ ಕೃಷ್ಣ ಸೂಕ್ತಿ, ಬೋಧಿನಿ, ಆನಂದ, ಕಂಠೀರವ, ಉದಯ ಭಾರತ, ಸ್ವದೇಶಾಭಿಮಾನಿ, ಕನ್ನಡ ಸಹಕಾರ, ತ್ರಿವೇಣಿ, ಭಾರತಿ, ಪ್ರಭಾತ, ತುಣುಕು-ಮಿಣುಕು- ಕಾಮತರ ಬರಹಗಳು ಪ್ರಕಟವಾದವು. ಎಮ್. ಎನ್. ಕಾಮತರು ಮಂಗಳೂರಿನ ಕೆನರಾ ಹೈಸ್ಕೂಲಿಗೆ ಬಂದ ವಎಷದಿಂದಲೇ (೧೯೧೮) ಶಾಲ ವಾರ್ಷಿಕೋತ್ಸವದಲ್ಲಿ ಕನ್ನಡ ನಾಟಕಗಳನ್ನು ಆಡಿಸತೊಡಗಿದರು. ಅವರು ಶಾಲೆಯ ಮಕ್ಕಳು ಅಭಿನಯಿಸುವ ಸಲುವಾಗಿಯೇ ಹೆಚ್ಚಿನ ನಾಟಗಳನ್ನು ಬರೆದರು. ಶಾಲೆಯ ಮಕ್ಕಳು ಕನ್ನಡ ನಾಟಕ ಅಭಿನಯಿಸುವ ಸಂಪ್ರದಾಯವನ್ನು ಕಾಮತರು ಪ್ರಾರಂಭಿಸಿದರು. ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಂದು ಹಳ್ಳಿಯ ಶಾಲೆಗೂ ಹರಡಿತು. ಕೆನರಾ ಹೈಸ್ಕೂಲಿನಲ್ಲಿನ೨೩ ವರ್ಷಗಳ ಕಾಲ (೧೯೧೮-೧೯೪೧) ಅಧ್ಯಾಪಕರಾಗಿದ್ದಾಗ ಕಾಮತರು ಭೂಗೋಲ ಬೋಧನೆಗಾಗಿ ವಿಶೇಷ ತರಬೇತಿಯನ್ನು ಪಡೆದಿದ್ದ ಅವರ ಕಲಿಸುವಿಕೆ ಉತ್ತಮ ಮಟ್ಟದ್ದಾಗಿತ್ತು. ವಿದ್ಯಾರ್ಥಿಗಳು ಪಾಠ ಕೇಳುತ್ತ ಸಂಕ್ಷೇಪವಾಗಿ ಟಿಪ್ಪಣಿ ಬರೆದುಕೊಳ್ಳಬೇಕು, ಅಧ್ಯಾಪಕರು ನೋಟ್ಸ್ ಬರೆಯಿಸಬಾರದು, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬಾಯಿಪಾಠ ಮಾಡಿದ ಉತ್ತರ ಬರೆಯಬಾರದು. ಪಾಠವನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡು ಉತ್ತರವನ್ನು ಬರೆಯಬೇಕು.
ಪತ್ರಿಕಾಕರ್ತರು
ಬದಲಾಯಿಸಿಎಮ್.ಎನ್. ಕಾಮತರು `ಆನಂದ' ಎಂಬ ಪತ್ರಿಕೆಯನ್ನು ಕೆಲವು ವರುಷಗಳ ಕಾಲ ಕಾಲ ನಡೆಯಿಸಿದರು. ಉಡುಪಿಯಿಂದ ಪ್ರಕಟವಾಗುತ್ತಿದ್ದ `ಬೋಧಿನಿ' ಪತ್ರಿಕೆಯ ಸ್ಂಪಾದಕರಲ್ಲಿ ಅವರೂ ಒಬ್ಬರಾಗಿದ್ದರು. ಕಾಮತರ ಪ್ರೋತ್ಸಾಹದಿಂದಲೇ ಡಾ. ಎಸ್. ಪಿ. ಭಟ್ಟರ `ಉದಯಭಾರತ' ಪತ್ರಿಕೆ ೧೯೨೭ರಲ್ಲಿ ಮಂಗಳೂರಿನಲ್ಲಿ ಆರಂಭವಾಯಿತು. ಗಾಂಧೀಜಿ ಮತ್ತು ಎಮ್. ಎನ್. ಕಾಮತರು ಮಹಾತ್ಮಾಗಾಂಡಿಜಿಯ ಸಮಾಜ ಸುಧಾರಣೆಯ ಚ್ಳವಳವನ್ನು ಕಾಮತರು ಬೆಂಬಲಿಸುತ್ತಿದ್ದರು. ಅವರು ಬಂಟ್ವಾಳದಲ್ಲಿದ್ದಾಗ ಅವರ ಗಾಂಧಿಭಕ್ತಿಯನ್ನು ಪರೀಕ್ಶಿಸುವ ಘಟನೆಯೊಂದು ನಡೆಯಿತು.ಜಾತಿಭೇದಗಳಲ್ಲಿ ನಂಬಿಕೆಯಿಲ್ಲದ ಕಾಮತರು ಹೊಲೆಯನೊಬ್ಬನೊಡನೆ ಊಟ ಮಾಡಿದರು. ಇದರಿಂದ ಕೆರಳಿದ ಜಾತಿ ಬಾಂಡವರು ಕಾಮತರಿಗೆ ಜಾತಿಯಿಂದ ಬಹಿಷ್ಕಾರವನ್ನೇ ಹಾಕಿದರು. ಬಂಟವಾಳದ ತಿರುಮಲ ದೇವಸ್ಥಾನದ ಜೀರ್ಣೋದ್ಧಾರದ ಸಂದರ್ಭದಲ್ಲಿ ಸ್ವಾಮಿಗಳೊಬ್ಬರು ಬಂದಿದ್ದರು. ದೇವಸ್ಥಾನದ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಕಾಮತರು ತಾವು ಆ ಸಂದರ್ಭದಲ್ಲಿ ಬರೆದಿದ್ದ `ವಟಪುರಾಧೀಶ್ವರ ಶತಕ' ಎಂಬ ಕಾವ್ಯ ವನ್ನು ಸ್ವಾಮಿಗಳವರ ಸಮ್ಮುಖದಲ್ಲಿ ಓದಿದರು. ಅದನ್ನು ಕೇಳಿದ ಸ್ವಾಮಿಗಳು `ಇಂಟ ಕವಿಗೂ ಬಹಿಷ್ಕಾರವೇ?'ಎಂದು ಬಹಿಷ್ಕಾರವನ್ನು ತೆಗೆದುಹಾಕಿದರು. ಕಾಮತರು ಬಡತನದಲ್ಲಿ ಹುಟ್ಟಿ ಬೆಳೆದವರು. ಕೊನೆಯವರೆಗೂ ಬಡತನದ ಭೂತ ಅವರ ಬೆನ್ನು ಬಿಡಲಿಲ್ಲ. ಅವರದ್ದು ಎಂಟು ಮಕ್ಕಳಸಂಸಾರ. ಹೊಟ್ಟೆಯ ಪಾಡಿಗಾಗಿ ಕಾಮತರು ಸಿನೇಮಾದ ಪ್ರಚಾರ ಪತ್ರಗಳನ್ನೂ ಬರೆದರು. ತಾವು ಬಡತನದಲ್ಲಿದ್ದರೂ ತ್ಮಾ ವಿದ್ಯಾರ್ಥಿಗಳಲ್ಲಿ ಯಾರಾದರೂ ಕಷ್ಟದಲ್ಲಿರುವುರೆಂದು ಗೊತ್ತಾದರೆ ತಮ್ಮಲ್ಲಿದ್ದಷ್ಟು ಹಣವನ್ನು ತೆಗೆದು ಕೊಡುತ್ತಿದ್ದರು. ಎಮ್. ಎನ್. ಕಾಮತರು ೬೦ಕ್ಕಿಂತ ಹೆಚ್ಚು ನಾಟಗಳನ್ನೂ, ನೂರಾರು ಕವಿತೆಗಳನ್ನೂ, ನೂರಾರು ಕಥೆಗಳನ್ನೂ, ಹರಟೆಗಳನ್ನೂ ಬರೆದಿದ್ದು ನವೋದಯ ಕನ್ನಡ ಕಾವ್ಯಕ್ಕೆ ಕಾಮತರು ಕೊಟ್ಟ ಕಾಣಿಕೆ ಮೆಚ್ಚಬೇಕಾದುದು. ನೆನಪಿಡಬೇಕಾದುದು. ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಣ್ಣ ಕಥೆಗಳ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ಅಲ್ಲಿಂದ್ ಹಿಂತಿರುಗಿದ ಕಾಮತರು ಜಲೋದರ ಬಾಧೆಯಿಂದ ಹಾಸಿಗೆ ಹಿಡಿದರು. ೧೯೪೧ ಏಪ್ರಿಲ್ ೨೪ರಂದು ತಮ್ಮ ೫೭ನೆ ವಯಸ್ಸಿನಲ್ಲಿ ಕಾಮತರು ದಿವಂಗತರಾದರು.