ಎನ್. ಕೆ. ಲೋಲಾಕ್ಷಿ
ನುಗ್ಗೆಹಳ್ಳಿ ಕೃಷ್ಣಪ್ಪ ಲೋಲಾಕ್ಷಿ, ಕನ್ನಡ ಭಾಷೆಯಲ್ಲಿ ಬರೆಯುವ ಕವಯತ್ರಿ. ಕನ್ನಡ ಸಾಹಿತ್ಯ, ಜಾನಪದ ಅಧ್ಯಯನ ಮತ್ತು ಆಧುನಿಕ ವಿಮರ್ಶೆಯಲ್ಲಿ ತಜ್ಞರಾಗಿರುವ ಅವರು ಭಾವಗೀತೆಗಳ ರಚನೆಯಲ್ಲೂ ಗುರುತಿಸಿಕೊಂಡಿದ್ದಾರೆ.
ಎನ್. ಕೆ. ಲೋಲಾಕ್ಷಿ | |
---|---|
ಜನನ | ನುಗ್ಗೆಹಳ್ಳಿ, ಹಾಸನ |
ವೃತ್ತಿ |
|
ಭಾಷೆ | ಕನ್ನಡ |
ಬಾಲ್ಯ ಮತ್ತು ಶಿಕ್ಷಣ
ಬದಲಾಯಿಸಿಲೋಲಾಕ್ಷಿಯವರು ನುಗ್ಗೇಹಳ್ಳಿ, ಚನ್ನರಾಯಪಟ್ಟಣ(ತಾ). ಹಾಸನ (ಜಿಲ್ಲೆ)ಯವರು, ಕೃಷ್ಣಪ್ಪ ಮತ್ತು ರಂಗಮ್ಮ ದಂಪತಿಗಳ ಮಗಳಾಗಿ ಜನಿಸಿದ ಇವರು, ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ ಎ, ಮುಗಿಸಿ, ಪ್ರೊ. ದೇಜಗೌ ಅವರ ವಿಮರ್ಶೆ ಮತ್ತು ಸಂಶೋಧನೆ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದರು. ಅಲ್ಲದೆ ಎಂ.ಎ (ಎಂ.ಸಿ.ಜೆ), ಪಿ.ಜಿ.ಡಿ.ಎಂ.ಸಿ.ಜೆ, ರಷ್ಯನ್ ಡಿಪ್ಲಮೋ ಮಾಡಿದ್ದಾರೆ. ೨೦೦೩ ರಿಂದ ೨೦೦೮ ರ ವರೆಗೆ ಮಂಗಳ ಗಂಗೋತ್ರಿಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದರು. ಪ್ರಸ್ತುತ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ಪುಸ್ತಕಗಳು
ಬದಲಾಯಿಸಿ- ಕನ್ನಡ ಪತ್ರಿಕೆಗಳು ಮತ್ತು ಮಹಿಳೆ- (ಸಂ.) – ೨೦೦೬
- ಭಾವನಾ – ೨೦೧೦
- ದೇಜಗೌ ವಿಮರ್ಶೆ : ಹರಹು ಮತ್ತು ಹೊಳಹು-೨೦೧೦
- ಗಡಿನಾಡ ಸಂಚಾರಿ ಚಾರಿತ್ರಿಕ ಪ್ರಸ್ತುತತೆ -೨೦೧೨
- ರಾಷ್ಟ್ರೀಯವಾದಿ ಚಿಂತನೆ ಮತ್ತು ಮಹಿಳೆ – ೨೦೧೨
- ವಿ.ಕೃ.ಗೋಕಾಕರ ಭಾರತಸಿಂಧುರಶ್ಮಿ : ಪುನರವಲೋಕನ- (ಸಂ)-೨೦೧೧
- ಫ್ರೈಡೇ ಫೀವರ್ ಕವನ ಸಂಕಲನ (ಪ್ರಕಟಣೆಯಲ್ಲಿದೆ.)
- ಭಾವನಾ ಕವನ ಸಂಕಲನದ ಆಯ್ದಪದ್ಯಗಳು ಇಂಗ್ಲೀಷಿಗೆ ಅನುವಾದವಾಗಿದೆ.
- ಹೆಣ್ಣಾಗಿ ಬರೆ ವಿಮರ್ಶಾ ಕೃತಿ
- ಮೈಸೂರು ದಸರಾ ನೆನಪಿನ ಸಂಚಿಕೆ-೨೦೧೩
ಪ್ರಕಟಿತ ಲೇಖನಗಳು
ಬದಲಾಯಿಸಿ- ರತ್ನಾಕರವರ್ಣಿಯ ಭರತೇಶ ವೈಭವ : ಜಾನಪದೀಯ ಅಧ್ಯಯನ
- ರತ್ನಾಕರವರ್ಣಿ : ಸಮಕಾಲೀನ ಸಂದರ್ಭ
- ಕರಾವಳಿ ಸಾಂಸ್ಕೃತಿಕ ಪರಿಸರ ವಿಜ್ಞಾನ
- ಮಾಧ್ಯಮಗಳಲ್ಲಿ ಮಹಿಳಾ ಅನನ್ಯತೆ
- ಅಕ್ಕನ ವಚನಗಳಲ್ಲಿ ದಾಂಪತ್ಯ ಒಡೆಯುವಿಕೆ ಮತ್ತು ಮರುಕಟ್ಟುವಿಕೆ
- ‘ಇಳೆಯ ಕಣ್ಣು’ – ಧರಣಿ ತತ್ವ ನಿರೂಪಣೆ
- ಹುಲಿಯ ಹಾಡು ಮತ್ತು ಗೋವಿನ ಹಾಡಿನಲ್ಲಿ ಮಾತೃ ಸಂವೇದನೆ
- ವಸ್ತ್ರ ಸಂಹಿತೆ ಎಂಬ ಸಾಂಸ್ಕೃತಿಕ ಬಂಧನ
- ದಲಿತ ಚಳುವಳಿ ಮತ್ತು ಮಾಧ್ಯಮ
ಪ್ರಶಸ್ತಿ
ಬದಲಾಯಿಸಿ- ಕಣವಿ ಕಾವ್ಯ ಪುರಾಸ್ಕರ - ಭಾವನ ಕವನ ಸಂಕಲಾನ - ೨೦೦೯-೧೦
- ೯ನೇ ಕನ್ನಡ ವಿಜ್ಞಾನ ಸಮ್ಮೇಳನ - ರಾಷ್ಟ್ರೀಯ ಯುವ ವಿಜ್ಞಾನಿ ಪ್ರಶಸ್ತಿ – ೨೦೧೩
- ಶೈಕ್ಷಣಿಕ ಸಾಧನೆಗೆ - ಸಮಾಜಸೇವಾ ಪ್ರಶಸ್ತಿ- ೨೦೧೩
- ಕನ್ನಡ ಇಂಟರ್ ನ್ಯಾಷನಲ್ ಮ್ಯೂಸಿಕ್ ಅವಾರ್ಡ್(ಕೀಮಾ)-೨೦೧೭
ಸದಸ್ಯತ್ವ
ಬದಲಾಯಿಸಿ- ಮೈಸೂರು ದಸರಾ ನೆನಪಿನ ಸಂಚಿಕೆ-೨೦೧೩ ಸಂಪಾದಕ ಸಮಿತಿ ಸದಸ್ಯರು
- ೨೦೧೭ ಮತ್ತು ೨೦೧೯ ಕವಿಗೋಷ್ಠಿ, ಕಾರ್ಯಾಧ್ಯಕ್ಷರು
ಉಲ್ಲೇಖಗಳು
ಬದಲಾಯಿಸಿ
- https://starofmysore.com/tag/dr-n-k-lolakshi/
- http://uni-mysore.ac.in/english-version/kuvempu-institute-kannada-studies/faculty
- https://citytoday.news/tag/dr-nk-lolakshi/
- https://www.moviebuff.com/nk-lolakshi
- https://www.exoticindiaart.com/m/book/author/n+k+lolakshi/
- https://www.amazon.in/Books-Nk-Lolakshi/s?rh=n%3A976389031%2Cp_27%3ANk+Lolakshi
- https://m.varthabharati.in/article/2017_09_26/96091
- https://kannada.citytoday.news/268680/ Archived 2020-11-16 ವೇಬ್ಯಾಕ್ ಮೆಷಿನ್ ನಲ್ಲಿ.