ಎನ್.ಎಸ್ ಮಾಧವನ್
ಎನ್.ಎಸ್ ಮಾಧವನ್ ಅವರು ಮಲಯಾಳಂ ಸಾಹಿತ್ಯದ ಭಾರತೀಯ ಬರಹಗಾರ. ಮಾಧವನ್ ಅವರು ಫುಟ್ಬಾಲ್ ಅಂಕಣ ಹಾಗೂ ಪ್ರವಾಸ ಲೇಖನಗಳನ್ನು ಬರೆಯುತ್ತಾರೆ.
ಎನ್.ಎಸ್ ಮಾಧವನ್ | |
---|---|
ಜನನ | ೯ ಸೆಪ್ಟೆಂಬರ್ ೧೯೪೮ ಎರ್ನಾಕುಳಂ, ಕೇರಳ |
ವೃತ್ತಿ | ಕಾದಂಬರಿ ಬರಹಗಾರ, ಅಂಕಣಗಾರ |
ಭಾಷೆ | ಮಲೆಯಾಳಂ |
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮಹಾರಾಜ ಕಾಲೇಜು, ಎರ್ನಾಕುಳಂ |
ಪ್ರಕಾರ/ಶೈಲಿ | ಕಾದಂಬರಿ, ಸಣ್ಣಕಥೆ, ಪ್ರಬಂಧ |
ವಿಷಯ | ಸಾಮಾಜಿಕ ವಿಷಯ |
ಪ್ರಮುಖ ಕೆಲಸ(ಗಳು) | ಲ್ಯಾಂಥನ್ ಬಥೆರೆಯೈಲ್ ಲುಧಿನಿಯಲ್, ಹಿಗ್ವಾದಾ, ಕರಾಲ್ಮನ್ ಹಾಗೂ ಚವಿತ್ತು ನಾಡಕಮ್ |
ಪ್ರಮುಖ ಪ್ರಶಸ್ತಿ(ಗಳು) | ಪದ್ಮರಾಜ ಪ್ರಶಸ್ತಿ, ಒಗ್ಗುಕುಳಲ್ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾತೃಭೂಮಿ ಸಾಹಿತ್ಯ ಪ್ರಶಸ್ತಿ |
ಬಾಳ ಸಂಗಾತಿ | ಶೀಲಾ ರೆಡ್ಡಿ |
ಮಕ್ಕಳು | ಮೀನಾಕ್ಷಿ ರೆಡ್ಡಿ ಮಾಧವನ್ |
ಆರಂಭಿಕ ಜೀವನ
ಬದಲಾಯಿಸಿಎನ್.ಎಸ್. ಮಾಧವನ್ ಅವರು ೧೯೪೮ರ ಸೆಪ್ಟೆಂಬರ್ ೯ ರಂದು ಕೇರಳದ ಕೊಚಿನ್ ಬಂದರು ನಗರದಲ್ಲಿ ಜನಿಸಿದರು. ಶ್ರೀ ರಾಮವರ್ಮಾ ಹೈಸ್ಕೂಲ್ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಎರ್ನಾಕುಳಂನ ಮಹಾರಾಜ ಕಾಲೇಜಿನ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಅವರು ಕೇರಳ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಇಲಾಖೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದರು.[೧] ಅವರು ೧೯೭೫ ರಲ್ಲಿ ಭಾರತೀಯ ಸೇವಾ ಪ್ರಾಧಿಕಾರಕ್ಕೆ ಸೇರಿದರು. ಬಿಹಾರದ ಕೇಡರ್ ಸದಸ್ಯರಾಗಿ ತಮ್ಮ ಆಡಳಿತಾತ್ಮಕ ವೃತ್ತಿಜೀವನವನ್ನು ಪ್ರಾರಂಭಿಸಿದರು.[೨]
ವೃತ್ತಿ ಜೀವನ
ಬದಲಾಯಿಸಿ೧೯೯೦ರಲ್ಲಿ ಮಾಧವನ್ ಅವರ ದಶಕದ ದೀರ್ಘಕಾಲೀನ ಬರಹ 'ಹಿಗ್ವಾದಾ' ಬಿಡುಗಡೆಯಾಯಿತು. ಮೂವತ್ಮೂರು ವರ್ಷಗಳ ನಂತರ ಬರಹಗಾರನಾಗಿ ಮಾಧವನ್ ಅವರ ಮೊದಲ ಕಾದಂಬರಿಯನ್ನು `ಲ್ಯಾಂಥನ್ ಬಥೆರೆಯಿಲ್ ಲುಧಿನಿಯಲ್' ೨೦೦೩ರಲ್ಲಿ ಬಿಡುಗಡೆಗೊಂಡಿತು. [೩]೨೦೦೬ರಲ್ಲಿ ಮಾಧವನ್ ಪ್ರಕಟಿಸಿದ ಎರಡು ನಾಟಕಗಳು ರೇಯುಮ್ ಮಾಯಮ್ ಮತ್ತು ಅರ್ಬುಧವೈಯ್ಯನ್ ಪುಸ್ತಕವಾಗಿ ಪ್ರಕಟಗೊಂಡಿವೆ. ಅವರ ಕಾದಂಬರಿ ಲ್ಯಾಂಥನ್ಬಥೆರೀಯಲ್ ಲುಧಿನಿಯಲ್ ಅನ್ನು ರಾಜೇಶ್ ರಾಜಮೋಹನ್ ಅವರು ಲಿಟನೀಸ್ ಆಫ್ ಡಚ್ ಬ್ಯಾಟರಿ ಎಂಬ ಶೀರ್ಷಿಕೆಯಡಿಯಲ್ಲಿ ಆಂಗ್ಲ ಭಾಷೆಗೆ ಭಾಷಾಂತರಿಸಿದ್ದಾರೆ. ಅಕ್ಟೋಬರ್ ೨೦೧೦ರಲ್ಲಿ ರಲ್ಲಿ ಪೆಂಗ್ವಿನ್ ಬುಕ್ಸ್ರವರು ಈ ಪುಸ್ತಕವನ್ನು ಪ್ರಕಟಿಸಿದ್ದಾರೆ.[೪]ಕರಾಲ್ಮನ್ ಹಾಗೂ ಚವಿತ್ತು ನಾಡಕಮ್ ಇವರ ಇನ್ನಿತರ ಕೃತಿಗಳು.
ಪ್ರಶಸ್ತಿ ಪುರಸ್ಕಾರಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ http://www.bookandborrow.com/AuthorDetails.asp?autID=2667
- ↑ "ಆರ್ಕೈವ್ ನಕಲು". Archived from the original on 2016-06-06. Retrieved 2019-02-02.
- ↑ https://timesofindia.indiatimes.com/city/kochi/higuita-judge-stages-sit-in-corporation-clears-market-garbage/articleshow/64565744.cms
- ↑ https://www.britannica.com/art/Crossword-Book-Awards
- ↑ "ಆರ್ಕೈವ್ ನಕಲು". Archived from the original on 2019-02-01. Retrieved 2019-02-02.
- ↑ "ಆರ್ಕೈವ್ ನಕಲು". Archived from the original on 2019-02-02. Retrieved 2019-02-02.