ಎಥೆನಾಲ್ ಅಮೀನುಗಳು

ಎಥೆನಾಲ್ ಅಮೀನುಗಳು ಅಮೈನೋ ಆಲ್ಕೊಹಾಲುಗಳು (ಹೈಡ್ರಾಕ್ಸಿ ಅಮೈನುಗಳು) ಎಂಬ ಸಾವಯವ ಸಂಯುಕ್ತಗಳ ಗುಂಪಿಗೆ ಸೇರಿದ ಸಂಯುಕ್ತಗಳು. ಹೈಡ್ರೋಜನ್ ಪರಮಾಣುಗಳಲ್ಲಿ ಕನಿಷ್ಠ ಪಕ್ಷ ಒಂದನ್ನಾದರೂ ರ‍್ಯಾಡಿಕಲ್ ೨-ಹೈಡ್ರಾಕ್ಸೆಥಿಲೀನಿನಿಂದ (-CH2CH2OH) ಬದಲು ಮಾಡಿದಂಥ ಅಮೋನಿಯ (NH3) ಉತ್ಪನ್ನಗಳು. ಮೂರು ಎಥೆನಾಲ್ ಅಮೀನುಗಳಿವೆ.

ಗುಣಗಳು ಬದಲಾಯಿಸಿ

ಇವುಗಳ ದ್ರವೀಕರಣ ಬಿಂದು ಕಡಿಮೆ. ಬಣ್ಣವಿಲ್ಲದ ಘನವಸ್ತುಗಳು. ಜಲಾಭಿಮಾನಿಗಳು. ನೀರನ್ನು ಹೀರಿಕೊಂಡು ಗಟ್ಟಿಯಾದ ದ್ರವಗಳಂತಾಗುತ್ತವೆ. ವಿಶಿಷ್ಟವಾದ ಅಮೋನಿಯ ವಾಸನೆ ಹೊಂದಿದ್ದು[೧] ಪ್ರಬಲ ಪ್ರತ್ಯಾಮ್ಲಗಳಂತೆ ವರ್ತಿಸುವುವು. ನೀರು ಮತ್ತು ಆಲ್ಕೊಹಾಲಿನಲ್ಲಿ ದ್ರಾವ್ಯ. ಬೆಂಜ಼ೀನ್ ಮತ್ತು ಈಥರಿನಲ್ಲಿ ಅಲ್ಪದ್ರಾವ್ಯ.

ಎಥೆನಾಲ್ ಅಮೀನುಗಳು ಪ್ರಬಲ ಪ್ರತ್ಯಾಮ್ಲಗಳಂತೆ ವರ್ತಿಸುವುದರಿಂದ ಅನಿಲಮಿಶ್ರಣದಿಂದ ಇಂಗಾಲದ ಡೈಆಕ್ಸೈಡ್, ಹೈಡ್ರೋಜನ್ ಸಲ್ಫೈಡ್ ಮೊದಲಾದ ಆಮ್ಲೀಯ ಗುಣವಿರುವ ವಸ್ತುಗಳನ್ನು ಹೀರಿಕೊಳ್ಳುವುವು. ಅನಂತರ ಅಮೀನಿನ ದ್ರಾವಣವನ್ನು ೫೦ ಸೆಂ.ಗ್ರೇ. ಮೀರಿದ ಉಷ್ಣತೆಗೆ ಒಡ್ಡಿದರೆ ಹೀರಿಕೊಂಡಿದ್ದ ಆಮ್ಲೀಯ ಅನಿಲಗಳನ್ನು ಬಿಡುಗಡೆ ಮಾಡುವುದು. ಇದೇ ರೀತಿ ಆಮ್ಲೀಯ ಗುಣವುಳ್ಳ ಫೀನಾಲುಗಳನ್ನೂ ಬೇರ್ಪಡಿಸಬಹುದು.

ಅಮೀನಿನ ಹೆಸರು ಅಣುಸೂತ್ರ 20° ಸೆಂ. ಗ್ರೇ.

ಉಷ್ಣತೆಯಲ್ಲಿ ಸಾಂದ್ರತೆ

ದ್ರವೀಕರಣ

ಬಿಂದು ° ಸೆಂ. ಗ್ರೇ.

ಕುದಿಯುವ

ಬಿಂದು ° ಸೆಂ. ಗ್ರೇ.

ಹಬೆಯೊಡನೆ

ಹಾಯುವ ಗುಣ

ಮಾನೊ ಎಥೆನಾಲ್

ಅಮೀನ್

(HO.CH2.CH3)NH2 1.022 10.5 171 ಉಂಟು
ಡೈ ಎಥೆನಾಲ್

ಅಮೀನ್

(HO.CH2.CH3)2NH 1.097 28.0 217 (150

ಮಿ. ಮೀ. ಒತ್ತಡದಲ್ಲಿ)

ಇಲ್ಲ
ಟ್ರೈ ಎಥೆನಾಲ್

ಅಮೀನ್

(HO.CH2.CH3)3N 1.126 21.0 277 (150

ಮಿ. ಮೀ. ಒತ್ತಡದಲ್ಲಿ)

ಇಲ್ಲ

ತಯಾರಿಕೆ ಬದಲಾಯಿಸಿ

ಎಥಿಲಿನ್ ಕ್ಲೊರೊಹೈಡ್ರಿನ್ನನ್ನು ಘನರೂಪದ ಸೋಡಿಯಂ ಹೈಡ್ರಾಕ್ಸೈಡ್ ಅಥವಾ ಸುಟ್ಟ ಸುಣ್ಣದೊಡನೆ ಕಾಯಿಸಿದರೆ ಎಥಿಲೀನ್ ಆಕ್ಸೈಡ್ ಎಂಬ ವಸ್ತುವಾಗುತ್ತದೆ.

CH2
|       O
CH2

ಇದನ್ನು ಪ್ರಬಲ ಅಮೋನಿಯ ದ್ರಾವಣದೊಡನೆ ಒತ್ತಡದಲ್ಲಿ ಕಾಯಿಸಿದರೆ ಎಥೆನಾಲ್ ಅಮೀನುಗಳಾಗುತ್ತವೆ. ಎಥಿಲೀನ್ ಆಕ್ಸೈಡಿನ ಪ್ರಮಾಣ ಹೆಚ್ಚಾಗಿದ್ದರೆ ಟ್ರೈಎಥೆನಾಲ್ ಅಮೀನೂ ಅಮೋನಿಯ ಪ್ರಮಾಣ ಹೆಚ್ಚಾಗಿದ್ದರೆ ಮೊನೊಸಂಯುಕ್ತವೂ ಲಭಿಸುತ್ತವೆ.

ಉಪಯೋಗಗಳು ಬದಲಾಯಿಸಿ

ಕೊಬ್ಬಿನ ಆಮ್ಲಗಳು ಎಥೆನಾಲ್ ಅಮೀನುಗಳೊಡನೆ ವರ್ತಿಸಿ ಸಾಬೂನುಗಳನ್ನು ಕೊಡುವುವು. ಮಾರ್ಜಕಗಳು, ಅಂಗರಾಗಗಳು ಮತ್ತು ಎಮಲ್ಷನ್‍ಕಾರಿಗಳ ತಯಾರಿಕೆಯಲ್ಲಿ ಇಂಥ ಸಾಬೂನುಗಳು ವಿನಿಯೋಗವಾಗುತ್ತಿವೆ.

ಉಲ್ಲೇಖಗಳು ಬದಲಾಯಿಸಿ

  1. Martin Ernst; Johann-Peter Melder; Franz Ingo Berger; Christian Koch (2022). "Ethanolamines and Propanolamines". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a10_001.pub2. {{cite encyclopedia}}: Cite has empty unknown parameter: |authors= (help)

ಹೊರಗಿನ ಕೊಂಡಿಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: