ಎತ್ತು ನಾಲಿಗೆ (ಗೋಜಿಹ್ವ)

ಬದಲಾಯಿಸಿ

ಸಂ: ಗೋಜಿಹ್ವ

ಹಿಂ: ಗಾರ್‍ಜವಾ

ಗು: ಬೋಪಾಥರಿ

ತೆ: ಎದ್ದು ನಾಲಿಕೆ

ತ: ಎಲಂದ ಪಳಂ

ವರ್ಣನೆ

ಬದಲಾಯಿಸಿ

ಪುಟ್ಟಗಿಡ ಎಲೆಗಳು ಉದ್ದವಾಗಿ ಹಸಿರಾಗಿದ್ದು ಎಲೆಯ ಅಂಚು ಚಿತ್ರಾಕಾರವಾಗಿರುವುದು. ಹೂವು ಚಿನ್ನದ ಬಣ್ಣ ಹೊಂದಿದ್ದುದುಂಡಾಗಿರುತ್ತದೆ. ಎಲೆಗಳ ಮಧ್ಯದಲ್ಲಿ ಮೃದುವಾದ ರೋಮಗಳಿರುತ್ತವೆ. ಕಾಂಡದಿಂದ ಹೊರಟ ಹೂಗೊಂಚಲಿನ ತುದಿಯಲ್ಲಿಒಂದೆರಡು ಹೂಗಳು ಬಿಡುವುವು. ಹೂನಲ್ಲಿ ಸಾಮಾನ್ಯವಾಗಿ ಮೂರು ದಳಗಳಿದ್ದು ಪುಷ್ಪಪಾತ್ರೆ ಚಿಕ್ಕದಾಗಿರುವುದು.

ಸರಳ ಚಿಕಿತ್ಸೆಗಳು

ಬದಲಾಯಿಸಿ

ಶೋಭೆಯಲ್ಲಿ

ಬದಲಾಯಿಸಿ

ಚೆನ್ನಾಗಿ ಶೋಧಿಸಿದ ಗೋಮೂತ್ರದಲ್ಲಿ 10 ಗ್ರಾಂ ಎಲೆ ಚೂರ್ಣವನ್ನು ಸೇರಿಸಿ ಸ್ವಲ್ಪ ಶುದ್ಧ ಜೇನುತುಪ್ಪದೊಡನೆ 1/4 ಟೀ ಚಮಚ ಸೇವಿಸುವುದು. ದಿವಸಕ್ಕೆ ಎರಡು ಬಾರಿ.

ದೀರ್ಘಕಾಲದಿಂದ ವಾಸಿಯಾಗದ ಹುಣ್ಣುಗಳಿಗೆ

ಬದಲಾಯಿಸಿ

ಎತ್ತುನಾಲಿಗೆ ಸಮೂಲವನ್ನು ಚೆನ್ನಾಗಿ ಜಜ್ಜಿ ಹುಣ್ಣುಗಳ ಮೇಲೆ ಕಟ್ಟುವುದು. ಹುಣ್ಣು ಆಳವಾಗಿದ್ದರೆ ಎತ್ತು ನಾಲಿಗೆ ಎಲೆಯನ್ನು ನಯವಾಗಿ ಅರೆದು ಹುಣ್ಣುಗಳಲ್ಲಿ ತುಂಬುವುದು. ಕೆಲವು ದಿವಸಗಳಲ್ಲಿ ಹುಣ್ಣುಗಳು ವಾಸಿಯಾಗುವುವು.

ಕಾಸ ಶ್ವಾಸ ಮತ್ತು ಕಫಕ್ಕೆ

ಬದಲಾಯಿಸಿ

10 ಗ್ರಾಂ ಎತ್ತುನಾಲಿಗೆ ಸಮೂಲವನ್ನು ನುಣ್ಣಗೆ ಅರೆದು ನೀರಿನಲ್ಲಿ ಕದಡಿ ಸೇವಿಸುವುದು. ಹೀಗೆ ದಿವಸಕ್ಕೆರಡು ಬಾರಿ

ಅರುಚಿಗೆ

ಬದಲಾಯಿಸಿ

ಐದಾರು ಗ್ರಾಂ ಎತ್ತು ನಾಲಿಗೆ ಸಮೂಲವನ್ನು ನುಣ್ಣಗೆ ಅರೆದು ಸ್ವಲ್ಪ ಜೇನಿನೊಡನೆ ತೆಗೆದುಕೊಳ್ಳುವುದು.

ಮಲಬದ್ದತೆ ಮತ್ತು ರಕ್ತ ಶುದ್ಧಿಗಾಗಿ

ಬದಲಾಯಿಸಿ

5 ಗ್ರಾಂ ಸಮೂಲವನ್ನು ನಯವಾಗಿಅರೆದು ಸ್ವಲ್ವ ಜೇನು ಸೇರಿಸಿ ಸೇವಿಸುವುದು.

ಹೃದಯದ ನಿಶ್ಯಕ್ತಿಯಲ್ಲಿ

ಬದಲಾಯಿಸಿ

10 ಗ್ರಾಂ ಸಮೂಲ ಅಥವಾ 5 ಗ್ರಾಂ ಎತ್ತು ನಾಲಿಗೆಯ ಹೂವನ್ನು ತಂದು ನುಣ್ಣಗೆಅರೆದು ನೀರಿನಲ್ಲಿ ಕದಡಿ ಎರಡೆರಡು ಟೀ ಚಮಚ ಕುಡಿಯುವುದು.

ಕಣ್ಣಿಗೆ ಅಂಜನ

ಬದಲಾಯಿಸಿ

ಎತ್ತುನಾಲಿಗೆ ಸೊಪ್ಪಿನರಸ, ಕರಿ ಉಮ್ಮತ್ತಿನರಸ, ಇವನ್ನು ಸಮ ತೂಕ ಮಣ್ಣಿನ ಪಾತ್ರೆಯ ಒಳಭಾಗಕ್ಕೆ ಲೇಪಿಸುವುದು. ಆಕಳು ತುಪ್ಪದಲ್ಲಿ ಮಂದವಾಗಿ ಕಲಸಿ ಅಂಜನವಿಡುವುದು. ಸರ್ವ ನೇತ್ರವ್ಯಾಧಿಗಳು ವಾಸಿಯಾಗುವುವು.

ಎಚ್ಚರಿಕೆ

ಬದಲಾಯಿಸಿ

ವ್ಯಾಧಿಯಲ್ಲಿ ಪ್ರಮಾಣ ಮೀರಿ ಸೇವಿಸುವುದರಿಂದ ಅಹಿತಕರ ಪರಿಣಾಮಗಳಾಗಬಹುದು. ಇಂತಹ ಸಂದರ್ಭದಲ್ಲಿ ನೀರಿನಲ್ಲಿ ತೇದ ಶ್ರೀಗಂಧದ ಗಂಧವನ್ನು ನೆಕ್ಕಿಸುವುದು ಅಥವಾ ಗುಲಾಬಿ ಹೂದಳಗಳನ್ನು ಸಕ್ಕರೆಯೊಂದಿಗೆ ಸೇವಿಸುವುದು.

ಉಲ್ಲೇಖಗಳು

ಬದಲಾಯಿಸಿ

ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು

ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್

ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು