ಎಡ್ಮಂಡ್ ಕಾರ್ಟ್ ರೈಟ್

ಎಡ್ಮಂಡ್ ಕಾರ್ಟ್‌ರೈಟ್‌,'ರವರು ಸ್ವಯಂಚಾಲಿತ ಮಗ್ಗದ ನಿರ್ಮಿತಿಯಲ್ಲಿ ಪ್ರಸಿದ್ಧರಾಗಿದ್ದಾರೆ. [](೧೭೪೩-೧೮೨೩) ಬ್ರಿಟನ್ ನಲ್ಲಿ 'ಔದ್ಯೋಗಿಕ ಕ್ರಾಂತಿ'ಯಾದ ಸಮಯದಲ್ಲಿ ಪ್ರಪ್ರಥಮವಾಗಿ ಅದು ಶುರುವಾಗಿದ್ದು ಹತ್ತಿದಾರ ನಿರ್ಮಾಣ, ಹಾಗೂ ಬಟ್ಟೆ ತಯಾರಿಸುವ ಯಂತ್ರಗಳಿಂದ ಹಬೆಯ ಸಹಾಯದಿಂದ ಚಲಿಸಲ್ಪಡುವ ಇಂಜಿನ್ ಗಳು ಮತ್ತು ಕಲ್ಲಿದ್ದಲಿನ ಸಹಾಯದಿಂದ ಚಲಿಸುವ ಯಂತ್ರಗಳೂ ಆ ನಿಟ್ಟಿನಲ್ಲಿ ಬರುತ್ತವೆ.

೧೮೯೦ ಯ 'ಡಾಬಿ ಸ್ವಯಂ ಚಾಲಿತ ಮಗ್ಗ', 'ಟೆಕ್ಸ್ ಟೈಲ್ ಮರ್ಕ್ಯುರಿ' ಎಂಬ ಪ್ರತಿಷ್ಠಿತ ಬ್ರಿಟಿಷ್ ಪತ್ರಿಕೆಯ ಪುಟಗಳಿಂದ

ಜನನ,ವಿದ್ಯಾರ್ಜನೆ, ವೃತ್ತಿಜೀವನ

ಬದಲಾಯಿಸಿ

ಬ್ರಿಟನ್ನಿನ ಸಂಶೋಧಕರಾಗಿದ್ದ 'ಎಡ್ಮಂಡ್ ಕಾರ್ಟ್‌ರೈಟ್‌'ರವರು ೧೭೪೩ ರಲ್ಲಿ ಬ್ರಿಟನ್ ನ,'ನಾಟಿಂಗ್‌ಹ್ಯಾಮ್‌ಷೈರಿ'ನಲ್ಲಿ ೨೪,ಏಪ್ರಿಲ್,೧೭೪೩ ರಲ್ಲಿ ಜನಿಸಿದರು.[] ಅವರ ತಂದೆ ಒಬ್ಬ ಜಮೀನುದಾರರು. 'ಆಕ್ಸ್ ಫರ್ಡ್ ವಿಶ್ವವಿದ್ಯಾಲಯ'ದಲ್ಲಿ ಶಿಕ್ಷಣ ಪಡೆದರು. ನಂತರ ಒಂದು ಚರ್ಚ್ ನಲ್ಲಿ ಕೆಲಸ ಹಿಡಿದರು. ಮುಂದೆ 'ಲಿಂಕನ್ ಕೆಥೆಡ್ರಲ್' ನಲ್ಲಿ ಅಧಿಕಾರಿಯಾಗಿ ೧೭೮೬ ರ ವರೆಗೆ ತಮ್ಮ ಮರಣದ ಸಮಯದ ತನಕ ಅಲ್ಲಿಯೇ ದುಡಿದರು. ಕಾರ್ಟ್‌ರೈಟ್‌ರವರು ಡೆರ್ಬಿಷೈರಿನಲ್ಲಿದ್ದ ಬ್ರಿಟನ್ನಿನ ಮತ್ತೊಬ್ಬ ಸಂಶೋಧಕ 'ರಿಚರ್ಡ್ ಆರ್ಕ್‌ರೈಟ್‌'ರವರ (೧೭೩೨-೧೭೯೨) ಹತ್ತಿ-ನೂಲುವ ಗಿರಣೆಗಳಿಗೆ ಭೇಟಿ ನೀಡಿದಾಗ ನೇಯ್ಗೆಯ ಹೊಸ ವಿಧಾನಗಳನ್ನು ಕಂಡುಹಿಡಿಯುವುದರಲ್ಲಿ ಆಸಕ್ತಿ ಹುಟ್ಟಿತು. ಇದರ ಫಲವಾಗಿ, ಅವರು ೧೭೮೫ ರಲ್ಲಿ ಶಕ್ತಿ-ಚಾಲಿತ ಮಗ್ಗವನ್ನು (power loom) ಸಂಶೋಧಿಸಿದರು. ಮೊದಲ ಪವರ್ ಲೂಮ್ ೧೭೮೫ ರಲ್ಲಿ ಪೇಟೆಂಟ್ ಗಳಿಸಲಾಯಿತು. ಆದರೆ ಅದು ಬಹಳ ಜನಪ್ರಿಯವಾಗಲಿಲ್ಲ. ಮುಂದೆ ಅದರಲ್ಲಿ ಹಲವಾರು ಹೊಸ ಹೊಸ ಬದಲಾವಣೆಗಳನ್ನು ತರಲಾಯಿತು.ಆ ಶಕ್ತಿ-ಚಾಲಿತ ಮಗ್ಗವನ್ನು 'ಮ್ಯಾಂಚೆಸ್ಟರ್‌ನ ಗಿರಣಿ'ಯೊಂದರಲ್ಲಿ ಸ್ಥಾಪಿಸಿದಾಗ ಅಲ್ಲಿನ ಕೆಲಸಗಾರರು ಆ ಯಂತ್ರದಿಂದ ತಮ್ಮ ಉದ್ಯೋಗಕ್ಕೆ ಧಕ್ಕೆ ಬರುವುದೆಂದು ಹೆದರಿ, ತಮ್ಮ ಪ್ರತಿಭಟನೆಯಿಂದ ಅಂತಹ ಹೊಸ ಆವಿಶ್ಕಾರಿತ ಯಂತ್ರಗಳನ್ನು ಸುಟ್ಟುಹಾಕಿದರು.

'ಡಾನ್ ಕೇಸ್ಟರ್' ನಲ್ಲಿ ಕಾರ್ಖಾನೆ ಸ್ಥಾಪನೆ

ಬದಲಾಯಿಸಿ

'ಕಾರ್ಟ್ ರೈಟ್' ಈಗ 'ಡಾನ್ ಕೇಸ್ಟರ್' ನಲ್ಲಿ ಯಂತ್ರ ಮಗ್ಗಗಳನ್ನು ಕಲೆಹಾಕಿ, ಒಂದು ಕಾರ್ಖಾನೆಯನ್ನು ಸ್ಥಾಪಿಸಿದರು. ಆದರೆ ವ್ಯವಹಾರಜ್ಞಾನವಿಲ್ಲದೆ ಆ ಹೊಸಪ್ರಯೋಗಗಳು ಹೆಚ್ಚು ಸಹಾಯಕಾರಿಯಾಗಲಿಲ್ಲ. ೧೭೯೩ ರಲ್ಲಿ ಅವರು ದಿವಾಳಿಯಾಗಿ ತಮ್ಮ ಕಾರ್ಖಾನೆಯನ್ನು ಮುಚ್ಚಬೇಕಾಯಿತು. ಆಗ 'ಮ್ಯಾನ್ ಚೆಸ್ಟರ್' ನ ಒಂದು ಕಂಪೆನಿ ೪೦೦ ಮಗ್ಗಗಳನ್ನು ಖರೀದಿಸಿತು. ಆದರೆ ಅದು ಬೆಂಕಿಯ ಅಪಘಾತದಲ್ಲಿ ನಾಶವಾಯಿತು. ಆ ಅಪಘಾತವನ್ನು ಮಾಡಿದವರು 'ಕೈಮಗ್ಗದ ಕಾರೀಗರ್' ಗಳು. ತಮ್ಮ ಕೆಲಸಕ್ಕೆ ಧಕ್ಕೆ ಬರುವುದೆಂದು ಹೆದರಿ ಅವರು, ಕಾರ್ಟ್ ರೈಟ್ ನ ಹೊಸ ಸಂಶೋಧನೆಗಳಿಗೆ ತಣ್ಣೀರೆರಚಿದರು. 'ಕಾರ್ಟ್ ರೈಟ್', ೧೭೯೬ ರಲ್ಲಿ ಲಂಡನ್ ನಗರಕ್ಕೆ ಹೋದರು. ಬ್ರಿಟನ್ನಿನ ಔದ್ಯೋಗಿಕ ಕ್ರಾಂತಿಯಸಮಯದಲ್ಲಿ 'ಕೈಮಗ್ಗಕ್ಕೆ ಹೋಲಿಸಿದರೆ, ಉತ್ಪಾದನೆಯನ್ನು ಹಲವು ಪಟ್ಟು ಹೆಚ್ಚಿಸಲು ಸೃಷ್ಟಿಸಿದ ಯಂತ್ರಗಳಲ್ಲಿ ಈ 'ಶಕ್ತಿ-ಚಾಲಿತ ಮಗ್ಗ'ವೂ ಒಂದಾಗಿತ್ತು.

ಮತ್ತಿತರ ಸಂಶೋಧನೆಗಳು

ಬದಲಾಯಿಸಿ

'ಎಡ್ಮಂಡ್ ಕಾರ್ಟ್‌ರೈಟ್‌'ರವರು ೧೭೮೯ರಲ್ಲಿ 'ಉಣ್ಣೆ-ಹಿಕ್ಕುವ ಯಂತ್ರ'ವನ್ನು (wool-combing machine) ಸಂಶೋಧಿಸಿದರು. ಅವರು ೧೭೯೭ರಲ್ಲಿ 'ಆಲ್ಕೋಹಾಲ್ ಇಂಧನ'ವಾಗಿರುವ 'ಉಗಿ-ಎಂಜಿನ್‌'ನನ್ನು (steam engine) ನಿರ್ಮಿಸಿ, ಅದರ 'ಪೇಟೆಂಟ್' ಗಳಿಸಿದರು. 'ರಾಬರ್ಟ್ ಫುಲ್ಟನ್‌'ರವರ (೧೭೬೫-೧೮೧೫) 'ಉಗಿದೋಣಿ'ಯ (steamboat) ಬಗ್ಗೆ ನಡೆಸಿದ ಸಂಶೋಧನಾ ಪ್ರಯೋಗಗಳಿಗೆ ಅವರು ತಮ್ಮ ಸಹಕಾರ ನೀಡಿದರು. ಹಲವಾರು ಹೊಸ ವಿಶಯಗಳ ಬಗ್ಗೆ ಸಂಶೋಧನೆ ನಡೆಸಿದರು. ೧೮೦೯ ರಲ್ಲಿ ಲಂಡನ್ ನ 'ಹೌಸ್ ಆಫ್ ಕಾಮನ್ಸ್,' ಕಾರ್ಟ್ ರೈಟ್ ಕೆಲಸಗಳನ್ನು ಹೊಗಳಿ ಮತಕೊಟ್ಟರು. ಜೊತೆಗೆ ೧೦,೦೦೦ ಉಪಹಾರಕೊಟ್ಟರು.

ಹೊಸರೀತಿಯ ಕಾರ್ಯವಿಧಾನಗಳ ಪ್ರಯತ್ನ

ಬದಲಾಯಿಸಿ

ಇಟ್ಟಿಗೆಗಳನ್ನು ಕೂಡಿಸಿ ವಿನ್ಯಾಸಮಾಡುವ ಪದ್ಧತಿ, ಮತ್ತು ನೆಲದ ವಿನ್ಯಾಸ ರಚನೆ, ಮೊದಲಾದ ಹೊಸ ರಚನೆಗಳ ಬಗ್ಗೆ ಅವರು ಕೆಲಸಮಾಡಲು ಆರಂಭಿಸಿದರು. ಆದರೆ ಅದು ಹೆಚ್ಚು ಉಪಯೋಗಕ್ಕೆ ಬರಲಿಲ್ಲ.

'ಎಡ್ಮಂಟ್ ಕಾರ್ಟ್‌ರೈಟ್‌'೧೮೨೩ರಲ್ಲಿ 'ಕೆಂಟ್‌' ನಗರದಲ್ಲಿ ನಿಧನರಾದರು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Edmund Cartwright (1743-1823) BBC' at Historic Figures at the BBC']
  2. "ಕಣಜ, 'ಎಡ್ಮಂಡ್ ಕಾರ್ಟ್ ರೈಟ್,ಸ್ವಯಂಚಾಲಿತ ಮಗ್ಗದ ನಿರ್ಮಾಪಕರು'". Archived from the original on 2016-03-06. Retrieved 2014-12-22.