ಎಚ್. ವೈ. ರಾಜಗೋಪಾಲ್

ಡಾ.ಎಚ್.ವೈ ರಾಜಗೋಪಾಲ್, ಎಂದೇ ತಮ್ಮ ಸ್ನೇಹಿತ ವಲಯದಲ್ಲಿ ಪ್ರಸಿದ್ಧರಾಗಿರುವ ಅವರ ಪೂರ್ಣ ಹೆಸರು, ಹೊಳೆನರಸೀಪುರ ಯೋಗನರಸಿಂಹ ರಾಜಗೋಪಾಲನೆಂದು. [] ಒಬ್ಬ ಅಮೆರಿಕನ್ನಡಿಗ. ಅಮೆರಿಕದ ಪೂರ್ವಭಾಗದಲ್ಲಿರುವ ಫಿಲೆಡೆಲ್ಫಿಯಾ ನಗರದ ನಿವಾಸಿಯಾಗಿದ್ದ ಅವರು, ತಮ್ಮ ಜೀವನದುದ್ದಕ್ಕೂ ಕನ್ನಡ ಭಾಷೆಯ ಒಳಿತಿಗಾಗಿಯೇ ಚಿಂತಿಸಿದವರು. ಅಲ್ಲಿನ ಇತರ ಕನ್ನಡ ಕಟ್ಟುವ ಮುತ್ಸದ್ಧಿಗಳ ಜೊತೆಗೂಡಿ ಕೆಲಸಮಾಡುತ್ತಾ ಬಂದರು. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರಹಗಳನ್ನು ಬರೆಯುತ್ತಿದ್ದರು. ಒಳ್ಳೆಯ ಲೇಖಕರೆಂದು ಗುರುತಿಸಿಕೊಂಡಿದ್ದಾರೆ.

ಜನನ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

ರಾಜಗೋಪಾಲರು, ಬೆಂಗಳೂರಿನಲ್ಲಿ ೧೯೩೫ ರಲ್ಲಿ ಜನಿಸಿದರು. ತಂದೆ ಯೋಗಾನರಸಿಂಹ. ಸರ್ವೆಂಟ್ಸ್ ಆಫ್ ಇಂಡಿಯ ಸೊಸೈಟಿಯ ಮದ್ರಾಸ್ ಶಾಖೆಯ ಸದಸ್ಯರು. ಪ್ರೊ.ಹಿರಿಯಣ್ಣ, ಎಸ್. ರಾಧಾಕೃಷ್ಣ ರ ಶಿಷ್ಯರು. ಸಂಸ್ಕೃತ ಹಾಗೂ ಸಂಗೀತದಲ್ಲಿ ಪ್ರಸಿದ್ಧರು. ತಾಯಿ, ಎಚ್. ವೈ. ಸರಸ್ವತಮ್ಮ, ಲೇಖಕಿ, ಸಮಾಜ ಸೇವಕಿ. ರಾಜಗೋಪಾಲರು, ಬಿ.ಇ ಮತ್ತು ಎಂ.ಇ ಪದವಿಗಳನ್ನು ಕ್ರಮವಾಗಿ ಮೈಸೂರಿನ ನ್ಯಾಷನಲ್ ಇನ್ಶ್ಟಿ ಟ್ಯೂಟ್ ಆಫ್ ಇಂಜಿನಿಯರಿಂಗ್ ಹಾಗೂ ಬೆಂಗಳೂರಿನ ಟಾಟ ಇನ್ಸ್ಟಿ ಟ್ಯೂಟ್ ಗಳಲ್ಲಿ ಗಳಿಸಿದರು. ೧೯೬೬ ರಲ್ಲಿ ಅಮೆರಿಕಕ್ಕೆ ವಲಸೆಹೋದರು. ಅಲ್ಲಿನ ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಶಿಕ್ಷಣ ಮುಂದುವರೆಸಿ 'ಡಾಕ್ಟರೇಟ್' ಗಳಿಸಿದರು ಫಿಲಡೆಲ್ಫಿಯನಗರದಲ್ಲೇ ವಾಸ್ತವ್ಯ. ಕನ್ಸಲ್ಟಿಂಗ್ ಇಂಜಿನಿಯರ್ ಫ್ಲ್ಯೂಯಿಡ್ ಮೆಕಾನಿಕ್ಸ್ ವಿಷಯದಲ್ಲಿ ಪಾಠ ಹೇಳುವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.'ರಾಜಗೋಪಾಲ್ ನಮ್ಮ ಭಾರತದ ಮಾಜಿ ಪ್ರಧಾನಿ, ಶ್ರೀಮತಿ ಇಂದಿರಾ ಗಾಂಧಿಯವರ ಆಪ್ತ ಕಾರ್ಯದರ್ಶಿ ಎಚ್. ವೈ.ಶಾರದಾಪ್ರಸಾದ ರ ಸೋದರ. ಶ್ರುತಿ ಎಂಬ ಸಾಂಸ್ಕೃತಿಕ ಸಂಘಟನೆಯ ಜೊತೆ ಮತ್ತು ಇನ್ನು ಹಲವು ಸಂಘಟನೆಗಳ ಜೊತೆ ಸಂಬಂಧ ಇಟ್ಟುಕೊಂಡಿದ್ದರು. ಶಾಸ್ತ್ರೀಯ ಸಂಗೀತ, ನೃತ್ಯಗಳಲ್ಲಿ ಆಸಕ್ತರು, 'ನೃತ್ಯ ಸೊಸೈಟಿ', 'ಕನ್ನಡ ಸಾಹಿತ್ಯ ರಂಗ', 'ಪ್ರಸ್ತಾಪ' ಮೊದಲಾದ ಸಂಸ್ಥಗಳನ್ನು ಹುಟ್ಟುಹಾಕಿದರು. ವರ್ಷ ೧೯೭೦ ರಲ್ಲಿ ತಮ್ಮ ಪತ್ನಿ ವಿಮಲಾರ ಜೊತೆಗೂಡಿ 'ಇಂಡೋ ಯು. ಎಸ್. ಚಿಲ್ಡ್ರನ್ಸ್ ಅಸೋಸಿಯೇಷನ್' ಸ್ತಾಪಿಸಿದರು. ಈ ದಂಪತಿಗಳ ಮಕ್ಕಳಾದ ಮಾಧವಿ, ಚೇತನ, ಹಾಗು ಶ್ರೀರಾಮ್, ಕನ್ನಡ ಸಂಘಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ರಾಜಗೋಪಾಲ್ ಬರೆದ ಪುಸ್ತಕಗಳು :

  1. ಗಾಂಧಿ ಯುಗಕ್ಕೆ ಕನ್ನಡಿ,
  2. ಸೃಷ್ಟಿ : ಸೃಷ್ಟಿ ಉತ್ತರ ಅಮೇರಿಕಾದ ಮೂಲ ನಿವಾಸಿಗ ಪುರಾಣಗಳು, ಜೀವನ ಶೈಲಿಗಳನ್ನು ಕುರಿತ ಜಾನಪದ ಕಥೆಗಳನ್ನುಆಧರಿಸಿದ್ದು.
  3. ನಾಲ್ಕು ಜಗತ್ತುಗಳು
  4. ಹಲವು ಮಕ್ಕಳ ತಾಯಿ. []
  5. ಬೊಮ್ಮನ ಹಳ್ಳಿ ಕಿಂದರಿಜೋಗಿ ಅಧ್ಯಯನ. ೧೨ ಲೇಖನಗಳನ್ನೊಳಗೊಂಡ ಪುಸ್ತಕದಲ್ಲಿ ಕುವೆಂಪುರವರು ಬರೆದ, ಕವಿತೆ, ಬೊಮ್ಮನಹಳ್ಳಿಯ ಕಿಂದರಿಜೋಗಿಯನ್ನು ಕುರಿತು ಬರೆದ ತೌಲನಿಕ ಅಧ್ಯಯನವಾಗಿತ್ತು.

ಪ್ರಶಸ್ತಿಗಳು

ಬದಲಾಯಿಸಿ
  1. ಹೊರನಾಡು ಕನ್ನಡಿಗ ರಾಜ್ಯೋತ್ಸವ ಪ್ರಶಸ್ತಿ []
  2. ಆಳ್ವಾಸ್ ವಿಶ್ವ ನುಡಿಸಿರಿ
  3. ವಿರಾಸತ್ ಪ್ರಶಸ್ತಿ

೮೨ ವರ್ಷ ಡಾ.ರಾಜಗೋಪಾಲರು [] ೨೦೧೮ ರ, ಮೇ ೨೮ ರಂದು, ಸೋಮವಾರ ತಮ್ಮ ಅಮೆರಿಕದ ಫಿಲಡೆಲ್ಫಿಯಾ ಗೃಹದಲ್ಲಿ ನಿಧನರಾದರು. []

ಉಲ್ಲೇಖಗಳು

ಬದಲಾಯಿಸಿ
  1. 'ಅಮೆರಿಕದಲ್ಲಿ ಕನ್ನಡ ಸೇವೆ ಮಾಡಿದ ಎಚ್.ವೈ.ರಾಜಗೋಪಾಲ್'-ಸುಮತೀಂದ್ರ ನಾಡಿಗ್, ವಿಶ್ವವಾಣಿ, ೨೨, ಏಪ್ರಿಲ್, ೨೦೧೮[ಶಾಶ್ವತವಾಗಿ ಮಡಿದ ಕೊಂಡಿ]
  2. ಹಲವು ಮಕ್ಕಳ ತಾಯಿ
  3. 100 year old folk medicine expert among Rajyotsava award winners, The Hindu, April, 29, 2011
  4. 'ಹಾರಿಹೋದ ಹಿಂದೂಸ್ಥಾನದ ಹಕ್ಕಿ' ಎಚ್.ವೈ.ಆರ್,ಏಪ್ರಿಲ್,೦೩, ೨೦೧೮, ಕೆಂಡ ಸಂಪಿಗೆ
  5. 'ಮಾನವೀಯತೆಯ ಸಾಕಾರ ಮೂರ್ತಿ,ಎಚ್.ವೈ.ಆರ್. ಇನ್ನಿಲ್ಲ, ಪ್ರಸಾದ್, ಒನ್ ಇಂಡಿಯ(ಕನ್ನಡ), ಏಪ್ರಿಲ್, ೦೩, ೨೦೧೮