ಎಚ್. ಎಸ್. ಪ್ರಕಾಶ್

ಭಾರತದ ಕರ್ನಾಟಕ ರಾಜ್ಯದ ಶಾಸಕಾಂಗ ಸಭೆಯ ಸದಸ್ಯ

ಹಾಸನ ಸಣ್ಣಯ್ಯ ಪ್ರಕಾಶ್ (ಜನನ ೧೩ನೇ ಸೆಪ್ಟಂಬರ್ ೧೯೫೧) ರವರು ಕರ್ನಾಟಕದ ರಾಜಕಾರಣಿ ಮತ್ತು ಹಾಸನ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇವರು ಜನತಾದಳ(ಜಾತ್ಯತೀಯ) ಪಕ್ಷದ ಸದಸ್ಯರಾಗಿದ್ದಾರೆ ಮತ್ತು ಸತತ ನಾಲ್ಕನೇ ಬಾರಿಗೆ ೨೦೧೩ರ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಚುನಾಯಿತರಾಗಿದ್ದಾರೆ. ಹಾಸನ ನಗರದ ಮುನ್ಸಿಪಾಲ್ ಕೌನ್ಸಿಲ್‍ನ ೧೯೮೩ರಿಂದ ೧೯೮೯ರವರಗೆ ಸದಸ್ಯರಾಗಿದ್ದರು ಮತ್ತು ಈ ಕಾಲಾವಧಿಯಲ್ಲಿ ೧೯೮೫ರಿಂದ ೧೯೮೭ರವರಗೆ ಕೌನ್ಸಿಲ್‍ನ ಅಧ್ಯಕ್ಷರಾಗಿದ್ದರು. ಇವರು ಮೊದಲ ಬಾರಿಗೆ ೧೯೯೪ರಲ್ಲಿ ಹಾಸಟನ ಮತಕ್ಷೇತ್ರದಿಂದ ಚುನಾಯಿತರಾದರು.[] ೧೯೯೯ರ ಚುನಾವಣೆಯಲ್ಲಿ ಚುನಾಯಿತರಾಗಲಲ್ಲಿ, ಆದರೆ ಸತತವಾಗಿ ೨೦೦೪, ೨೦೦೮ ಮತ್ತು ೨೦೧೩ನೇ ವಿಧಾನಸಭಾ ಚುನಾವಣೆಗಳಲ್ಲಿ ಚುನಾಯಿತರಾದರು.[]

ಎಚ್. ಎಸ್. ಪ್ರಕಾಶ್
ಅಧಿಕಾರ ಅವಧಿ
೮ ಮೇ ೨೦೧೩ – ಈಗಿನವರೆಗೆ
ಅಧಿಕಾರ ಅವಧಿ
ಡಿಸೆಂಬರ್ ೧೯೯೪ – ಆಗಸ್ಟ್ ೧೯೯೯
ಅಧಿಕಾರ ಅವಧಿ
ಮೇ ೨೦೦೪ – ಅಕ್ಟೋಬರ್ ೨೦೦೭
ಅಧಿಕಾರ ಅವಧಿ
ಮೇ ೨೦೦೮ – ಮೇ ೨೦೧೩
ವೈಯಕ್ತಿಕ ಮಾಹಿತಿ
ಜನನ (೧೯೫೧-೦೯-೧೩)೧೩ ಸೆಪ್ಟೆಂಬರ್ ೧೯೫೧
ಹಾಸನ, ಕರ್ನಾಟಕ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಜನತಾ ದಳ (ಜಾತ್ಯಾತೀತ)
ಸಂಗಾತಿ(ಗಳು) ಲಲಿತ ಪ್ರಕಾಶ್
ಮಕ್ಕಳು ೨ ಗಂಡು, ೧ ಹೆಣ್ಣು
ವಾಸಸ್ಥಾನ ಹಾಸನ
ವೃತ್ತಿ ವ್ಯವಸಾಯ

ಇವರು ೨೦೦೧ರಿಂದ ಹಾಸನದ ಸಂಜೀವಿನಿ ಸಹಕಾರಿ ಆಸ್ಪತ್ರೆಯ ಚೇರ್ಮನ್‍ರಾಗಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. "Welcome H. S. Prakash !". Archived from the original on 2018-11-28. Retrieved 2016-08-14.
  2. Karnataka Elections 2008.