ಎಚ್.ಜಿ.ರಾಧಾದೇವಿ

ಎಚ್.ಜಿ.ರಾಧಾದೇವಿಯವರು ಕನ್ನಡದ ಜನಪ್ರಿಯ ಲೇಖಕಿಯರಲ್ಲೊಬ್ಬರು. ಇವರು ಮೂವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ.[೧]

ಬಾಲ್ಯ ಮತ್ತು ವೃತ್ತಿಸಂಪಾದಿಸಿ

ರಾಧಾಮಣಿಯವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌ರವರು ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.ಎಸ್.ಎಸ್.ಎಲ್.ಸಿ.ಯ ನಂತರ ಮುಂದಿನ ಓದಿಗೆ ತಡೆಯುಂಟಾಗಿ ಬಿಡುವಿನ ವೇಳೆಯಲ್ಲಿ ಪ್ರಾರಂಭಿಸಿದ ಮನೆ ಪಾಠ ಆರಂಭಿಸಿದರು.ಇದರಿಂದ ದೊರೆತ ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ಹದಿನೆಂಟನೇ ವಯಸ್ಸಿಗೆ ಕೋಲಾರದ ಮೆಥೊಡಿಸ್ಟ್ ಮಿಷಿನ್ ಶಾಲೆಯಲ್ಲಿ ಉದ್ಯೋಗ ದೊರಕಿತು. ಬಾಲ್ಯದಿಂದಲೂ ರೂಢಿಸಿಕೊಂಡಿದ್ದ ವಿಸ್ತ್ರತ ಓದು ಬರವಣಿಗೆಯನ್ನು ಪ್ರಾರಂಭಿಸಲು ಉತ್ತೇಜನ ನೀಡಿತು.

ಬರಹಸಂಪಾದಿಸಿ

ರಾಧಾದೇವಿ’ ಎಂಬ ಕಾವ್ಯನಾಮದಿಂದ ಸಣ್ಣ ಕಥೆಗಳು, ವಿವಿಧ ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ಪತ್ರಿಕೆಗಳಿಗೆ ಬರೆದಿದ್ದಾರೆ. ದುಡಿಯುವ ಮಹಿಳೆಯರ ಸಮಸ್ಯೆಗಳ ಬಗ್ಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ‘ಆಫೀಸ್ ಹೊತ್ತಿಗೆ ಅನಂತನ ಅವಾಂತರಗಳು’ ಎಂಬ ಹಾಸ್ಯ ಲೇಖನದಲ್ಲಿ ಪತಿಯ ಆಫೀಸ್ ತರಾತುರಿ, ಮಕ್ಕಳ ಕೋಟಲೆ, ಗೃಹಿಣಿಯ ಗಡಿಬಿಡಿಗಳನ್ನು ಚಿತ್ರಿಸಿದ್ದು ಓದುಗರಿಂದ ದೊರೆತ ಅಪಾರ ಮೆಚ್ಚುಗೆ. ಮೊದಲ ಪ್ರಕಟಿತ ಕಾದಂಬರಿ ‘ಸುವರ್ಣ ಸೇತುವೆ’. ಇದಕ್ಕೆ ಮುನ್ನ ಒಂಬತ್ತು ಕಾದಂಬರಿಗಳನ್ನು ಬರೆದಿದ್ದರು. ಪ್ರಜಾಮತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ‘ಸುವರ್ಣ ಸೇತುವೆ’ಯು ಪ್ರಕಟ,ನಂತರ ಹಿಂದೆ ಬರೆದ ಇತರ ಕಾದಂಬರಿಗಳಿಗೂ ಪ್ರಕಟವಾದವು.ಎಂಬತ್ತೆಂಟು ಕಾದಂಬರಿ,ಮೊದಲ ಹನ್ನೆರಡು ಕಾದಂಬರಿಗಳು ಮೂರಕ್ಕೂ ಹೆಚ್ಚು ಮುದ್ರಣ ಕಂಡಿವೆ. ಇವರ ಕಾದಂಬರಿಗಳನ್ನು ಹಲವಾರು ವಾರ, ಮಾಸ ಪತ್ರಿಕೆಗಳು ಪ್ರಕಟಿಸಿವೆ. ಮಲ್ಲಿಗೆ, ಹಂಸರಾಗ, ಮಂಜುವಾಣಿ,ತರಂಗ,ಕರ್ಮವೀರ ಪತ್ರಿಕೆಗಳು ಪ್ರಕಟಿಸಿದವು.ಎಂಟು ಪೌರಾಣಿಕ ಕಾದಂಬರಿಗಳನ್ನು ಬರೆದಿದ್ದಾರೆ ,ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಧಡೋದರಿ ರಾಧೆಗೊಲಿದ ಕೃಷ್ಣ ಮತ್ತು ಸತ್ಯಭಾಮಾವೃತ ಶ್ರೀಕೃಷ್ಣ.[೨]

ಪ್ರಶಸ್ತಿಸಂಪಾದಿಸಿ

 • ಮಿಂಚಿನಿಂದಿಳಿದ ಮೋಹನಾಂಗಿ’ ಜಾನಪದ ಕಥಾಸಂಕಲನಕ್ಕೆ ಧಾರವಾಡದ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ;
 • ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ,
 • ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ,

ಕಾದಂಬರಿಗಳುಸಂಪಾದಿಸಿ

 • ಅನುರಾಗ ಅರಳಿತು
 • ಒಲವಿನ ಸುಧೆ
 • ಒಲಿದು ಬಂದ ಅಪ್ಸರೆ
 • ಕತ್ತಲಲ್ಲಿ ಕಂಡ ಮಿಂಚು
 • ಗೆಲುವಿನ ಹಾದಿ
 • ಚಂದನ ಕಸ್ತೂರಿ
 • ಚೆಲ್ಲಿದ ಪನ್ನೀರು
 • ಜೇನು ಬೆರೆತ ಹಾಲು
 • ದುಂಬಿ ಮುಟ್ಟದ ಹೂವು
 • ಬಂಗಾರದ ಮೆಟ್ಟಿಲು
 • ಬೇರು ಕಡಿದ ಮರ
 • ಭ್ರಮರ ಬಂಧನ
 • ವಜ್ರಪಂಜರ
 • ಶುಭ ವಸಂತ
 • ಸಪ್ತವರ್ಣ ಮಿನುಗಿತು
 • ಸುವರ್ಣ ಸೇತುವೆ
 • ಸೊಬಗಿನ ಸೆರೆಮನೆ
 • ಸೌಭಾಗ್ಯ ಸಂಪದ
 • ಸ್ವಾತಿ ಹನಿ ಸಿಡಿದಾಗ
 • ಹಾಲು ಕೊಳದ ಹಂಸ

ಚಲನಚಿತ್ರಸಂಪಾದಿಸಿ

ಅನುರಾಗ ಅರಳಿತು ಹಾಗು ಸುವರ್ಣ ಸೇತುವೆ ಈ ಕಾದಂಬರಿಗಳು ಕನ್ನಡ ಚಲನಚಿತ್ರಗಳಾಗಿ ಜನಪ್ರಿಯವಾಗಿವೆ.[೩]

ನಿಧನಸಂಪಾದಿಸಿ

ಎಚ್.ಜಿ.ರಾಧಾದೇವಿಯವರು ೨೦೦೬ ನವೆಂಬರ್ ೯ರಂದು ಬೆಂಗಳೂರಿನಲ್ಲಿ ಅನಾರೋಗ್ಯ ನಿಮಿತ್ತ ನಿಧನರಾದರು.

ಉಲ್ಲೇಖಗಳುಸಂಪಾದಿಸಿ

 1. http://justbooksclc.com/titles/search?search_options=All&search_text=H.G.RADHADEVI++&type=catalog[ಶಾಶ್ವತವಾಗಿ ಮಡಿದ ಕೊಂಡಿ]
 2. "ಆರ್ಕೈವ್ ನಕಲು". Archived from the original on 2020-08-09. Retrieved 2017-05-10.
 3. https://chiloka.com/celebrity/h-g-radhadevi#person_details