ಎಚ್.ಎಸ್.ಮುಕ್ತಾಯಕ್ಕ
ಶ್ರೀಮತಿ ಎಚ್.ಎಸ್. ಮುಕ್ತಾಯಕ್ಕ ಇವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಇವರು ಕರ್ನಾಟಕದ, ರಾಯಚೂರು ಜಿಲ್ಲೆಯವರು. ಅಲ್ಲಿಯ ಮಹಿಳಾ ಕಾಲೇಜಿನಲ್ಲಿ ಉಪನ್ಯಸಕರಾಗಿ, ಪ್ರಾಂಶುಪಾಲಕರಾಗಿ ನಿವೃತ್ತರಾಗಿರುವರು. ಸದ್ಯ ಇವರು ರಾಯಚೂರಿನಲ್ಲಿ ವಾಸಿಸುತ್ತಿರುವರು. ಇವರ ತಂದೆ ಖ್ಯಾತ ಸಾಹಿತಿಗಳಾಗಿದ್ದ ದಿ.ಶಾಂತರಸರು.
ಇವರು ಐದು ಕವನಸಂಕಲನ, ಮೂರು ಗಜಲ್ ಸಂಕಲನ, ಐದು ಗದ್ಯ ಕೃತಿ, ಮತ್ತು ಸಮಗ್ರ ಗಜಲ್ ಸಂಕಲನ, ಹಾಗೂ ಒಂದು ಬಿಡಿ ದ್ವಿಪದಿಗಳ ಸಂಗ್ರಹ ಹೊರತಂದಿದ್ದಾರೆ.
ಸಾಹಿತ್ಯಿಕ ಸಾಧನೆಗಳು
ಬದಲಾಯಿಸಿಎಂಬತ್ತರ ದಶಕದಲ್ಲಿ ಹೆಣ್ಣುಮಕ್ಕಳು ಮುಕ್ತವಾಗಿ ಬರೆಯುತ್ತಿರಲಿಲ್ಲ ಅಂಥ ಸಂದರ್ಭದಲ್ಲಿ ಇವರು "ನಾನು ಮತ್ತು ಅವನು ದಂಥ ಪ್ರೇಮ,ಪ್ರಣಯಕ್ಕೆ, ಸಂಬಂದಿಸಿದಂತೆ ಮುಕ್ತವಾಗಿ ಅಭಿವ್ಯಕ್ತಗೊಳಿಸಿಥ, ಕವನಸಂಕಲನವನ್ನು ಹೊರತಂದರು,
ಅಲ್ಲದೆ ಉರ್ದು ಸಾಹಿತ್ಯದಲ್ಲಿ ಶ್ರೀಮಂತ ಕಾವ್ಯಪ್ರಕಾರವಾದ, ಗಜಲ್ ಅನ್ನು, ಇವರ ತಂದೆಯವರಾದ ದಿ.ಶಾಂತರಸರು ಮೊಟ್ಟಮೊದಲಿಗೆ ಕನ್ನಡಕ್ಕೆ ತಂದರು. ಇವರು ತಂದೆಯ ದಾರಿಯಲ್ಲೇ ನಡೆದು, ಅತ್ಯಂತ ಸುಂದರ ಗಜಲ್ ರಚಿಸಿ, ಪ್ರಸಿಧ್ಧರಾಗಿದ್ದಾರೆ ಕನ್ನಡ ಸಾ.ಹಿತ್ಯದ ಇತಿಹಾಸದಲ್ಲಿಯೆ, ಮೊತ್ತಮೊದಲ ಗಜಲುಗಳ ಸಂಕಲನವಾದ "ನಲವತ್ತು ಗಜಲುಗಳು "ಎಂಬ ಹೆಸರಿನಲ್ಲಿ. ಹೊರತಂದಿದ್ದಾರೆ.ಇದೇ ಕನ್ನಡದಲ್ಲಿ ಬಂದ, ಮೊಟ್ಟಮೊದಲ ಶುಧ್ಧ ಗಜಲುಗಳ ಸಂಕಲನವಾಗಿದೆ.ಕನ್ನಡ ಸಾಹಿತ್ಯದಲ್ಲಿಯೆ ಅದೊಂದು ಐತಿಹಾಸಿಕ ದಾಖಲೆಯಾಗಿದೆ.ಇದಕ್ಕಿಂತ ಪೂರ್ವದಲ್ಲಿ,ಕನ್ನಡದಲ್ಲಿ ಯಾರೂ ಶುಧ್ಧ ಗಜಲುಗಳನ್ನು ಬರೆದಿರಲಿಲ್ಲ. ಕನ್ನಡ ಸಾಹಿತ್ಯ ಸಂಧರ್ಭದಲ್ಲಿ ಇವರ ತಂದೆಯವರಾದ ಮೇಲೆ ಇವರೊಬ್ಬರೆ ಗಜಲುಗಳ ಬಗೆಗೆ "ಅಥೇಂಟಿಕ್ "ಆಗಿ ಮಾತಾಡಬಲ್ಲವರಾಗಿದ್ದಾರೆ. ಇಂದು ಸಾವಿರಾರು ಜನ ಗಜಲ್ ರಚನೆಯಲ್ಲಿ ತೊಡಗಿದ್ದು,ಗಜಲ್ ಕನ್ನಡ ಸಾಹಿತ್ಯದಲ್ಲಿ ಒಂದು ಕಾವ್ಯಪ್ರಕಾರವಾಗಿ ಮಾನ್ಯತೆ ಪಡೆದಿದೆ.
ಇವರು ಗಜಲ್ ಬರೆಯುವ ರೀತಿ ಅದರ ಛಂದಸ್ಸು, ಬಂಧ ಇದೆಲ್ಲವುದರ ಬಗೆಗೆ ಗಜಲ್ ಬರೆಯುವವರಿಗೆ ಮಾರ್ಗದರ್ಶನವಾಗುವಂತೆ "ಮೈಂ ಆವ್ರ ಮೇರೆ ಲಮ್ಹೆ" ಎಂಬ ಸಮಗ್ರ ಗಜಲುಗಳ ಸಂಕಲನವನ್ನು ಹೊರತಂದಿದ್ದಾರೆ.
ಎಚ್.ಎಸ್.ಮುಕ್ತಾಯಕ್ಕ ಅವರ ಕವಿತೆಗಳು, ಧಾರವಾಡ, ಗುಲ್ಬರ್ಗ ಬೆಂಗಳೂರು, ಮೈಸೂರು ವಿಜಯಪುರ, ಮಂಗಳೂರು, ಮಹಾರಾಷ್ಟ್ರ ಮತ್ತು ತೆಲಂಗಾಣಾ ಮುಂತಾದ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿವೆ.
ಇವರ ಕಾವ್ಯದ ಬಗೆಗೆ ಗುಲ್ಬರ್ಗಾ ಮತ್ತು ವಿಜಯಪುರ ವಿಶ್ವವಿದ್ಯಾಲಯದಿಂದ ಎಂ. ಫಿಲ್ ಮತ್ತು ಡೆಸರ್ ಟೇಷನ್ ಮಾಡಿದ್ದಾರೆ. ಅಲ್ಲದೆ ಅನೇಕ ಎಂ.ಎ. ವಿಧ್ಯಾರ್ಥಿಗಳು ತಮ್ಮ ಅಧ್ಯಯನದ ಒಂದು ವಿಷಯವಾಗಿ ಇವರ ಕಾವ್ಯ ಗಜಲ್ ಮತ್ತು ಪ್ರವಾಸ ಕಥನವನ್ನು ಆರಿಸಿ ಕೊಂಡ್ಡಿದ್ದಾರೆ.
ಇವರ ಅನೇಕ ಕವಿತೆಗಳು ಇಂಗ್ಲಿಷ, ತೆಲಗು, ಮರಾಠಿ, ಮಲಯಾಳಂ, ತಮಿಳು ಮತ್ತ ಸ್ಪ್ಯಾನಿಷ್ ಭಾಷೆಗಳಲ್ಲಿ ಅನುವಾದಗೊಂಡಿವೆ.
ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದ್ಯಸರೂ ಆಗಿ ಕಾರ್ಯನಿರ್ವಹಿಸಿದ್ದಾರೆ.
ಕವನ ಸಂಕಲನಗಳು
ಬದಲಾಯಿಸಿ1.ನಾನು ಮತ್ತು ಅವನು
2.ನೀವು ಕಾಣಿರೆ, ನೀವು ಕಾಣಿರೆ
3.ಕಭೀ ಕಭೀ
4.ತನ್. ಹಾಯಿ[೧]
5.ನಿನಗಾಗಿ ಬರೆದ ಕವಿತೆಗಳು[೨]
ಗಜಲ್ ಸಂಕಲನಗಳು
ಬದಲಾಯಿಸಿ1 ನಲವತ್ತು ಗಜಲುಗಳು
2 ಮೂವತ್ತೈದು ಗಜಲುಗಳು
3 ನಲವತ್ತೈದು ಗಜಲುಗಳು
1 "ಮೈಂ ಅವ್ರ ಮೇರೆ ಲಮ್ಹೆ" ( ಸಮಗ್ರ ಗಜಲುಗಳ ಸಂಗ್ರಹ.)[೩]
ಗದ್ಯ ಕೃತಿಗಳು.
ಬದಲಾಯಿಸಿ1.ಶಿವಶರಣಿ ಮುಕ್ತಾಯಕ್ಕ (ಮಕ್ಕಳಿಗಾಗಿ)
2.ಢಕ್ಕೆಯ ಬೊಮ್ಮಣ್ಣ (ಸಂಶೋಧನೆ)
3.ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಗಳು(ವೈಚಾರಿಕ
4.ಅಪ್ಪ (ಸಂಪಾಧನೆ)[೪]
5.ಮದಿರೆಯ ನಾಡಿನಲ್ಲಿ ( ಪ್ರವಾಸಕಥನ)
1 ಅವನು ಮಧು ಸಾವು (ಬಿಡಿ ದ್ವಿಪದಿಗಳ ಸಂಗ್ರಹ)
ಪ್ರಶಸ್ತಿಗಳು
ಬದಲಾಯಿಸಿ1. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ[೫]
2.ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ ಪ್ರಶಸ್ತಿ
3. ಕರ್ನಾಟಕ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ
4. ಧಾರವಾಡ ವಿದ್ಯಾವರ್ಧಕ ಸಂಗದ ರತ್ನಮ್ಮ ಹೆಗೆಡೆ ಪ್ರಶಸ್ತಿ
5. ಗದಗಿನ ಕಲಾ ಪರಿಷತ್ತಿನ ಪ್ರಶಸ್ತಿ
6. ಸೇಡಂನ ಅಮ್ಮ ಪ್ರಶಸ್ತಿ[೬]
7. ಗುಲ್ಬರ್ಗದ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ
8. ಎಸ್. ಆರ್.ಪಾಟೀಲರ ಶ್ರೀ ಮಾಣಿಕ್ಯಮ್ಮಾ ಪ್ರಶಸ್ತಿ
ಉಲ್ಲೇಖಗಳು
ಬದಲಾಯಿಸಿ- ↑ https://www.prajavani.net/artculture/book-review/book-review-mukthayakka-857779.html
- ↑ https://www.prajavani.net/artculture/book-review/love-poetry-ninagagi-bareda-kavithegalu-book-review-992002.html
- ↑ https://www.prajavani.net/artculture/book-review/kannada-literature-book-review-948845.html
- ↑ https://pusthakapreethi.wordpress.com/tag/%E0%B2%8E%E0%B2%9A%E0%B3%8D%E0%B2%8E%E0%B2%B8%E0%B3%8D%E0%B2%AE%E0%B3%81%E0%B2%95%E0%B3%8D%E0%B2%A4%E0%B2%BE%E0%B2%AF%E0%B2%95%E0%B3%8D%E0%B2%95/
- ↑ https://en.wikipedia.org/wiki/Karnataka_Sahitya_Akademi_Award_for_Poetry
- ↑ https://kannada.oneindia.com/news/2001/11/28/award.html
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |