ದ್ವಂದ್ವಯುದ್ಧ

(ಎಕ್ಕತುಳ ಇಂದ ಪುನರ್ನಿರ್ದೇಶಿತ)

ದ್ವಂದ್ವಯುದ್ಧವು ಒಪ್ಪಲಾದ ನಿಯಮಗಳಿಗೆ ಅನುಗುಣವಾಗಿ, ಹೊಂದುವಂಥ ಆಯುಧಗಳ ಜೊತೆಗೆ, ಇಬ್ಬರು ವ್ಯಕ್ತಿಗಳ ನಡುವೆ ಹೋರಾಟದ ರೂಪದ ವ್ಯವಸ್ಥಿತ ಕದನ. ಈ ರೂಪದಲ್ಲಿನ ದ್ವಂದ್ವಯುದ್ಧಗಳನ್ನು ಮುಖ್ಯವಾಗಿ ಮುಂಚಿನ ಆಧುನಿಕ ಯೂರೋಪ್‍ನಲ್ಲಿ ಅಭ್ಯಾಸ ಮಾಡಲಾಯಿತು. ಇದರ ಪೂರ್ವನಿದರ್ಶನಗಳು ಮಧ್ಯಕಾಲೀನ ವೀರತಂಡದ ನಿಯಮಾವಳಿಯಲ್ಲಿ ಇದ್ದವು, ಮತ್ತು ಇದು ಆಧುನಿಕ ಕಾಲದವರೆಗೆ ಮುಂದುವರಿಯಿತು (೧೯ನೇ ಶತಮಾನದಿಂದ ೨೦ನೇ ಶತಮಾನದ ಮುಂಚಿನ ಭಾಗ), ವಿಶೇಷವಾಗಿ ಸೇನಾಧಿಕಾರಿಗಳೊಳಗೆ.

(ಆಧುನಿಕ ದಿನದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ) ಪ್ರಾಚೀನ ಭಾರತದಲ್ಲಿ ದ್ವಂದ್ವಯುದ್ಧಗಳು ಅಥವಾ ನಿಯುದ್ಧಗಳನ್ನು ವಿವಿಧ ಕಾರಣಗಳಿಗಾಗಿ ಏರ್ಪಡಿಸಲಾಗುತ್ತಿತ್ತು. ಅನೇಕ ಕ್ಷತ್ರಿಯರು ಹಾಸಿಗೆಯಲ್ಲಿ ಸಾಯುವುದು ಅವಮಾನಕರವೆಂದು ಪರಿಗಣಿಸುತ್ತಿದ್ದರು, ಮತ್ತು ತಮ್ಮ ವೃದ್ಧಾಪ್ಯದಲ್ಲಿ ಹಲವುವೇಳೆ ಯುದ್ಧಧನಕ್ಕಾಗಿ ಏರ್ಪಾಟು ಮಾಡುತ್ತಿದ್ದರು. ಈ ಅಭ್ಯಾಸದ ಪ್ರಕಾರ, ತಾನು ಬಾಳುವುದಕ್ಕೆ ಬಹಳ ಕಾಲ ಉಳಿದಿಲ್ಲವೆಂದು ಒಬ್ಬ ಯೋಧನಿಗೆ ಅನಿಸಿದಾಗ, ಅವನು ಕೆಲವು ಸೇವಕರೊಂದಿಗೆ ಹೋಗಿ ದ್ವಂದ್ವಯುದ್ಧ ಅಥವಾ ಸಣ್ಣ ಪ್ರಮಾಣದ ಕಾಳಗಕ್ಕಾಗಿ ಮತ್ತೊಬ್ಬ ರಾಜನನ್ನು ಕೇಳಿಕೊಳ್ಳುತ್ತಿದ್ದನು. ಈ ರೀತಿಯಲ್ಲಿ ಅವನು ಸ್ವತಃ ತನ್ನ ಮರಣದ ಸಮಯ ಮತ್ತು ರೀತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದನು ಮತ್ತು ಅವನು ಹೋರಾಡುತ್ತಲೇ ಸಾಯುವನೆಂಬ ಭರವಸೆ ಇರುತ್ತಿತ್ತು. ಮರಣದವರೆಗಿನ ದ್ವಂದ್ವಯುದ್ಧಗಳು ಕೆಲವು ಅವಧಿಗಳಲ್ಲಿ ಕಾನೂನುಬದ್ಧವಾಗಿದ್ದವು, ಮತ್ತು ಇತರ ಅವಧಿಗಳಲ್ಲಿ ಮರಣದಂಡನೆಯೊಂದಿಗೆ ಶಿಕ್ಷಾರ್ಹವಾಗಿದ್ದವು.[]

ದ್ವಂದ್ವಯುದ್ಧಗಳು ಕಟ್ಟುನಿಟ್ಟಾದ ನಡತೆಯ ನಿಯಮಗಳಡಿಯಲ್ಲಿ ನಡೆಯುತ್ತಿದ್ದವು, ಮತ್ತು ಅವುಗಳನ್ನು ಉಲ್ಲಂಘಿಸುವುದು ಅವಮಾನಕರ ಮತ್ತು ಪಾಪದ ಕಾರ್ಯವಾಗಿತ್ತು ಎಂದು ಧರ್ಮಶಾಸ್ತ್ರದಂತಹ ಪ್ರಾಚೀನ ಮಹಾಕಾವ್ಯಗಳು ಮತ್ತು ಪಠ್ಯಗಳು ಹೇಳುತ್ತವೆ. ಈ ನಿಯಮಗಳ ಪ್ರಕಾರ, ತನ್ನ ಆಯುಧವನ್ನು ಕಳೆದುಕೊಂಡ, ಶರಣಾಗುವ, ಅಥವಾ ಪ್ರಜ್ಞೆ ತಪ್ಪಿದ ಎದುರಾಳಿಯನ್ನು ಗಾಯಗೊಳಿಸುವುದು ಅಥವಾ ಕೊಲ್ಲುವುದು ನಿಷಿದ್ಧವಾಗಿತ್ತು. ದ್ವಂದ್ವಯುದ್ಧದ ಅವಧಿಯಲ್ಲಿ ಒಬ್ಬ ಯೋಧನ ಮುಡಿಪಟ್ಟಿಯು ಸಡಿಲವಾದರೆ/ಬಿಚ್ಚಿಕೊಂಡರೆ, ಅವನ ಎದುರಾಳಿಯು ಮುಂದುವರಿಯುವ ಮುನ್ನ ಅವನಿಗೆ ತನ್ನ ಕೂದಲನ್ನು ಕಟ್ಟಿಕೊಳ್ಳಲು ಸಮಯ ನೀಡಬೇಕು ಎಂದು ಮನುಸ್ಮೃತಿ ಹೇಳುತ್ತದೆ. ದ್ವಂದ್ವಯುದ್ಧ ನಡೆಸುವ ಇಬ್ಬರೂ ಎದುರಾಳಿಗಳು ಒಂದೇ ಬಗೆಯ ಆಯುಧವನ್ನು ಪ್ರಯೋಗಿಸಬೇಕಾಗಿತ್ತು, ಮತ್ತು ಪ್ರತಿ ಆಯುಧಕ್ಕಾಗಿ ನಿರ್ದಿಷ್ಟ ನಿಯಮಗಳ ಇದ್ದಿರಬಹುದಿತ್ತು. ಉದಾಹರಣೆಗೆ, ಗದಾಯುದ್ಧದಲ್ಲಿ ಸೊಂಟದ ಕೆಳಗೆ ಹೊಡೆಯುವುದು ನಿಷಿದ್ಧ ಎಂದು ಮಹಾಭಾರತವು ದಾಖಲಿಸುತ್ತದೆ. ದ್ವಂದ್ವಯುದ್ಧದ ಒಂದು ಪ್ರಾಚೀನ ರೂಪದಲ್ಲಿ, ಇಬ್ಬರು ಯೋಧರು ಬಲಗೈಯಿಂದ ಒಂದು ಚಾಕೂವನ್ನು ಪ್ರಯೋಗಿಸುತ್ತಿದ್ದರು ಮತ್ತು ಅವರ ಎಡಗೈಗಳನ್ನು ಒಟ್ಟಾಗಿ ಕಟ್ಟಿರಲಾಗುತ್ತಿತ್ತು.

ಉಲ್ಲೇಖಗಳು

ಬದಲಾಯಿಸಿ
  1. Jeanine Auboyer (1965). Daily Life in Ancient India. France: Phoenix Press. p. 58.